For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಪಿನ್‌ ಬದಲಾಯಿಸುವುದು, ಜೆನರೇಟ್‌ ಮಾಡುವುದು ಹೇಗೆ?

|

ಸ್ಟೇ‌ಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಭಾರತದ ಬಹು ದೊಡ್ಡ ಸಾಲ ನೀಡುವ ಬ್ಯಾಂಕ್‌ ಆಗಿದೆ. ಈ ಬ್ಯಾಂಕ್‌ ಜನರಿಗೆ ಹಲವಾರು ರೀತಿಯ ಕ್ರೆಡಿಟ್‌ ಕಾರ್ಡ್‌ಗಳನ್ನು ಒದಗಿಸುತ್ತದೆ. ಲೈಫ್‌ಸ್ಟೈಲ್‌ ಕಾರ್ಡ್, ರಿವಾರ್ಡ್ ಕಾರ್ಡ್, ಶಾಪಿಂಗ್‌ ಕಾರ್ಡ್, ಟ್ರಾವೆಲ್‌ ಆಂಡ್‌ ಪ್ಯೂಲ್‌ ಕಾರ್ಡ್, ಬ್ಯಾಂಕಿಂಗ್‌ ಪಾರ್ಟ್‌ನರ್‌ಶಿಪ್‌ ಕಾರ್ಡ್ ಹಾಗೂ ಬಿಸಿನೆಸ್‌ ಕಾರ್ಡ್‌ಗಳನ್ನು ಸ್ಟೇ‌ಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ನೀಡುತ್ತದೆ.

ನೀವು ಇತ್ತೀಚೆಗೆ ಸ್ಟೇ‌ಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಕ್ರೆಡಿಟ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದರೆ ಅಥವಾ ಹೊಸದಾಗಿ ಕಾರ್ಡ್ ಅನ್ನು ಉಪಯೋಗ ಮಾಡುವುದಾದರೆ, ಬಳಿಕ ನೀವು ನಿಮ್ಮ ಕ್ರೆಡಿಟ್‌ ಕಾರ್ಡ್‌ನ ಪಿನ್‌ ಅನ್ನು ಜೆನರೆಟ್‌ ಮಾಡುವುದು ಮುಖ್ಯ.

ಗಮನಿಸಿ: ಈ ಮೂರು ಬ್ಯಾಂಕುಗಳ ಚೆಕ್‌ಬುಕ್‌ ಅ.1 ರಿಂದ ಅಮಾನ್ಯ, ಕೂಡಲೇ ಬದಲಾಯಿಸಿಕೊಳ್ಳಿಗಮನಿಸಿ: ಈ ಮೂರು ಬ್ಯಾಂಕುಗಳ ಚೆಕ್‌ಬುಕ್‌ ಅ.1 ರಿಂದ ಅಮಾನ್ಯ, ಕೂಡಲೇ ಬದಲಾಯಿಸಿಕೊಳ್ಳಿ

ನೀವು ನಿಮ್ಮ ಕ್ರೆಡಿಟ್‌ ಕಾರ್ಡ್ ಪಿನ್ ಅನ್ನು ಜೆನರೆಟ್‌ ಮಾಡುವುದು ಸಾಮಾನ್ಯವಾಗಿ ಕಷ್ಟಕರವಾದ, ಹೆಚ್ಚು ಸಮಯವನ್ನು ತೆಗೆದುಕೊಳ್ಳುವ ಹಾಗೂ ಅನಾನುಕೂಲ ಕಾರ್ಯಾಚರಣೆ ಎಂದು ನಾವು ಹೇಳಬಹುದು. ಇವೆಲ್ಲವನ್ನು ಬಿಟ್ಟು ಈಗ ನಾವು ಆನ್‌ಲೈನ್‌, ಮೊಬೈಲ್‌ ಬ್ಯಾಂಕಿಂಗ್‌ ಹಾಗೂ ವಿವಿಧ ಮೂಲಗಳಿಂದ ನಿಮ್ಮ ಎಸ್‌ಬಿಐನ ಕ್ರೆಡಿಟ್‌ ಕಾರ್ಡ್‌ನ ಪಿನ್‌ ಅನ್ನು ಜೆನರೇಟ್‌ ಮಾಡುವುದು ಹೇಗೆ? ಹಾಗೂ ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಪಿನ್‌ ಬದಲಾಯಿಸುವುದು ಹೇಗೆ ಎಂದು ತಿಳಿಯೋಣ. ಮುಂದೆ ಓದಿ.

ಎಲ್‌ಐಸಿ ಪಾಲಿಸಿಗೆ ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ?ಎಲ್‌ಐಸಿ ಪಾಲಿಸಿಗೆ ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ?

 ಆನ್‌ಲೈನ್‌ ಮೂಲಕ ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಪಿನ್‌ ಜೆನರೇಟ್‌ ಮಾಡುವ ಹಂತಗಳು

ಆನ್‌ಲೈನ್‌ ಮೂಲಕ ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಪಿನ್‌ ಜೆನರೇಟ್‌ ಮಾಡುವ ಹಂತಗಳು

* ಮೊದಲು sbicard.com ಗೆ ಭೇಟಿ ನೀಡಿ, ನಿಮ್ಮ ಯೂಸರ್‌ ಐಡಿ ಹಾಗೂ ಪಾಸ್‌ವರ್ಡ್ ಬಳಸಿಕೊಂಡು ಎಸ್‌ಬಿಐ ಕಾರ್ಡ್ ಆನ್‌ಲೈನ್‌ ಅಕೌಂಟ್‌ಗೆ ಸೈನ್‌ ಇನ್‌ ಆಗಿ
* ಬಳಿಕ ನಿಮ್ಮ ಎಡ ಭಾಗದಲ್ಲಿ ಇರುವ "My Account" ಅನ್ನು ಕ್ಲಿಕ್‌ ಮಾಡಿ ಅದರಲ್ಲಿ "Manage PIN" ಗೆ ಕ್ಲಿಕ್‌ ಮಾಡಿ
* ಈ ಬಳಿಕ ನೀವು ಜೆನರೇಟ್‌ ಮಾಡಲು ಬಳಸುವ ಕ್ರೆಡಿಟ್‌ ಕಾರ್ಡ್ ಅನ್ನು ಕ್ಲಿಕ್‌ ಮಾಡಿ
* ಬಳಿಕ ನಿಮ್ಮ ರಿಜಿಸ್ಟರ್‌ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರಲಿದೆ, ಅದನ್ನು ನೀವು ನಮೂದಿಸಿ
* ಈಗ ನೀವು ಹಾಕಲು ಬಯಸಲು ಎಟಿಎಂ ಪಿನ್‌ ನಮೂದಿಸಿ ಸಬ್‌ಮಿಟ್‌ ಕೊಡಿ
* ವೆರಿಫಿಕೇಶನ್‌ ಬಳಿಕ ನಿಮ್ಮ ಪಿನ್‌ ಜೆನರೇಟ್‌ ಆಗಲಿದೆ.

LIC ಜೀವನ್ ಲಕ್ಷ್ಯ ಯೋಜನೆ: ನಿಮ್ಮ ಮಕ್ಕಳ ಭವಿಷ್ಯಕ್ಕೆ ಉತ್ತಮ ಕೊಡುಗೆLIC ಜೀವನ್ ಲಕ್ಷ್ಯ ಯೋಜನೆ: ನಿಮ್ಮ ಮಕ್ಕಳ ಭವಿಷ್ಯಕ್ಕೆ ಉತ್ತಮ ಕೊಡುಗೆ

 ಚಾಟ್‌ಬಾಟ್‌ ಐಎಲ್‌ಎ ಮೂಲಕ ಪಿನ್‌ ಜೆನರೇಟ್‌ ಮಾಡುವ ಹಂತಗಳು
 
ಚಾಟ್‌ಬಾಟ್‌ ಐಎಲ್‌ಎ ಮೂಲಕ ಪಿನ್‌ ಜೆನರೇಟ್‌ ಮಾಡುವ ಹಂತಗಳು

* Chatbot ILA ಗೆ ಲಾಗ್‌ಇನ್‌ ಆಗಿ "How do I generate transaction PIN for my credit card" (ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಪಿನ್‌ ಜೆನರೇಟ್‌ ಮಾಡುವುದು ಹೇಗೆ) ಎಂದು ಹಾಕಿ
* 'Update PIN' ಮೇಲೆ ಕ್ಲಿಕ್‌ ಮಾಡಿ
* ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ನಮೂದಿಸಿ
* Submit ಮೇಲೆ ಕ್ಲಿಕ್‌ ಮಾಡಿ, ಹೊಸ ಪಿನ್‌ ಅನ್ನು ಎರಡು ಬಾರಿ ನಮೂದಿಸಿ
* Update PIN ಮೇಲೆ ಕ್ಲಿಕ್‌ ಮಾಡಿ, ಬಳಿಕ ನಿಮ್ಮ ರಿಜಿಸ್ಟರ್‍ಡ್‌ ಮೊಬೈಲ್‌ ಸಂಖ್ಯೆಗೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣವಾದ ಮೆಸೇಜ್‌ ಬರಲಿದೆ

 ಚಾಟ್‌ಬಾಟ್‌ ಐಎಲ್‌ಎ ಮೂಲಕ ಆಡ್‌ಆನ್‌ ಕ್ರೆಡಿಟ್‌ ಕಾರ್ಡ್ ಪಿನ್‌ ಜೆನರೇಟ್

ಚಾಟ್‌ಬಾಟ್‌ ಐಎಲ್‌ಎ ಮೂಲಕ ಆಡ್‌ಆನ್‌ ಕ್ರೆಡಿಟ್‌ ಕಾರ್ಡ್ ಪಿನ್‌ ಜೆನರೇಟ್

* Chatbot ILA ಗೆ ಲಾಗ್‌ಇನ್‌ ಆಗಿ "How do I generate transaction PIN for my credit card" (ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಪಿನ್‌ ಜೆನರೇಟ್‌ ಮಾಡುವುದು ಹೇಗೆ) ಎಂದು ಹಾಕಿ
* ಬಳಿಕ Add-on Card ಮೇಲೆ ಕ್ಲಿಕ್‌ ಮಾಡಿ
* ನಂತರ 'Update PIN' ಮೇಲೆ ಕ್ಲಿಕ್‌ ಮಾಡಿ
* ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರಲಿದೆ
* ಒಟಿಪಿಯನ್ನು ಹಾಕಿ Submit ಮೇಲೆ ಕ್ಲಿಕ್‌ ಮಾಡಿ
* ಈಗ ನಿಮ್ಮ ಹೊಸ ಪಿನ್‌ ಅನ್ನು ಎರಡು ಬಾರಿ ಹಾಕಿ
* ಬಳಿಕ 'Update PIN' ಮೇಲೆ ಕ್ಲಿಕ್‌ ಮಾಡಿದರೆ ಪ್ರಕ್ರಿಯೆ ಪೂರ್ಣವಾಗಲಿದೆ

 ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಪಿನ್‌ ಅನ್ನು ಬದಲಾಯಿಸುವುದು ಹೇಗೆ?

ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಪಿನ್‌ ಅನ್ನು ಬದಲಾಯಿಸುವುದು ಹೇಗೆ?

* ನೆಟ್‌ ಬ್ಯಾಂಕಿಂಗ್‌ ಅಕೌಂಟ್‌ಗೆ ಲಾಗ್‌ ಇನ್‌ ಆಗಿ
* Manage Pin ಮೇಲೆ ಕ್ಲಿಕ್‌ ಮಾಡಿ
* ಬಳಿಕ ನಿಮ್ಮ ಕ್ರೆಡಿಟ್‌ ಕಾರ್ಡ್ ಅನ್ನು ಯಾವ ರೀತಿಯದ್ದು ಎಂದು ಆಯ್ಕೆ ಮಾಡಿಕೊಳ್ಳಿ
* ನಂತರ Generate OTP ಮೇಲೆ ಕ್ಲಿಕ್‌ ಮಾಡಿ
* ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರಲಿದೆ
* ಒಟಿಪಿಯನ್ನು ನಮೂದಿಸಿ, ಎರಡು ಬಾರಿ ಹೊಸ ಪಿನ್‌ ಅನ್ನು ಹಾಕಿ
* Submit ಮೇಲೆ ಕ್ಲಿಕ್‌ ಮಾಡಿದರೆ ನಿಮ್ಮ ಪಿನ್‌ ಬದಲಾಗಲಿದೆ

 ಮೊಬೈಲ್‌ ಬ್ಯಾಂಕಿಂಗ್ ಮೂಲಕ ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಪಿನ್‌ ಬದಲಾಯಿಸುವ ಹಂತಗಳು

ಮೊಬೈಲ್‌ ಬ್ಯಾಂಕಿಂಗ್ ಮೂಲಕ ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಪಿನ್‌ ಬದಲಾಯಿಸುವ ಹಂತಗಳು

* ಮೊಬೈಲ್‌ ಬ್ಯಾಂಕಿಂಗ್ ಅಕೌಂಟ್‌ಗೆ ಲಾಗ್‌ಇನ್‌ ಆಗಿ ಯೂಸರ್‌ ಐಡಿ, ಪಾಸ್‌ವರ್ಡ್ ಹಾಕಿ
* Service Requests ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ
* ಬಳಿಕ Manage Pin ಮೇಲೆ ಕ್ಲಿಕ್‌ ಮಾಡಿ, ಯಾವ ರೀತಿಯ ಕಾರ್ಡ್ ಎಂದು ಆಯ್ಕೆ ಮಾಡಿ
* ಈಗ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರಲಿದೆ
* Submit ಮೇಲೆ ಕ್ಲಿಕ್‌ ಮಾಡಿ, ಎಲ್ಲಾ ಹಂತವನ್ನು ಪೂರ್ಣಗೊಳಿಸಿ

 ಐವಿಆರ್‌ ಮೂಲಕ ಕ್ರೆಡಿಟ್‌ ಕಾರ್ಡ್ ಪಿನ್‌ ಜೆನರೇಟ್‌: ಹಂತಗಳು

ಐವಿಆರ್‌ ಮೂಲಕ ಕ್ರೆಡಿಟ್‌ ಕಾರ್ಡ್ ಪಿನ್‌ ಜೆನರೇಟ್‌: ಹಂತಗಳು

* ಎಸ್‌ಬಿಐ ಕಾರ್ಡ್ ಸಹಾಯವಾಣಿ 18601801290 or 39020202 ಗೆ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಯಿಂದ ಕರೆ ಮಾಡಿ (ನಿಮ್ಮ ಸ್ಥಳೀಯ ಎಸ್‌ಟಿಡಿ ಕೋಡ್‌ ಹಾಕಿ)
* ಕ್ರೆಡಿಟ್‌ ಕಾರ್ಡ್ ಪಿನ್‌ ಜೆನರೇಟ್‌ ಮಾಡಲು ಆಯ್ಕೆ 6 ಅನ್ನು ಆಯ್ಕೆ ಮಾಡಿ
* 16 ಎಸ್‌ಬಿಐ ಕಾರ್ಡ್ ಸಂಖ್ಯೆ, ಜನನ ದಿನ, ವರ್ಷ ಹಾಕಿ, ಹಾಗೆಯೇ ಕ್ರೆಡಿಟ್‌ ಕಾರ್ಡ್ ಕೊನೆಯ ದಿನ ಹಾಕಿ
* ಈಗ ನಿಮಗೆ ಒಟಿಪಿ ಬರಲಿದೆ
* ಆರು ಡಿಜಿಟ್‌ ಒಟಿಪಿ ಹಾಕಿ
* ಪಿನ್‌ ಎರಡು ಬಾರಿ ಹಾಕಿ
* ಬಳಿಕ ಐವಿಆರ್‌ನಿಂದ ವೆರೀಫೀಕೇಶನ್‌ ಬರಲಿದೆ

 ಐವಿಆರ್‌ ಮೂಲಕ ಆಡ್‌ಆನ್‌ ಕ್ರೆಡಿಟ್‌ ಕಾರ್ಡ್ ಪಿನ್‌ ಜೆನರೇಟ್‌ ಹೇಗೆ?

* ನಿಮಗೆ ಯಶಸ್ವಿ ಆದ ಮೆಸೇಜ್‌ ಬರಲಿದೆ

English summary

How To Generate Or Change SBI Credit Card PIN?, Explained in Kannada

How To Generate Or Change SBI Credit Card PIN?, Explained in Kannada, Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X