ಸಾರ್ವಜನಿಕ ವಲಯದಲ್ಲಿ ಭಾರತದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ). ಇದು ಸಾಮಾನ್ಯ ವರ್ಗದವರಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮಿಗಳಿಗೂ ಹಣಕಾಸು ವಹಿವಾಟುಗಳನ್ನು ಮಾಡಲು ಸಹಕರಿಸಿದೆ. ಚಿಲ್ಲರೆ ಅಂಗಡಿ ಮಾಲೀಕರಿಂದ ಹಿಡಿದು ಕಾರ್ಪೋರೇಟ್ ವಲಯದ ಗ್ರಾಹಕರಿಗೂ ಇದು ಅನುಕೂಲಕರ ನೆಟ್ ಬ್ಯಾಂಕಿಂಗ್ ಸೌಲಭ್ಯ ಒದಗಿಸುತ್ತಿದೆ. ಈ ಆನ್‌ಲೈನ್ ಮೂಲಕ ಮಾಡಲಾಗುವ ಬ್ಯಾಂಕಿಂಗ್ ಸೇವೆಯು, ಗ್ರಾಹಕರು ಯಾವುದೇ ಸಮಯದಲ್ಲಿ ಬೇಕಾದರೂ ನೆಟ್ ಬ್ಯಾಂಕಿಂಗ್ ಹಣ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ. ಈ ಅನುಕೂಲಕರ ಸೇವೆಯನ್ನು ಬಳಸಿಕೊಳ್ಳುವ ಮೊದಲು ಗ್ರಾಹಕರು ತಮ್ಮ ನೆಟ್ ಬ್ಯಾಂಕಿಂಗ್ ಖಾತೆಯನ್ನು ಸಕ್ರಿಯ ಮಾಡಿಕೊಳ್ಳಬೇಕಾಗುತ್ತದೆ.

ಎಸ್‌ಬಿಐ ನೆಟ್ ಬ್ಯಾಂಕಿಂಗ್ ಸಕ್ರಿಯಗೊಳಿಸುವುದು ಹೇಗೆ..?
ಎಸ್‌ಬಿಐ ನೆಟ್ ಬ್ಯಾಂಕಿಂಗ್‌ನ ಬಳಸಿಕೊಳ್ಳಲು ಈ ಕೆಳಗಿನ ಅಂಶಗಳನ್ನು ಅನುಸರಿಸಿ.
- ಮೊದಲು ನೀವು ಎಸ್‌ಬಿಐ ಆನ್‌ಲೈನ್ ವೆಬ್‌ಸೈಟ್‌ಗೆ ಭೇಟಿ ನೀಡಿ
- 'Personal Banking' ಕೆಳಗಿರುವ 'New User Registration' ಮೇಲೆ ಕ್ಲಿಕ್ ಮಾಡಿ
- ನೀವು ಇನ್ನೂ ನೆಟ್ ಬ್ಯಾಂಕಿಂಗ್ ಕಿಟ್‌ನ ಸ್ವೀಕರಿಸಿಲ್ಲ ಎಂದು ಖಚಿತಪಡಿಸಲಯ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ಪಾಪ್-ಅಪ್ ವಿಂಡೋ ಮೇಲೆ 'ಸರಿ' ಎಂದು ಕ್ಲಿಕ್ ಮಾಡಿ
- (ಒಂದು ವೇಳೆ ನಿಮಗೆ ಎಸ್‌ಬಿಐ ನೆಟ್ ಬ್ಯಾಂಕಿಂಗ್ ಕಿಟ್ ನೀಡಿದ್ದರೆ ನೆಟ್ ಬ್ಯಾಂಕಿಂಗ್‌ಗೆ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಬ್ಯಾಂಕ್ ಒದಗಿಸಿದ ಐಡಿ ಹಾಗೂ ಪಾಸ್‌ವರ್ಡ್ ನಮೂದಿಸಿ ನೀವು ನೇರವಾಗಿ ಲಾಗಿನ್ ಆಗಬಹುದು)
- ಅಪ್ಲಿಕೇಷನ್‌ನಲ್ಲಿ ಕಾಣಿಸಿಕೊಳ್ಳುವ ಪಾಪ್-ಅಪ್‌ನಲ್ಲಿ ಡ್ರಾಪ್-ಡೌನ್ ಮೆನುವಿನಿಂದ, 'New User Registration' ಆಯ್ಕೆಯನ್ನು ಆರಿಸಿ. ಮತ್ತು 'ಮುಂದೆ' ಕ್ಲಿಕ್ ಮಾಡಿ.
- ಮುಂದಿನ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುವ ಅಕೌಂಟ್ ನಂಬರ್, ಸಿಐಎಫ್ ನಂಬರ್, ಬ್ರಾಂಚ್ ಕೋಡ್, ದೇಶ, ನೋಂದಾಯಿಸಿರುವ ಮೊಬೈಲ್ ಸಂಖ್ಯೆ ಮತ್ತು ನಿಮಗೆ ಬೇಕಾಗಿರುವ ಸೌಲಭ್ಯ ಕಾಲಮ್‌ಗಳಲ್ಲಿ ನಿಮ್ಮ ವಿವರಗಳನ್ನು ತುಂಬಿಸಿ. ಬಳಿಕ ಅಲ್ಲಿ ಕೊಡುವ ಕ್ಯಾಪ್ಚಾ ಕೋಡ್‌ನ ಸರಿಯಾಗಿ ಹಾಕಿರಿ.
- ನಿಮಗೆ ಬ್ರಾಂಚ್ ಕೋಡ್‌ನ್ನು ತಿಳಿಯರು ಸಾಧ್ಯವಾಗದಿದ್ದರೆ, ನೀವು 'Get Branch Code' ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಕೋಡ್‌ನ ಪಡೆಯಬಹುದು. ಹಾಗೂ ನೀವು ಕಡ್ಡಾಯವಾಗಿ ರಾಜ್ಯ ಮತ್ತು ಬ್ರಾಂಚ್‌ನ ಹೆಸರನ್ನು ನಮೂದಿಸಿಯೇ ಬ್ರಾಂಚ್ ಕೋಡ್ ಪಡೆಯಬೇಕಾಗುತ್ತದೆ.
- 'Facility Required'ನ ಕೆಳಗಿರುವ ಆಪ್ಷನ್‌ಗಳ ಪೈಕಿ ಒಂದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು: ವೀಕ್ಷಣೆ, ನಿಯಮಿತ ವಹಿವಾಟು ಹಾಗೂ ಪೂರ್ಣ ವಹಿವಾಟು
- ಎಲ್ಲಾ ವಿವರ ಭರ್ತಿ ಮಾಡಿದ ಬಳಿಕ 'I agree' ಮೇಲೆ ಕ್ಲಿಕ್ ಮಾಡಿ ಬಳಿಕ 'Submit' ಬಟನ್ ಒತ್ತಿ
- ನೀವು 'Submit' ಬಟನ್ ಒತ್ತಿದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳಿಸಲಾಗುತ್ತದೆ. ಬಳಿಕ ನೀವು ಸ್ಕ್ರೀನ್ ಮೇಲೆ ಒಟಿಪಿ ಹಾಕಿ 'Confirm' ಬಟನ್ ಮೇಲೆ ಕ್ಲಿಕ್ ಮಾಡಿ
- ಬಳಿಕ 'I have my ATM card' ಆಪ್ಷನ್‌ನ ಆಯ್ಕೆ ಮಾಡಿ 'Submit' ಬಟನ್ ಮೇಲೆ ಕ್ಲಿಕ್ ಮಾಡಿ
- ಈಗ ನೀವು ನಿಮ್ಮ ATM ಕಾರ್ಡ್ ವಿವರಗಳನ್ನು ತುಂಬಿಸಿ ಸ್ಕ್ರೀನ್ ಮೇಲಿರುಬ 'Submit' ಬಟನ್ ಮೇಲೆ ಕ್ಲಿಕ್ ಮಾಡಿ
- ಈ ಎಲ್ಲಾ ವಿವರಗಳನ್ನು ತುಂಬಿಸಿದ ಮೇಲೆ ಸ್ಕ್ರೀನ್ ಮೇಲೆ ತಾತ್ಕಾಲಿಕ ಬಳಕೆದಾರ ಹೆಸರನ್ನು ತೋರಿಸಲಾಗುತ್ತದೆ. ಈ ಬಳಕೆದಾರರ ಹೆಸರನ್ನು ನೀವು ಗಮನಿಸಿ
- ಬಳಿಕ ಒಂದು ಪಾಸ್‌ವರ್ಡ್ ಸೆಟ್ ಮಾಡಿ 'Submit' ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ನೋಂದಣಿ ಪ್ರಕ್ರಿಯೆ ಮುಗಿಸಿ.
ನೆಟ್ ಬ್ಯಾಂಕಿಂಗ್ ಖಾತೆ ತೆರೆಯಲು ಬೇಕಾಗಿರುವ ದಾಖಲಾತಿಗಳು:
ನೀವು ನಿಮ್ಮ ನೆಟ್ ಬ್ಯಾಂಕಿಂಗ್ ಪೋರ್ಟಲ್‌ನ ತೆರೆಯಲು ಒಂದಷ್ಟು ಪ್ರಮುಖ ದಾಖಲೆಗಳನ್ನು ಒದಗಿಸಬೇಕು. ಅಂದರೆಈ ಕೆಳಗಿನ ಎಲ್ಲಾ ವಿವರಗಳನ್ನು ನಿಮ್ಮ ಬಳಿ ಹೊಂದಿರಬೇಕು.
- ಎಸ್‌ಬಿಐ ಅಕೌಂಟ್ ನಂಬರ್
- ಎಸ್‌ಬಿಐ ಬ್ರಾಂಚ್ ಕೋಡ್
- ನೋಂದಾಯಿತ ಮೊಬೈಲ್ ನಂಬರ್
- ಎಸ್‌ಬಿಐ ಎಟಿಎಂ ಕಾರ್ಡ್ ವಿವರ
- ಸಿಐಎಫ್ ನಂಬರ್
- ನಿಮ್ಮ ದೇಶ
ಎಸ್‌ಬಿಐ ನೆಟ್ ಬ್ಯಾಂಕಿಂಗ್ ವೈಶಿಷ್ಟ್ಯಗಳು:
- ನೆಟ್ ಬ್ಯಾಂಕಿಂಗ್ ಮೂಲಕ ನೀವು ನಿಮ್ಮ ಖಾತೆಯ ವಿವರಗಳನ್ನು ತಿಳಿದುಕೊಳ್ಳಬಹುದು. ಅಂದರೆ ನಿಮ್ಮ ಖಾತೆಯಲ್ಲಿರುವ ಬ್ಯಾಲೆನ್ಸ್, ಹಳೆಯ ವಹಿವಾಟು ಸೇರಿದಂತೆ ಮಾಹಿತಿಗಳನ್ನು ತಿಳಿಯಬಹುದು.
- ನಿಮ್ಮ ಅಕೌಂಟ್ ಮೂಲಕವೇ ನೀವು ಯಾವಾಗ ಯಾರಿಗೆ ಬೇಕಾದರೂ ನಿಮ್ಮ ಹಣ ವರ್ಗಾಯಿಸಬಹುದು.
- ನಿಮ್ಮ ನಾಮಿನೇಷನ್ ಹಾಗೂ ಕೆವೈಸಿ ವಿವರಗಳನ್ನು ಕೂಡ ನೀವು ಅಪ್‌ಡೇಟ್ ಮಾಡಬಹುದು
- NPS, PPF, SIP ಸೇರಿ ಇತರೆ ಪೇಮೆಂಟ್‌ಗಳನ್ನೂ ಮಾಡಬಹುದು
- ಅಗತ್ಯ ಬಿಲ್‌ಗಳನ್ನು ಕೂಡ ನೀವು ಪಾವತಿಸಬಹುದು
- ಎಸ್‌ಬಿಐ ನೆಟ್ ಬ್ಯಾಂಕಿಂಗ್ ಮೂಲಕ ನೀವು RD, FD ಸೇರಿದಂತೆ ಇತರೆ ಖಾತೆಗಳನ್ನೂ ತೆರೆಯಬಹುದು
ಹಾಗಾದರೆ ನೆಟ್ ಬ್ಯಾಂಕಿಂಗ್ ಎಂದರೇನು..?
ಈ ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಎಂದರೆ ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆ. ಎಸ್‌ಬಿಐ ನೆಟ್ ಬ್ಯಾಂಕಿಂಗ್ ಒಂದು ಸಮಗ್ರ ನಿವ್ವಳ ಬ್ಯಾಂಕಿಂಗ್ ವೇದಿಕೆ ನೀಡುತ್ತದೆ. ಚಿಲ್ಲರೆ ವ್ಯಾಪಾರಿಗಳಿಂದ ಹಿಡಿದು ಕಾರ್ಪೋರೇಟ್ ಗ್ರಾಹಕರಿಗೂ ಬ್ಯಾಂಕಿಂಗ್ ಸೇವೆಯನ್ನು ಕೈಗೆಟುವ ರೀತಿಯಲ್ಲಿ ಒದಗಿಸುತ್ತದೆ. ಅಲ್ಲದೇ 24x7 ಬ್ಯಾಂಕಿಂಗ್ ಸೇವೆ ಒದಗಿಸುತ್ತದೆ. ಯಾರು ಯಾವಾಗ ಬೇಕಾದರೂ ಆನ್‌ಲೈನ್ ಪೋರ್ಟಲ್‌ಗೆ ಹೋಗಿ ವಹಿವಾಟು ನಡೆಸಬಹುದು. ಸುಧಾರಿತ ತಂತ್ರಜ್ಞಾನ ಹಾಗೂ ವೈಶಿಷ್ಟ್ಯಗಳೊಂದಿಗೆ ಈ ನೆಟ್ ಬ್ಯಾಂಕಿಂಗ್ ಸೇವೆ ಸಜ್ಜುಗೊಂಡಿದೆ. ಬ್ಯಾಂಕ್ ಸ್ಟೇಟ್‌ಮೆಂಟ್ ಡೌನ್‌ಲೋಡ್ ಮಾಡುವುದು, ಹಣ ವರ್ಗಾವಣೆ ಮಾಡುವುದು, ಆನ್‌ಲೈನ್‌ನಲ್ಲಿ ಪಾಸ್‌ಬುಕ್ ಮುದ್ರಣ, ಬಿಲ್ ಪಾವತಿಸುವುದು, ಚೆಕ್‌ಬುಕ್‌ಗಳಿಗೆ ಅರ್ಜಿ ಸಲ್ಲಿಸುವುದು, ಡಿಡಿ ( ಡಿಮ್ಯಾಂಡ್ ಡ್ರಾಫ್ಟ್) ರಚಿಸುವುದು ಸೇರಿ ಇನ್ನು ಹೆಚ್ಚಿನ ಕೆಲಸಗಳು ಸ್ವತಃ ಗ್ರಾಹಕರೇ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.


Click it and Unblock the Notifications