ಬೆಂಗಳೂರು, ಜುಲೈ 3: ನಮ್ಮ ಆರೋಗ್ಯ ಸರಿ ಇಲ್ಲಿದ್ದಾಗ ಯಾವ ರೀತಿ ವೈದ್ಯರ ಬಳಿ ತೆರಳುತ್ತೆವೆಯೋ ಅದೆ ರೀತಿ ಹಣಕಾಸು ಆರೋಗ್ಯ ಸರಿ ಇಲ್ಲದಿದ್ದಾಗ ಹಣಕಾಸು ಪರಿಣಿತರ ಸಹಕಾರವನ್ನು ಪಡೆದುಕೊಳ್ಳಬೇಕಾಗುತ್ತದೆ. ಇಲ್ಲವಾದರೆ ನಷ್ಟದ ಪ್ರಮಾಣ ಏರುತ್ತಲೇ ಹೋಗುತ್ತದೆ.
ಹೂಡಿಕೆಯಲ್ಲೂ ಅನಿಶ್ಚಿತತೆ ಮತ್ತು ರಿಸ್ಕ್ ಇರುತ್ತದೆ. ಮಾರ್ಕೆಟ್ ಮತ್ತು ನಿಮ್ಮ ಹೂಡಿಕೆಗಳ ಸೂಕ್ಷ್ಮ ಸಂಗತಿಗಳು ನಿಮಗೆ ಅರ್ಥವಾಗದಿದ್ದರೆ, ಇತರರು ಏನು ಹೇಳುತ್ತಾರೆ ಎಂಬುದನ್ನೇ ನೀವು ನಂಬುವ ಪರಿಸ್ಥಿತಿ ಬರುತ್ತದೆ. ಉಚಿತ, ಅನಗತ್ಯ ಹಣಕಾಸು ಸಲಹೆಯನ್ನು ಕೊಡುವವರಿಗೇನೂ ಕಡಿಮೆ ಇಲ್ಲ. ಇದರಿಂದ ನಿಮ್ಮ ಹೂಡಿಕೆ ಪೂರ್ತಿ ನಷ್ಟವಾಗುವುದಲ್ಲದೆ, ಇನ್ನಷ್ಟು ಹೂಡಿಕೆ ಮಾಡುವುದಕ್ಕೆ ಅಡ್ಡಿಯೂ ಆಗುತ್ತದೆ. ಇದೇ ಕಾರಣಕ್ಕೆ ಸರಿಯಾದ ಫೈನಾನ್ಷಿಯಲ್ ಪ್ಲಾನರ್ ಅನ್ನು ಆಯ್ಕೆ ಮಾಡೋದು ತುಂಬಾ ಮುಖ್ಯವಾಗುತ್ತದೆ. ಆದರೆ, ಸರಿಯಾದ ಪ್ಲಾನ್ ಮಾಡೋದಕ್ಕೆ ನೀವು ಏನನ್ನು ಪರಿಗಣಿಸಬೇಕು? ಎನ್ನುವುದನ್ನು ತಿಳಿದುಕೊಳ್ಳಬೇಕು.

ಫೈನಾನ್ಷಿಯಲ್ ಪ್ಲಾನರ್ ಸೇವೆಯನ್ನು ಪಡೆಯೋದಕ್ಕೆ ನೀವು ನಿರ್ಧಾರ ಮಾಡಿದಾಗ, ನಿಮ್ಮ ಹಣಕಾಸು ಗುರಿಗಳು ಅವರ ಮೇಲೆ ಆಧರಿಸಿರುತ್ತದೆ. ಹೀಗಾಗಿ, ಪ್ಲಾನರ್ ಆಯ್ಕೆಮಾಡುವುದಕ್ಕೂ ಮೊದಲು, ನಿಮ್ಮ ಹೋಮ್‌ವರ್ಕ್ ಮಾಡಿಕೊಳ್ಳಬೇಕು. ಮೊದಲನೆಯದಾಗಿ, ನೀವು ಆಯ್ಕೆ ಮಾಡುವ ಫೈನಾನ್ಷಿಯಲ್ ಪ್ಲಾನರ್ ಸಾಮರ್ಥ್ಯ ಮತ್ತು ಶೈಕ್ಷಣಿಕ ಅರ್ಹತೆಗಳನ್ನು ಅರ್ಥ ಮಾಡಿಕೊಳ್ಳಿ. ನಂತರ, ಸೆಬಿಯಲ್ಲಿ ಅವರು ರಿಜಿಸ್ಟರ್ ಮಾಡಿಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂದು ನೋಡಿ.
ಅದಾದ ಮೇಲೆ ಅವರ ಅನುಭವ ಎಷ್ಟು ಎಂದು ನೋಡಿ. ಆಮೇಲೆ, ಅವರು ಯಾವ ವಲಯದಲ್ಲಿ ಪರಿಣಿತಿ ಹೊಂದಿದ್ದಾರೆ ಎಂದು ನೋಡಿ. ಕೆಲವು ಫೈನಾನ್ಷಿಯಲ್ ಪ್ಲಾನರ್‌ಗಳು ಹೈ ನೆಟ್ ವರ್ತ್ ಇರುವ ವ್ಯಕ್ತಿಗಳಿಗೆ ಮಾತ್ರ ಸೇವೆ ಸಲ್ಲಿಸುತ್ತಾರೆ. ವೈದ್ಯರ ಸೇವೆ ಪಡೆಯುವಾಗ ಅವರ ಪದವಿಯನ್ನಷ್ಟೇ ನಾವು ನೋಡುವುದಿಲ್ಲ. ಆದರೆ, ಅವರ ಟ್ರ್ಯಾಕ್ ರೆಕಾರ್ಡ್ ಅನ್ನೂ ನೋಡುತ್ತೇವೆ. ಹೀಗಾಗಿ, ಫೈನಾನ್ಷಿಯಲ್ ಪ್ಲಾನರ್ ಹಿಂದಿನ ಪರ್ಫಾರ್ಮೆನ್ಸ್ ನೋಡಬೇಕಾಗುತ್ತದೆ. ಪರಿಚಿತರಿಂದ ಫೈನಾನ್ಷಿಯಲ್ ಪ್ಲಾನರ್ ಬಗ್ಗೆ ರೆಫರೆನ್ಸ್ ಪಡೆದುಕೊಳ್ಳುವುದು ಒಂದು ಒಳ್ಳೆಯ ಆರಂಭಿಕ ಹಂತವಾಗಬಹುದು. ಹಾಗೆಯೇ ಅವರು ಎಷ್ಟು ಫೀ ಚಾರ್ಜ್ ಮಾಡುತ್ತಾರೆ ಎಂಬುದನ್ನೂ ಲೆಕ್ಕ ಹಾಕಿಕೊಳ್ಳಬೇಕಾಗುತ್ತದೆ.
ಕಾರ್ಪೊರೇಟ್ ಸೆಕ್ಟರ್‌ನಲ್ಲಿ ಕೆಲಸ ಮಾಡುವ ಅಥವಾ ಸ್ಟಾಕ್ ಟಿಪ್ಸ್ ನೀಡುವ ಫೈನಾನ್ಷಿಯಲ್ ಪ್ಲಾನರ್‌ಗಳನ್ನು ಹೊರತುಪಡಿಸಿದರೆ, ಹೂಡಿಕೆ ಸಲಹೆ ನೀಡುವ ಕೇವಲ 700 ಸ್ವತಂತ್ರ ಸಲಹೆಗಾರರು ನಮಗೆ ಸಿಗುತ್ತಾರೆ. ಅಂದರೆ, 140 ಕೋಟಿ ಜನರಿಗೆ ಲೆಕ್ಕ ಹಾಕಿದರೆ, 20 ಲಕ್ಷ ಜನರಿಗೆ ಒಬ್ಬ ಹಣಕಾಸು ಸಲಹೆಗಾರ ಇದ್ದಾರೆ!
ನಂತರ, ಅವರ ಹೂಡಿಕೆ ವಿಧಾನದ ಬಗ್ಗೆ ಚರ್ಚೆ ನಡೆಸಿ ಮತ್ತು ಅದು ನಿಮ್ಮ ರೀತಿ ನೀತಿಗೆ ಹೊಂದುತ್ತದೆಯೇ ಎಂದು ನಿರ್ಧಾರ ಮಾಡಿ. ಅಲ್ಲದೆ, ಅವರ ಈ ಹಿಂದಿನ ಕೆಲವು ಕ್ಲೈಂಟ್‌ಗಳ ಜೊತೆಗೂ ಮಾತನಾಡಿ. ನಿಮಗೆ ಮನವರಿಕೆ ಆದ ನಂತರವೇ ಅಂತಿಮ ನಿರ್ಧಾರ ಮಾಡಿ.
ಒಟ್ಟಿಬನಲ್ಲಿ ಫೈನಾನ್ಷಿಯಲ್ ಪ್ಲಾನರ್ ಆಯ್ಕೆ ಮಾಡುವುದಕ್ಕೂ ಮೊದಲು ನಿಮ್ಮದೇ ಹೋಮ್‌ವರ್ಕ್ ಮಾಡಿಕೊಳ್ಳ. ಒಂದಿಷ್ಟು ಆರಂಭಿಕ ಸಂಶೋಧನೆ ಮಾಡಿಕೊಂಡ ನಂತರವೇ ಹೂಡಿಕೆಯ ಕಡೆ ಹೆಜ್ಜೆ ಇಡಿ.


Click it and Unblock the Notifications