ಕೆಲವೊಮ್ಮೆ ಟೀಕೆ ಟಿಪ್ಪಣಿಗಳು ಹಾಗೂ ಅಪಹಾಸ್ಯಗಳು ಮನುಷ್ಯನನ್ನು ಎಷ್ಟು ಬಲಿಷ್ಠರನ್ನಾಗಿ ಮಾಡುತ್ತದೆ ಎಂಬುದಕ್ಕೆ ದೇಶದ ಪ್ರಸಿದ್ದ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಒಂದಾಗಿರುವ ಆಝಾದ್ ಇಂಜಿನಿಯರಿಂಗ್‌ನ ಮುಖ್ಯಸ್ಥ ರಾಕೇಶ್ ಚೋಪ್ದಾರ್ ಅವರ ಜೀವನಗಾಥೆಯೇ ಸಾಕ್ಷಿ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿ ಗೆಳೆಯರಿಂದ ಅದರಲ್ಲೂ ಕುಟುಂಬದ ಸದಸ್ಯರೇ ಅಪಹಾಸ್ಯ ಮಾಡಿದ ಸಂದರ್ಭದಲ್ಲಿ ದೃತಿಗೆಡದೆ ತಂದೆಯ ಕಾರ್ಖಾನೆಯಲ್ಲಿ ಕೆಲಸ ಮಾಡಲು ಆರಂಭಿಸಿದರು. ಇದೇ ರೀತಿ ಕಾರ್ಖಾನೆಯಲ್ಲಿ ಎಲ್ಲಾ ಕೆಲಸಗಳನ್ನು ಶ್ರದ್ದೆಯಿಂದ ಕಲಿತುಕೊಂಡ ಇದೇ ರಾಕೇಶ್ ಚೋಪ್ದಾರ್ ಇಂದು ಬರೊಬ್ಬರಿ 10 ಸಾವಿರ ಕೋಟಿ ರೂ. ಮೌಲ್ಯದ ಇಂಜಿನಿಯರಿಂಗ್ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಎಲ್ಲಾ ಸ್ಕೂಲ್ ಡ್ರಾಪ್ ಔಟ್‌ಗಳಿಗೂ ಮಾದರಿಯಾಗಿದ್ದಾರೆ.

ಟೀಕೆ, ಟಿಪ್ಪಣಿ ಹಾಗೂ ಅಪಹಾಸ್ಯ
ಎಲ್ಲಾ ವಿದ್ಯಾರ್ಥಿಗಳೂ ಕಲಿಕೆಯಲ್ಲಿ ಒಂದೇ ರೀತಿ ಇರಲು ಸಾಧ್ಯವಿಲ್ಲ. ಕೆಲವರು ಉತ್ತಮ ಅಂಕಗಳನ್ನು ಪಡೆದುಕೊಂಡು ಗುರುತಿಸಿಕೊಂಡರೆ ಇನ್ನೂ ಕೆಲವರು ಉತ್ತಮ ಅಂಕಗಳು ಬಿಡಿ, ತರಗತಿಯಲ್ಲಿ ತೇರ್ಗಡೆಯಾಗುವಲ್ಲಿ ಕೂಡ ಎಡವುತ್ತಾರೆ. ಅಂಥವರಲ್ಲಿ ರಾಕೇಶ್ ಕೂಡ ಒಬ್ಬರಾಗಿದ್ದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಬಳಿಕ ಎಲ್ಲರಿಂದಲೂ ರಾಕೇಶ್ ಅಪಮಾನಗಳನ್ನು ಎದುರಿಸುತ್ತಾರೆ.
ಆದರೆ ಯಾವ ಸಂದರ್ಭದಲ್ಲಿ ತಲೆಗೆಡಿಸಿಕೊಳ್ಳದ ರಾಕೇಶ್ ತನ್ನ ತಂದೆಯ ಕಾರ್ಖಾನೆ ಅಟ್ಲಾಸ್ ಫಾಸ್ಟೆನರ್‌ನಲ್ಲಿ ಸಣ್ಣ ಕೆಲಸಕ್ಕೆ ಸೇರ್ಪಡೆಯಾಗುತ್ತಾರೆ. ಅಲ್ಲಿಂದ ನಡೆದದ್ದೆಲ್ಲಾ ರಾಕೇಶ್ ಅವರ ಪಾಲಿಗೆ ಸದ್ಯ ಇತಿಹಾಸ ಎಂದರೆ ಅತಿಶಯೋಕ್ತಿಯಾಗಲಾರದು. ಹೀಗೆ ತಂದೆಯ ಕಾರ್ಖಾನೆಗೆ ಕೆಲಸಕ್ಕೆ ಸೇರಿದ ರಾಕೇಶ್, ಅಲ್ಲಿ ಎಲ್ಲಾ ಕೌಶಲಭರಿತ ಕೆಲಸಗಳನ್ನು ಕಲಿತುಕೊಂಡರು.
