ಅಮೆರಿಕಾದಲ್ಲಿ ಹಲವು ದಶಕಗಳಿಂದ ಗ್ರೀನ್ ಕಾರ್ಡ್ (America Green Card) ವ್ಯವಸ್ಥೆ ಜಾರಿಯಲ್ಲಿದೆ. ಹಾಗಿದ್ರೆ ಗ್ರೀನ್ ಕಾರ್ಡ್ ವ್ಯವಸ್ಥೆ ಅಂದ್ರೆ ಏನು ಎಂಬ ಪ್ರಶ್ನೆ ನಿಮಗೆ ಬರಬಹುದು. ಅಮೆರಿಕಾ ನೀತಿ ಪ್ರಕಾರ, ಯುಎಸ್‌ನಲ್ಲಿ (US) ಶಾಶ್ವತವಾಗಿ ವಾಸ ಮಾಡಲು ಅಥವಾ ಕೆಲಸ ಮಾಡಲು ಅಧಿಕೃತವಾಗಿ ಪಡೆಯುವ ಪತ್ರಗಳಲ್ಲಿ ಗ್ರೀನ್ ಕಾರ್ಡ್ ಕೂಡಾ ಒಂದು. ಈ ಅಧಿಕೃತ ಕಾರ್ಡ್ ಪಡೆದರೆ ವಲಸಿಗರು ಶಾಶ್ವತವಾಗಿ ಅಮೆರಿಕಾದಲ್ಲೇ ನೆಲೆಸುವ ಸಮ್ಮತಿ ನೀಡಲಾಗುತ್ತದೆ. ಇದೀಗ ಒಡಹುಟ್ಟಿದವರು ಬೇರೆ ದೇಶದಲ್ಲಿದ್ದು, ಅವರಿಗೆ ಗ್ರೀನ್ ಕಾರ್ಡ್ ನೀಡಬಹುದಾ? ಹಾಗಿದ್ರೆ ಯಾರು ನೀಡಬಹುದು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಒಬ್ಬ ಸಹೋದರ ಅಥವಾ ಸಹೋದರಿಯನ್ನು ಅಮೆರಿಕಾದಲ್ಲಿ ಶಾಶ್ವತವಾಗಿ ನೆಲೆಸಲು ಕರೆತರಬಹುದು. ಆದರೆ ಇದು ಅಮೆರಿಕಾದ ವಲಸೆ ಕಾನೂನಿನ ಅಡಿಯಲ್ಲಿ ದೀರ್ಘಾವಧಿಯ ಪ್ರಕ್ರಿಯೆಯಾಗಿದೆ. 21 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯುಎಸ್ ನಾಗರಿಕರು ಮಾತ್ರ ತಮ್ಮ ಒಡಹುಟ್ಟಿದವರನ್ನು ವಲಸೆ ನೀತಿಯಡಿಯಲ್ಲಿ ಗ್ರೀನ್ ಕಾರ್ಡ್‌ಗೆ ಸ್ಪಾನ್ಸರ್ ನೀಡಬಹುದು. ಆದರೆ ಕಾನೂನುಬದ್ಧ ಖಾಯಂ ನಿವಾಸಿಗಳು (ಗ್ರೀನ್ ಕಾರ್ಡ್ ಹೊಂದಿರುವವರು) ಇದನ್ನು ಮಾಡಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಯುಎಸ್ ಮೂಲದ ವಲಸೆ ವಕೀಲೆ ಅಭಿಷಾ ಪಾರಿಖ್ ಅವರು ಹೇಳಿದಂತೆ, "ಒಬ್ಬ ಯುಎಸ್ ನಾಗರಿಕ, ತಮ್ಮ ಸಹೋದರ ಅಥವಾ ಸಹೋದರಿಯನ್ನು ಪ್ರಾಯೋಜಿಸುವಾಗ, ಪ್ರಕ್ರಿಯೆಯು ಫಾರ್ಮ್ I-130 ಅರ್ಜಿಯನ್ನು (ವಿದೇಶಿ ಸಂಬಂಧಿಕರಿಗಾಗಿ ಅರ್ಜಿ) ಸಲ್ಲಿಸಬೇಕಾಗುತ್ತದೆ. ಆದರೆ ಈ ವೀಸಾ ವರ್ಗಕ್ಕೆ ತುಂಬಾನೇ ಸಮಯ ಬೇಕಾಗುತ್ತದೆ. ಇನ್ನು ಸಂಗಾತಿ, ಪೋಷಕರು ಅಥವಾ 21 ವರ್ಷದೊಳಗಿನ ಮಕ್ಕಳು ಮಾತ್ರ ಹತ್ತಿರ ಸಂಬಂಧಿಗಳಾದರೆ, ಸಹೋದರ ಸಹೋದರಿಯರು ಕುಟುಂಬ ಆದ್ಯತಾ ವ್ಯವಸ್ಥೆಯ ಅಡಿಯಲ್ಲಿ ಬರುತ್ತಾರೆ, ಇದಕ್ಕೆ ವಾರ್ಷಿಕ ಮಿತಿಗಳಿವೆ. ಅದೇ ಕಾರಣದಿಂದ ಅವರ ಅರ್ಜಿ ಬೇರೆ ಫಾರ್ಮ್‌ನಲ್ಲಿ ಬರಲಿದೆ ಎನ್ನಲಾಗಿದೆ."
ಸಹೋದರ ಸಹೋದರಿಯರ ವೀಸಾ ಪ್ರಕ್ರಿಯೆಯ ಸಮಯವು ಅರ್ಜಿದಾರರ ಮೂಲ ದೇಶ ಮತ್ತು ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್‌ನ ವೀಸಾ ಬುಲೆಟಿನ್‌ನಲ್ಲಿ ಪಟ್ಟಿ ಮಾಡಲಾದ ಪ್ರಸ್ತುತ ಆದ್ಯತೆಯ ದಿನಾಂಕವನ್ನು ಅವಲಂಬಿಸಿರುತ್ತದೆ ಎಂದು ಪಾರಿಖ್ ವಿವರಿಸಿದ್ದಾರೆ. ಮೆಕ್ಸಿಕೋ, ಭಾರತ, ಚೀನಾ ಅಥವಾ ಫಿಲಿಪೈನ್ಸ್‌ನಂತಹ ಹೆಚ್ಚಿನ ಬೇಡಿಕೆಯ ದೇಶಗಳಿಗೆ, ಕಾಯುವಿಕೆಯು ಹಲವು ವರ್ಷಗಳು, ಕೆಲವೊಮ್ಮೆ ದಶಕಗಳವರೆಗೆ ವಿಸ್ತರಿಸಬಹುದು ಎಂದು ಹೇಳಿದ್ದಾರೆ.
ಯುಎಸ್ ಸಹೋದರ/ಸಹೋದರಿ ವೀಸಾ ಸ್ಪಾನ್ಸರ್‌ಶಿಪ್ ಅರ್ಹತೆಗಳು: ಯುಎಸ್ ನಾಗರಿಕರಾಗಿರಬೇಕು. ಅಲ್ಲದೇ ಪ್ರಾಯೋಜಕರು 21 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯುಎಸ್ ನಾಗರಿಕರಾಗಿರಬೇಕು. ಯುಎಸ್ ಪಾಸ್‌ಪೋರ್ಟ್, ಜನನ ಪ್ರಮಾಣಪತ್ರ, ಕನ್ಸುಲರ್ ರಿಪೋರ್ಟ್ ಆಫ್ ಬರ್ತ್ ಅಬ್ರಾಡ್, ಪೌರತ್ವ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹೊಂದಿರಲೇಬೇಕು.
ಸಹೋದರ/ಸಹೋದರಿ ಸಂಬಂಧ: ಸಹೋದರ/ಸಹೋದರಿಯು ಒಡಹುಟ್ಟಿದವರಾಗಿರಬೇಕು ಅಥವಾ ರಕ್ತಸಂಬಂಧಿಗಳಾಗಿರಬೇಕು. ಇದು ದತ್ತು ಪಡೆದ ಸಹೋದರ/ಸಹೋದರಿಯರಿಗೂ ಒಳಗೊಂಡಿರುತ್ತದೆ, ಆದರೆ ಕಾನೂನು ಅಥವಾ ಕೌಟುಂಬಿಕ ಸಂಬಂಧವು 18 ವರ್ಷ ವಯಸ್ಸಿನ ಮೊದಲು (ಅಥವಾ ದತ್ತು ಪ್ರಕರಣಗಳಲ್ಲಿ 16 ವರ್ಷ) ಒಳಗೊಂಡಿರಬೇಕು. ಅಗತ್ಯವಿರುವ ದಾಖಲೆಗಳಲ್ಲಿ ಕುಟುಂಬ ಪುರಾವೆಗಾಗಿ ಸಹೋದರ/ಸಹೋದರಿಯರ ಜನನ ಪ್ರಮಾಣಪತ್ರಗಳು, ದತ್ತು ಅಥವಾ ಸಂಬಂಧಗಳನ್ನು ಸಾಬೀತುಪಡಿಸುವ ಕಾನೂನು ದಾಖಲೆಗಳನ್ನು ಸಲ್ಲಿಸಬೇಕು.
