ಯಾವುದೇ ವಿಶೇಷ ಹಬ್ಬಗಳು ಬಂದಾಗ, ಗಾಂಧಿ ಜಯಂತಿ, ಸ್ವಾತಂತ್ರ್ಯ ದಿನಾಚರಣೆ, ಮಕ್ಕಳ ದಿನಾಚರಣೆಗಳು (Childrens Day) ಬಂದಾಗ ಶಾಲಾ-ಕಾಲೇಜುಗಳಲ್ಲಿ ಹಲವು ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಈ ಸಂದರ್ಭದಲ್ಲಿ ಮಕ್ಕಳಿಗೂ ತಾವೂ ಕೂಡಾ ಸ್ಪರ್ಧೆಗಳಲ್ಲಿ ಗೆಲ್ಲಬೇಕು ಎಂಬ ಆಸೆಗಳಿರುತ್ತದೆ. ಅದೇ ರೀತಿ ನಾಳೆ ಮಕ್ಕಳ ದಿನಾಚರಣೆ. ಭಾರತದಲ್ಲಿ (India) ಮಕ್ಕಳ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.

ನವೆಂಬರ್ 14ರ ದಿನವನ್ನು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು (Jawaharlal Nehru) ಅವರ ಜನ್ಮದಿನವೂ ಆಗಿರುತ್ತದೆ. ಮಕ್ಕಳ ಹಕ್ಕುಗಳು, ಶಿಕ್ಷಣ ಮತ್ತು ಯೋಗಕ್ಷೇಮದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಬಾಲ್ಯದ ಮನೋಭಾವವನ್ನು ಎತ್ತಿಹಿಡಿಯಲು ಈ ದಿನವನ್ನು ಆಚರಿಸಲಾಗುತ್ತದೆ.
ಮಕ್ಕಳ ದಿನಾಚರಣೆಯ ಮಹತ್ವ:
ಆರಂಭದಲ್ಲಿ ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಅಂದರೆ ನವೆಂಬರ್ 20 ರಂದು ಆಚರಣೆ ಮಾಡಲಾಗುತ್ತಿತ್ತು. ವಿಶ್ವಸಂಸ್ಥೆಯೇ ಸಾರ್ವತ್ರಿಕವಾಗಿ ಈ ಆಚರಣೆಯನ್ನು ಘೋಷಿಸಿತ್ತು. ಆದರೆ 1964 ರ ನಂತರ ಭಾರತದಲ್ಲಿ ಮಾತ್ರ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಆ ನಂತರ ಭಾರತದಲ್ಲಿ ಪ್ರತೀ ವರ್ಷ ಮಕ್ಕಳ ದಿನಾಚರಣೆಯನ್ನು ನವೆಂಬರ್ 14 ರಂದು ಆಚರಿಸಲಾಗುತ್ತದೆ. ನೆಹರು ಅವರ ಮರಣದ ನಂತರ, ಅವರ ಜನ್ಮದಿನದ ನೆನಪಿಗಾಗಿ ನವೆಂಬರ್ 14 ರಂದು ಭಾರತದಲ್ಲಿ ಮಕ್ಕಳ ದಿನಾಚರಣೆ ಆಚರಿಸಿಕೊಂಡು ಬರಲಾಗಿದೆ.
ಇನ್ನು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ಜವಾಹರ್‌ಲಾಲ್ ನೆಹರೂ ಅವರು ಆಯ್ಕೆಯಾಗುತ್ತಾರೆ. 1947 ರಿಂದ 1964 ರವರೆಗೆ ಅಂದರೆ ಅವರ ಮರಣದವರೆಗೂ ಭಾರತದ ಪ್ರಧಾನಿಯಾಗಿ ಎರಡು ಅವಧಿಯಲ್ಲಿ ಸೇವೆ ಸಲ್ಲಿಸಿದ್ದರು. ನೆಹರೂಗೆ ಮಕ್ಕಳೆಂದರೆ ಬಹಳ ಪ್ರೀತಿ. ಅದೇ ರೀತಿ ಮಕ್ಕಳು ಕೂಡಾ ನೆಹರೂ ಅವರನ್ನು ಪ್ರೀತಿಯಿಂದ ಚಚಾ ನೆಹರು ಎಂದು ಕರೆಯುತ್ತಿದ್ದರು. ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಕಲ್ಪಿಸುವುದು ನೆಹರೂ ಅವರ ಕನಸಾಗಿತ್ತು. ಆದ್ದರಿಂದ ಅವರ ಸವಿನೆನಪಿಗಾಗಿ ಜನ್ಮ ದಿನಾಂಕದಂದೇ ಮಕ್ಕಳ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಲಾಯಿತು.
