ಇಂದಿನ ದಿನಗಳಲ್ಲಿ ಬಾಡಿಗೆ ಮನೆ ಹುಡುಕುವುದು ಸುಲಭದ ಕೆಲಸವಲ್ಲ. ವಿಶೇಷವಾಗಿ, ನಿರೀಕ್ಷಿತ ಬಜೆಟ್‌ಗೆ ತಕ್ಕ ಮನೆಯನ್ನು ಪಡುವುದು ಹಲವರಿಗೆ ದೊಡ್ಡ ಸವಾಲಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ದೇಶಾದ್ಯಂತ ಬಾಡಿಗೆ ದರಗಳು ನಿರಂತರ ಏರಿಕೆಯಾಗುತ್ತಿವೆ. ಒಂದು ಕಾಲದಲ್ಲಿ ಕೇವಲ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲೇ ಬಾಡಿಗೆ ಹೆಚ್ಚಳ ಕಂಡುಬರುತ್ತಿದ್ದರೆ, ಈಗ ಸಣ್ಣ ಪಟ್ಟಣಗಳಲ್ಲಿಯೂ ಇದೇ ಸ್ಥಿತಿ ಉಂಟಾಗಿದೆ. ಇದರ ಪರಿಣಾಮವಾಗಿ ಸಾಮಾನ್ಯ ಜನರ ದೈನಂದಿನ ಖರ್ಚು ಹೆಚ್ಚುತ್ತಿದ್ದು, ಉಳಿತಾಯದ ಮೇಲೆ ದುಷ್ಪರಿಣಾಮ ಬೀಳುತ್ತಿದೆ.

ಬಾಡಿಗೆ ಹೆಚ್ಚಳ...ಜನರ ಜೀವನ ಶೈಲಿಗೆ ಹೊಡೆತ:
ಮನೆಯ ಬಾಡಿಗೆ ಹೆಚ್ಚಿದಂತೆ ದೈನಂದಿನ ವೆಚ್ಚಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಪ್ರತೀ ತಿಂಗಳ ಕೊನೆಯಲ್ಲಿ ಕೈಯಲ್ಲಿ ಉಳಿಯುವ ಮೊತ್ತ ಕಡಿಮೆಯಾಗುವುದರಿಂದ ಉಳಿತಾಯದ ಕನಸುಗಳು ದೂರವಾಗುತ್ತವೆ. ಮನೆ ಖರೀದಿ, ಮಕ್ಕಳ ಶಿಕ್ಷಣ, ನಿವೃತ್ತಿ ನಿಧಿ ಮುಂತಾದ ದೀರ್ಘಾವಧಿ ಗುರಿಗಳನ್ನು ಸಾಧಿಸಲು ಕಷ್ಟವಾಗುತ್ತದೆ. ಇನ್ನು ಕೆಲವರು ಬಾಡಿಗೆ ವೆಚ್ಚ ಪೂರೈಸಲು ಇತರ ಅಗತ್ಯ ಖರ್ಚುಗಳಲ್ಲಿ ಕಡಿತ ಮಾಡಬೇಕಾದ ಪರಿಸ್ಥಿತಿ ಎದುರಿಸುತ್ತಾರೆ.
30% ನಿಯಮ ಪಾಲನೆ ಮಾಡಲೇಬೇಕು:
ಆರ್ಥಿಕ ತಜ್ಞರು ನೀಡಿರುವ ಪ್ರಮುಖ ಸಲಹೆ ಎಂದರೆ ನಿಮ್ಮ ಮಾಸಿಕ ಆದಾಯದ ಗರಿಷ್ಠ 30% ಕ್ಕಿಂತ ಹೆಚ್ಚು ಬಾಡಿಗೆಗೆ ಖರ್ಚು ಮಾಡಬಾರದು. ಉದಾಹರಣೆಗೆ, ನಿಮ್ಮ ತಿಂಗಳ ಸಂಬಳ ರೂ.60,000 ಇದ್ದರೆ, ಬಾಡಿಗೆ, ನಿರ್ವಹಣಾ ಶುಲ್ಕ, ವಿದ್ಯುತ್ ಮತ್ತು ನೀರಿನ ಬಿಲ್ ಸೇರಿ ಒಟ್ಟೂ ವೆಚ್ಚ ರೂ.18,000 ಮೀರಬಾರದು. ಈ ಮಿತಿ ಪಾಲನೆಯಿಂದ ದೈನಂದಿನ ಖರ್ಚುಗಳು ಮತ್ತು ಭವಿಷ್ಯದ ಉಳಿತಾಯದ ನಡುವೆ ಸಮತೋಲನ ಕಾಪಾಡಬಹುದು.
ಈ ಮಿತಿಯನ್ನು ಮೀರುವುದರಿಂದ ಏನು ತೊಂದರೆ?
ಬಾಡಿಗೆ ವೆಚ್ಚ ಈ 30% ಮಿತಿಯನ್ನು ಮೀರಿದರೆ, ಇತರ ಅಗತ್ಯ ವೆಚ್ಚಗಳಲ್ಲಿ ಕಡಿತ ಮಾಡಬೇಕಾಗುತ್ತದೆ. ಭವಿಷ್ಯದ ಉಳಿತಾಯ ಯೋಜನೆಗಳು ಅಸ್ತವ್ಯಸ್ತಗೊಳ್ಳುತ್ತವೆ. ಮನೆ ಖರೀದಿ, ನಿವೃತ್ತಿ ನಿಧಿ ಅಥವಾ ಮಕ್ಕಳ ಶಿಕ್ಷಣಕ್ಕೆ ಬೇಕಾಗುವ ಹಣವನ್ನು ಕಲೆಹಾಕುವುದು ಕಷ್ಟವಾಗುತ್ತದೆ. ಆದಾಯ ಸ್ಥಿರವಾಗಿದ್ದರೂ, ಹೆಚ್ಚುವರಿ ಬಾಡಿಗೆ ಹೊರೆ ದೀರ್ಘಾವಧಿಯಲ್ಲಿ ಆರ್ಥಿಕ ಸಂಕಷ್ಟಗಳಿಗೆ ಕಾರಣವಾಗಬಹುದು.
ಸರಿಯಾದ ಮನೆಯನ್ನು ಆರಿಸುವಾಗ ಗಮನಿಸಬೇಕಾದ ಅಂಶಗಳು:
- ಪ್ರದೇಶದ ಸುರಕ್ಷತೆ: ಅಪರಾಧ ಪ್ರಮಾಣ ಕಡಿಮೆ ಇರುವ, ಸುರಕ್ಷಿತ ಪ್ರದೇಶವನ್ನು ಆರಿಸಿಕೊಳ್ಳುವುದು ಮುಖ್ಯ.
- ಕಚೇರಿಗೆ ಇರುವ ದೂರ: ಅಗ್ಗದ ಮನೆ ಕಚೇರಿಯಿಂದ ಬಹಳ ದೂರವಿದ್ದರೆ ಪ್ರಯಾಣ ವೆಚ್ಚ ಮತ್ತು ಸಮಯದ ನಷ್ಟದಿಂದ ಅದು ದುಬಾರಿಯಾಗಬಹುದು.
- ಅವಶ್ಯಕ ಸೌಲಭ್ಯಗಳು: ಶಾಲೆ, ಮಾರುಕಟ್ಟೆ, ಆಸ್ಪತ್ರೆ ಮುಂತಾದ ಸೌಲಭ್ಯಗಳು ಹತ್ತಿರವಿರುವುದು ಉತ್ತಮ.
- ಸ್ವಲ್ಪ ಹೆಚ್ಚು ಬಾಡಿಗೆ ಇದ್ದರೂ ಕಚೇರಿಗೆ ಹತ್ತಿರ ಮತ್ತು ಅಗತ್ಯ ಸೌಲಭ್ಯಗಳಿರುವ ಮನೆ ದೀರ್ಘಾವಧಿಯಲ್ಲಿ ಲಾಭದಾಯಕವಾಗಬಹುದು.
ಬಾಡಿಗೆ ಹೊರೆ ಕಡಿಮೆ ಮಾಡಲು ಏನನ್ನು ಅನುಸರಿಸಬೇಕು?
ಹೆಚ್ಚುವರಿ ಬಾಡಿಗೆ ಹೊರೆ ತಪ್ಪಿಸಲು ಸ್ನೇಹಿತರೊಂದಿಗೆ ಮನೆ ಹಂಚಿಕೊಳ್ಳುವ ಆಯ್ಕೆ (ಶೇರ್ ಮಾಡುವುದು) ಉತ್ತಮ ಮಾರ್ಗವಾಗಿದೆ. ಹೀಗೆ ಮಾಡಿದರೆ ಬಾಡಿಗೆ, ನಿರ್ವಹಣಾ ಶುಲ್ಕ, ವಿದ್ಯುತ್ ಮತ್ತು ಇತರ ಬಿಲ್‌ಗಳ ಖರ್ಚು ಎಲ್ಲರಿಗೂ ಹಂಚಿಕೊಳ್ಳಲಾಗುತ್ತದೆ. ಇದರಿಂದ ಪ್ರತಿಯೊಬ್ಬರ ಮೇಲಿನ ಹಣಕಾಸು ಹೊರೆ ಕಡಿಮೆಯಾಗುತ್ತದೆ.
ಆದಾಯಕ್ಕೆ ತಕ್ಕ ನಿರ್ಧಾರ ತೆಗೆದುಕೊಳ್ಳಿ:
ಇತರರ ಐಷಾರಾಮಿ ಜೀವನಶೈಲಿಯನ್ನು ಅನುಸರಿಸುವ ಬದಲು, ನಿಮ್ಮ ಆದಾಯ ಮತ್ತು ಖರ್ಚಿಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ. ಹೆಚ್ಚು ವೆಚ್ಚ ಮಾಡುವ ಮನೆಯಲ್ಲಿ ವಾಸಿಸುವ ಬದಲು, ಸಮಂಜಸವಾದ ಮನೆ ಆರಿಸಿಕೊಳ್ಳುವುದು ಭವಿಷ್ಯದ ಆರ್ಥಿಕ ಸಂಕಷ್ಟಗಳಿಂದ ತಪ್ಪಿಸುತ್ತದೆ.
ಹಣಕಾಸು ಯೋಜನೆ...ಉಳಿತಾಯಕ್ಕೆ ಆದ್ಯತೆ:
ಬಾಡಿಗೆ ವೆಚ್ಚವನ್ನು ನಿಯಂತ್ರಿಸಲು ಸರಿಯಾದ ಹಣಕಾಸು ಯೋಜನೆ ಅಗತ್ಯ. ಮಾಸಿಕ ಬಜೆಟ್ ತಯಾರಿಸಿ, ಬಾಡಿಗೆ, ಆಹಾರ, ಪ್ರಯಾಣ, ವೈದ್ಯಕೀಯ ವೆಚ್ಚ ಮತ್ತು ಉಳಿತಾಯ ಮುಂತಾದ ವಿಭಾಗಗಳಿಗೆ ಪ್ರತ್ಯೇಕ ಮೊತ್ತ ಮೀಸಲಿಡಿ. ಹೀಗೆ ಮಾಡಿದರೆ ನಿಮ್ಮ ದೈನಂದಿನ ವೆಚ್ಚಗಳು ಮತ್ತು ಭವಿಷ್ಯದ ಗುರಿಗಳು ಸಮತೋಲನದಲ್ಲಿರುತ್ತವೆ.
ಬಾಡಿಗೆ ವೆಚ್ಚವನ್ನು ನಿಯಂತ್ರಿಸುವ ಹೆಚ್ಚುವರಿ ಸಲಹೆಗಳು:
- ಹಳೆಯ ಮನೆಯನ್ನು ಆಯ್ಕೆ ಮಾಡಿ: ಹೊಸ ಮನೆಗಳಿಗೆ ಹೋಲಿಸಿದರೆ ಹಳೆಯ ಮನೆಗಳ ಬಾಡಿಗೆ ಕಡಿಮೆ ಇರುತ್ತದೆ.
- ನೇರವಾಗಿ ಮಾಲೀಕರೊಂದಿಗೆ ಮಾತುಕತೆ ಮಾಡಿ: ಬ್ರೋಕರ್‌ಗಳ ಕಮಿಷನ್ ತಪ್ಪಿಸಲು ಇದು ಸಹಾಯಕ.
- ದೀರ್ಘಾವಧಿ ಒಪ್ಪಂದ ಮಾಡಿ: ದೀರ್ಘಾವಧಿಗೆ ಒಪ್ಪಂದ ಮಾಡಿದರೆ ಬಾಡಿಗೆ ಹೆಚ್ಚಳವನ್ನು ಕೆಲವು ವರ್ಷಗಳ ಮಟ್ಟಿಗೆ ತಡೆಹಿಡಿಯಬಹುದು.
ಬಾಡಿಗೆ ಮನೆಯಲ್ಲಿ ವಾಸಿಸುವುದು ಅನಿವಾರ್ಯವಾದರೂ, ಸರಿಯಾದ ಯೋಜನೆ ಇಲ್ಲದೆ ಇದು ದೊಡ್ಡ ಹೊರೆ ಆಗಬಹುದು. 30% ನಿಯಮ ಪಾಲನೆ, ಸರಿಯಾದ ಪ್ರದೇಶದ ಆಯ್ಕೆ, ಬಾಡಿಗೆ ಹಂಚಿಕೆ ಮತ್ತು ಸಮರ್ಪಕ ಹಣಕಾಸು ಯೋಜನೆಗಳ ಮೂಲಕ ಬಾಡಿಗೆ ವೆಚ್ಚವನ್ನು ನಿಯಂತ್ರಿಸಿ, ಭವಿಷ್ಯದ ಹಣಕಾಸು ಗುರಿಗಳನ್ನು ಸಾಧಿಸಬಹುದು.
More From GoodReturns

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications