ಬೆಂಗಳೂರು, ಆಗಸ್ಟ್ 21: ಶಿಕ್ಷಣ ಸಾಲ, ಗೃಹ ಸಾಲ ಯಾವುದೆ ಇರಲಿ ಸಾಲಪಡೆಯಲು ಮುಂದಾದಾಗ ನಮ್ಮ ಗಮನ ಇಎಂಐ ಕಂತುಗಳ ಮೇಲೆ ಇರುತ್ತದೆ. ಎಷ್ಟು ಮೊತ್ತದ ಇಎಂಐ ಪಾವತಿ ಮಾಡಬೇಕಾಗುತ್ತದೆ ಎಂದು ತಲೆಕೆಡಿಸಿಕೊಳ್ಳುತ್ತಿರುತ್ತೇವೆ. ಇತರೆ ಶುಲ್ಕಗಳ ಬಗ್ಗೆ ಕೆಡಿಸಿಕೊಳ್ಳುವುದಿಲ್ಲ.
ಗೃಹ ಸಾಲ ಪಡೆಯುವಾಗ ನಮ್ಮ ಗಮನ ಸಾಮಾನ್ಯವಾಗಿ ಇಎಂಐ ಮೇಲಿರುತ್ತದೆ. ನಾವು ಅದರಲ್ಲಿ ಅಡಗಿರುವ ಶುಲ್ಕಗಳ ಬಗ್ಗೆ ಅಂದ್ರೆ ಹಿಡನ್ ಚಾರ್ಜಸ್ ಬಗ್ಗೆ ನಿರ್ಲಕ್ಷ್ಯ ಮಾಡುತ್ತೇವೆ. ಈ ಚಾರ್ಜಸ್ ಬಗ್ಗೆ ಮಾಹಿತಿ ಸದಾ ಲಭ್ಯವಿರುತ್ತದೆ. ಕೆಲವು ಬ್ಯಾಂಕ್ ಗಳು ಪ್ರತ್ಯೇಕವಾಗಿ ಈ ಶುಲ್ಕ ವಿಧಿಸುತ್ತದೆ. ಇನ್ ಕೆಲವು ಬ್ಯಾಂಕ್ ಗಳು ಇದನ್ನು ಬೇರೆ ಬೇರೆ ಶುಲ್ಕಗಳೊಂದಿಗೆ ಸೇರಿಸಿರುತ್ತಾರೆ. ಹೀಗೆ ಯಾವ ಬೇರೆ ಬೇರೆ ಶುಲ್ಕಗಳಿವೆ ಎನ್ನುವುದನ್ನು ತಿಳಿದುಕೊಂಡರೆ ನಿಮ್ಮ ಹಣಕಾಸು ಹೊರೆ ಕಡಿಮೆ ಮಾಡಿಕೊಳ್ಳಬಹುದು.

ಪ್ರಾಸೆಸಿಂಗ್ ಶುಲ್ಕ ಎಂದರೇನು?:
ಮೊದಲಿಗೆ ಪ್ರಾಸಸಿಂಗ್ ಶುಲ್ಕ ಎಂದರೇನು ಎನ್ನುವುದನ್ನು ತಿಳಿದುಕೊಳ್ಳೋಣ. ಸಾಲ ಮಂಜೂರು ಮಾಡುವುದಕ್ಕೂ ಮೊದಲು, ಬ್ಯಾಂಕ್ ಗಳು ನಿಮ್ಮ ಸಾಲದ ಅರ್ಜಿಯನ್ನ ಅನೇಕ ಅಂಶಗಳಿಂದ ಪರಿಶೀಲಿಸುತ್ತದೆ. ಈ ಪೈಕಿ ಕೆವೈಸಿ ವೆರಿಫಿಕೇಷನ್, ಫೈನ್ಯಾನ್ಷಿಯಲ್ ಅಸೆಸ್ಮೆಂಟ್, ವೃತ್ತಿ ಮತ್ತು ವಿಳಾಸ ಪರಿಶೀಲನೆ ಸೇರಿರುತ್ತದೆ. ಗ್ರಾಹಕರ ಬಗ್ಗೆ ಈ ಎಲ್ಲಾ ಮಾಹಿತಿ ಕಲೆ ಹಾಕಲು ಬ್ಯಾಂಕ್ ತಾನು ಮಾಡುವ ಖರ್ಚುಗಳನ್ನು ಈ ಪ್ರಾಸೆಸಿಂಗ್ ಫೀ ಯಿಂದ ಭರಿಸಿಕೊಳ್ಳುತ್ತದೆ.
