ಭಾರತ ಸರ್ಕಾರ (Govt Of India) ಬಡವರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಸಬ್ಸಿಡಿ ಹಣದಲ್ಲಿ ನೀಡುವ ಪಡಿತರ ಯೋಜನೆ ಕೂಡಾ ಒಂದು. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಈ ಯೋಜನೆ ಮೂಲಕ ಉಚಿತವಾಗಿ ಅಕ್ಕಿ, ಗೋಧಿ, ಸಕ್ಕರೆ ಹೀಗೆ ಇನ್ನಿತರ ವಸ್ತುಗಳನ್ನು ನೀಡಲಾಗುತ್ತದೆ. ಇದನ್ನು ರೇಷನ್ ಅಂಗಡಿ ಅಥವಾ ನ್ಯಾಯಬೆಲೆ ಅಂಗಡಿಯೆಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಸದ್ಯ 20 ಸಾವಿರಕ್ಕೂ ಅಧಿಕ ನ್ಯಾಯಬೆಲೆ ಅಂಗಡಿಗಳಿದ್ದು, ರೇಷನ್ ಕಾರ್ಡ್ (Ration Card) ಹೊಂದಿರುವವರಿಗೆ ಇಲ್ಲಿ ಅಗತ್ಯ ವಸ್ತುಗಳನ್ನು ಸರ್ಕಾರದಿಂದ ನೀಡಲಾಗುತ್ತದೆ. ಇದೀಗ ಭಾರತ ಸರ್ಕಾರ ಡಿಜಿಟಲ್ (Digital) ಸಬಲೀಕರಣಕ್ಕಾಗಿ ಹೊಸ ಹೆಜ್ಜೆ ಇಟ್ಟಿದೆ.

ಹೌದು, ಭಾರತ ಸರ್ಕಾರ ನಾಗರಿಕರ ಅನುಕೂಲಕ್ಕಾಗಿ ಎಲ್ಲವೂ ಡಿಜಿಟಲೀಕರಣ ಮಾಡುತ್ತಿದೆ. ಅದೇ ರೀತಿ ಪಡಿತರ ಚೀಟಿ ವಿಷಯದಲ್ಲಿ ಇದೀಗ ಮಹತ್ವದ ಬದಲಾವಣೆಯನ್ನು ತರಲು ಮುಂದಾಗಿದೆ. ಇದು ಯಾರೆಲ್ಲಾ ಇನ್ನೂ ಪಡಿತರ ಚೀಟಿ ಹೊಂದಿಲ್ಲವೋ ಅವರಿಗೆ ಪ್ರಯೋಜನವಾಗಲಿದೆ.
ರೇಷನ್ ಕಾರ್ಡ್ ಬೇಕಾದವರಿಗೆ ಗುಡ್ ನ್ಯೂಸ್!
ಇನ್ಮೇಲೆ ನೀವು ಪಡಿತರ ಚೀಟಿಗಾಗಿ ಸರ್ಕಾರಿ ಕಛೇರಿಗಳಿಗೆ ಹೋಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಿಲ್ಲ. ಏಕೆಂದರೆ ಭಾರತ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಆ ಪ್ರಕಾ ಇನ್ಮೇಲೆ ಮನೆಯಲ್ಲೇ ಕೂತು ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ರೇಷನ್ ಕಾರ್ಡ್ ಹೀಗೆ ಅರ್ಜಿ ಸಲ್ಲಿಸಿ:
ಉಮಾಂಗ್ ಆಪ್ ಮೂಲಕ ಆನ್‌ಲೈನ್‌ನಲ್ಲಿ ಪಡಿತರ ಚೀಟಿಗೆ (Ration Card)ಗೆ ಅರ್ಜಿ ಸಲ್ಲಿಸಬಹುದು. ಸರ್ಕಾರದ ಈ ನಿರ್ಧಾರ ಸರ್ಕಾರಿ ಯೋಜನೆಗಳ ಮಾಹಿತಿ, ಅರ್ಜಿ ಸಲ್ಲಿಗೆ ಸುಲಭವಾಗಲಿದೆ.
ಏನಿದು UMANGA ಅಪ್ಲಿಕೇಶನ್?
UMANG ಆಪ್ ಎಂಬುದು, ಭಾರತ ಸರ್ಕಾರ ಜಾರಿಗೆ ತಂದ ಮೊಬೈಲ್ ಅಪ್ಲಿಕೇಶನ್ ಆಗಿದೆ. ಭಾರತ ಸರ್ಕಾರದ ಒಂದೇ ಒಂದು ಮೊಬೈಲ್ ಅಪ್ಲಿಕೇಶನ್ ಮೂಲಕ ನೂರಾರು ಸರ್ಕಾರಿ ಯೋಜನೆಗಳ ಮಾಹಿತಿ, ಸೇವೆಗಳನ್ನು ಇಲ್ಲಿ ಪಡೆಯಬಹುದು. ಕೇಂದ್ರ ಸರ್ಕಾರದಿಂದ ಜಾರಿಗೆ ಬಂದ ಆಪ್ ಇದಾಗಿದ್ದು, ಅನೇಕ ಸೇವೆಗಳನ್ನು ನೀಡುತ್ತದೆ
ಉಮಾಂಗ್ ಆಪ್‌ನ ಸೇವೆಗಳು:
- ಆಧಾರ್ ಅಪ್ಡೇಟ್
- ಪ್ಯಾನ್ ಕಾರ್ಡ್ ಅಪ್ಡೇಟ್
- ಡಿಜಿಲಾಕರ್
- ಪಾಸ್‌ಪೋರ್ಟ್ ಸೇವಾ
- ಪ್ರಾವಿಡೆಂಟ್ ಫಂಡ್ (EPFO)- ಪಾಸ್‌ಬುಕ್ ಮಾಹಿತಿ
- ಆಯುಷ್ಮಾನ್ ಭಾರತ್ ಸೇವೆ
- ರೇಷನ್ ಕಾರ್ಡ್ ಸೇವೆ. ಹೀಗೆ ಹಲವು ಸೇವೆಗಳನ್ನು ಪಡೆಯಬಹುದು.
ರೇಷನ್ ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಗೊತ್ತಾ?
ಮೊದಲಿಗೆ UMANG ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ, ನೋಂದಾಯಿಸಿಕೊಳ್ಳಬೇಕು. ಇದನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಲ್ಲಿ ನೀವು ಮೊಬೈಲ್ ನಂಬರ್ ಆಡ್ ಮಾಡಿಕೊಂಡು ರಿಜಿಸ್ಟರ್ ಮಾಡಿಕೊಳ್ಳಬಹುದು.
ಲಾಗಿನ್ ಆದ ನಂತರ ಹೋಮ್ ಪೇಜ್‌ನಲ್ಲಿ ಸರ್ವೀಸ್ ವಿಭಾಗಕ್ಕೆ ಹೋಗಬೇಕು. ಅಲ್ಲಿಂದ ಯುಟಿಲಿಟಿ ಸರ್ವಿಸ್ ಸೇವೆಗಳನ್ನು ಆಯ್ಕೆ ಮಾಡಿ, ರೇಷನ್ ಕಾರ್ಡ್ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು.
ಅಪ್ಲಿಕೇಶನ್‌ನಲ್ಲಿ ನೀವು apply for ration card ಮೇಲೆ ಕ್ಲಿಕ್ ಮಾಡಬೇಕು. ಅದರ ನಂತರ ನಿಮ್ಮ ರಾಜ್ಯ ಯಾವುದು ಎಂದು ಕೇಳುತ್ತದೆ. ಅಲ್ಲಿ ನೀವು ನಿಮ್ಮ ರಾಜ್ಯವನ್ನು ನಮೂದಿಸಬೇಕು. ಪ್ರಸ್ತುತ ಕೆಲವು ರಾಜ್ಯಗಳಲ್ಲಿ ಮಾತ್ರ ಈ ಸೇವೆ ಅಸ್ತಿತ್ವದಲ್ಲಿದೆ. ಆದ್ರೆ ಮುಂಬರುವ ದಿನಗಳಲ್ಲಿ ದೇಶದಾದ್ಯಂತ ಇದನ್ನು ವಿಸ್ತರಿಸಲಾಗುತ್ತದೆ ಎಂದು ಹೇಳಲಾಗಿದೆ.
ನಿಮ್ಮ ದಾಖಲೆಯನ್ನು ನೀಡಬೇಕು:
ನಂತರ ನಿಮಗೆ ಡಿಜಿಟಲ್ ಫಾರ್ಮ್ ಒಂದು ತೋರಿಸಲಾಗುತ್ತದೆ. ಅಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಬೇಕು. ಅಲ್ಲದೇ ಕುಟುಂಬ ಸದಸ್ಯರ ಮಾಹಿತಿಗಳನ್ನು ಸರಿಯಾಗಿ ನಮೂದಿಸಬೇಕು.
ಆ ಬಳಿಕೆ ಅಲ್ಲಿ ಕೇಳಲಾಗಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು. ಎಲ್ಲಾ ದಾಖಲೆ, ವಿವರಗಳನ್ನು ನೀಡಿದ ನಂತರ ಸರಿಯಾಗಿದೆಯೇ ಎಂದು ಒಮ್ಮೆ ಚೆಕ್ ಮಾಡಿ. ಆ ನಂತರ ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಕೊಡಿ. ಅಲ್ಲಿಂದ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು.


Click it and Unblock the Notifications