ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್‌ನ ಪಿನ್ ಅನ್ನು ಬದಲಾವಣೆ ಮಾಡುವುದು ಹಾಗೂ ಜೆನರೇಟ್ ಮಾಡುವುದಕ್ಕೆ ಸರಳ ವಿಧಾನವನ್ನು ಪರಿಚಯಿಸಿದೆ. ಆನ್‌ಲೈನ್‌ನಲ್ಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್‌ನ ಪಿನ್ ಅನ್ನು ಬದಲಾವಣೆ ಮಾಡಬಹುದು ಅಥವಾ ಜೆನರೇಟ್ ಮಾಡಬಹುದಾಗಿದೆ.
ಈ ಬಗ್ಗೆ ಎಸ್‌ಬಿಐ ಇತ್ತೀಚೆಗೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಗ್ರಾಹಕರಿಗೆ ಮಾಹಿತಿ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ಇನ್ನು ಮುಂದೆ ಸರಳವಾಗಿ ಕ್ರೆಡಿಟ್ ಕಾರ್ಡ್‌ನ ಪಿನ್ ಅನ್ನು ಬದಲಾವಣೆ ಮಾಡಬಹುದು ಹಾಗೂ ಜೆನರೇಟ್ ಮಾಡಬಹುದು ಎಂದು ಹೇಳಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ತಮ್ಮ ಕ್ರೆಡಿಟ್ ಕಾರ್ಡ್‌ನ ಪಿನ್ ಅನ್ನು ಬದಲಾವಣೆ ಮಾಡಲು ಎಸ್‌ಬಿಐನ ಅಧಿಕೃತ ವೆಬ್‌ಸೈಟ್ sbicard.com ಗೆ ಲಾಗ್ ಇನ್ ಆಗಬೇಕಾಗುತ್ತದೆ. ನಿನ್ನೆಯಷ್ಟೇ ಟ್ವೀಟ್‌ನ ಮಾಡಿರುವ ಎಸ್‌ಬಿಐ, "ವೆಬ್‌ಸೈಟ್ ಮೂಲಕ ನಿಮ್ಮ ಎಸ್‌ಬಿಐನ ಕ್ರೆಡಿಟ್ ಕಾರ್ಡ್ ಪಿನ್ ಅನ್ನು ಈಗ ಬದಲಾವಣೆ ಮಾಡುವುದು ಈಗ ಸರಳ, ಶೀಘ್ರ ಹಾಗೂ ಸುರಕ್ಷಿತ. sbicard.com/login ಗೆ ಲಾಗಿನ್ ಆಗಿ," ಎಂದು ತಿಳಿಸಿದೆ. ಹಾಗಾದರೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಪಿನ್ ಅನ್ನು ಯಾವ ರೀತಿಯಲ್ಲಿ ನಮ್ಮ ಸರಳವಾಗಿ ಬದಲಾವಣೆ ಮಾಡುವುದು ಹಾಗೂ ಜೆನರೇಟ್ ಮಾಡುವುದು ಎಂದು ತಿಳಿಯಲು ಮುಂದೆ ಓದಿ.
ಚಾಟ್‌ಬಾಟ್ ಐಎಲ್‌ಎ ಮೂಲಕ ಪಿನ್ ಬದಲಾಯಿಸಲು ಪಾಲಿಸಬೇಕಾದ ವಿಧಾನ
ಎಸ್‌ಬಿಐನ ಕ್ರೆಡಿಟ್ ಕಾರ್ಡ್ ಬಳಕೆದಾರರು ಎಸ್‌ಬಿಐ ನ ವೆಬ್‌ಸೈಟ್ ಮಾತ್ರವಲ್ಲದೇ ಮೊಬೈಲ್ ಆಪ್, ಚಾಟ್‌ಬಾಟ್ ಐಎಲ್‌ಎ ಅಥವಾ ಐವಿಆರ್ ಮೂಲಕ ಪಿನ್ ಅನ್ನು ಬದಲಾವಣೆ ಮಾಡಬಹುದು. ಚಾಟ್‌ಬಾಟ್ ಐಎಲ್‌ಎ ಮೂಲಕ ಪಿನ್ ಅನ್ನು ಜೆನರೇಟ್ ಮಾಡಲು ಪಾಲಿಸಬೇಕಾದ ವಿಧಾನವನ್ನು ಈ ಕೆಳಗೆ ವಿವರಿಸಲಾಗಿದೆ.