ಈ ಪ್ರಾಸೆಸಿಂಗ್ ಫೀ ಮೂಲಕ, ಬ್ಯಾಂಕ್ ಗಳು ಈ ಇವ್ಯಾಲ್ಯುಯೇಷನ್ ಪ್ರಕ್ರಿಯೆಯ ವೆಚ್ಚಗಳನ್ನ ರಿಕವರ್ ಮಾಡಿಕೊಳ್ಳುತ್ತವೆ ಪ್ರೋಸಸಿಂಗ್ ಫೀ ಎನ್ನುವುದು ಒಂದು ಬಾರಿಯ ಶುಲ್ಕ ಇದು ರೀಫಂಡ್ ಆಗುವುದಿಲ್ಲ. ಈ ಶುಲ್ಕ ಒಟ್ಟು ಸಾಲದ ಮೊತ್ತದ ಶೇಕಡ. 0.25 ರಿಂದ 2 ರಷ್ಟಿರುತ್ತದೆ. ಕೆಲವು ಸಾಲದಾತರು ಈ ರೀತಿಯ ಶೇಕಡಾವಾರು ಶುಲ್ಕದ ಬದಲಿಗೆ ನಿಶ್ಚಿತ ಶುಲ್ಕ ವಿಧಿಸುವುದು ಇದೆ.
ಶೇಕಡಾವಾರು ಶುಲ್ಕ ಎಷ್ಟಿದೆ?:
ಉದಾಹರಣೆಗೆ, ಐಸಿಐಸಿಐ ಬ್ಯಾಂಕ್ ನ ಪ್ರಾಸಸಿಂಗ್ ಫೀ ಶೇಕಡ 0.50 ರಿಂದ 2 ರಷ್ಟಿರತ್ತೆ ಅಥವಾ ಗರಿಷ್ಠ ಮೂರು ಸಾವಿರ ರೂಪಾಯಿ ಇರುತ್ತದೆ ಎಂದು ಅದರ ವೆಬ್ ಸೈಟ್ ನಲ್ಲಿದೆ. ಎಸ್ ಬಿ ಐ ಶೇಕಡ 0.35 ರಷ್ಟು ಪ್ರಾಸಸಿಂಗ್ ಫೀ ವಿಧಿಸುತ್ತದೆ. ಇದು ಎರಡು ಸಾವಿರ ರೂಪಾಯಿಯಿಂದ ಹತ್ತು ಸಾವಿರ ರೂಪಾಯಿಯಷ್ಟಿರುತ್ತದೆ. ಎಲ್ ಐ ಸಿ ಹೌಸಿಂಗ್ ಫೈನ್ಯಾನ್ಸ್ ಒಂದು ಕೋಟಿ ರೂಪಾಯಿವರೆಗಿನ ಸಾಲಕ್ಕೆ ಶೇಕಡ 0.25 ರಷ್ಟು ಶುಲ್ಕ ವಿಧಿಸುತ್ತದೆ. ಇದು ಹದಿನೈದು ಸಾವಿರ ರೂಪಾಯಿಯಷ್ಟಾಗಬಹುದು. ಹಾಗೆಯೆ ಒಂದು ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ಸಾಲಕ್ಕೆ ಇಪ್ಪತ್ತು ಸಾವಿರ ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಪ್ರಾಸಸಿಂಗ್ ಫೀ ಅಲ್ಲದೆ ಜಿ ಎಸ್ ಟಿ ಸಹ ನೀಡಬೇಕಾಗುತ್ತದೆ.
