ವೃತ್ತಿ ಜೀವನದಲ್ಲಿ ಕಳೆದು ಹೋಗಿರುವ ಬಹುತೇಕ ಮಂದಿಯ ಕನಸು ಒಂದೇ..ಕಡಲತೀರದ ಹತ್ತಿರ ಕುಳಿತು, ಹಸಿರು ಗಾಳಿ ಸವಿಯುತ್ತಾ, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವ ಜೀವನ ಬೇಕು ಅನ್ನೋದು. ಇಂತಹ ಕನಸನ್ನು ನಿಜವಾಗಿಸಿಕೊಳ್ಳಲು ಈಗ ಉತ್ತಮ ಅವಕಾಶ ಬಂದಿದೆ. ರಿಷಸ್ ಎಂಬ ಸುಂದರ ದ್ವೀಪ ರಾಷ್ಟ್ರವು ಈಗ ಪ್ರೀಮಿಯಂ ವೀಸಾ ಎಂಬ ಹೊಸ ಯೋಜನೆಯ ಮೂಲಕ ವಿದೇಶಿಗಳಿಗೂ, ಭಾರತೀಯರಿಗೂ 6 ತಿಂಗಳಿಂದ 1 ವರ್ಷವರೆಗೆ ಅಲ್ಲಿಯೇ ವಾಸಿಸಲು ಅವಕಾಶ ನೀಡುತ್ತಿದೆ. ಇದು ಪ್ರವಾಸಕ್ಕಷ್ಟೆ ಅಲ್ಲ, ಕೆಲಸ ಮಾಡಿಕೊಳ್ಳಲು ಸಹ ಅವಕಾಶ ನೀಡುತ್ತದೆ.

ಮಾರಿಷಸ್ ಎಂದರೇನು?
ಮಾರಿಷಸ್ ಒಂದು ಸಣ್ಣ ದ್ವೀಪ ರಾಷ್ಟ್ರ. ಇಲ್ಲಿ ನೀಲಿ ಬಣ್ಣದ ಸಮುದ್ರ, ಬಿಳಿ ಮರಳಿನ ಕಡಲತೀರ, ಹಸಿರು ಬೆಟ್ಟಗಳು ಮತ್ತು ಪ್ರಾಕೃತಿಕ ಸೌಂದರ್ಯ ಎಲ್ಲವೂ ಇದೆ. ಅಲ್ಲಿ ತಿಂಗಳುಗಳು ಕಳೆದರೂ ನಿನ್ನಗೆ ಒತ್ತಡ ಅನ್ನಿಸದು. ಇಂತಹ ಜಾಗದಲ್ಲಿ ಕೆಲಸ ಮಾಡುವುದು ಎಷ್ಟು ಸಂತೋಷದ ವಿಷಯವಲ್ಲ.
ಈ ವೀಸಾ ಎಂಥದ್ದು?
ಪ್ರೀಮಿಯಂ ಟ್ರಾವೆಲ್ ವೀಸಾ ಎಂಬುದು ಮಾರಿಷಸ್ ಸರ್ಕಾರ ನೀಡುತ್ತಿರುವ ಉಚಿತ ವೀಸಾ. ಇದರ ಮೂಲಕ ನೀವು. 6 ತಿಂಗಳು ಅಲ್ಲಿಯೇ ವಾಸಿಸಬಹುದು. ಅಗತ್ಯವಿದ್ದರೆ, ಅದನ್ನು ಇನ್ನೂ 6 ತಿಂಗಳು ವಿಸ್ತರಿಸಬಹುದು. ಒಟ್ಟು 1 ವರ್ಷವರೆಗೆ ಕೆಲಸ ಹಾಗೂ ವಾಸ ಸಾಧ್ಯ. ಇದು ಸಂಪೂರ್ಣ ಉಚಿತ. ಅರ್ಜಿ ಹಾಕಲು ನೀವು ಯಾವ ಶುಲ್ಕವನ್ನೂ ಪಾವತಿಸಬೇಕಿಲ್ಲ.
ಯಾರು ಈ ವೀಸಾ ಪಡೆಯಬಹುದು?
- ಲ್ಯಾಪ್‌ಟಾಪ್ ಮೂಲಕ ದೂರದಿಂದ ಕೆಲಸ ಮಾಡುವವರು
- ಫ್ರೀಲಾನ್ಸರ್‌ಗಳು
- ನಿವೃತ್ತರಾದವರು
- ಮಕ್ಕಳೊಂದಿಗೆ ವಾಸಿಸಲು ಬಯಸುವ ಕುಟುಂಬಗಳು
- ವಿದೇಶಗಳಲ್ಲಿ ಉದ್ಯಮ ಹೊಂದಿರುವವರು
ಅರ್ಜಿ ಹಾಕಲು ಬೇಕಾಗುವ ದಾಖಲೆಗಳು:
- ನಿಮ್ಮ ಪಾಸ್‌ಪೋರ್ಟ್
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ಮಾರಿಷಸ್‌ನಲ್ಲಿ ವಾಸಿಸಲು ನಿಮ್ಮ ವ್ಯವಸ್ಥೆ (ಹೋಟೆಲ್ ಬುಕ್ಕಿಂಗ್ ಅಥವಾ ಬಾಡಿಗೆ ಮನೆ)
- ತಿಂಗಳಿಗೆ ಕನಿಷ್ಠ USD 1500 ಆದಾಯದ ಪುರಾವೆ
- ಜೊತೆಗೆ ನಿಮ್ಮ ಮಕ್ಕಳಿಗೆ ಅಥವಾ ಕುಟುಂಬದವರಿಗೆ USD 500 ಪ್ರತಿಯೊಬ್ಬರಿಗಾಗಿ ಪೂರಕ ಹಣದ ಪುರಾವೆ
- ನೀವು ಭಾರತದಲ್ಲಿದ್ದರೂ ಆದಾಯ ಹೊರಗಿನಿಂದ ಬರುತ್ತಿರುವುದನ್ನು ತೋರಿಸಬೇಕು
- ಆರೋಗ್ಯ ಹಾಗೂ ಪ್ರಯಾಣ ವಿಮೆ
- ಹಿಂತಿರುಗುವ ಅಥವಾ ಮುಂದಿನ ಪ್ರಯಾಣದ ಟಿಕೆಟ್ ವಿವರ
ಅರ್ಜಿ ಸಲ್ಲಿಸುವುದು ಹೇಗೆ?
- ಈ ವೆಬ್‌ಸೈಟ್‌ಗೆ ಹೋಗಿ: https://residency.mu/live/mauritius-premium-visa/
- "Apply Now" ಕ್ಲಿಕ್ ಮಾಡಿ
- ಆನ್‌ಲೈನ್ ಫಾರ್ಮ್ ಭರ್ತಿ ಮಾಡಿ
- ಮೇಲ್ಕಂಡ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಅರ್ಜಿ ಸಲ್ಲಿಸಿ
- ಕೆಲವು ದಿನಗಳಲ್ಲಿ ನಿಮ್ಮ ಇಮೇಲ್‌ಗೆ ಉತ್ತರ ಬರುತ್ತದೆ
ಭಾರತೀಯರಿಗೆ ಈ ಅವಕಾಶ ಏಕೆ ವಿಶೇಷ?
- ಭಾರತದಿಂದ ಮಾರಿಷಸ್‌ಗೆ ಪ್ರಯಾಣ ಮಾಡುವುದು ಸುಲಭವಾಗಿದೆ.
- ಊಟ, ವಸತಿ ಎಲ್ಲವೂ ಅಷ್ಟೆ ಹೆಚ್ಚು ಖರ್ಚಾಗುವುದಿಲ್ಲ.
- ಭಾರತೀಯ ಆಹಾರ ಸಹ ಸಿಗುತ್ತದೆ.
- ಜೀವನ ಶೈಲಿ ಹೆಚ್ಚು ಶಾಂತ ಮತ್ತು ನೈಸರ್ಗಿಕ.
- ಅರ್ಜಿ ಶುಲ್ಕವಿಲ್ಲ, ನಿಮ್ಮ ಆದಾಯ ಇರುವಷ್ಟು ಸಾಕು.
ಈ ವೀಸಾ ಯಾರಿಗೆ ಉಪಯುಕ್ತ?
- IT ಉದ್ಯೋಗಿಗಳು, ವಾರ್ಕ್ ಫ್ರಮ್ ಹೋಮ್ ಮಾಡುವವರು
- ಬರಹಗಾರರು, ಡಿಜಿಟಲ್ ಕ್ರಿಯೇಟರ್‌ಗಳು
- ಫೋಟೋಗ್ರಾಫರ್‌ಗಳು, ಯೂಟ್ಯೂಬರ್‌ಗಳು
- ಕುಟುಂಬದೊಂದಿಗೆ ಕೆಲವು ತಿಂಗಳು ಬದಲಾಗಿದ ಜೀವನ ಅನುಭವಿಸಬೇಕೆಂದು ಬಯಸುವವರು
ಮಾರಿಷಸ್ ಪ್ರೀಮಿಯಂ ವೀಸಾ ಇಂದಿನ ಪೀಳಿಗೆಗೆ ಪೂರಕವಾದ ಅವಕಾಶ. ಕೆಲಸ, ಪ್ರವಾಸ, ವಿಶ್ರಾಂತಿ ಎಲ್ಲವನ್ನೂ ಒಂದೇ ಸಮಯದಲ್ಲಿ ಅನುಭವಿಸಬಹುದು. ನಿಮಗೆ ಸಹ ಇಂಥದೇ ಕನಸು ಇದ್ರೆ, ಈಗಲೇ ಅರ್ಜಿ ಹಾಕಿ.
(ಹಕ್ಕು ನಿರಾಕರಣೆ: ಈ ಲೇಖನವು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದು ಅಮೂಲ್ಯವಾದ ಲೋಹದ ಉತ್ಪನ್ನಗಳು, ಸರಕುಗಳು, ಭದ್ರತೆಗಳು ಅಥವಾ ಇತರ ಹಣಕಾಸು ಸಾಧನಗಳನ್ನು ಖರೀದಿಸಲು, ಮಾರಾಟ ಮಾಡಲು ವಿನಂತಿಯಲ್ಲ. ಗ್ರೇನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಅದರ ಅಂಗಸಂಸ್ಥೆಗಳು, ಸಹವರ್ತಿಗಳು ಮತ್ತು ಈ ಲೇಖನದ ಲೇಖಕರು ಈ ಲೇಖನದಲ್ಲಿನ ಮಾಹಿತಿಯ ಆಧಾರದ ಮೇಲೆ ಉಂಟಾಗುವ ನಷ್ಟಗಳು ಮತ್ತು/ಅಥವಾ ಹಾನಿಗಳಿಗೆ ಹೊಣೆಗಾರರಾಗಿಲ್ಲ.)


Click it and Unblock the Notifications