ಒಂದೊಮ್ಮೆ ಅಮಿತಾಬ್ ಬಚ್ಚನ್ ಸಿಎ; ಇಂದು ₹21,000 ಕೋಟಿ ಮೌಲ್ಯದ ಕಂಪನಿ ಮಾಲೀಕ.!

ಕಠಿಣ ಪರಿಶ್ರಮ, ಶೃದ್ದೆ ಮತ್ತು ಸಾಧಿಸಲೇಬೇಕು ಎಂಬ ಛಲವಿದ್ದರೆ ನಮ್ಮ ಬದುಕನ್ನು ಯಾವ ದಿಕ್ಕಿಗೂ ಬದಲಾಯಿಸಬಹುದು ಎಂಬುವುದಕ್ಕೆ ಪ್ರೇಮಚಂದ್ ಗೋಧಾ ಅವರ ಜೀವನವೇ ಸಾಕ್ಷಿ. ಇವರು ಎಲ್ಲರಂತೇ ಜನ ಸಾಮಾನ್ಯರಿಗೂ ತಿಳಿದಿರುವ ಪ್ರಸಿದ್ದ ವ್ಯಕ್ತಿಯಲ್ಲದಿದ್ದರೂ ಉದ್ಯಮ ಕ್ಷೇತ್ರದಲ್ಲಿ ಚಿರಪರಿಚಿತ ವ್ಯಕ್ತಿಯಾಗಿದ್ದಾರೆ. ಸಾಮಾನ್ಯ ರೈತ ಕುಟುಂಬದಿಂದ ಬಂದ ಪ್ರೇಮಚಂದ್ ಗೋಧಾ ಇಂದು ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ತನ್ನ ಸ್ಥಾನವನ್ನು ಗಳಿಸಿದ್ದಲ್ಲದೆ, ಫಾರ್ಮಾ ಸಂಸ್ಥೆಯನ್ನು ಬೆಳೆಸಿದ್ದಾರೆ. ಇಂದು ಈ ಕಂಪನಿಯ ಮೌಲ್ಯ ₹ 21,000 ಕೋಟಿಗೂ ಹೆಚ್ಚು ಅಂದರೆ ನಂಬಲೇಬೇಕು.

Ipca Laboratories (ಇಪ್ಕಾ ಲ್ಯಾಬೋರೇಟರೀಸ್)‌ನ ಕಾರ್ಯಕಾರಿ ಅಧ್ಯಕ್ಷರಾದ ಪ್ರೇಮಚಂದ್ ಗೋಧಾ ಇಂದು $ 1.7 ಶತಕೋಟಿ ( ₹ 14,435 ಕೋಟಿ) ನಿವ್ವಳ ಮೌಲ್ಯದೊಂದಿಗೆ ಅವರು ಭಾರತದ ಸಿರಿವಂತ ವ್ಯಕ್ತಿಗಳ ಸಾಲಿನಲ್ಲಿ ನಿಂತಿದ್ದಾರೆ. 77 ವರ್ಷದ ಗೋಧಾ ಅವರು ಇಂದು ₹ 21,000 ಕೋಟಿಯಇಪ್ಕಾ ಫಾರ್ಮಾ ಕಂಪನಿಯ ಮಾಲೀಕರಾಗಿದ್ರೂ, ಒಂದು ಕಾಲದಲ್ಲಿ ಬಚ್ಚನ್ ಕುಟುಂಬದ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಿದ್ದರು ಎಂಬುದು ಕೆಲವೇ ಜನರಿಗೆ ತಿಳಿದಿದೆ . ಇಲ್ಲಿಂದಲೇ ಅವರು ಆರ್ಥಿಕ ಪ್ರಪಂಚದ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆದುಕೊಂಡು ಮುಂದೆ ಇದೇ ಅವರಿಗೆ ಉದ್ಯಮ ಸಾಮ್ರಾಜ್ಯವನ್ನು ನಿರ್ಮಿಸಲು ಸಹಾಯ ಮಾಡಿತು.

ಅಂದು ಬಚ್ಚನ್ ಸಿಎ; ಇಂದು ಸಿರಿವಂತ ಉದ್ಯಮಿ

ಪ್ರೇಮಚಂದ್ ಗೋಧಾ ಹಿನ್ನಲೆ:

ರಾಜಸ್ಥಾನದ ಕೃಷಿಕ ಕುಟುಂಬದಲ್ಲಿ ಜನಿಸಿದ ಗೋಧಾ ಅವರು ರಾಜಸ್ಥಾನ ವಿಶ್ವವಿದ್ಯಾಲಯದಿಂದ ವಾಣಿಜ್ಯಶಾಸ್ತ್ರದಲ್ಲಿ ಪದವಿ ಪಡೆದರು. ಇದಾದ ಬಳಿಕ ಮುಂದೆ ಅವರು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ಚಾರ್ಟರ್ಡ್ ಅಕೌಂಟೆಂಟ್ ಪದವಿಯನ್ನು ಪಡೆದರು.

ಗೋಧಾ ಅವರ ವೃತ್ತಿಜೀವನವು 1971 ರಲ್ಲಿ ಪ್ರಾರಂಭವಾಯಿತು. ಆರಂಭಿಕ ಕೆಲ ವರ್ಷಗಳಲ್ಲಿ ಅವರು ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಸೇರಿದಂತೆ ಇಡೀ ಬಚ್ಚನ್ ಕುಟುಂಬದ ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸಿದರು.

Ipca ಪಯಣ ಆರಂಭವಾಗಿದ್ದು ಹೇಗೆ?

ಇಪ್ಕಾ ಲ್ಯಾಬೊರೇಟರೀಸ್‌ನಲ್ಲಿ ಆಗ ದಿವಾಳಿಯ ಅಂಚಿನಲ್ಲಿತ್ತು. ಗೋಧಾ ಮತ್ತು ಬಚ್ಚನ್ ಕುಟುಂಬ ಇಪ್ಕಾ ಲ್ಯಾಬೊರೇಟರೀಸ್‌ನಲ್ಲಿ ಹೂಡಿಕೆ ಮಾಡಿದಾಗ 1975 ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ಪಡೆಯಿತು. ಗೋಧಾ ಅವರ ದೂರದೃಷ್ಟಿಯುಳ್ಳ ಚಿಂತನೆಗಳು ಮತ್ತು ವ್ಯವಹಾರದಲ್ಲಿ ಅವರಿಗಿದ್ದ ಕುಶಾಗ್ರಮತಿ ಇಪ್ಕಾ ಲ್ಯಾಬೊರೇಟರೀಸ್‌ಗೆ ಹೊಸ ಜೀವನವನ್ನು ನೀಡಿತು. ನಷ್ಟದಲ್ಲಿ ಕಂಪನಿಯನ್ನು ಲಾಭದ ಹಾದಿಗೆ ತಂದು ನಿಲ್ಲಿಸಿದರು. ಅವರ ನೇತೃತ್ವದಲ್ಲಿ ಕಂಪನಿಯ ಆದಾಯ ₹ 54 ಲಕ್ಷದಿಂದ ₹ 4,422 ಕೋಟಿಗೆ ಏರಿಕೆಯಾಗಿದೆ ಎನ್ನಲಾಗಿದೆ. ಬಚ್ಚನ್ ಕುಟುಂಬವು 1999 ರಲ್ಲಿ ಹಣಕಾಸಿನ ಅಡಚಣೆಯಿಂದ ಕಂಪನಿಯಲ್ಲಿನ ತಮ್ಮ ಪಾಲನ್ನು ಮಾರಾಟ ಮಾಡಿದಾಗ ಇದು ಗೋಧಾ ಅವರಿಗೆ ಅನುಕೂಲಕರವಾಗಿ ಪರಿಣಮಿಸಿತು.

ಗೋಧಾ ಅವರು 1975ರ ಅಕ್ಟೋಬರ್ 31ರಿಂದ ಕಂಪನಿಯ ನಿರ್ದೇಶಕ ಮಂಡಳಿಯ ಸದಸ್ಯರಾಗಿದ್ದು, ಆ ಬಳಿಕ 1983ರ ಮಾರ್ಚ್‌ನಿಂದ ವ್ಯವಸ್ಥಾಪಕ ನಿರ್ದೇಶಕರಾಗಿ ಜವಾಬ್ದಾರಿ ಹೊತ್ತಿದ್ದಾರೆ. ಅವರ ಆಡಳಿತಾವಧಿಯಲ್ಲಿ, Ipca ಲ್ಯಾಬೊರೇಟರೀಸ್‌ ತನ್ನ ವ್ಯಾಪಾರವನ್ನು ಗಣನೀಯವಾಗಿ ವಿಸ್ತರಿಸಿದೆ ಮತ್ತು ಭಾರತದ ಅತ್ಯಂತ ಪ್ರತಿಷ್ಠಿತ ಔಷಧೀಯ ಕಂಪನಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಕಂಪನಿಯ ಮಾರುಕಟ್ಟೆ ಮೌಲ್ಯವು ಡಿಸೆಂಬರ್ ನಾಲ್ಕನೇ ವಾರದಲ್ಲಿ ರೂ. 21,298 ಕೋಟಿಗೆ ತಲುಪಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+