ಸ್ವಂತ ಉದ್ಯಮ ಸ್ಥಾಪಿಸಿ ಕೈಸುಟ್ಟುಕೊಂಡವರ ಕೆಲವರ ನಡುವೆ ಸಫಲತೆ ಕಂಡ ಅಸಂಖ್ಯಾತ ಉದ್ಯಮಿಗಳು ಕೂಡ ನಮ್ಮ ಕಣ್ಣ ಮುಂದಿದ್ದಾರೆ. ಒಂದು ಹಂತದಲ್ಲಿ ತಿಂಗಳಾನುಸಾರ ಅಲ್ಪ ವೇತನಕ್ಕೆ ದುಡಿಯುತ್ತಿದ್ದವರು ಬಳಿಕ ಸ್ವಂತ ಉದ್ಯಮ ಸ್ಥಾಪಿಸಿ ಇಂದು ಹಲವರನ್ನು ಕೆಲಸಕ್ಕೆ ಇಟ್ಟುಕೊಂಡು ದೊಡ್ಡ ಉದ್ಯಮ ಪತಿಗಳಾಗಿ ಮುಂದುವರೆದವರು ಕೂಡ ನಮಗೆ ತಿಳಿದಿದೆ. ಅದರಲ್ಲೂ ಭಾರತದಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ ಅನೇಕ ಉದ್ಯೋಗ ಮಾಡುವತ್ತ ಗಮನ ಹರಿಸದೆ ಸದ್ಯ ಕೆಲಸ ನೀಡುವತ್ತ ಗಮನ ಹರಿಸುತ್ತಿರುವುದು ಉತ್ತಮ ಬೆಳವಣಿಗೆಯೇ ಸರಿ. ಇಂಥವರ ಕುರಿತಾದ ಜೀವನಚರಿತ್ರೆಯ್ನು ಓದಿದಾಗ ಯಾರಿಗಾದರೂ ಸ್ಫೂರ್ತಿದಾಯಕ ಎನಿಸುವುದು ಸರಿಯಾದ ವಿಚಾರ. ಇಂಥವರ ಪೈಕಿ ಗಜಲ್ ಅಲಾಘ್ ಕೂಡ ಒಬ್ಬರು. ಒಂದು ಹಂತದಲ್ಲಿ ತಿಂಗಳಿಗೆ ಹೆಚ್ಚು ಕಡಿಮೆ 30-35000 ಸಾವಿರ ರೂ.ನ ಆಸುಪಾಸಿನಲ್ಲಿ ಮಾಸಿಕ ವೇತನ ಪಡೆಯುತ್ತಿದ್ದ ಗಜಲ್ ಅಲಾಘ್ ಬಳಿಕ ತನ್ನ ಪತಿಯಂದಿಗೆ ಸೇರಿಕೊಂಡು ಆರಂಭಿಸಿದ ಉದ್ಯಮವು ಇದೀಗ ದಂಪತಿಯ ಸಂಸ್ಥೆಯು ಬಹುತೇಕ 10000 ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದು, ದೇಶವಲ್ಲದೆ ವಿದೇಶಿ ನೆಲದಲ್ಲೂ ಖ್ಯಾತಿ ಪಡೆದುಕೊಂಡಿದೆ. ಅದರಲ್ಲೂ ನಾವು ಗಜಲ್ ಅಲಾಘ್ ಎಂದು ಹೇಳಿದರೆ ಬಹುತೇಕ ಮಂದಿಗೆ ಗುರುತು ಪರಿಚಯ ಇಲ್ಲದಿರಬಹುದು. ಆದರೆ ಒಂದು ವೇಳೆ ನಾವು ಮಾಮಾ ಅರ್ಥ್ ಎಂಬ ಕಂಪೆನಿಯನ್ನು ಇಲ್ಲಿ ಉಲ್ಲೇಖಿಸಿದರೆ ಎಲ್ಲರ ಕಿವಿ ನೆಟ್ಟಗಾಗುವುದು ಸಹಜ. ಯಾಕೆಂದರೆ ಮಾಮಾ ಅರ್ಥ್ ಕಂಪೆನಿಯ ಸಹ ಸ್ಥಾಪಕರು ಕೂಡ ಇವರೇ ಆಗಿದ್ದಾರೆ.
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕಾಗಿ 6000 ಎಕರೆ ಭೂಮಿ ನಿಗಧಿ!
ಹೇಗಿತ್ತು ಉದ್ಯಮ ಜೀವನ?
ಜಪಾನ್ ಮೂಲವನ್ನು ಹೊಂದಿರುವ ರಿಯಾಲಿಟಿ ಶೋ ಬಳಿಕ ಭಾರತದಲ್ಲಿ ಶಾರ್ಕ್ ಟ್ಯಾಂಕ್ ಎಂಬ ಹೆಸರಿನಿಂದ ಗುರುತಿಸಿ, ಯುವ ಉದ್ಯಮಿಗಳಿಗೆ ಹಣಕಾಸಿನ ನೆರವು ನೀಡುವ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದ ಮಾಮಾ ಅರ್ಥ್‌ನ ಸಹ ಸಂಸ್ಥಾಪಕಿ ಗಜಲ್ ಅಲಾಘ್ ಅವರ ಆರಂಭಿಕ ಜೀವನ ಕೂಡ ಸುಲಭದಿಂದ ಕೂಡಿರಲಿಲ್ಲ. ಈಗಾಗಲೇ ಹೇಳಿದರೆ ಆರಂಭದಲ್ಲಿ ಅವರು ಸುಮಾರು 35000 ತಿಂಗಳ ವೇತನಕ್ಕೆ ದುಡಿಯುತ್ತಿದ್ದ ಗಜಲ್ ಇದೇ ಅವಧಿಯಲ್ಲಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಕಠಿಣ ಪರಿಶ್ರಮಕ್ಕೆ ಯೋಜನೆ ಹಾಕಿದರು. ಪರಿಣಾಮ 2016 ರಲ್ಲಿ ಗಜಲ್ ಹಾಗೂ ಅವರ ಪತಿ ವರುಣ್ ಅಲಘ್ ಜೊತೆ ಕೂಡಿಕೊಂಡು ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಹೊನಾಸಾ ಕನ್ಸ್ಯೂಮರ್ ಲಿಮಿಟೆಡ್‌ನ ಅಡಿಯಲ್ಲಿ ಮಾಮಾ ಅರ್ಥ್ ಎನ್ನುವ ಕಂಪೆನಿಯನ್ನು ಆರಂಭಿಸಿದ್ದರು. ಸದ್ಯ ಮಾಮಾ ಅರ್ಥ್ ಕಂಪೆನಿ ಎಷ್ಟು ಖ್ಯಾತಿ ಪಡೆದುಕೊಂಡಿದೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ ಮಾಮಾ ಅರ್ಥ್ ಎಂಬುದು ಯಾವ ಕಂಪೆನಿ ಎಂದು ಕೆಲವರಲ್ಲಿ ಪ್ರಶ್ನೆ ಮೂಡಿದರೆ ಅದು ಸಹಜವೇ ಆಗಿದೆ. ಇನ್ನು ಬಹುತೇಕರಿಗೆ ತಿಳಿದಿರುವಂತೆ ಮಾಮಾ ಅರ್ಥ್ ಎನ್ನುವುದು ರಾಸಾಯನಿಕ ಮುಕ್ತ ಮಕ್ಕಳು ಹಾಗೂ ವಯಸ್ಕರಿಗೆ ಬೇಕಾದ ಕಾಸ್ಮೆಟಿಕ್ಸ್ ಸೇರಿದಂತೆ ವೈಯಕ್ತಿಕ ಉಪಯೋಗಕ್ಕೆ ಬೇಕಾದ ಉತ್ಪನ್ನಗಳನ್ನು ಉತ್ಪಾದಿಸುವ ಕಂಪೆನಿಯಾಗಿದೆ. ಆರಂಭದಲ್ಲಿ ಬೇಬಿಕೇರ್ ಉತ್ಪನ್ನಗಳ ಮೇಲೆ ಉತ್ಪನ್ನಗಳನ್ನು ಹೊರತರುತ್ತಿದ್ದ ಮಾಮಾ ಅರ್ಥ್ ಇಂದು ಹಲವು ವಿಧದ, ವಿವಿಧ ವಯೋಮಾನದ ಜನರಿಗೆ ರಾಸಾಯನಿಕ ಉತ್ಪನ್ನಗಳನ್ನು ಸರಬರಾಜು ಮಾಡುತ್ತದೆ. ಆರಂಭದಲ್ಲಿ ಸುಮಾರು 25 ಲಕ್ಷ ರೂ. ಹೂಡಿಕೆಯಲ್ಲಿ ಸ್ಥಾಪಿಸಲಾಗಿದ್ದ ಕಂಪೆನಿಯ ಮಾರುಕಟ್ಟೆ ಮೌಲ್ಯವು ಬರೊಬ್ಬರಿ ಬಹುತೇಕ 10000 ಸಾವಿರ ಕೋಟಿ ರೂ.ಗೆ ತಲುಪಿದೆ ಎಂದರೆ ದಂಪತಿಯ ಪರಿಶ್ರಮದ ಜೊತೆಗೆ ಸಿಬ್ಬಂದಿಯ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ.

ರಾಸಾಯನಿಕ ಮುಕ್ತತೆಗೆ ಹೆಚ್ಚಿನ ಆದ್ಯತೆ
ಇನ್ನು ಇಷ್ಟು ವಿವರಗಳನ್ನು ಹೇಳಿದ ಬಳಿಕ ಕೆಲವರು ಈ ಉತ್ಪನ್ನಗಳು ಕೂಡ ತ್ವಚೆ ಅಥವಾ ಆರೋಗ್ಯಕ್ಕೆ ಮಾರಕವಾದ ರಾಸಾಯನಿಕ ವಸ್ತುಗಳಿಂದ ತುಂಬಿರಬಹುದು ಎಂದು ಅಂದುಕೊಳ್ಳುವುದು ಸಹಜವೇ ಆಗಿದೆ. ಆದರೆ ಮಾಮಾ ಅರ್ಥ್ ರಾಸಾಯನಿಕ ವಸ್ತುಗಳಿಂದ ಮುಕ್ತ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದು, ಅದೂ ಅಲ್ಲದೆ ಇದಕ್ಕೆ ಪ್ರಮಾಣೀಕರಣ ಎಂಬಂತೆ "MADE SAFE" ಪ್ರಮಾಣೀಕರಣವನ್ನು ಗಳಿಸಿದ ಏಷ್ಯಾದ ಮೊದಲ ಬ್ರ್ಯಾಂಡ್ ಎಂಬ ವಿಶಿಷ್ಟ ಹೆಗ್ಗಳಿಕೆಗೆ ಮಾಮಾ ಅರ್ಥ್ ಪಾತ್ರವಾಗಿದೆ. ರಾಸಾಯನಿಕ ಅಥವಾ ವಿಷ-ಮುಕ್ತ ಉತ್ಪನ್ನಗಳಿಗೆ ಈ ಪ್ರಮಾಣೀಕರಣವನ್ನು ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಮಾಮಾ ಅರ್ಥ್ ಉತ್ಪನ್ನಗಳು ಮಗು ಅಥವಾ ವಯಸ್ಕರ ಪಾಲಿಗೆ ಉತ್ತಮ ವಸ್ತುಗಳೇ ಆಗಿದೆ ಎಂಬುದು ಕಂಪೆನಿಯ ಮಾತು. ಸದ್ಯ ಇದರ ಹಿನ್ನೆಲೆಯಲ್ಲಿ ಕಂಪೆನಿ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ಎಲ್ಲರ ಮನೆ ಮಾತಾಗುತ್ತಿದೆ.


Click it and Unblock the Notifications