ಯಂತ್ರಗಳು, ಇಂಜಿನಿಯರಿಂಗ್‌ಗೆ ಸಂಬಂಧಿಸಿದ ಕೌಶಲಗಳನ್ನು ಕೂಡ ರಾಕೇಶ್ ಕರಗತ ಮಾಡಿಕೊಂಡರು. ರಾಕೇಶ್ ಅವರ ಮಾತಿನ ಪ್ರಕಾರ, ಶಿಕ್ಷಿತ ಇಂಜಿನಿಯರ್ ಯಾವ ರೀತಿ ತನ್ನ ಕೆಲಸದಲ್ಲಿ ಕೌಶಲ ಪಡೆಯುತ್ತಾನೋ ಆ ರೀತಿ ತಯಾರಾಗಲು ನನಗೆ ನಾಲ್ಕು ವರ್ಷಗಳು ಹಿಡಿಯಿತು ಎಂದು ತಿಳಿಸುತ್ತಾರೆ. ಕಾರ್ಖಾನೆಯಲ್ಲಿ ತಯಾರಾದ ಬಿಡಿಭಾಗಗಳನ್ನು ಹೇಗೆ ಮತ್ತು ಎಲ್ಲಿ ಬಳಸಲಾಗುತ್ತದೆ ಎಂಬುದನ್ನು ರಾಕೇಶ್ ಸರಿಯಾಗಿ ಅಧ್ಯಯನ ಮಾಡಿಕೊಂಡರು.
ಆಜಾದ್ ಎಂಜಿನಿಯರಿಂಗ್‌ನ ಜನನ ಹೇಗಾಯಿತು?
ಹೀಗೆ ತಂದೆಯ ಕಾರ್ಖಾನೆಯಲ್ಲಿ ಸುಮಾರು 12 ವರ್ಷಗಳ ಕಾಲ ವ್ಯವಹಾರದ ಪ್ರತಿಯೊಂದು ಅಂಶವನ್ನು ಕರಗತ ಮಾಡಿಕೊಂಡ ನಂತರ ರಾಕೇಶ್ ತನ್ನದೇ ಆದ ಸಂಸ್ಥೆಯನ್ನು ರೂಪಿಸಲು ನಿರ್ಧರಿಸಿದರು. ಇದರ ಭಾಗವೆಂಬಂತೆ 2008 ರಲ್ಲಿ ಅವರು ಹೈದರಾಬಾದ್‌ನ ಬಾಲಾನಗರದಲ್ಲಿ ಸಣ್ಣದಾದ 200-ಚದರ ಮೀಟರ್ ಶೆಡ್‌ನಲ್ಲಿ ಆಜಾದ್ ಇಂಜಿನಿಯರಿಂಗ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.
ಈ ಅವಧಿಯಲ್ಲಿ ಸಂಸ್ಥೆಯಲ್ಲಿ ಅವರು ಕೇವಲ ಸೆಕೆಂಡ್ ಹ್ಯಾಂಡ್ CNC ಯಂತ್ರವನ್ನು ಮಾತ್ರ ಹೊಂದಿದ್ದರು. ಆದರೂ ಇದೇ ಸಂಸ್ಥೆಯಲ್ಲಿ ಕಷ್ಟಪಟ್ಟು ದುಡಿದ ಅವರಿಗೆ ಕಷ್ಟಪಟ್ಟು ಶ್ರಮ ಹಾಕಿದ್ದಕ್ಕೆ ಪ್ರತಿಫಲ ಕೂಡ ಲಭಿಸಿತು. ಯುರೋಪಿಯನ್ ಕಂಪೆನಿಯೊಂದಕ್ಕೆ ಉಷ್ಣ ವಿದ್ಯುತ್ ಟರ್ಬೈನ್‌ಗಳಿಗಾಗಿ ಏರೋಫಾಯಿಲ್‌ಗಳನ್ನು ತಯಾರಿಸಲು ರಾಕೇಶ್ ಅವರ ಸಂಸ್ಥೆಗೆ ಸಾವಿರಾರು ಡಾಲರ್ ಮೊತ್ತದ ಆರ್ಡರ್ ಕೂಡ ಲಭಿಸಿದ್ದು, ಅವರ ಉದ್ಯಮ ಜೀವನಕ್ಕೆ ದೊಡ್ಡ ತಿರುವು ನೀಡಿತು.
ಇದು ಅವರ ಕಂಪೆನಿಗೆ ಭಾರೀ ಪ್ರಮಾಣದಲ್ಲಿ ಲಾಭ ಕೂಡ ತಂದುಕೊಟ್ಟಿತು. ಪರಿಣಾಮ ಆಜಾದ್ ಎಂಜಿನಿಯರಿಂಗ್ ಪರಮಾಣು, ಅನಿಲ ಮತ್ತು ಹೈಡ್ರೋಜನ್ ಟರ್ಬೈನ್‌ಗಳಿಗೆ ಸಂಕೀರ್ಣವಾದ ಘಟಕಗಳನ್ನು ತಯಾರಿಸುವ ಸಲುವಾಗಿ ಕಂಪೆನಿಯು ತನ್ನ ಸಾಮರ್ಥ್ಯವನ್ನು ಕೂಡ ಮತ್ತಷ್ಟು ವಿಸ್ತರಿಸಿತು. ಕೇವಲ ಸಾಮರ್ಥ್ಯ ವಿಸ್ತರಿಸಿದ್ದೇ ಅಲ್ಲದೆ ಇದೇ ರೀತಿ ಕಂಪೆನಿಯು ಸರಿಯಾದ ಗುಣಮಟ್ಟವನ್ನು ಕೂಡ ಕಾಯ್ದುಕೊಂಡಿತು.
ಜಾಗತಿಕ ಮಟ್ಟದಲ್ಲಿ ಏರುತ್ತಿರುವ ಪ್ರಾಮುಖ್ಯತೆ
ದಶಕಗಳು ಹಿಂದಿನ ಸಮಯದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಭಾರತದ ಗುಣಮಟ್ಟದ ವಿದೇಶಿ ಕಂಪೆನಿಗಳು ಅನುಮಾನದ ರೀತಿಯಲ್ಲಿ ನೋಡುತ್ತಿದ್ದವು. ಆದರೆ ಇತ್ತೀಚಿಗಿನ ದಶಕಗಳಲ್ಲಿ ಭಾರತವು ಇಂಜಿನಿಯರಿಂಗ್ ವಸ್ತುಗಳ ರಫ್ತಿನಲ್ಲಿ ಜಗತ್ತಿನ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ಅದರಲ್ಲೂ ವಿದೇಶಿಗರ ಅನುಮಾನವನ್ನು ಹೊಗಲಾಡಿಸುವಲ್ಲಿ ರಾಕೇಶ್ ಅವರ ಕಂಪೆನಿ ಕೂಡ ಹೆಚ್ಚಿನ ಕೆಲಸ ಮಾಡಿದೆ ಎಂದರೆ ತಪ್ಪಾಗಲಾರದು.
ಸದ್ಯ ಆಝಾದ್ ಎಂಜಿನಿಯರಿಂಗ್ ಕಂಪೆನಿಯು ಜಗತ್ತಿನ ಪ್ರಮುಖ ಜಾಗತಿಕ ಮೂಲ ಸಲಕರಣೆ ತಯಾರಕ (OEM)ರುಗಳ ಪ್ರಮುಖ ಆಯ್ಕೆಯಾಗಿದೆ. ಸದ್ಯ ವಿದೇಶಗಳಿಂದ ಆಝಾದ್ ಅವರ ಕಂಪೆನಿಗೆ ಹಲವು ಆರ್ಡರ್‌ಗಳು ಬರುತ್ತಿದ್ದು, ಸರಿಯಾದ ರೀತಿಯಲ್ಲಿ ಅವುಗಳನ್ನು ಗುಣಮಟ್ಟದಲ್ಲಿ ತಯಾರಿಸಿ ಪೂರೈಸುತ್ತಿದ್ದಾರೆ.
ಕಂಪೆನಿಯ ಇಂದಿನ ಸ್ಥಿತಿ ಏನು?
ಇಂದು ಇದೇ ಆಜಾದ್ ಇಂಜಿನಿಯರಿಂಗ್ ಏರೋಸ್ಪೇಸ್ ಉದ್ಯಮದಲ್ಲಿ ಪ್ರಮುಖ ಕಂಪೆನಿಯಾಗಿದ್ದು, ಫೆಬ್ರವರಿ 2024 ರ ಹೊತ್ತಿಗೆ 5,499 ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಕಂಪನಿಯು ಜಾಗತಿಕ ಗುಣಮಟ್ಟದ ಮತ್ತು ಪ್ರಪಂಚದಾದ್ಯಂತದ ಉದ್ಯಮಗಳ ಮೇಲೆ ಪರಿಣಾಮ ಬೀರುವ ಘಟಕಗಳ ಬಿಡಿಭಾಗಗಳ ಅಭಿವೃದ್ಧಿಯಲ್ಲಿ ಮುಂದುವರೆಸಿದೆ. ಟೀಕೆ ಟಿಪ್ಪಣಿಗಳನ್ನು ಸಮರ್ಥವಾಗಿ ಎದುರಿಸಿ ಇಂದು ರಾಕೇಶ್ ಅವರು 10 ಸಾವಿರ ಕೋಟಿ ರೂ.ಗಳ ಉದ್ಯಮವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದು, ಎಲ್ಲರಿಗೂ ಸ್ಪೂರ್ತಿದಾಯಕರಾಗಿದ್ದಾರೆ.
More From GoodReturns

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ



Click it and Unblock the Notifications