* ಮೊದಲು ಚಾಟ್‌ಬಾಟ್ ಐಎಲ್‌ಎ ಗೆ ಲಾಗಿನ್ ಆಗಿ
* ಅದರಲ್ಲಿ How do I generate transaction PIN for my credit card (ಕ್ರೆಡಿಟ್ ಕಾರ್ಡ್‌ನ ಪಿನ್ ಜೆನರೇಟ್ ಮಾಡುವುದು ಹೇಗೆ) ಎಂಬುವುದುನ್ನು ನಮೂದಿಸಿ (query)
* ಬಳಿಕ Update PIN ಅನ್ನು ಕ್ಲಿಕ್ ಮಾಡಿ
* ಬಳಿಕ ನಿಮ್ಮ ಮೊಬೈಲ್‌ಗೆ ಒಟಿಪಿ ಬರಲಿದೆ, ಅದನ್ನು ನಮೂದಿಸಿ
* ಆ ನಂತರ 'Submit' ಮೇಲೆ ಕ್ಲಿಕ್ ಮಾಡಿ
* ನಿಮ್ಮ ಹೊಸ ಪಿನ್ ಅನ್ನು ಎರಡು ಬಾರಿ ನಮೂದಿಸಿ
* ಬಳಿಕ 'Update PIN' ಅನ್ನು ಕ್ಲಿಕ್ ಮಾಡಿದರೆ ನಿಮ್ಮ ಪಿನ್ ಬದಲಾವಣೆ ಪ್ರಕ್ರಿಯೆ ಸಂಪೂರ್ಣವಾಗಲಿದೆ
ವೆಬ್‌ಸೈಟ್ ಮೂಲಕ ಪಿನ್ ಬದಲಾಯಿಸುವುದು ಹೇಗೆ?
ನೀವು ಎಸ್‌ಬಿಐನ ವೆಬ್‌ಸೈಟ್ ಮೂಲಕವೂ ಸುಲಭ ಹಾಗೂ ಸರಳವಾಗಿ ನಿಮ್ಮ ಎಸ್‌ಬಿಐನ ಕ್ರೆಡಿಟ್ ಕಾರ್ಡ್ ಪಿನ್ ಅನ್ನು ಬದಲಾವಣೆ ಮಾಡಬಹುದು. ಅದಕ್ಕಾಗಿ ನೀವು ಪಾಲಿಸಬೇಕಾದ ಹಂತವನ್ನು ಈ ಕೆಳಗೆ ವಿವರಿಸಲಾಗಿದೆ.
* ಮೊದಲು ಎಸ್‌ಬಿಐ ವೆಬ್‌ಸೈಟ್‌ಗೆ ಲಾಗಿನ್ ಆಗಿ
* ಬಳಿಕ ಎಡ ಭಾಗದಲ್ಲಿ ಇರುವ My Account' ಟ್ಯಾಬ್ ಮೇಲೆ ಕ್ಲಿಕ್ ಮಾಡಿ
* ಬಳಿಕ 'Manage Pin' ಮೇಲೆ ಕ್ಲಿಕ್ ಮಾಡಿ
* ನಂತರ ಯಾವ ಕಾರ್ಡ್ ಎಂದು ಆಯ್ಕೆ ಮಾಡಿ
* 'Generate OTP' ಮೇಲೆ ಕ್ಲಿಕ್ ಮಾಡಿ
* ನಿಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ನಮೂದಿಸಿ
* ನಿಮ್ಮ ಹೊಸ ಪಿನ್ ಅನ್ನು ಎರಡು ಬಾರಿ ನಮೂದಿಸಿ
* ಬಳಿಕ submit ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಪಿನ್ ಬದಲಾವಣೆ ಪ್ರಕ್ರಿಯೆ ಸಂಪೂರ್ಣವಾಗಲಿದೆ
ಮೊಬೈಲ್ ಆಪ್ ಮೂಲಕ ಪಿನ್ ಬದಲಾಯಿಸಲು ಈ ಹಂತಗಳನ್ನು ಪಾಲಿಸಿ
ನೀವು ವೆಬ್‌ಸೈಟ್, ಚಾಟ್‌ಬಾಟ್ ಐಎಲ್‌ಎ ಮಾತ್ರವಲ್ಲದೇ ಮೊಬೈಲ್ ಫೋನ್‌ನಲ್ಲಿರುವ ನಿಮ್ಮ ಎಸ್‌ಬಿಐ ಆಪ್ ಮೂಲಕವೂ ನಿಮ್ಮ ಎಸ್‌ಬಿಐನ ಕ್ರೆಡಿಟ್ ಕಾರ್ಡ್ ಪಿನ್ ಅನ್ನು ಬದಲಾವಣೆ ಅಥವಾ ಜೆನರೇಟ್ ಮಾಡಬಹುದು. ಅದಕ್ಕಾಗಿ ಈ ಕೆಳಗಿನ ಹಂತಗಳನ್ನು ಪಾಲಿಸಿ
* ಮೊದಲು ಮೊಬೈಲ್ ಫೋನ್‌ನಲ್ಲಿ ನಿಮ್ಮ ಖಾತೆಗೆ ಲಾಗಿನ್ ಆಗಿ
* ಎಡಬದಿಯಲ್ಲಿ ಮೆನುವಿನಲ್ಲಿ ಇರುವ 'Service Requests' ಮೇಲೆ ಕ್ಲಿಕ್ ಮಾಡಿ
* ಆ ಬಳಿಕ 'Manage Pin' ಮೇಲೆ ಕ್ಲಿಕ್ ಮಾಡಿ
* ನಂತರ ಯಾವ ಕಾರ್ಡ್ ಎಂದು ಆಯ್ಕೆ ಮಾಡಿ
* 'Generate OTP' ಮೇಲೆ ಕ್ಲಿಕ್ ಮಾಡಿ
* ನಿಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ನಮೂದಿಸಿ
* ನಿಮ್ಮ ಹೊಸ ಪಿನ್ ಅನ್ನು ಎರಡು ಬಾರಿ ನಮೂದಿಸಿ
* ಬಳಿಕ submit ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಪಿನ್ ಬದಲಾವಣೆ ಪ್ರಕ್ರಿಯೆ ಸಂಪೂರ್ಣವಾಗಲಿದೆ
ಐವಿಆರ್ ಮೂಲಕವೂ ಪಿನ್ ಬದಲಾವಣೆ ಸರಳ
ವೆಬ್‌ಸೈಟ್, ಚಾಟ್‌ಬಾಟ್ ಐಎಲ್‌ಎ, ಮೊಬೈಲ್ ಆಪ್ ಮಾತ್ರವಲ್ಲದೇ ಐವಿಆರ್ ಮೂಲಕವೂ ಎಸ್‌ಬಿಐ ಪಿನ್ ಅನ್ನು ಬದಲಾವಣೆ ಮಾಡಬಹುದಾಗಿದೆ. ಅದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಕೆದಾರರು ಎಸ್‌ಬಿಐ ಸಹಾಯವಾಣಿ 1860 180 1290 ಅಥವಾ 39 02 02 02 (ಸ್ಥಳೀಯ ಎಸ್‌ಟಿಡಿ ಕೋಡ್ ನಮೂದಿಸಬೇಕು) ಗೆ ಕರೆ ಮಾಡಬೇಕು. ಬಳಿಕ ಈ ಕೆಳಗಿನ ಹಂತಗಳನ್ನು ಪಾಲನೆ ಮಾಡಿ
* ಪಿನ್ ಅನ್ನು ಜೆನರೇಟ್ ಮಾಡಲು ಆರನ್ನು ಆಯ್ಕೆ ಮಾಡಿ
* 16 ಡಿಜಿಟ್ ಎಸ್‌ಬಿಐ ಕಾರ್ಡ್ ಸಂಖ್ಯೆಯನ್ನು ನಮೂದಿಸಿ
* ನಿಮ್ಮ ಜನ್ಮ ದಿನಾಂಕವನ್ನು ಕೂಡಾ ನಮೂದಿಸಿ ಅದು ದಿನಾಂ, ತಿಂಗಳು, ವರ್ಷ (DD MM YYYY) ಮಾದರಿಯಲ್ಲಿ ಇರಲಿ
* ನಿಮ್ಮ ಕ್ರೆಡಿಟ್ ಕಾರ್ಡ್‌ನ ಕೊನೆಯ ದಿನಾಂಕವನ್ನು ನಮೂದಿಸಿ (expiry date- MM YY)
* ನಿಮ್ಮ ರಿಜಿಸ್ಟರ್ ಮೊಬೈಲ್‌ಗೆ ಬರುವ ಅಥವಾ ಇಮೇಲ್‌ಗೆ ಬರುವ ಆರು ಡಿಜಿಟ್ ಒಟಿಪಿಯನ್ನು ನಮೂದಿಸಿ
* ನಾಲ್ಕು ಡಿಜಿಟ್ ಪಿನ್ ಸಂಖ್ಯೆಯನ್ನು ನಮೂದಿಸಿ, ಅದನ್ನು ಮತ್ತೆ ಖಚಿತಪಡಿಸಿ
* ನಿಮಗೆ ಐವಿಆರ್ ಮೂಲಕವೇ ಖಚಿತ ಸಂದೇಶ ಬರಲಿದೆ
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications