ಫ್ಲೈಟ್ ಟಿಕೆಟ್ ಬುಕ್ ಮಾಡಿದ ಮೇಲೆ ಪ್ರಯಾಣಿಕರು ತಮ್ಮ ಹೆಸರು, ಪ್ರಯಾಣ ದಿನಾಂಕ, ಸಮಯ ಹಾಗೂ ಗಮ್ಯಸ್ಥಾನದ ವಿವರಗಳನ್ನ ಸರಿಯಾಗಿ ಪರಿಶೀಲನೆ ಮಾಡಬೇಕು. ಯಾಕಂದ್ರೆ ಒಂದೇ ಒಂದು ಸಣ್ಣ ತಪ್ಪಿದ್ದೂ ಮುಂದೊನ ಹಂತದಲ್ಲಿ ಅದು ದೊಡ್ಡ ಸಮಸ್ಯೆಯಾಗಬೋದು. ಹೀಗಾಗಿ ಬುಕಿಂಗ್ ಕಂಫರ್ಮ್ ಆದ ಸಂದೇಶ ಬಂದ ಕೂಡಲೇ, ನೀವು ಉಲ್ಲೇಖಿಸಿರೋ ಮಾಹಿತಿ ಸರಿ ಇದ್ಯೋ, ಇಲ್ವೋ ಅನ್ನೋದನ್ನ ನೋಡಿಕೊಳ್ಳೋದು ಮುಖ್ಯ. ಮೊದಲೇ ನೋಡಿಕೊಂಡರೇ 24 ಗಂಟೆಗಳ ಒಳಗೆ ತಿದ್ದುಪಡಿ ಮಾಡೋ ಅವಕಾಶ ಇರುತ್ತೆ.

24 ಗಂಟೆಗಳೊಳಗಿನ ಉಚಿತ ತಿದ್ದುಪಡಿ ಅವಕಾಶ:
ಹೌದು, ನೇರವಾಗಿ ವಿಮಾನಯಾನ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಟಿಕೆಟ್ ಖರೀದಿಸಿದರೆ, ಬುಕ್ಕಿಂಗ್ ಮಾಡಿದ 24 ಗಂಟೆಗಳೊಳಗೆ ಹೆಸರಿನಲ್ಲಿ ಅಥವಾ ಇತರ ವಿವರಗಳಲ್ಲಿ ತಪ್ಪು ಕಂಡುಬಂದರೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ತಿದ್ದುಪಡಿಸಬಹುದು. ಆದರೆ ಈ ತಿದ್ದುಪಡಿ ಅದೇ ವ್ಯಕ್ತಿಯ ಹೆಸರಿನಲ್ಲೇ ಇರಬೇಕು. ಟಿಕೆಟ್‌ನ್ನು ಬೇರೆ ವ್ಯಕ್ತಿಗೆ ವರ್ಗಾಯಿಸುವ ಅವಕಾಶ ಇರುವುದಿಲ್ಲ.
ಟಿಕೆಟ್ ರದ್ದುಪಡಿಸುವ ವಿಧಾನ:
ಪ್ರಯಾಣಿಕರು ಟಿಕೆಟ್ ರದ್ದುಪಡಿಸಲು ಮೊದಲು ತಮ್ಮ ಬುಕ್ಕಿಂಗ್ ಖಾತೆಗೆ ಲಾಗಿನ್ ಆಗಿ ರದ್ದುಪಡಿಸುವ ಆಯ್ಕೆಯನ್ನು ಬಳಸಬೇಕು. ರದ್ದುಪಡಿಸುವಿಕೆ ದೃಢೀಕರಿಸಿದ ನಂತರ, ಅದರ ಮಾಹಿತಿ ಇಮೇಲ್ ಅಥವಾ ಸಂದೇಶದ ಮೂಲಕ ಲಭ್ಯವಾಗುತ್ತದೆ. ಈ ದೃಢೀಕರಣವನ್ನು ಸಂಗ್ರಹಿಸಿಕೊಂಡಿರುವುದು ಮುಂದಿನ ಹಂತದಲ್ಲಿ ಉಪಯುಕ್ತವಾಗುತ್ತದೆ.
ಟ್ರಾವೆಲ್ ಏಜೆಂಟ್ ಮೂಲಕ ಬುಕ್ಕಿಂಗ್ ಮಾಡಿದರೆ:
ಟಿಕೆಟ್‌ನ್ನು ಟ್ರಾವೆಲ್ ಏಜೆಂಟ್ ಅಥವಾ ಆನ್‌ಲೈನ್ ಪೋರ್ಟಲ್ ಮೂಲಕ ಖರೀದಿಸಿದರೂ ಸಹ, ಮರುಪಾವತಿ ಜವಾಬ್ದಾರಿ ವಿಮಾನಯಾನ ಸಂಸ್ಥೆಯದ್ದೇ ಆಗಿರುತ್ತದೆ. ಏಜೆಂಟ್‌ಗಳು ಸಂಸ್ಥೆಯ ಪ್ರತಿನಿಧಿಗಳಾಗಿರುವುದರಿಂದ, ಪ್ರಯಾಣಿಕರಿಗೆ ಹಣ ಸರಿಯಾದ ಸಮಯದಲ್ಲಿ ತಲುಪುವಂತೆ ನೋಡಿಕೊಳ್ಳುವುದು ಅವರ ಕರ್ತವ್ಯವಾಗಿದೆ.
14 ಕೆಲಸದ ದಿನಗಳಲ್ಲಿ ಮರುಪಾವತಿ ಕಡ್ಡಾಯ:
ರದ್ದುಪಡಿಸುವ ಪ್ರಕ್ರಿಯೆ ಪೂರ್ಣಗೊಂಡ ನಂತರ, ಮರುಪಾವತಿಯನ್ನು 14 ಕೆಲಸದ ದಿನಗಳೊಳಗೆ ಪೂರ್ಣಗೊಳಿಸಬೇಕು. ಸಾಮಾನ್ಯವಾಗಿ, ಪ್ರಯಾಣಿಕರು ಹಣ ಪಾವತಿಸಿದ ಅದೇ ವಿಧಾನಕ್ಕೆ ಮರುಪಾವತಿ ಜಮೆಯಾಗುತ್ತದೆ. ಮರುಪಾವತಿ ವಿಳಂಬವಾದರೆ, ಪ್ರಯಾಣಿಕರು ಸಂಬಂಧಿತ ಸಂಸ್ಥೆಯನ್ನು ಸಂಪರ್ಕಿಸಿ ಸ್ಪಷ್ಟನೆ ಕೇಳಬಹುದು.
ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಸಡಿಲಿಕೆ:
ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದಲ್ಲಿ, ಪ್ರಯಾಣಿಕರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ರದ್ದುಪಡಿಸುವ ಶುಲ್ಕದಲ್ಲಿ ಸಡಿಲಿಕೆ ಪಡೆಯಬಹುದು. ಆಸ್ಪತ್ರೆಯ ದಾಖಲೆ ಅಥವಾ ವೈದ್ಯರ ಪ್ರಮಾಣ ಪತ್ರವನ್ನು ನೀಡಿದರೆ, ಮಾನವೀಯ ಆಧಾರದ ಮೇಲೆ ನಿಯಮಗಳಲ್ಲಿ ಸಡಿಲಿಕೆ ನೀಡುವ ವ್ಯವಸ್ಥೆ ಇದೆ.
48 ಗಂಟೆಗಳ 'ಲುಕ್-ಇನ್' ಆಯ್ಕೆ:
ಟಿಕೆಟ್ ಬುಕ್ ಮಾಡಿದ ನಂತರ 48 ಗಂಟೆಗಳ ಕಾಲ 'ಲುಕ್-ಇನ್' ಆಯ್ಕೆಯನ್ನು ನೀಡಲಾಗಿದೆ. ಈ ಅವಧಿಯಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣ ವಿವರಗಳನ್ನು ಮರುಪರಿಶೀಲಿಸಿ ಅಗತ್ಯವಿದ್ದರೆ ಬದಲಾವಣೆ ಮಾಡಿಕೊಳ್ಳಬಹುದು. ಇದರಿಂದ ಅನಗತ್ಯ ದಂಡ ಮತ್ತು ತೊಂದರೆಗಳನ್ನು ತಪ್ಪಿಸಿಕೊಳ್ಳಲು ಸಹಾಯವಾಗುತ್ತದೆ.
ಒಟ್ಟಿನಲ್ಲಿ, ಈ ಹೊಸ ನಿಯಮಗಳು ಪ್ರಯಾಣಿಕರಿಗೆ ಹೆಚ್ಚು ರಕ್ಷಣೆ ಮತ್ತು ಸ್ಪಷ್ಟತೆ ಒದಗಿಸುತ್ತವೆ. ಸಮಯಕ್ಕೆ ಸರಿಯಾದ ಮರುಪಾವತಿ, ಉಚಿತ ತಿದ್ದುಪಡಿ ಅವಕಾಶ ಮತ್ತು ತುರ್ತು ಸಂದರ್ಭಗಳಲ್ಲಿ ಸಡಿಲಿಕೆ ನೀಡುವ ಕ್ರಮಗಳಿಂದ ವಿಮಾನ ಪ್ರಯಾಣ ಈಗ ಹೆಚ್ಚು ಪ್ರಯಾಣಿಕ ಸ್ನೇಹಿಯಾಗುತ್ತಿದೆ.


Click it and Unblock the Notifications