ಅಂಚೆ ಕಚೇರಿಗಳಲ್ಲಿ ಸಾಕಷ್ಟು ಉಪಯುಕ್ತ ಯೋಜನೆಗಳಿವೆ. ಈ ಯೋಜನೆಗಳೆಲ್ಲಾ ಸ್ವಾವಲಂಬಿಗಳಾಗಿ ಬದುಕಲು ಬೇಕಾದ ಯೋಜನೆಗಳು ಇವುಗಳಾಗಿವೆ. ಅದರಲ್ಲೂ ಮಹಿಳೆಯರು, ವೃದ್ಧರು, ಮಕ್ಕಳು ಹೀಗೆ ಎಲ್ಲಾ ವಲಯದವರಿಗೂ ಅಂಚೆ ಕಚೇರಿಯಲ್ಲಿ ಉಪಯುಕ್ತವಾದ ಯೋಜನೆಗಳಿವೆ. ಮಹಿಳೆಯರಿಗಾಗಿ ಈಗಾಗಲೇ ಸುಕನ್ಯ ಸಮೃದ್ಧಿ ಯೋಜನೆ, ಮಹಿಳಾ ಸಮ್ಮಾನ್ ಯೋಜನೆ ಹೀಗೆ ಹಲವು ಯೋಜನೆಗಳಿವೆ. ಆದರೆ ಬಹುತೇಕ ಮಹಿಳೆಯರಿಗೆ ಮತ್ತೊಂದು ಉಪಯುಕ್ತವಾದ ಯೋಜನೆ ಬಗ್ಗೆ ತಿಳಿದಿರುವುದಿಲ್ಲ..ಅದೇ ಗ್ರಾಮ ಸುಮಂಗಲ್ ಯೋಜನೆ.

ಹೌದು, ಗ್ರಾಮ ಸುಮಂಗಲ್ ಯೋಜನೆಯು ಗ್ರಾಮೀಣ ಅಂಚೆ ಜೀವ ವಿಮೆ ಅಡಿಯಲ್ಲಿ ಬರುತ್ತಿದೆ. ಅಂದರೆ ಭಾರತೀಯ ಅಂಚೆ ಇಲಾಖೆಯಿಂದ ನೀಡಲಾಗುವ ಮನಿ ಬ್ಯಾಕ್, ಅಂದರೆ ಹಣ ಹಿಂತಿರುಗಿಸುವ ಜೀವನ ವಿಮೆ ಯೋಜನೆಯಾಗಿದೆ. ಈ ಯೋಜನೆಯನ್ನು ಗ್ರಾಮೀಣ ಪ್ರದೇಶದ ಜನರು, ವಿಶೇಷವಾಗಿ ಸ್ವಯಂ ಉದ್ಯೋಗಿಗಳು, ರೈತರು ಮತ್ತು ಸಣ್ಣ ಉದ್ಯಮಸ್ಥರು ತಮ್ಮ ಜೀವನದ ವಿವಿಧ ಹಂತಗಳಲ್ಲಿ ನಿಯಮಿತ ಹಣಕಾಸು ಸಹಾಯ ಮತ್ತು ವಿಮಾ ರಕ್ಷಣೆಯನ್ನು ಪಡೆಯಲು ವಿನ್ಯಾಸಗೊಳಿಸಲಾಗಿದೆ.
ಇನ್ನು ಈ ಯೋಜನೆ ನಿಯಮಿತ ಅವಧಿಯಲ್ಲಿ ಹಣ ಹಿಂತೆಗೆದುಕೊಳ್ಳುವ ಅವಕಾಶ ನೀಡಲಿದೆ. ಅಂದರೆ ನೀವು ಸಂಪಾದಿಸಿದ ಹಣದಲ್ಲಿ ಭವಿಷ್ಯಕ್ಕಾಗಿ ನಿವೇಷನೆ ಮಾಡಲು ಈ ಯೋಜನೆಯು ಸಾಕಷ್ಟು ಸಹಾಯ ಮಾಡುತ್ತದೆ.. ಅಲ್ಲದೇ ಇದರ ಜೊತೆಗೆ, ಇದು ಅಪಘಾತದ ವೇಳೆ ಜೀವ ವಿಮೆಯ ಸುರಕ್ಷತೆ ಕೂಡ ಒದಗಿಸುತ್ತದೆ.
