ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿಮ್ಮ ಖಾತೆ ಇದೆಯಾ. ನೀವು ಕೆವೈಸಿ (kyc) ಮಾಡಿಸಿಲ್ಲವೇ. ಚಿಂತೆ ಬೇಡ ಮನೆಯಲ್ಲಿ ಕುಳಿತು ನಿಮ್ಮ ಕೆವೈಸಿ ಅಪ್‌ಡೇಟ್ ಮಾಡಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಎಸ್‌ಬಿಐ ಬ್ಯಾಂಕ್‌ನಲ್ಲಿ ನಿಮ್ಮ ಖಾತೆ ಇದ್ದಲ್ಲಿ ಅದರ ಕೆವೈಸಿಯನ್ನು ಮನೆಯಲ್ಲಿಯೇ ಕುಳಿತು ಮಾಡುವುದು ತುಂಬ ಸರಳ. ಇಂಟರ್‌ನೆಟ್ ಬ್ಯಾಂಕಿಂಗ್ ಪ್ರೋಟಾಲ್ ಸಹಾಯದಿಂದ ಹಾಗೂ ಯೋನೊ (yono) ಆಪ್ ಬಳಿಸಿ ಕೆವೈಸಿ ಅಪ್‌ಡೇಟ್ ಮಾಡಬಹುದು. ಹೀಗೆ ಮಾಡುವುದರಿಂದ ನಿಮ್ಮ ಖಾತೆಯಲ್ಲಿನ ಸೇವೆಗಳನ್ನು ನೀವು ಆನಂದಿಸಬಹುದು. ನೀವು ಎಸ್‌ಬಿಐ ಖಾತೆಯ ಕೆವೈಸಿ ಮಾಡಿಸದೆ ಇದ್ದರೆ ಈ ಸರಳವಾದ ವಿಧಾನವನ್ನು ಬಳಸಿ ಅಪ್‌ಡೇಟ್ ಮಾಡಬಹುದು.

ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಕೆವೈಸಿ ಅಪ್‌ಡೇಟ್ ಮಾಡುವುದು ಹೇಗೆ?
ಮೊದಲು ಎಸ್‌ಬಿಐ ಆನ್‌ಲೈನ್ ಪ್ರೋಟಾಲ್ ಓಪನ್ ( SBI's online banking portal) ಮಾಡಿಕೊಳ್ಳಿ ಮತ್ತು ಕಂಟಿನ್ಯೂ ಟು ಲಾಗ್‌ಇನ್ ಕ್ಲಿಕ್ ಮಾಡಿ
ಲಾಗ್‌ಇನ್ ಮೇಲೆ ಕ್ಲಿಕ್ ಮಾಡ್ತಾ ಇದ್ದ ಹಾಗೆ ಇನ್ನೊಂದು ಸ್ಕ್ರೀನ್ ಓಪನ್ ಆಗುತ್ತದೆ. ಅಲ್ಲಿ ನೀವು ನಿಮ್ಮ ಯೂಸರ್ ನೇಮ್ ಪಾಸ್‌ವರ್ಡ್ ಹಾಕಿ ಕೆಳಗೆ ತೋರಿಸುವ ಅಕ್ಷರಗಳನ್ನು (captcha) ನಮೂದಿಸಿ ಲಾಗ್‌ಇನ್ ಮಾಡಬಹುದು. ಹೊಸ ಬಳಕೆ ದಾರ ಸಹ ಇಲ್ಲಿಂದಲೇ ಲಾಗ್ ಇನ್ ಮಾಡಿಕೊಳ್ಳಬಹುದು.
ಲಾಗ್‌ಇನ್ ಆದ ಮೇಲೆ ಮೈ ಅಕೌಂಟ್ ಹಾಗೂ ಪ್ರೊಫೈಲ್ ಸೆಲೆಕ್ಟ್ ಮಾಡಬೇಕು. ನಂತರ ಅದರಲ್ಲಿ ಅಪ್‌ಡೇಟ್ ಕೆವೈಸಿ ಎಂದು ಬರುತ್ತದೆ.
ನಂತರ ಮುಂದಿನ ಪರದೆಯಲ್ಲಿ ಕೆವೈಸಿ ಅಪ್‌ಡೇಟ್‌ಗಾಗಿ ಅಗತ್ಯ ಇರುವ ದಾಖಲೆಗಳನ್ನು ಸಲ್ಲಿಸಬೇಕು.
ಯೋನೊ ಆಪ್ ಸಹಾಯದಿಂದ ಕೆವೈಸಿ ಅಪ್‌ಡೇಟ್ ಮಾಡುವುದು ಹೇಗೆ?
