ಯಶೋಗಾಥೆ: 73,575 ಕೋಟಿ ರೂ.ಗಳ ಕಂಪನಿ ಒಡೆಯ ಜಿಎಂ ರಾವ್ ಯಾರು?

ಜಿಎಂ ರಾವ್ ಒಬ್ಬ ಭಾರತೀಯ ಬಿಲಿಯನೇರ್ ಆಗಿದ್ದು, ಬೆಂಗಳೂರು ಮೂಲದ ಜಾಗತಿಕ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಯಾದ ಜಿಎಂಆರ್ ಗ್ರೂಪ್‌ನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಜಿಎಂ ರಾವ್ ಅವರು ಶೂನ್ಯದಿಂದ ಕಟ್ಟಿ ಬೆಳೆಸಿದ ಜಿಎಂಆರ್ ಗ್ರೂಪ್ ಇಂದು ವಿಮಾನ ನಿಲ್ದಾಣಗಳು, ಇಂಧನ, ಸಾರಿಗೆ ಮತ್ತು ನಗರ ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸಿದೆ.

ಆಂಧ್ರಪ್ರದೇಶದ ಒಂದು ಸಣ್ಣ ಪಟ್ಟಣದ ಹಿನ್ನಲೆಯಿಂದ ಬಂದ ರಾವ್, ಭಾರತದ ಆರ್ಥಿಕ ಉದಾರೀಕರಣದ ಮೊದಲು ತಮ್ಮೆಡೆಗೆ ಬಂದ ಪ್ರತಿಯೊಂದು ವ್ಯಾಪಾರ ಅವಕಾಶವನ್ನೂ ಬಳಸಿಕೊಂಡಿದ್ದರು. 1978 ರಲ್ಲಿ ಒಂದು ಸೆಣಬಿನ ಗಿರಣಿಯಿಂದ ಪ್ರಾರಂಭಿಸಿ, ಅವರು ಇಂದು ಒಬ್ಬ ಯಶಸ್ವಿ ಸರಣಿ ಉದ್ಯಮಿಯಾಗಿ 28 ವಿವಿಧ ವ್ಯವಹಾರಗಳಿಗೆ ಕಾಲಿಟ್ಟಿದ್ದಾರೆ. ಜಿಎಂ ರಾವ್ ಅವರಿಗೆ ಇಂದು 74 ವರ್ಷ ವಯಸ್ಸಾಗಿದ್ದು ಅವರರು ವಿಮಾನ ನಿಲ್ದಾಣ ನಿರ್ವಾಹಕ ಜಿಎಂಆರ್ ಏರ್‌ಪೋರ್ಟ್ಸ್ ಇನ್‌ಫ್ರಾಸ್ಟ್ರಕ್ಚರ್ ಅನ್ನು ನಿಯಂತ್ರಿಸುತ್ತಿದ್ದು, ಇದರ ಮಾರುಕಟ್ಟೆ ಮೌಲ್ಯವು 73575 ಕೋಟಿ ರೂಪಾಯಿಗಳಾಗಿವೆ. ಈ ಗ್ರೂಪ್ ಜಿಎಂಆರ್ ಇನ್ಫ್ರಾಸ್ಟ್ರಕ್ಚರ್, ಜಿಎಂಆರ್ ಎನರ್ಜಿ, ಜಿಎಂಆರ್ ವಿಮಾನ ನಿಲ್ದಾಣಗಳು ಮತ್ತು ಜಿಎಂಆರ್ ಎಂಟರ್‌ಪ್ರೈಸಸ್‌ನಂತಹ ಪ್ರಮುಖ ಕಂಪನಿಗಳು ಸೇರಿವೆ. ಗ್ರೀಸ್ ಮತ್ತು ಫಿಲಿಪೈನ್ಸ್‌ನಂತಹ ದೇಶಗಳಲ್ಲಿ ಯೋಜನೆಗಳನ್ನು ಹೊಂದಿದ್ದು, ಇದು ಭಾರತದಲ್ಲಿ ಪ್ರಮುಖ ವಿಮಾನ ನಿಲ್ದಾಣ ನಿರ್ಮಾಣಕಾರನಾಗಿ ಬೆಳೆದುನಿಂತಿದೆ.

73,575 ಕೋಟಿ ರೂ.ಗಳ ಕಂಪನಿ ಒಡೆಯ ಜಿಎಂ ರಾವ್ ಯಾರು?

ಆಂಧ್ರಪ್ರದೇಶದ ಒಂದು ಸಣ್ಣ ಪಟ್ಟಣದಿಂದ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗುವ ರಾವ್ ಅವರ ಪ್ರಯಾಣವು ಗಮನಾರ್ಹವಾಗಿದೆ. ಫೋರ್ಬ್ಸ್ ರಿಯಲ್ ಟೈಮ್ ನಿವ್ವಳ ಮೌಲ್ಯದ ಪ್ರಕಾರ, ಅವರ ಒಟ್ಟು ಸಂಪತ್ತು 2.9 ಬಿಲಿಯನ್ ಡಾಲರ್ (ಸುಮಾರು 25,060 ಕೋಟಿ ರೂ.). ಅಂದಹಾಗೆ ಜಿಎಂಆರ್ ಅವರ ಪೂರ್ಣ ಹೆಸರು ಗ್ರಂಥಿ ಮಲ್ಲಿಕಾರ್ಜುನ ರಾವ್. ಭಾರತೀಯ ಬಿಲಿಯನೇರ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ತಂಡ ದೆಹಲಿ ಕ್ಯಾಪಿಟಲ್ಸ್‌ನಲ್ಲಿ ಶೇಕಡಾ 50 ರಷ್ಟು ಪಾಲನ್ನು ಹೊಂದಿದ್ದಾರೆ.

GMR ಸಮೂಹದ ಜಾಗತಿಕ ವ್ಯಾಪ್ತಿ

ಜಿಎಂಆರ್ ಗ್ರೂಪ್ ತನ್ನ ವ್ಯವಹಾರವನ್ನು ಭಾರತದ ಗಡಿಗಳನ್ನು ಮೀರಿ ವಿಸ್ತರಿಸಿದೆ. ಅಂತರರಾಷ್ಟ್ರೀಯ ಯೋಜನೆಗಳಲ್ಲಿ ಗ್ರೀಸ್ ಮತ್ತು ಫಿಲಿಪೈನ್ಸ್ ಸೇರಿವೆ. ಫಿಲಿಪೈನ್ಸ್‌ನಲ್ಲಿರುವ ಮಕ್ಟಾನ್-ಸೆಬು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯು ಗುಂಪಿನ ಜಾಗತಿಕ ಪ್ರಭಾವ ಮತ್ತು ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ಜನವರಿ 2024 ರಲ್ಲಿ, ಈ ಗುಂಪು ಯುರೋಪಿಯನ್ ವಿಮಾನ ತಯಾರಕ ಏರ್‌ಬಸ್‌ನ ಸಹಯೋಗದೊಂದಿಗೆ ಹೈದರಾಬಾದ್‌ನಲ್ಲಿ GMR ಸ್ಕೂಲ್ ಆಫ್ ಏವಿಯೇಷನ್ ಅನ್ನು ಪ್ರಾರಂಭಿಸಿತು. ಈ ಸಹಯೋಗವು ಭಾರತದಲ್ಲಿ ವಾಯುಯಾನ ಶಿಕ್ಷಣವನ್ನು ಮುನ್ನಡೆಸುವಲ್ಲಿ ಅವರ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.

1994 ರಲ್ಲಿ ಆರ್ಥಿಕ ಉದಾರೀಕರಣದ ನಂತರ, ಅವರ ನಡೆಗಳು ಸಂಪೂರ್ಣವಾಗಿ ಕಾರ್ಯತಂತ್ರ ಆಧಾರಿತವಾದವು . ಅವರು ಸಂಬಂಧವಿಲ್ಲದ ಎಲ್ಲಾ ವ್ಯವಹಾರಗಳನ್ನು ಕೈಬಿಟ್ಟಿದ್ದಾರೆ ಮತ್ತು ಪ್ರಾಥಮಿಕವಾಗಿ ಪ್ರಮುಖ ಮೂಲಸೌಕರ್ಯ ವಲಯದ ಮೇಲೆ ಕೇಂದ್ರೀಕರಿಸಿದ್ದಾರೆ, ಇದರ ಪರಿಣಾಮವಾಗಿ GMR ಗ್ರೂಪ್ ಬ್ಯಾಂಕಿಂಗ್, ವಿಮೆ, ಸಾಫ್ಟ್‌ವೇರ್, ಬ್ರೂವರೀಸ್, ಸೆಣಬು ಮತ್ತು ಸಕ್ಕರೆಯಂತಹ ಕೆಲವು ಆಕರ್ಷಕ ವ್ಯವಹಾರಗಳಿಂದ ನಿರ್ಗಮಿಸಿದೆ.

ಕುಟುಂಬವನ್ನು ವ್ಯವಹಾರದಂತೆ ನಡೆಸಬೇಕು ಮತ್ತು ವ್ಯವಹಾರವನ್ನು ಕುಟುಂಬದಂತೆಯೇ ನಡೆಸಬೇಕು" ಎಂದು ರಾವ್ ಅವರ ನಂಬಿಕೆಯಾಗಿದ್ದು " ಬಲವಾದ ಕುಟುಂಬ ಆಡಳಿತವು ಬಲವಾದ ಕಾರ್ಪೊರೇಟ್ ಆಡಳಿತವನ್ನು ಖಚಿತಪಡಿಸುತ್ತದೆ" ಎಂದು ಹೇಳುತ್ತಾರೆ

ಸಮಾಜಕ್ಕೆ ಮರಳಿ ನೀಡಲು, ಅವರು ಸಾಮಾಜಿಕ ಉದ್ದೇಶಗಳಿಗಾಗಿ ಹಣವನ್ನು ವಿನಿಯೋಗಿಸಲು ೩೦ ವರ್ಷಗಳ ಹಿಂದೆ ಜಿಎಂಆರ್ ವರಲಕ್ಷ್ಮಿ ಫೌಂಡೇಶನ್ ಅನ್ನು ಸ್ಥಾಪಿಸಿದರು. ಅವರು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನ ಕೇಂದ್ರ ನಿರ್ದೇಶಕರ ಮಂಡಳಿಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಬಹು ಪ್ರಶಸ್ತಿಗಳು ಮತ್ತು ಗೌರವ ಡಾಕ್ಟರೇಟ್‌ಗಳನ್ನು ಪಡೆದಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+