ಬೆಂಗಳೂರು, ಜುಲೈ 13: ಬಾಡಿಗೆ (Rent) ಮನೆ ಹುಡುಕುವಾಗ ಹಲವಾರು ಸಂಗತಿಗಳು ನಮ್ಮ ಗಮನದಲ್ಲಿ ಇರಬೇಕು ಎನ್ನುವುದನ್ನು ತಿಳಿದುಕೊಂಡಿದ್ದೇವೆ. ಆದರೆ ಮನೆ ನಮ್ಮ ಬಜೆಟ್ ನಲ್ಲಿ ಅಂದರೆ ನಾವು ಎಣಿಸಿದ ಬಾಡಿಗೆ ಮೊತ್ತದಲ್ಲಿಯೂ ಸಿಗುವಂತಿರಬೇಕು.
ಮನೆ ಶಿಫ್ಟ್ ಮಾಡುವ ಕೆಲಸ ಒಂದು ತಲೆನೋವಾದರೆ ಬಜೆಟ್‌ನಲ್ಲಿ ನಮನೆ ಬೇಕಾದ ಮನೆ ಹುಡುಕುವುದು ಮತ್ತೊಂದು ಸಾಹಸ. ಹಾಗಿದ್ದರೆ ಇಷ್ಟು ಬಾಡಿಗೆ ಕೊಟ್ಟು ಬದುಕುವುದು ಹೇಗೆ? ಬಾಡಿಗೆಗೇ ಹೆಚ್ಚು ಖರ್ಚಾದರೆ ದೈನಂದಿನ ಜೀವನದ ಉಳಿದ ವೆಚ್ಚಕ್ಕೆ ಏನು ಮಾಡುವುದು?

ಕಳೆದ ಒಂದರಿಂದ ಒಂದೂವರೆ ವರ್ಷದಲ್ಲಿಬಾಡಿಗೆ ದರ ಬಹಳಷ್ಟು ಏರಿಕೆಯಾಗಿದೆ. ಇದು ಬರಿ ದೊಡ್ಡ ನಗರಗಳಿಗಷ್ಟೇ ಸೀಮಿತವಲ್ಲ. ಇಡೀ ದೇಶದಲ್ಲಿ ಬಾಡಿಗೆ ದರ ಹೆಚ್ಚಳವಾಗುತ್ತಿದೆ. ಸಣ್ಣ ನಗರವಿರಲಿ, ದೊಡ್ಡ ನಗರವೇ ಇರಲಿ. ಬಾಡಿಗೆ ಏರಿಕೆ ಆಗುತ್ತಲೇ ಇದೆ. ಬಾಡಿಗೆಗೆ ನೀವು ಅತಿಯಾಗಿ ವೆಚ್ಚ ಮಾಡಿದರೆ ನಿಮ್ಮ ಒಟ್ಟಾರೆ ಹಣಕಾಸಿನ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಬಹುದು. ಹೀಗಾಗಿ, ಇಂಥ ಸಮಸ್ಯೆಯಿಂದ ನೀವು ಬಚಾವಾಗಲು, ನಿಮ್ಮ ಸಂಬಳದಲ್ಲಿ ಎಷ್ಟು ಹಣವನ್ನು ಬಾಡಿಗೆಗೆ ಬಳಸಬೇಕು ಎಂದು ನೀವು ತಿಳಿದುಕೊಂಡಿರಬೇಕು.
ಬಾಡಿಗೆಗೆ ಎಷ್ಟು ಹಣವನ್ನು ಸಂಬಳದಿಂದ ಪೇ ಮಾಡಬೇಕು? ಇದನ್ನು ಒಂದು ಲೆಕ್ಕಾಚಾರ ಬಳಸಿ ಅರ್ಥ ಮಾಡಿಕೊಳ್ಳೋಣ. ತಿಂಗಳ ಸಂಬಳ 60,000 ರೂ. ಆಗಿದ್ದರೆ, ಬಾಡಿಗೆ ಹಣ 30% ಕ್ಕಿಂತ ಅಂದರೆ, 18000 ರೂ. ಗಿಂತ ಹೆಚ್ಚಿರಬಾರದು. ಇದರಲ್ಲಿ ಮನೆ ಬಾಡಿಗೆ ಹಣ, ಮೇಂಟೆನೆನ್ಸ್, ಕರೆಂಟ್ ಮತ್ತು ವಾಟರ್ ಬಿಲ್ ಎಲ್ಲವೂ ಸೇರಿರಬೇಕು. ಇದಕ್ಕೂ ಹೆಚ್ಚು ಬಾಡಿಗೆ ಕೊಡುತ್ತಿದ್ದೀರಿ ಎಂದಾದರೆ, ಇತರ ವೆಚ್ಚಗಳನ್ನು ನೀವು ಕಡಿಮೆ ಮಾಡುತ್ತಿದ್ದೀರಿ ಅಥವಾ ನಿಮ್ಮ ಹಣಕಾಸಿನ ಗುರಿಗಳಲ್ಲಿ ರಾಜಿ ಮಾಡಿಕೊಳ್ಳುತ್ತಿದ್ದೀರಿ ಎಂದರ್ಥ.
ಯಾಕೆಂದರೆ, ನಿಮ್ಮ ಸಂಬಳದ ದೊಡ್ಡ ಮೊತ್ತ ನಿಮ್ಮ ಬಾಡಿಗೆಗೆ ಹೋಗಿರುತ್ತದೆ. ಅದರಿಂದಾಗಿ, ಮನೆ ಖರೀದಿ ಮಾಡುವುದು, ಮಕ್ಕಳ ಶಿಕ್ಷಣ ಅಥವಾ ನಿಮ್ಮ ನಿವೃತ್ತಿ ಯೋಜನೆಗೆಲ್ಲ ಸಾಕಷ್ಟು ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ವಿಪರೀತ ಬಾಡಿಗೆ ಕಟ್ಟುವುದರಿಂದ ನಿಮ್ಮ ಭವಿಷ್ಯದ ಹಣಕಾಸು ಪ್ಲಾನಿಂಗ್‌ಗೆ ಹೊಡೆತ ಬೀಳುತ್ತದೆ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ. ಹೀಗಾಗಿ, ನಿಮ್ಮ ಒಟ್ಟು ಬಾಡಿಗೆ ವೆಚ್ಚವನ್ನು 30% ರೇಂಜ್‌ನಲ್ಲಿ ಇಟ್ಟುಕೊಳ್ಳುವುದು ಉತ್ತಮ.
ಬಾಡಿಗೆ ಮನೆ ಆಯ್ಕೆ ಮಾಡುವಾಗ ಮೊದಲು ನೀವು ಯಾವ ಪ್ರದೇಶದಲ್ಲಿ ವಾಸಿಸುವುದಕ್ಕೆ ಬಯಸುತ್ತೀರಿ ಎಂಬುದನ್ನು ನಿರ್ಧಾರ ಮಾಡಿಕೊಳ್ಳಿ. ಆ ಸ್ಥಳದಲ್ಲಿ ಭದ್ರತೆ ಇದೆಯೇ, ಮನೆಯಿಂದ ನಿಮ್ಮ ಕಚೇರಿಗೆ ಎಷ್ಟು ದೂರ ಎಂಬುದನ್ನೆಲ್ಲ ನೋಡಿಕೊಳ್ಳಿ. ನಿಮ್ಮ ಬಜೆಟ್‌ನಲ್ಲಿ ನಿಮಗೆ ಒಂದು ಒಳ್ಳೆಯ ಮನೆ ಸಿಕ್ಕಿತು ಅಂತಾದರೂ, ಕಚೇರಿಯಿಂದ ದೂರವಿದ್ದರೆ ನಿಮಗೆ ಅದು ತುಟ್ಟಿಯಾದೀತು. ಯಾಕೆಂದರೆ, ಮನೆಯಿಂದ ಕಚೇರಿಗೆ ಓಡಾಡುವುದಕ್ಕೆ ನೀವು ಹೆಚ್ಚು ಖರ್ಚು ಮಾಡಬೇಕಾಗುತ್ತದೆ ಮತ್ತು ಸಮಯವೂ ಹಾಳಾಗುತ್ತದೆ. ಸ್ವಲ್ಪ ತುಟ್ಟಿಯಾದರೂ ಅಥವಾ ಸಣ್ಣದಾದರೂ ನಿಮ್ಮ ಕಚೇರಿಗೆ ಸಮೀಪದಲ್ಲಿರುವ ಮನೆ ಆರಿಸಿಕೊಳ್ಳಿ. ಇದೇ ಉತ್ತಮ ಆಯ್ಕೆ.
ವೇತನ ನಾವು ಅಂದುಕೊಂಡ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದಿಲ್ಲ. ಇದು ನಿಮ್ಮ ಬಾಡಿಗೆ ಹೆಚ್ಚಾಗುತ್ತದೆ. ಭವಿಷ್ಯದ ಉಳಿತಾಯ ಮತ್ತು ಹೂಡಿಕೆಯ ಮೇಲೆ ಪರಿಣಾಮ ಬೀರುತ್ತದೆ. ಬಾಡಿಗೆ ಹೊರೆ ಕಡಿಮೆ ಮಾಡಿಕೊಳ್ಳಲು ನೀವು ಸ್ನೇಹಿತರನ್ನೂ ಮನೆಯಲ್ಲಿ ಸೇರಿಸಿಕೊಳ್ಳುವುದು ಉತ್ತಮ. ಬಾಡಿಗೆ ಮನೆಯಲ್ಲಿ ಐಷಾರಾಮಿಯಾಗಿ ಯಾರಾದರೂ ಜೀವನ ನಡೆಸುತ್ತಿದ್ದಾರೆ ಎಂದುಕೊಂಡು ನೀವೂ ಅವರನ್ನು ಅನುಸರಿಸಲು ಶುರು ಮಾಡಬೇಡಿ. ಇದು ನಿಮಗೆ ಭವಿಷ್ಯದಲ್ಲಿ ಅಪಾಯವನ್ನು ತಂದೊಡ್ಡಬಹುದು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications