ಬೆಂಗಳೂರು, ಜುಲೈ 28: ಕುಟುಂಬದಲ್ಲಿ ಮಗುವೊಂದು ಜನಿಸಿದಾಗ ಮನೆಯ ಎಲ್ಲರ ಮುಖದಲ್ಲೂ ಖುಷಿ ಕಾಣಿಸುತ್ತದೆ. ಆದರೆ ನವಜಾತ ಶಿಶುವಿಗೆ ಅನಾರೋಗ್ಯ ಕಾಣಿಸಿಕೊಂಡರೆ ಅಷ್ಟೇ ವೇದನೆಯಾಗುತ್ತದೆ. ವಾರಗಳ ಕಾಲ ಮಗುವನ್ನು ಆಸ್ಪತ್ರೆಯಲ್ಲಿಟ್ಟು ಆರೈಕೆ ಮಾಡಬೇಕಾದ ಸ್ಥಿತಿ ಬರುತ್ತದೆ. ಆಸ್ಪತ್ರೆ ಬಿಲ್‌ಗೆ ಉಳಿತಾಯದ ಹಣವೆಲ್ಲ ಖಾಲಿಯಾಗಿ ಬಿಡುತ್ತದೆ. ಇಂಥಹ ಪರಿಸ್ಥಿತಿಯನ್ನು ಹಲವರು ಎದುರಿಸಿರಬಹುದು.
ಈಗಿನ ಕಾಲದಲ್ಲಿ ಎಲ್ಲರ ಬಳಿಯೂ ಹೆಲ್ತ್ ಇನ್ಶುರೆನ್ಸ್ ಇರುತ್ತದೆ. ನಿರ್ದಿಷ್ಟ ಅವಧಿಗೆ ಪ್ರೀಮಿಯಂ ಕಟ್ಟಿದರೆ ಪಾಲಿಸಿಗಳನ್ನು ಕಾಲಕಾಲಕ್ಕೆ ನವೀಕರಿಸಲಾಗುತ್ತದೆ. ಕುಟುಂಬಕ್ಕೆ ಹೊಸ ಸದಸ್ಯರು ಆಗಮಿಸಿದ ನಂತರ ನಿಮ್ಮ ಹೆಲ್ತ್ ಇನ್ಶುರೆನ್ಸ್ ಪಾಲಿಸಿ ರಿನ್ಯೂ ಮಾಡುವಾಗ, ನಿಮ್ಮ ಮಗುವಿನ ಆರೋಗ್ಯಕ್ಕೂ ಕವರೇಜ್ ಸೇರಿಸಿ. ಇದರಿಂದ, ಪ್ಯಾಮಿಲಿ ಫ್ಲೋಟರ್ ಪ್ಲಾನ್‌ನಲ್ಲಿ ಪ್ರೀಮಿಯಂ ಹೆಚ್ಚುತ್ತದೆ. ಆದರೆ ಇದು ತುಂಬಾ ಸರಳ ಪ್ರಕ್ರಿಯೆ.

ನಿಮ್ಮ ಬಳಿ ಗ್ರೂಪ್ ಹೆಲ್ತ್ ಇನ್ಶುರೆನ್ಸ್ ಪ್ಲಾನ್ ಇದ್ದರೆ, ಅದರಲ್ಲಿ ನಿಮ್ಮ ಮಗುವನ್ನೂ ಸೇರಿಸಬಹುದು. ಆರೋಗ್ಯ ವಿಮೆ ಕಂಪನಿಗಳು ಈಗ ಮಗುವಿಗೂ ಕವರೇಜ್ ನೀಡುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆದಿತ್ಯ ಬಿರ್ಲಾ ಆಕ್ಟಿವ್ ಅಶ್ಯೂರ್ ಡೈಮಂಡ್ ಪ್ಲಾನ್, ಬಜಾಜ್ ಅಲಾಯನ್ಸ್ ಹೆಲ್ತ್ ಗಾರ್ಡ್ ಪ್ಲಾನ್, ಭಾರ್ತಿ ಆಕ್ಸಾ ಹೆಲ್ತ್ ಅಡ್ವಾಂಟ್ ಎಡ್ಜ್ ಪ್ಲಾನ್ ಮತ್ತು ಕೇರ್ ಪ್ಲಸ್ ಹೆಲ್ತ್ ಇನ್ಶುರೆನ್ಸ್ ಪ್ಲಾನ್ ಇತ್ಯಾದಿ ಕೆಲವು ಪ್ಲಾನ್‌ಗಳು 1.5 ಲಕ್ಷ ರೂ. ಇಂದ 3 ಕೋಟಿ ರೂ.ವರೆಗೆ ಕವರೇಜ್ ಕೊಡುತ್ತವೆ.
