ಈಗ ವರ್ಷ ಅಂತ್ಯದ ಆಫರ್‌ಗಳು, ವ್ಯಾಪಾರಗಳು ಅತೀ ಭರದಿಂದ ಸಾಗುತ್ತಿದೆ. ಅದರಲ್ಲೂ ಪ್ರಮುಖ ಆನ್‌ಲೈನ್ ಆಪ್‌ಗಳಲ್ಲಿ ಭಾರೀ ರಿಯಾಯಿತಿಯನ್ನು ನೀಡಲಾಗುತ್ತಿದೆ. ಅಂತಹ ಆಪ್‌ಗಳಲ್ಲಿ ಅಮೆಜಾನ್ ಕೂಡಾ ಒಂದಾಗಿದೆ ಇಲ್ಲಿ ಸ್ಮಾರ್ಟ್‌ವಾಚ್‌ಗಳಿಗೆ ಶೇಕಡ 95 ರಷ್ಟು ರಿಯಾಯಿತಿಯಿದೆ.
ಹೌದು, ಟೆಕ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಫೈರ್-ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ಗೆ ಅಮೆಜಾನ್‌ನಲ್ಲಿ ಶೇಕಡ 95 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಫೈರ್-ಬೋಲ್ಟ್‌ನ ಬೇರೆ ಬೇರೆ ವಾಚ್‌ಗಳಿಗೂ ಭಾರೀ ರಿಯಾಯಿತಿ ಲಭ್ಯವಿದೆ.

ಶೇಕಡ 95 ರಷ್ಟು ರಿಯಾಯಿತಿ ಎಂದರೆ ನೀವು ನೈಜ ಬೆಲೆಯ ಶೇಕಡ 5 ರಷ್ಟು ಬೆಲೆಯಲ್ಲಿ ಮಾತ್ರ ವಾಚ್ ಅನ್ನು ಖರೀದಿ ಮಾಡಬಹುದಾದ ಸುವರ್ಣ ಅವಕಾಶ ಇದಾಗಿದೆ. ಈ ಸ್ಮಾರ್ಟ್ ವಾಚ್ ಬಗ್ಗೆ ಮತ್ತು ಅದರ ದರದ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಸ್ಮಾರ್ಟ್‌ವಾಚ್ ಬೆಲೆ ಎಷ್ಟಿದೆ?
ಈ ಸ್ಮಾರ್ಟ್‌ವಾಚ್ ಗುಣಮಟ್ಟದ ಡಿಸ್‌ಪ್ಲೇ ಹೊಂದಿದ್ದು ಪ್ರಸ್ತುತ ಯುವಜನರ ಹಾಟ್‌ಫೇವರಿಟ್ ವಾಚ್‌ಗಳಲ್ಲಿ ಒಂದಾಗಿದೆ. ಫೈರ್‌ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ ವಾಚ್ ಮೇಲೆ ಅಮೆಜಾನ್‌ನಲ್ಲಿ ಶೇಕಡ 95 ರಷ್ಟು ರಿಯಾಯಿತಿ ಇದೆ. ಇದರಿಂದಾಗಿ ದರವು ಕೇವಲ 1,099 ರೂಪಾಯಿ ಆಗಿದೆ.
ಅಮೆಜಾನ್‌ನಲ್ಲಿ ಈ ವಾಚ್‌ನ ನೈಜ ಬೆಲೆಯು 19,999 ರೂಪಾಯಿ ಎಂದು ತೋರಿಸಲಾಗಿದೆ. ಅಷ್ಟು ಬೆಲೆಯ ವಾಚ್ ಅನ್ನು 1,099 ರೂಪಾಯಿ ಅಮೆಜಾನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ನೀವು ಹೆಚ್ಚಿನ ವಿವರಕ್ಕೆ ಅಮೆಜಾನ್‌ಗೆ ಭೇಟಿ ನೀಡಬಹುದಾಗಿದೆ. ಈ ಸ್ಮಾರ್ಟ್‌ವಾಚ್ ಭಾರತದಲ್ಲಿ ಕಪ್ಪು, ಬ್ಲ್ಯಾಕ್ ಗೋಲ್ಡ್, ಬೂದು, ಪಿಂಕ್ ಮತ್ತು ನೇವಿ ಬ್ಲೂ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
ಈ ವಾಚ್‌ನ ಫೀಚರ್ ಏನು ತಿಳಿಯಿರಿ
ಫೈರ್‌ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್ 1.83-ಇಂಚಿನ ಹೆಚ್‌ಡಿ ಡಿಸ್‌ಪ್ಲೇಯಲ್ಲಿ ಬರಲಿದೆ. ಈ ಡಿಸ್‌ಪ್ಲೇ 240 x 284 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಇನ್ನು ಸ್ಮಾರ್ಟ್ ವಾಚ್ ಬ್ಲೂಟೂತ್ ಕಾಲ್ ಫೀಚರ್ಸ್ ಅನ್ನು ಹೊಂದಿದೆ.
ನೀವು ಫೋನ್ ಕಾಲ್‌ಗಳನ್ನು ಸ್ಮಾರ್ಟ್‌ವಾಚ್ ಮೂಲಕವೇ ಸ್ವೀಕರಿಸಬಹುದಾಗಿದೆ. ಈ ಸ್ಮಾರ್ಟ್‌ವಾಚ್ ಇನ್‌ಬಿಲ್ಟ್ ವಾಯ್ಸ್ ಅಸಿಸ್ಟೆಂಟ್ ಅನ್ನು ಕೂಡ ಹೊಂದಿದೆ. ಫೈರ್-ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್ 100ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ಬೆಂಬಲಿಸಲಿದೆ.
ಹೆಲ್ತ್ ಟ್ರ್ಯಾಕರ್‌ಗಳಿರುವ ವಾಚ್
ಈ ವಾಚ್ ನಿಮಗೆ ಆರೋಗ್ಯದ ಕಾಳಜಿ ವಹಿಸಲು ಸಹಾಯ ಮಾಡುತ್ತದೆ. ಡ್ರಿಂಕ್ ವಾಟರ್ ರಿಮೈಂಡರ್, ಫೀಮೇಲ್ ಹೆಲ್ತ್ ಕೇರ್, ಹಾರ್ಟ್ ರೇಟ್ ಟ್ರ್ಯಾಕರ್, ಸೆಡೆಂಟರಿ ಟ್ರ್ಯಾಕರ್, ಸ್ಲೀಪ್ ಮಾನಿಟರಿಂಗ್ ಮತ್ತು ಎಸ್‌ಪಿಒ2 ಸೇರಿದಂತೆ ಹಲವು ಹೆಲ್ತ್ ಟ್ರ್ಯಾಕರ್‌ಗಳನ್ನು ಕೂಡ ಈ ಸ್ಮಾರ್ಟ್ ವಾಚ್ ಹೊಂದಿದೆ.
ನೀವು ಕ್ಯಾಮೆರಾ ಕಂಟ್ರೋಲ್ ಅನ್ನು ಈ ಸ್ಮಾರ್ಟ್ ವಾಚ್ ಮೂಲಕ ಮಾಡಬಹುದು. ಮ್ಯೂಸಿಕ್ ಕಂಟ್ರೋಲ್ ಮತ್ತು ವೇದರ್ ಅಪ್ಡೇಟ್ ಫೀಚರ್ಸ್‌ಗಳನ್ನು ಈ ವಾಚ್ ಹೊಂದಿದೆ. ಇನ್ನು ಫೈರ್-ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ ಇನ್‌ಬಿಲ್ಟ್ ಗೇಮ್ಸ್‌ಗಳನ್ನು ಕೂಡ ವಾಚ್‌ನಲ್ಲೇ ಆಡಬಹುದು.
ವಾಟರ್ ಆಂಡ್ ಡಸ್ಟ್ (ನೀರು ಮತ್ತು ದೂಳು) ಪ್ರೊಟಕ್ಟಿವ್ ಅಡಿಯಲ್ಲಿ IP67 ರೇಟಿಂಗ್ ಅನ್ನು ಹೊಂದಿರುವ ವಾಚ್ ಇದಾಗಿದೆ. ಈ ಸ್ಮಾರ್ಟ್‌ವಾಚ್ ಸಾಮಾನ್ಯ ಬಳಕೆಯಲ್ಲಿ 6 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಫೈರ್ ಬೋಲ್ಟ್ ಕಂಪನಿ ಹೇಳಿದೆ.


Click it and Unblock the Notifications