ಪ್ರೋಸಸಿಂಗ್ ಫೀ ಅಲ್ಲದೆ ಗೃಹ ಸಾಲದ ಮೇಲೆ ಲೀಗಲ್ ಚಾರ್ಜಸ್ ಮತ್ತು ವ್ಯಾಲ್ಯುಯೇಷನ್ ಫೀ ಕೂಡ ವಿಧಿಸಲಾಗುತ್ತದೆ. ಲೀಗಲ್ ಫೀ ನಲ್ಲಿ ಆಸ್ತಿ ದಾಖಲೆಗಳ ಲೀಗಲ್ ವೆರಿಫಿಕೇಷನ್ ವೆಚ್ಚಗಳನ್ನು ಭರಿಸಲಾಗುತ್ತದೆ. ಆಸ್ತಿಯ ಲೀಗಲ್ ಎಕ್ಸಾಮಿನೇಷನ್ ಮಾಡುವ ಸಂ ಸಂದರ್ಭದಲ್ಲಿ ಈ ಶುಲ್ಕ ವಿಧಿಸಲಾಗುತ್ತದೆ. ಆಸ್ತಿ ಯಾವುದಾದರೂ ಕಾನೂನು ತಗಾದೆಗಳಿಗೆ ಒಳಪಟ್ಟಿದೆಯಾ ಅಥವಾ ಇಲ್ಲವೆ ಎನ್ನುವುದನ್ನು ಈ ಪ್ರಕ್ರಿಕೆ ತಿಳಿಸುತ್ತದೆ. ಬೇರೆಬೇರೆ ಆಸ್ತಿಗಳ ಲೀಗಲ್ ಚಾರ್ಜಸ್ ಬೇರೆ ಬೇರೆ ಇರುತ್ತದೆ. ಇದು ಬ್ಯಾಂಕ್ ನಿಂದ ಬ್ಯಾಂಕ್ ಗೆ ಭಿನ್ನವಾಗಿರುತ್ತದೆ. ಪರಿಶೀಲನಾ ಪ್ರಕ್ರಿಯೆ ಅಥವಾ ವೆರಿಫಿಕೇಷನ್ ಪ್ರೋಸಸ್ ಎಷ್ಟು ಸಂಕೀರ್ಣವಾಗಿರುತ್ತದೆಯೋ ಅಷ್ಟು ಈ ಶುಲ್ಕ ಜಾಸ್ತಿಯಾಗುತ್ತದೆ. ಯಾವ ಆಸ್ತಿಯ ಮೇಲೆ ಗೃಹ ಸಾಲ ಮಾಡಲಾಗಿತ್ತೋ ಅದರ ಮಾರುಕಟ್ಟೆ ಮೌಲ್ಯ ಮತ್ತು ಭೌತಿಕ ಆರೋಗ್ಯ ಅಥವಾ ಫಿಸಿಕಲ್ ಹೆಲ್ತ್ ಹೇಗಿದೆ ಎಂದು ತಿಳಿಯಲು ಬ್ಯಾಂಕ್ ಗಳು ತಾಂತ್ರಿಕ ತಜ್ಞರ ಸಹಕಾರ ಪಡೆಯುತ್ತವೆ.
ತಜ್ಞರು ವಿವಿಧ ಆಯಾಮಗಳಿಂದ ಆಸ್ತಿ ಪರಿಶೀಲಿಸುತ್ತಾರೆ. ಸ್ಥಳೀಯ ಆಡಳಿತದ ಅನುಮೋದನೆಗಳು, ಲೇಔಟ್ ಅಪ್ರೂವಲ್, ನಿರ್ಮಾಣ ನಿಯಮಗಳ ಪಾಲನೆ ಮೊದಲಾದವುಗಳನ್ನ ಪರಿಶೀಲಿಸುತ್ತಾರೆ. ಆಸ್ತಿಯ ಮೌಲ್ಯಕ್ಕೆ ಸಾಲದ ಮೊತ್ತ ಹೊಂದಿಕೆ ಆಗತ್ತದೆಯಾ ಎನ್ನುವುದನ್ನು ನೋಡಲು ಬ್ಯಾಂಕ್ ಗಳು ಶುಲ್ಕ ವಿಧಿಸುವುದಿದೆ. ಗೃಹ ಸಾಲಕ್ಕೆ ನೀವು ಬ್ಯಾಂಕ್ ಅಥವಾ ಎನ್ ಬಿ ಎಫ್ ಸಿ ಯಿಂದ ವಿಮೆ ಪಡೆಯಬೇಕಾಗುತ್ತದೆ. ಹೋಂ ಇನ್ಶೂರೆನ್ಸ್ ಅಥವಾ ಮಾರ್ಟಗೇಜ್ ಪ್ರೊಟೆಕ್ಷನ್ ಇನ್ಷುರೆನ್ಸ್ ತೆಗೆದುಕೊಳ್ಳಬಹುದು.
ಹೀಗೆ ಮಾಡುವುದರಿಂದ ಅನಿರೀಕ್ಷಿತ ಸಂದರ್ಭಗಳಲ್ಲಿ ಬ್ಯಾಂಕ್ ಗೆ ನಷ್ಟ ಆಗುವುದನ್ನು ತಪ್ಪಿಸಬಹುದು. ಸಾಮಾನ್ಯವಾಗಿ ವಿಮಾ ಪ್ರೀಮಿಯಂಗಳನ್ನು ಸಾಲದ ಮೊತ್ತಕ್ಕೆ ಸೇರಿಸಲಾಗುತ್ತದೆ. ಸಾಲ ಎಷ್ಟು ದಿನ ಆಕ್ಟಿವ್ ಆಗಿರುತ್ತದೆಯೋ ಅಲ್ಲಿಯವೆರೆಗೂ ನೀವು ಪ್ರೀಮಿಯಂ ಮೇಲೆ ಬಡ್ಡಿ ಪಾವತಿಸಬೇಕಾಗುತ್ತದೆ. ಇದೂ ಕೂಡ ಹೆಚ್ಚುವರಿ ಶುಲ್ಕ ಎಂದು ನೀವು ಪರಿಗಣಿಸಬೇಕಾಗಿರುವ ಶುಲ್ಕಗಳ ಸಾಲಿಗೆ ಸೇರುತ್ತದೆ. ಗೃಹ ಸಾಲ ದೊರೆತ ಮೇಲೆ ನಿಮಗೆ ಮನೆ ಸಿಗುವುದು ವಿಳಂಬ ಆದರೆ, ಬ್ಯಾಂಕ್ ಗಳು ಪ್ರಿ-ಇಎಂಐ ಶುಲ್ಕ ವಿಧಿಸುತ್ತವೆ. ಈ ಪ್ರಿ-ಇಎಂಐ ನಲ್ಲಿ ನೀವು ಕೇವಲ ಬಡ್ಡಿ ಮಾತ್ರ ಪಾವತಿಸಬೇಕು.
ನಿಮಗೆ ಮನೆ ಸ್ವಾಧೀನ ಸಿಗೋವರೆಗೂ ಈ ಬಡ್ಡಿ ಪಾವತಿಸಬೇಕಾಗುತ್ತದೆ. ಮನೆ ಸ್ವಾಧೀನ ದೊರೆತ ಮೇಲೆ ಅಂದ್ರೆ ಪೊಸೆಷನ್ ಸಿಕ್ಕಿದ ಮೇಲೆ ಇಎಂಐ ಶುರು ಆಗುತ್ತದೆ. ಇದರಲ್ಲಿ ಬಡ್ಡಿ ಮತ್ತು ಪ್ರಿನ್ಸಿಪಲ್ ಮೊತ್ತ ಎರಡೂ ಸೇರಿರುತ್ತದೆ. ಗೃಹ ಸಾಲ ಪಡೆದ ಮೇಲೂ ಕೂಡ, ಈ ಶುಲ್ಕಗಳು ಒಂದಕ್ಕೊಂದು ಸೇರಿಕೊಳ್ಳುತ್ತಾ ಹೋಗುತ್ತವೆ. ನೀವು ಹೋಂ ಲೋನ್ ಇಎಂಐ ಪಾವತಿಸೋದನ್ನು ತಪ್ಪಿಸಿದರೆ ವಿಳಂಬ ಶುಲ್ಕ ಅಥವಾ ದಂಡ ಪಾವತಿಸಬೇಕಾಗುತ್ತದೆ. ಇದು ಬ್ಯಾಂಕ್ ನಿಂದ ಬ್ಯಾಂಕ್ ಗೆ ಭಿನ್ನವಾಗಿರುತ್ತದೆ.
ಸಾಮಾನ್ಯವಾಗಿ ಈ ದಂಡದ ಮೊತ್ತ ಎಷ್ಟು ಮೊತ್ತ ಪಾವತಿಸಬೇಕಿತ್ತೋ ಅಥವಾ ಔಟ್ ಸ್ಟ್ಯಾಂಡಿಂಗ್ ಅಮೌಂಟ್ ನ ಶೇಕಡ 1 ರಿಂದ 2 ರಷ್ಟಿರುತ್ತದೆ. ಇದಲ್ಲದೆ ನೀವು ಸ್ಟ್ಯಾಂಪ್ ಡ್ಯೂಟಿ ಮತ್ತು ರಿಜಿಸ್ಟ್ರೇಷನ್ ಚಾರ್ಜಸ್ ಅನ್ನ ಕೂಡ ಪಾವತಿಸಬೇಕಾಗುತ್ತದೆ. ಈ ಶುಲ್ಕಗಳು ದೇಶಾದ್ಯಂತ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಇದೆ. ನಿಮ್ಮ ಹೆಸರಿಗೆ ಆಸ್ತಿಯನ್ನ ವರ್ಗಾಯಿಸಿಕೊಳ್ಳಬೇಕಾದಾಗಲೂ ನೀವು ಈ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಇದು ಗಣನೀಯ ಮೊತ್ತವೇ ಆಗಿರುತ್ತದೆ. ಸಾಮಾನ್ಯವಾಗಿ ಈ ಶುಲ್ಕಗಳು ಗೃಹ ಸಾಲದಲ್ಲಿ ಸೇರಿರುವುದಿಲ್ಲ. ಅಂದರೆ ನಿಮ್ಮ ಜೇಬಿನಿಂದ ಇವುಗಳನ್ನ ನೀವು ಭರಿಸಬೇಕು.
ಈ ಶುಲ್ಕಗಳ ಮೇಲೆ ನೀವು ಜಿ ಎಸ್ ಟಿ ಕೂಡ ಪಾವತಿಸಬೇಕಾಗಬಹುದು. ಹೀಗಾಗಿ ಸಾಲ ತೆಗೆದುಕೊಳ್ಳುವುದಕ್ಕೂ ಮೊದಲು ಹಲವಾರು ಬ್ಯಾಂಕ್ ಗಳೊಂದಿಗೆ ಮಾತನಾಡಿ, ಅವುಗಳ ವಿಧಿಸುವ ಶುಲ್ಕದ ಬಗ್ಗೆ ಮಾಹಿತಿ ಕಲೆ ಹಾಕಿ. ನೀವು ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್ ಗೆ ಲೋನ್ ಟ್ರಾನ್ಸ್ ಫರ್ ಮಾಡಿಕೊಳ್ಳಬೇಕು ಎಂದಿದ್ದರೆ ಆಗ ಸಹ ಈ ಶುಲ್ಕಗಳನ್ನು ಪಾವತಿಸಬೇಕಾಗಬಹುದು. ಹೀಗಾಗಿ ಈ ಶುಲ್ಕಗಳ ಬಗ್ಗೆ ಮೊದಲು ಮಾಹಿತಿ ಪಡೆದುಕೊಳ್ಳಿ. ಬ್ಯಾಂಕ್ ಗಳೊಂದಿಗೆ ಸಂಧಾನ ಮಾಡಿದರೆ ನಿಮಗೆ ಪ್ರಾಸಸಿಂಗ್ ಶುಲ್ಕ ಮತ್ತು ಬಡ್ಡಿ ದರಗಳಲ್ಲಿ ರಿಯಾಯಿತಿ ಸಿಗುವ ಸಾಧ್ಯತೆ ಇರುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Karnataka SSLC Exam: ಇಂದಿನಿಂದ ಕರ್ನಾಟಕದಲ್ಲಿ SSLC ಪರೀಕ್ಷೆ; ವಿದ್ಯಾರ್ಥಿಗಳು ಈ ವಿಷಯ ದಿಳಿದೇ ಎಕ್ಸಾಂಗೆ ಹೋಗಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Renault Duster 2026: ಕಡಿಮೆ ಬೆಲೆಗೆ ಉತ್ತಮ ಕಾರು; 10.49 ಲಕ್ಷ ಬೆಲೆಯಲ್ಲಿ ಹೊಸ ರೆನಾಲ್ಟ್ ಡಸ್ಟರ್-ವಿಶೇಷತೆ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ



Click it and Unblock the Notifications