ಮಕ್ಕಳ ದಿನಾಚರಣೆ 2025 ರ ಸಂದರ್ಭದಲ್ಲಿ, ಶಾಲೆಗಳಲ್ಲಿ ಅಥವಾ ಇತರ ಸಮಾರಂಭಗಳಲ್ಲಿ ಭಾಷಣ ಮಾಡುವವರಿಗಾಗಿ ಇಲ್ಲಿ ಕೆಲವು ಟಿಪ್ಸ್‌ಗಳಿವೆ. ಇದರಿಂದ ಮಕ್ಕಳು ಸುಲಭದಲ್ಲಿ ಭಾಷಣೆ ರೆಡಿ ಮಾಡಿಕೊಳ್ಳಬಹುದು.
ಚಾಚಾ ನೆಹರು ಅವರ ಕನಸು:
ಪಂಡಿತ್ ಜವಾಹರಲಾಲ್ ನೆಹರು ಅವರ ಸಾಧನೆ, ಕನಸುಗಳೊಂದಿಗೆ ನಿಮ್ಮ ಭಾಷಣವನ್ನು ಪ್ರಾರಂಭಿಸಿ. ಮಕ್ಕಳೆಂದರೆ ಅವರಿಗೆ ಎಷ್ಟೊಂದು ಪ್ರೀತಿ ಇತ್ತು ಮತ್ತು ಪ್ರತಿಯೊಂದು ಮಗುವಿಗೂ ಉಚಿತ ಶಿಕ್ಷಣ, ಸಮಾನತೆ ಹಾಗೂ ಸೌಲಭ್ಯ ಸಿಗಬೇಕು ಎಂದು ಅವರು ಹೇಗೆ ಬಯಸಿದ್ದರು ಮತ್ತು ಅದಕ್ಕಾಗಿ ಅವರು ಕೈಗೊಂಡ ಯೋಜನೆಗಳ ಬಗ್ಗೆ ಮಾತನಾಡಿ. ನಂತರ ನೆಹರು ಅವರ ಕನಸನ್ನು ನನಸು ಮಾಡಲು ಮಕ್ಕಳು ಹೇಗೆ ಸಹಾಯ ಮಾಡಬಹುದು ಎಂದು ಕೇಳುವ ಮೂಲಕ ಭಾಷಣವನ್ನು ಮುಕ್ತಾಯಗೊಳಿಸಿ.
ಉತ್ತಮ ಭವಿಷ್ಯವನ್ನು ನಿರ್ಮಿಸುವ ಅಂಶಗಳಿರಲಿ:
ಪ್ರಾಮಾಣಿಕತೆ ಅಥವಾ ದಯೆಯ ಕುರಿತು ಸಣ್ಣ ಕಥೆ ಅಥವಾ ಗಾದೆಯನ್ನು ಆಡ್ ಮಾಡುವ ಮೂಲಕ ನಿಮ್ಮ ಭಾಷಣವನ್ನು ಶುರು ಮಾಡಬಹುದು. ಅಲ್ಲದೇ ಗೌರವ, ಸಹಾನುಭೂತಿ ಮತ್ತು ದೃಢತೆಯಂತಹ ಮೌಲ್ಯಗಳ ಬಗ್ಗೆ ಮಾತನಾಡಿ. ಸಂಪತ್ತು ಅಥವಾ ಖ್ಯಾತಿಯ ಬದಲು ಈ ಮೌಲ್ಯಗಳೇ ಶ್ರೇಷ್ಠ ವ್ಯಕ್ತಿಗಳನ್ನಾಗಿ ಹೇಗೆ ರೂಪಿಸಬಹುದು ಎಂಬುದನ್ನು ವಿವರಿಸಿ. ಶಾಲೆ ಮತ್ತು ಸಮಾಜದ ಬೆಳವಣಿಗೆಗೆ ಪ್ರತಿಯೊಬ್ಬ ವ್ಯಕ್ತಿಯು ಪ್ರೇರಣೆಯಾಗುವಂತಹ ಕಥೆ ಅಥವಾ ಗಾದೆ ನಿಮ್ಮದಾಗಿರಲಿ.
ಶಿಕ್ಷಣವು ಪ್ರತಿ ಮಗುವಿನ ಹಕ್ಕು:
ಶಿಕ್ಷಣವು ಪ್ರತಿ ಮಗುವಿನ ಹಕ್ಕು ಎಂಬುದನ್ನು ಒತ್ತಿ ಒತ್ತಿ ಹೇಳಿ. ಅದರ ಜೊತೆಗೆ ಶಿಕ್ಷಣ ಎಂಬುದು ಒಬ್ಬ ವಿದ್ಯಾರ್ಥಿಯ ಬೆಳವಣಿಗೆಗೆ ಹೇಗೆ ಆಧಾರವಾಗಿದೆ ಎಂಬುದನ್ನು ವಿವರಿಸಿ. ಶಿಕ್ಷಣವೆಂಬುದು ಕೇವಲ ಪರೀಕ್ಷೆಗಳಿಗೆ ಮಾತ್ರವಲ್ಲ, ಶಿಕ್ಷಣ ಎಂಬುದು ಚಿಂತನಶೀಲ, ಸೃಜನಶೀಲ ಮತ್ತು ದಯೆ ಉಳ್ಳ ವ್ಯಕ್ತಿಗಳನ್ನಾಗಿ ಮಾಡುತ್ತದೆ ಎಂಬುದನ್ನು ತಿಳಿಸಿ. "ಪ್ರತಿಯೊಂದು ಮಗು ಕಲಿತರೆ, ಭಾರತ ಬಲಿಷ್ಠವಾಗುತ್ತದೆ" ಎಂಬಂತಹ ಅರ್ಥಪೂರ್ಣ, ಮನಮುಟ್ಟುವ ಮಾತುಗಳನ್ನು ನಿಮ್ಮ ಭಾಷಣಗಳಲ್ಲಿ ಅಲ್ಲಲ್ಲಿ ಸೇರಿಸಿ.
ಇಂದಿನ ಮಕ್ಕಳೇ, ನಾಳಿನ ನಾಯಕರು!
ನಾಯಕತ್ವ ಮತ್ತು ಜವಾಬ್ದಾರಿಯ ಬಗ್ಗೆಯೂ ನಿಮ್ಮ ಭಾಷಣದಲ್ಲಿರಲಿ. ನಾಯಕನಾಗುವುದು ಎಂದರೆ ಒಂದು ಅಧಿಕಾರ ಪಡೆಯುವುದಲ್ಲ, ಬದಲಿಗೆ ಒಳ್ಳೆಯ ಕೆಲಸಕ್ಕಾಗಿ ತೋರಿಸುವ ದಾರಿ ಎಂಬುದನ್ನು ಅರಿವು ಮೂಡಿಸಿ. ಸ್ನೇಹಿತನಿಗೆ ಸಹಾಯ ಮಾಡುವುದು, ಪ್ರಕೃತಿಯನ್ನು ಪೋಷಿಸುವುದು ಅಥವಾ ಸರಿಯಾದ ಕೆಲಸ ಮಾಡಬೇಕು ಎಂಬುದನ್ನು ತಿಳಿಸಿ.


Click it and Unblock the Notifications