ನೀವೇನಾದ್ರೂ ಬ್ಯಾಂಕ್ ಅಕೌಂಟ್ ಕ್ಲೋಸ್ ಮಾಡ್ಬೇಕು ಅಂದುಕೊಂಡಿದ್ದೀರ? ಇತ್ತೀಚಗೆ ಜಾಗ ಚೇಂಜ್ ಮಾಡಿದ್ದೀರ? ಹಳೇ ಬ್ಯಾಂಕ್ ಬ್ರಾಂಚ್‌ಗೂ ನೀವಿರೋ ನಗರಕ್ಕೂ ತುಂಬಾ ದೂರ ಇದ್ದೀರ? ಹಾಗಾದ್ರೆ ನೀವು ಬ್ಯಾಂಕ್ ಖಾತೆಯನ್ನ ಕ್ಲೋಸ್ ಮಾಡ್ಲೇಬೇಕು ತಾನೆ. ಅದು ಹೇಗೆ ಅನ್ನೋದು ಗೊತ್ತಿಲ್ವಾ?

ಹೌದು, ಕೆಲವೊಮ್ಮೆ ಬ್ಯಾಂಕ್ ಖಾತೆ ಹಾಗೇ ಉಳಿಸಿದರೆ ಉಳಿತಾಯ ಖಾತೆಗಳು ನಿಷ್ಕ್ರಿಯವಾಗಬೋದು. ಅಥವಾ ಸಾಮಾನ್ಯ ಉಳಿತಾಯ ಖಾತೆ ರೂಪಾಂತರವಾಗಲೂಬೋದು. ಹೀಗಾಗಿ ಖಾತೆ ಕ್ಲೋಸ್ ಮಾಡೋದನ್ನ ಯಾವುದೇ ಕಾರಣಕ್ಕೂ ಮರಿಯಬಾರದು. ಯಾಕಂದ್ರೆ ನೀವು ಬಳಕೆ ಮಾಡದ ಬ್ಯಾಂಕ್ ಖಾತೆಗಳು ಹಾಗೇ ಇದ್ರೆ ಮುಂದೊಂದು ದಿನ ಅನಗತ್ಯ ಶುಲ್ಕ ಬೀಳಬಹುದು. ಇದರಿಂದ ತೊಂದರೆ ಉಂಟಾಗಬಹುದು. ಹೀಗಾಗಿ ಕೂಡಲೇ ನಿಮ್ಮ ಸೇವಿಂಗ್ಸ್ ಅಕೌಂಟ್‌ನ ಹೇಗೆ ಕ್ಲೋಸ್ ಮಾಡೋದು ಎಂದು ತಿಳಿಯಿರಿ. ಅದಕ್ಕೂ ಮುನ್ನ ಬೇಕಾದ ದಾಖಲೆಗಳನ್ನ ಸಿದ್ಧಪಡಿಸಿಕೊಳ್ಳಿ.
ಬ್ಯಾಂಕ್ ಅಕೌಂಟ್ ಕ್ಲೋಸ್ ಮಾಡಲು ಬೇಕಾದ ದಾಖಲೆಗಳು:
1. ಭರ್ತಿ ಮಾಡಿದ ಖಾತೆ ಮುಕ್ತಾಯ ಫಾರ್ಮ್
2. ಬ್ಯಾಂಕ್ ಖಾತೆ ಮುಚ್ಚಲು ಲಿಖಿತ ವಿನಂತಿ ಪತ್ರ
3. ಮಾನ್ಯ ಗುರುತಿನ ಚೀಟಿ (ಆಧಾರ್, ಪ್ಯಾನ್ ಇತ್ಯಾದಿ)
4. ಯಾವುದೇ ಬಳಕೆಯಲ್ಲದ ಚೆಕ್ ಎಲೆಗಳು ಮತ್ತು ಡೆಬಿಟ್ ಕಾರ್ಡ್
5. ಪಾಸ್ಬುಕ್ ಸಲ್ಲಿಕೆ
ಬ್ಯಾಂಕ್ ನಿಮ್ಮ ವಿನಂತಿಯನ್ನು ಪರಿಶೀಲಿಸಿ, ಉಳಿದ ಹಣವನ್ನು ನೀವು ಆಯ್ಕೆ ಮಾಡಿದ ರೀತಿಯಲ್ಲಿ (ನಗದು, ಚೆಕ್ ಅಥವಾ ಬೇರೆ ಖಾತೆಗೆ ವರ್ಗಾವಣೆ) ಮರುಪಾವತಿಸುತ್ತದೆ.
ಯಾವ ಶಾಖೆಯಿಂದ ಬೇಕಾದ್ರೂ ಮುಚ್ಚಬಹುದೇ?
ಹೆಚ್ಚಿನ ಜನರಿಗೆ ಇರುವ ಸಾಮಾನ್ಯ ಪ್ರಶ್ನೆ ಹಾಗೂ ಗೊಂದಲ ಏನು ಅಂದ್ರೆ, ನಾವು ಯಾವಾಗ ಬೇಕಾದ್ರೂ ನಮ್ಮ ಸೇವಿಂಗ್ಸ್ ಅಕೌಂಟ್ ಕ್ಲೋಸ್ ಮಾಡಬಹುದಾ ಎಂದು. ಇದಕ್ಕೆ ಉತ್ತರ ಹೌದು..ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಯಾವ ಶಾಖೆಗೆ ಹೋಗಿ ಬೇಕಾದ್ರೂ ಕ್ಲೋಸ್ ಮಾಡಿಸಬಹುದು. ಆದರೆ ಲಾಕರ್ ಲಿಂಕ್ ಇದ್ದರೆ ಸಂಬಂಧಿಸಿದ ಔಪಚಾರಿಕತೆಗಳನ್ನು ಮುಗಿಸಿ ಹೋಮ್ ಶಾಖೆಗೆ ಭೇಟಿ ನೀಡಬೇಕು. ನೀವು ಬೇರೆ ನಗರಕ್ಕೆ ಸ್ಥಳಾಂತರಗೊಂಡಿದ್ದರೆ, ಖಾತೆಯನ್ನು ನಿಮ್ಮ ವಾಸಸ್ಥಳದ ಶಾಖೆಗೆ ವರ್ಗಾಯಿಸಿ ನಂತರ ಮುಚ್ಚಬಹುದು.
ನಿಷ್ಕ್ರಿಯ ಖಾತೆ ಎಂದರೇನು?
ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ, ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಗ್ರಾಹಕ ಚಟುವಟಿಕೆ ಇಲ್ಲದ ಖಾತೆಯನ್ನು ನಿಷ್ಕ್ರಿಯ ಎಂದು ಪರಿಗಣಿಸಲಾಗುತ್ತದೆ. ಬ್ಯಾಂಕುಗಳು ಈ ಖಾತೆಗಳನ್ನು ವಾರ್ಷಿಕ ಪರಿಶೀಲಿಸಿ, ಗ್ರಾಹಕರಿಗೆ ಸೂಚನೆ ನೀಡುತ್ತವೆ. ಖಾತೆ ನಿಷ್ಕ್ರಿಯವಾಗಿದೆಯಾದರೂ, ಬಡ್ಡಿ ಜಮಾ ಮಾಡಲಾಗುತ್ತದೆ ಮತ್ತು ಫಿಕ್ಸ್ಡ್ ಡಿಪಾಜಿಟ್ ಬಡ್ಡಿಯನ್ನೂ ಕ್ಲೈಮ್ ಮಾಡಬಹುದು.
ಖಾತೆ ಮುಚ್ಚುವಿಕೆ ಶುಲ್ಕಗಳು:
ಕೆಲವು ಬ್ಯಾಂಕುಗಳು ಖಾತೆ ಮುಚ್ಚುವಿಕೆ ಶುಲ್ಕ ವಿಧಿಸುತ್ತವೆ. ಉದಾಹರಣೆಗೆ, ಎಸ್ಬಿಐ ಖಾತೆ ಮುಚ್ಚುವಿಕೆ ಶುಲ್ಕಗಳು:
• ತೆರೆದ 14 ದಿನದೊಳಗೆ: ಉಚಿತ
• 15 ದಿನ - 1 ವರ್ಷ: ₹500 + GST
• 1 ವರ್ಷ ಬಳಿಕ: ಉಚಿತ
• ಖಾತೆದಾರರ ಮರಣದಿಂದ ಮುಚ್ಚುವಿಕೆ: ಉಚಿತ
ಬಳಕೆಯಾಗದ ಉಳಿತಾಯ ಖಾತೆಗಳನ್ನು ಮುಚ್ಚುವುದು ನೀವು ಅನಗತ್ಯ ಶುಲ್ಕಗಳಿಂದ ಮತ್ತು ತೊಂದರೆಗಳಿಂದ ತಪ್ಪಿಸಿಕೊಳ್ಳಲು ಮುಖ್ಯ. ಬೇಕಾದ ದಾಖಲೆಗಳನ್ನು ಸರಿಯಾಗಿ ತಯಾರಿಸಿ, ಶಾಖೆ ಗೆ ಭೇಟಿ ನೀಡಿ ಮತ್ತು ಖಾತೆಯನ್ನು ಮುಚ್ಚಿ ನಿಮ್ಮ ಹಣವನ್ನು ಸುರಕ್ಷಿತವಾಗಿ ಮರುಪಾವತಿಸಿಕೊಳ್ಳಿ.


Click it and Unblock the Notifications