ಈ ಪಾಲಿಸಿಗಳು ಏನನ್ನು ಕವರ್ ಮಾಡುತ್ತವೆ ಎಂದು ಈಗ ಅರ್ಥ ಮಾಡಿಕೊಳ್ಳೋಣ. 24 ಗಂಟೆಗಳಿಗೂ ಹೆಚ್ಚು ಸಮಯದವರೆಗೆ ಆಸ್ಪತ್ರೆಗೆ ಮಗುವನ್ನು ಅಡ್ಮಿಟ್ ಮಾಡಿದರೆ, ವೆಚ್ಚಗಳನ್ನು ವಿಮೆ ಪಾಲಿಸಿ ಕವರ್ ಮಾಡುತ್ತದೆ. ಇದರಲ್ಲಿ ಐಸಿಯು ಶುಲ್ಕಗಳು, ಔಷಧ, ಪರೀಕ್ಷೆಗಳು, ರೂಂ ರೆಂಟ್, ಬಾಡಿಗೆ, ನರ್ಸಿಂಗ್ ಚಾರ್ಜ್‌ಗಳು, ವೈದ್ಯರ ಫೀ ಮತ್ತು ಇತರೆಯೂ ಸೇರಿರುತ್ತವೆ. ಈ ಪಾಲಿಸಿಗಳು ಆಸ್ಪತ್ರೆಗೆ ದಾಖಲಾಗುವುದಕ್ಕೂ ಮೊದಲು ಮತ್ತು ನಂತರದ ವೆಚ್ಚಗಳನ್ನು ಕವರ್ ಮಾಡುತ್ತವೆ. ಅಂದರೆ, ಆಸ್ಪತ್ರೆಗೆ ದಾಖಲಾಗುವುದಕ್ಕೂ 60 ದಿನ ಮೊದಲು ಮತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ 180 ದಿನಗಳವರೆಗೆ ಆದ ಖರ್ಚುಗಳೂ ಕವರ್ ಆಗುತ್ತವೆ.
ಬಹುತೇಕ ಪಾಲಿಸಿಗಳಲ್ಲಿ, ಮಗುವಿನ ವ್ಯಾಕ್ಸಿನೇಶನ್ ಕೂಡಾ ಕವರ್ ಆಗುತ್ತದೆ. ಇದಕ್ಕೆ ಲಿಮಿಟ್ ಇರುತ್ತದೆ. ಸಾಮಾನ್ಯವಾಗಿ 2500 ರೂ.ವರೆಗೆ ಲಿಮಿಟ್ ಇರುತ್ತದೆ. ಅಂದರೆ, 2500 ರೂ.ವರೆಗೆ ಲಸಿಕೆ ವೆಚ್ಚವನ್ನು ವಿಮೆ ಕಂಪನಿ ರೀ ಎಂಬರ್ಸ್ ಮಾಡುತ್ತದೆ. ಅದಕ್ಕಿಂತ ಹೆಚ್ಚಾದರೆ ನೀವು ನಿಮ್ಮ ಜೇಬಿನಿಂದ ಕೊಡಬೇಕಾಗುತ್ತದೆ.
ಈಗಾಗಲೇ ಮೆಟರ್ನಿಟಿ ಪಾಲಿಸಿ ಇದ್ದರೆ, 90 ದಿನಗಳವರೆಗೆ ಮಗುವಿನ ಕವರೇಜ್ ಕೂಡಾ ಸೇರಿರುತ್ತದೆ. ನವಜಜಾತ ಶಿಶುಗಳಿಗೆ ಆರೋಗ್ಯ ವಿಮೆ ಕೊಡುವುದರಲ್ಲಿ ಹೆಚ್ಚು ರಿಸ್ಕ್ ಇರುತ್ತದೆ. ಹೀಗಾಗಿ, ಬಹುತೇಕ ಇನ್ಸುರೆನ್ಸ್ ಕಂಪನಿಗಳು 90 ದಿನಗಳ ನಂತರವೇ ಕವರೇಜ್ ಕೊಡುತ್ತವೆ. ಆದರೆ, ಮೆಟರ್ನಿಟಿ ಇನ್ಶುರೆನ್ಸ್‌ನಲ್ಲಿ, ಕೆಲವು ಪಾಲಿಸಿಗಳಲ್ಲಿ 90 ದಿನಗಳವರೆಗೆ ಮಗುವಿಗೆ ಕವರೇಜ್ ಇರುತ್ತದೆ. ಕೆಲವು ಕಂಪನಿಗಳು ಮಗು ಜನಿಸಿದಾಗಿನಿಂದಲೇ ಕವರೇಜ್ ಕೊಡಲು ಶುರು ಮಾಡುತ್ತವೆ. ಈ ಸನ್ನಿವೇಶದಲ್ಲಿ, ನಿಮಗೆ ಆರಿಸಿಕೊಳ್ಳುವುದಕ್ಕೆ ಹಲವು ಆಯ್ಕೆಗಳಿವೆ. ನಿಮಗೆ ಹೊಂದಿಕೆಯಾಗುವುದನ್ನು ನೀವು ಆರಿಸಿಕೊಳ್ಳಬಹುದು. ಆದರೆ, ಅಂತಿಮ ನಿರ್ಧಾರ ಮಾಡುವುದಕ್ಕೂ ಮೊದಲು, ನಿಮಗೆ ಯಾವುದು ಸೂಕ್ತ ಎಂದು ನಿರ್ಧಾರ ಮಾಡಲು ಎಚ್ಚರಿಕೆಯಿಂದ ಪರಿಶೀಲನೆ ಮಾಡಿ ಮತ್ತು ಹೋಲಿಕೆ ಮಾಡಿ ತಿಳಿದುಕೊಳ್ಳಿ.
ಶಿಶುಗಳಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಅವುಗಳಿಗೆ ರೋಗ ತಗಲುವ ಸಾಧ್ಯತೆ ಇರುತ್ತದೆ. ತಮ್ಮನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆ ಎಂದು ಅವುಗಳಿಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಆಕಸ್ಮಿಕ ಅಪಾಯವಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಈ ರಿಸ್ಕ್ ಅನ್ನು ಕವರ್ ಮಾಡಲು, ಮಕ್ಕಳಿಗೆ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದು ಅಗತ್ಯ. ನಿಮ್ಮ ಬಳಿ ಈಗಾಗಲೇ ಫ್ಯಾಮಿಲಿ ಫ್ಲೋಟರ್ ಹೆಲ್ತ್ ಪ್ಲಾನ್ ಇದ್ದರೆ, ಆ ಪ್ಲಾನ್‌ಗೆ ನಿಮ್ಮ ಮಗುವನ್ನು ಸೇರಿಸಿಕೊಳ್ಳಿ. ಇದರಿಂದ, ಪ್ರತ್ಯೇಕ ಪಾಲಿಸಿ ಖರೀದಿ ಮಾಡುವ ಅಗತ್ಯ ಇರುವುದಿಲ್ಲ. ಪ್ರೀಮಿಯಂ ಕೂಡಾ ಕೈಗೆಟಕುವ ದರದಲ್ಲಿ ಸಿಗುತ್ತದೆ.


Click it and Unblock the Notifications