ಗ್ರಾಮ ಸುಮಂಗಲ್ ಯೋಜನೆಯ ಪ್ರಮುಖ ವೈಶಿಷ್ಟ್ಯಗಳು:
1. ನಿಗದಿತ ಮೊತ್ತದಲ್ಲಿ ಹಣ ಮರುಪಾವತಿ:
ಈ ಗ್ರಾಮ ಸುಮಂಗಲ್ ಯೋಜನೆ ಇತರ ಸಾಮಾನ್ಯ ವಿಮಾ ಯೋಜನೆಗಳಂತೆ ಒಂದು ಮೊತ್ತವನ್ನು ಮಾತ್ರ ಕೊನೆಯದಾಗಿ ನೀಡುವುದಿಲ್ಲ, ಬದಲಾಗಿ ನಿಗದಿತ ಹಂತಗಳಲ್ಲಿ ಮೊತ್ತವನ್ನು ಮರುಪಾವತಿ ಮಾಡುತ್ತದೆ. ಇದು ಅನಿಯಮಿತ ಆದಾಯ ಹೊಂದಿರುವ ರೈತರು, ಸಣ್ಣ ಉದ್ಯಮಿಗಳು ಮತ್ತು ಸ್ವಯಂ ಉದ್ಯೋಗಿಗಳಿಗಾಗಿ ಅತ್ಯುತ್ತಮ ಆಯ್ಕೆಯಾಗಿದೆ.
2. ಎರಡು ಪಾಲಿಸಿಯ ಅವಧಿ ಆಯ್ಕೆ:
ಈ ಗ್ರಾಮ ಸುಮಂಗಲ್ ಯೋಜನೆಲ್ಲಿ ಹದಿನೈದು ವರ್ಷ ಮತ್ತು ಇಪ್ಪತ್ತು ವರ್ಷಗಳ ಅವಧಿಯುಳ್ಳ ವಿಮಾ ಯೋಜನೆಗಳಿವೆ. ಈ ಮೂಲಕ ನೀವು ನಿಮ್ಮ ಅವಶ್ಯಕತೆಗಳ ಪ್ರಕಾರ ಎಲ್ಲಾ ಯೋಜನೆಯು ನಿಮ್ಮ ಹಣಕಾಸು ಭದ್ರತೆಗಾಗಿ ಅನುಕೂಲಕರವಾಗಿದೆ. ಎರಡು ಪಾಲಿಸಿಗಳಿರುವುದರಿಂದ ನಿಮಗೆ ಅನುಕೂಲವಾದ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
3. ನಿಗದಿತ ವರ್ಷಗಳಲ್ಲಿ ಹಣ ಮರುಪಾವತಿ:
ಗ್ರಾಮ ಸುಮಂಗಲ್ ಯೋಜನೆಯಲ್ಲಿ ವಿಮೆ ಹೊಂದಿದವರು ಪಾಲಿಸಿ ಅವಧಿಯೊಂದಿಗೆ ಜೀವಿಸುತ್ತಿದ್ದರೆ, ಅವರಿಗೆ ನಿಗದಿತ ವರ್ಷಗಳಲ್ಲಿ ಹಣ ಹಿಂತಿರುಗುವ ವ್ಯವಸ್ಥೆ ಇರುತ್ತದೆ. ಇದರಿಂದ ಬ್ಯಾಂಕಿನ ಸಾಲ ಅಥವಾ ತುರ್ತು ಹಣಕಾಸಿನ ಅವಶ್ಯಕತೆಗಳಿಗಾಗಿಯೇ ಕೂಡ ಹಣವನ್ನು ಬಳಸಬಹುದು.
4. ಯೋಜನೆಯಿಂದ ಮರಣೋತ್ತರ ಲಾಭ:
ಗ್ರಾಮ ಸುಮಂಗಲ್ ಯೋಜನೆಯು ವಿಮಾ ಪಾಲುದಾರರು ಪಾಲಿಸಿ ಅವಧಿಯೊಳಗೆ ನಿಧನರಾದರೆ, ಅವರ ನಾಮನಿರ್ದೇಶಿತರಿಗೆ ಸಂಪೂರ್ಣ ವಿಮಾ ಮೊತ್ತದ ಪಾವತಿ ಹಾಗೂ ಬೋನಸ್ ಲಭ್ಯವಿರುತ್ತದೆ. ಇದು ಕುಟುಂಬದ ಸದಸ್ಯರಿಗೆ ಆರ್ಥಿಕ ಸುರಕ್ಷತೆ ಒದಗಿಸುತ್ತದೆ. ಇದರಿಂದ ವಿಮಾ ಪಾಲಿಸಿದಾರರ ಕುಟುಂಬಸ್ಥರಿಗೂ ಆರ್ಥಿಕವಾಗಿ ಸಹಾಯವಾಗಲಿದೆ.
5. ವಾರ್ಷಿಕ ಬೋನಸ್:
ಗ್ರಾಮ ಸುಮಂಗಲ್ ಯೋಜನೆಯಿಂದ ಬೋನಸ್ ಕೂಡ ಸಿಗಲಿದೆ. ಅಂದತೆ ಈ ಯೋಜನೆಯಡಿ, ಭಾರತೀಯ ಅಂಚೆ ಇಲಾಖೆ ಪ್ರತಿವರ್ಷ ಬೋನಸ್ ಘೋಷಣೆ ಮಾಡುತ್ತದೆ. ಇದು ಪಾಲಿಸಿ ಮ್ಯಾಚ್ಯುರಿಟಿಯಲ್ಲಿನ ಒಟ್ಟು ಮೊತ್ತವನ್ನು ಹೆಚ್ಚಿಸುತ್ತದೆ.
ಗ್ರಾಮ ಸುಮಂಗಲ್ ಯೋಜನೆಯ ಅರ್ಹತೆ ಮತ್ತು ಮಾನದಂಡ:
-19 ರಿಂದ 45 ವರ್ಷಗಳ ಒಳಗಿನವರು ಈ ಯೋಜನೆಗೆ ಅರ್ಹರು.
-ಪಾಲಿಸಿ ಅವಧಿ: 15 ವರ್ಷ ಅಥವಾ 20 ವರ್ಷ.
-ಸಮ್ಮತ ಮೊತ್ತ (Sum Assured): ಕನಿಷ್ಠ ₹10,000 ರಿಂದ ₹50 ಲಕ್ಷದ ವರೆಗೆ.
-ಪ್ರಿಮಿಯಂ ಪಾವತಿ: ತಿಂಗಳಿಗೆ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿ ಮಾಡಬಹುದು.
ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ಹೇಗೆ..?
ಈ ಗ್ರಾಮ ಸುಮಂಗಲ್ ಯೋಜನೆಯನ್ನು ಹೊಂದಲು ನೀವು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ. ಅಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಫೋಟೋ ಸೇರಿದಂತೆ ಅಗತ್ಯ ದಾಖಲೆಗಳನ್ನು ಒದಗಿಸಿ. ಮತ್ತು ನೀವು ಆಯ್ಕೆಮಾಡಿದ ಪ್ರಿಮಿಯಂ ಪಾವತಿಸಿ.
ಹಣ ಹಿಂತಿರುಗುವಿಕೆ:
15 ವರ್ಷದ ಪಾಲಿಸಿಯನ್ನು ಆಯ್ಕೆ ಮಾಡಿದವರಿಗೆ 6ನೇ, 9ನೇ ಮತ್ತು 12ನೇ ವರ್ಷದಲ್ಲಿ ತಲಾ 20% ಮೊತ್ತದ ಪಾವತಿಯಾಗುತ್ತದೆ. ಹಾಗೂ 15ನೇ ವರ್ಷದಲ್ಲಿ 40%ಕ್ಕೂ ಹೆಚ್ಚು ಬೋನಸ್ ಸಿಗುತ್ತದೆ. ಹಾಗೆಯೇ 20 ವರ್ಷದ ಪಾಲಿಸಿ ಆಯ್ಕೆ ಮಾಡಿಕೊಂಡವರಿಗೆ 8ನೇ, 12ನೇ ಮತ್ತು 16ನೇ ವರ್ಷದಲ್ಲಿ ತಲಾ 20% ಮೊತ್ತದ ಪಾವತಿ. ಹಾಗೂ 20ನೇ ವರ್ಷದಲ್ಲಿ 40%ಕ್ಕೂ ಹೆಚ್ಚು ಬೋನಸ್ ಸಿಗುತ್ತದೆ. ಅಂದರೆ, ₹5 ಲಕ್ಷ ಪಾಲಿಸಿ ಆಯ್ಕೆ ಮಾಡಿಕೊಂಡಲ್ಲಿ, 15 ವರ್ಷದ ಯೋಜನೆಗೆ ಈ ರೀತಿಯ ಹಣಕಾಸು ಪಾವತಿ ಲಭ್ಯವಿರುತ್ತದೆ.


Click it and Unblock the Notifications