ನೀವು ಎಸ್‌ಬಿಐ ಬಳಕೆದಾರರು ಆಗಿದ್ದರೆ, ನೀವು ಯೋನೊ ಆಪ್‌ನ್ನು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪ್ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಆಪ್ ಓಪನ್ ಆದ ಮೇಲೆ ರಿಜಿಸ್ಟರ್ ನೌ ಮೇಲೆ ಕ್ಲಿಕ್ ಮಾಡಿ ಲಾಗ್ ಇನ್ ಆಗಬೇಕು. ಆಗ ನೀವು ನಿಮ್ಮ ಮೊಬೈಲ್ ನಂಬರ್ ಬಳಸಿ ಸೈನ್ ಇನ್ ಆಗುವಂತೆ ಸೂಚಿಸುತ್ತದೆ. ಹೊಸ ಬಳಕೆ ದಾರ ಸೈನ್ ಅಪ್ ಪೇಜ್ ಮುಖಾಂತರ ಸೈನ್ ಇನ್ ಆಗಬಹುದು.
ಲಾಗ್‌ಇನ್ ಆದ ಮೇಲೆ ಮೇನ್ ಮೆನ್ಯೂನಲ್ಲಿ ಸರ್ವಿಸ್ ರಿಕ್ವೆಸ್ಟ್ ಅನ್ನು ಸೆಲೆಕ್ಟ್ ಮಾಡಿ
ಅದರಲ್ಲಿ ಅಪ್‌ಡೇಟ್ ಕೆವೈಸಿ ಐಕಾನ್ ಇರುತ್ತದೆ
ಆಪ್‌ಗೆ ಸಂಬಂಧಿತ ಪಾಸ್‌ವರ್ಡ್ ಹಾಕಿ ಲಾಗ್ ಇನ್ ಆಗಬೇಕು
ಬಳಿಕ ಅಪ್‌ಡೇಟ್ ಕೆವೈಸಿ ಅಡ್ರೆಸ್ ಡಿಟೇಲ್ಸ್ ನಲ್ಲಿ ಅಗತ್ಯ ಇರುವ ಮಾಹಿತಿ ತುಂಬ ಬೇಕು.
ಅಗತ್ಯ ಇರುವು ಎಲ್ಲ ದಾಖಲೆಗಳನ್ನು ಫಿಲ್ ಮಾಡಿದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಬೇಕು.
ರಿಜೆಸ್ಟರ್ ಮೊಬೈಲ್ ನಂಬರ್‌ಗೆ ಬಂದಿರುವ ಓಟಿಪಿಯನ್ನು ನಮೂದಿಸಬೇಕು.
ಒಂದು ವೇಳೆ ನೀವು ಈ ಮೊದಲೇ ನೀಡಿದ ಕೆವೈಸಿ ಸಂಬಂಧಿಸಿದ ಡಿಟೇಲ್ಸ್‌ಗಳು ನಿಮಗೆ ಕಾಣದೇ ಇದ್ದಲ್ಲಿ, ನೀವು ಹತ್ತಿರದ ಶಾಖೆಗೆ ಭೇಟಿ ನೀಡಿ, ಸೆಲ್ಫ್ ಡಿಕ್ಲರೇಷನ್ ಫಾರ್ಮ್ ತುಂಬಬೇಕು. ಈ ಫಾರ್ಮ್‌ನ್ನು ನೀವು ಆನ್‌ಲೈನ್‌ನಲ್ಲೂ ಡೌನ್‌ಲೋಡ್ ಮಾಡಿಕೊಳ್ಳಬಹುದು.
KYC ಅಪ್‌ಡೇಟ್‌ಗೆ ಅಗತ್ಯವಿರುವ ದಾಖಲೆ (ಯಾವದಾದರೂ ಒಂದು)
ಆಧಾರ್ ಕಾರ್ಡ್
ಡ್ರೈವಿಂಗ್ ಲೈಸೆನ್ಸ್
ಪಾಸ್‌ಪೋರ್ಟ್
ವೋಟೋರ್ ಐಡಿ
NREGA ಕಾರ್ಡ್
ಪ್ಯಾನ್ ಕಾರ್ಡ್
ಅಪ್ರಾಪ್ತರ ಕೆವೈಸಿ ಅಪ್‌ಡೇಟ್‌ಗಾಗಿ ಬೇಕಾಗಿರುವ ದಾಖಲೆ (ಯಾವದಾದರೂ ಒಂದು)
ಪಾಸ್‌ಪೋರ್ಟ್
ವೋಟೋರ್ ಐಡಿ
ಡ್ರೈವಿಂಗ್ ಲೈಸೆನ್ಸ್
ಆಧಾರ್ ಕಾರ್ಡ್
NREGA ಕಾರ್ಡ್
ಪ್ಯಾನ್ ಕಾರ್ಡ್


Click it and Unblock the Notifications