ಬಿರ್ಲಾ ಕುಟುಂಬದ ವಂಶಸ್ಥರಾದ ಯಶೋವರ್ಧನ್ ಬಿರ್ಲಾ ಅಥವಾ ಯಶ್ ಬಿರ್ಲಾ ಎಂದೂ ಕರೆಯಲ್ಪಡುವ ವ್ಯಾಪಾರದ ಕುಶಾಗ್ರಮತಿ ಮತ್ತು ಫಿಟ್‌ನೆಸ್ ಎರಡಕ್ಕೂ ಸಮಾನಾರ್ಥಕ ಹೆಸರು. ಅವರ ಜೀವನ ದುರಂತದಿಂದ ಕೂಡಿದ್ದದೂ ತಮ್ಮ ಜೀವನವನ್ನು ಮತ್ತು ಉದ್ಯಮವನ್ನು ಕಟ್ಟಿ ಬೆಳೆಸಿದ ಯಶಸ್ಸು ಯಶ್ ಬಿರ್ಲಾ ಅವರಿಗೆ ಸಲ್ಲಬೇಕು.
ಇವರು 57 ನೇ ವಯಸ್ಸಿನಲ್ಲಿ, ಯಶ್ ತನ್ನನ್ನು ಒಬ್ಬ ಚಾಣಾಕ್ಷ ಉದ್ಯಮಿಯಾಗಿ ಮಾತ್ರವಲ್ಲದೆ ಫಿಟ್‌ನೆಸ್ ಐಕಾನ್ ಆಗಿಯೂ ರೂಪಿಸಿಕೊಂಡಿದ್ದಾರೆ.

ದುರಂತ ಜೀವನದಿಂದ ಮೇಲೆದ್ದು ಬಂದ ಯಶೋವರ್ಧನ್ ಬಿರ್ಲಾ
ಯಶೋವರ್ಧನ್ ಬಿರ್ಲಾ ಭಾರತದಲ್ಲಿನ ವೈವಿಧ್ಯಮಯ ಉದ್ಯಮ ಸಮೂಹವಾದ ಯಶ್ ಬಿರ್ಲಾ ಗ್ರೂಪ್‌ನ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. 1967 ರ ಸೆಪ್ಟೆಂಬರ್ 29 ರಂದು ಮುಂಬೈನಲ್ಲಿ ಜನಿಸಿದ ಯಶ್, ಅಶೋಕ್ ಬಿರ್ಲಾ ಮತ್ತು ಸುನಂದಾ ಬಿರ್ಲಾ ಅವರ ಪುತ್ರರಾಗಿ ಐಷಾರಾಮಿಯಲ್ಲಿ ಜೀವನದಲ್ಲಿ ಬೆಳೆದರು. ಯಶ್ ಅವರಿಗೆ ಸುಜಾತಾ ಬಿರ್ಲಾ ಎಂಬ ತಂಗಿಯೂ ಇದ್ದರು. ಆದರೆ ಅದೊಂದು ಘಟನೆ ಅವರ ಜೀವನವನ್ನು ದುರಂತಮಯವಾಗಿಸಿತು. 1990 ರಲ್ಲಿ ವಿಮಾನ ಅಪಘಾತದಲ್ಲಿ ತಮ್ಮ ತಂದೆತಾಯಿ ಮತ್ತು ಸಹೋದರಿಯನ್ನುಕಳೆದುಕೊಂಡರು.
ಸೆಪ್ಟೆಂಬರ್ 29, 1967 ರಂದು ಮುಂಬೈನಲ್ಲಿ ಜನಿಸಿದ ಅವರು ಮುಂಬೈನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ಮುಂಬೈನ HR ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ನಂತರ, ಅವರು ಯುನೈಟೆಡ್ ಸ್ಟೇಟ್ಸ್‌ನ ವಿಶ್ವವಿದ್ಯಾನಿಲಯದಿಂದ ವ್ಯಾಪಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಯಶ್ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿರುವಾಗ 23 ನೇ ವಯಸ್ಸಿನಲ್ಲಿ ತನ್ನ ಕುಟುಂಬದ ವ್ಯವಹಾರವನ್ನು ವಹಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು.
ಯಶೋವರ್ಧನ್ ಬಿರ್ಲಾ ಅವರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಕುಟುಂಬದ ವ್ಯಾಪಾರವನ್ನು ನಿರ್ವಹಿಸತೊಡಗಿದ್ದು, ಈ ಅನುಭವವು ಅವರಲ್ಲಿ ಉತ್ತಮವಾದ ವ್ಯವಹಾರ ಕೌಶಲ್ಯಗಳನ್ನು ಬೆಳೆಸಿತು ಮತ್ತು ಅವರನ್ನು ಒಬ್ಬ ಸಮರ್ಥ ನಾಯಕನನ್ನಾಗಿಸಿತು. ತಮ್ಮ ತಂದೆಯ ನಿಧನದ ನಂತರ, ಅವರು ಕುಟುಂಬದ ವ್ಯಾಪಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿಯನ್ನು ಹೊತ್ತರು.
ಅವರು ಸಿಮೆಂಟ್, ವಿದ್ಯುತ್ ಮತ್ತು ಜವಳಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಾರವನ್ನು ವಿಸ್ತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು, ಅವರ ನೇತೃತ್ವದಲ್ಲಿ ಬಿರ್ಲಾ ಗ್ರೂಪ್ 3000 ಕೋಟಿ ರೂಪಾಯಿಗೂ ಹೆಚ್ಚಿನ ವಹಿವಾಟನ್ನು ಹೊಂದಿದೆ.
ಯಶೋವರ್ಧನ್ ಬಿರ್ಲಾ ಅವರು ಅವಂತಿ ಬಿರ್ಲಾ ಅವರನ್ನು ವಿವಾಹವಾಗಿದ್ದು ಈ ದಂಪತಿಗೆ ವೇದಾಂತ್ ಮತ್ತು ನಿರ್ವಾನ್ ಎಂಬ ಇಬ್ಬರು ಪುತ್ರರು ಮತ್ತು ಶ್ಲೋಕಾ ಎಂಬ ಪುತ್ರಿ ಇದ್ದಾರೆ. ಯಶ್ ಉದ್ಯಮಿಯಾಗುವುದರ ಜೊತೆಗೆ, ವಿಶಿಷ್ಟವಾದ ಫ್ಯಾಶನ್ ಸೆನ್ಸ್ ಮತ್ತು ಫಿಟ್ನೆಸ್ ಕಡೆಗೆ ಸಮರ್ಪಣಾ ಮನೋಭಾವವನ್ನು ಹೊಂದಿದ್ದಾರೆ.
ನಿವ್ವಳ ಮೌಲ್ಯ ಮತ್ತು ಆಸ್ತಿಗಳು
ಮಾಧ್ಯಮ ವರದಿಗಳ ಪ್ರಕಾರ, ಅವರ ನಿವ್ವಳ ಮೌಲ್ಯ ಸುಮಾರು $5 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಅವರ ಸಂಪತ್ತಿನ ಬಹುಪಾಲು ಯಶ್ ಬಿರ್ಲಾ ಗ್ರೂಪ್‌ನಲ್ಲಿನ ಅವರ ಪಾಲಿನಿಂದ ಪಡೆಯಲಾಗಿದೆ. ಆಧ್ಯಾತ್ಮಿಕತೆ ಮತ್ತು ಆರೋಗ್ಯಕರ ಜೀವನಶೈಲಿಗೆ ಆದ್ಯತೆ ನೀಡುವ ಬಿರ್ಲಾ ಮದ್ಯಪಾನದಿಂದ ದೂರವಿದ್ದಾರೆ.
ಯಶ್ ಅವರು ಮುಂಬೈನ ಪ್ರತಿಷ್ಠಿತ ಮಲಬಾರ್ ಹಿಲ್ಸ್‌ನಲ್ಲಿರುವ ಪ್ರಸಿದ್ಧ ಬಿರ್ಲಾ ಹೌಸ್ ಅನ್ನು ಹೊಂದಿದ್ದಾರೆ. 1930 ರ ದಶಕದಲ್ಲಿ ಅವರ ಮುತ್ತಜ್ಜ ರಾಮೇಶ್ವರ ದಾಸ್ ನಿರ್ಮಿಸಿದ ಈ ನಿವಾಸವು ಮುಂಬೈನ ಅತ್ಯಂತ ಅಮೂಲ್ಯವಾದ ಆಸ್ತಿಗಳಲ್ಲಿ ಒಂದಾಗಿದೆ. 5,412.27 ಚದರ ಮೀಟರ್ ವಿಸ್ತೀರ್ಣದ ಈ ಮಹಲು ಅಂದಾಜು 425.50 ಕೋಟಿ ರೂ. ಮೌಲ್ಯದ್ದಾಗಿದೆ. ಇದಲ್ಲದೇ ಯಶ್ ಅವರು ದೆಹಲಿಯಲ್ಲಿ ಮತ್ತು ಇನ್ನೊಂದು ರಿಷಿಕೇಶದಲ್ಲಿ ಎರಡು ನಿವಾಸಗಳನ್ನು ಹೊಂದಿದ್ದಾರೆ


Click it and Unblock the Notifications