ಪ್ರಾಯೋಜಕರ ಆರ್ಥಿಕ ಸಾಮರ್ಥ್ಯ: ಆರಂಭಿಕ ಅರ್ಜಿ ಹಂತದಲ್ಲಿ ಅಗತ್ಯವಿಲ್ಲದಿದ್ದರೂ, ಪ್ರಾಯೋಜಕರು ವಲಸೆ ಸಹೋದರ/ಸಹೋದರಿ ಮತ್ತು ಅವರ ಕುಟುಂಬವನ್ನು ಬೆಂಬಲಿಸುವ ಆರ್ಥಿಕ ಸಾಮರ್ಥ್ಯವನ್ನು ಬಹಿರಂಗ ಪಡಿಸಲು, ನಂತರ ಫಾರ್ಮ್ I-864 (ಬೆಂಬಲದ ಪ್ರಮಾಣಪತ್ರ) ಅನ್ನು ಸಲ್ಲಿಸುವುದು ಮುಖ್ಯ. ಅಲ್ಲಿ ನೀವು ಆರ್ಥಿಕ ಬೆಂಬಲದ ಬಗ್ಗೆ ಮಾಹಿತು ನೀಡಬೇಕು.
ಇನ್ನು ಯುಎಸ್ ನಾಗರಿಕರು ತಮ್ಮ ಒಡಹುಟ್ಟಿದವರನ್ನು ಇಲ್ಲಿ ಪ್ರಾಯೋಜಿಸಬಹುದು. ಇದಕ್ಕೆ ಯಾವುದೇ ವಯಸ್ಸಿನ ಅಥವಾ ವೈವಾಹಿಕ ಸ್ಥಿತಿಯ ಸಹೋದರ/ಸಹೋದರಿಯನ್ನು ಪ್ರಾಯೋಜಿಸಬಹುದು. ಆದರೆ, ಈಗಾಗಲೇ ಯುಎಸ್ ಗ್ರೀನ್ ಕಾರ್ಡ್ ಹೊಂದಿರುವವರು ಸಹೋದರ/ಸಹೋದರಿಯರನ್ನು ಪ್ರಾಯೋಜಿಸಲು ಸಾಧ್ಯವಿಲ್ಲ. ಯುಎಸ್ ನಾಗರಿಕರು ಮಾತ್ರ ಇದನ್ನು ಮಾಡಬಹುದು.
ಯುಎಸ್ ನಾಗರಿಕರ ಸಹೋದರ/ಸಹೋದರಿಯರು ವೀಸಾ ವ್ಯವಸ್ಥೆಯಲ್ಲಿ F4 ವಿಭಾಗದ ಅಡಿಯಲ್ಲಿ ಬರುತ್ತಾರೆ. ಅಂದರೆ ಇದು ಕುಟುಂಬ ಆಧಾರಿತ ವೀಸಾಗಳಲ್ಲಿ ಅತ್ಯಂತ ಕಡಿಮೆ ಆದ್ಯತೆಯಾಗಿದೆ. ಪ್ರತಿ ವರ್ಷ ಸುಮಾರು 65,000 F4 ವೀಸಾಗಳನ್ನು ವಿತರಿಸಲಾಗುತ್ತದೆ. ಇತ್ತೀಚೆಗೆ ಈ ವೀಸಾದ ಬೇಡಿಕೆ ಹೆಚ್ಚಾಗಿದ್ದು, ಆದ್ದರಿಂದ ಪ್ರಕ್ರಿಯೆ ಕೂಡಾ 15 ರಿಂದ 20 ವರ್ಷಗಳನ್ನು ಮೀರಬಹುದು ಎನ್ನಲಾಗಿದೆ.
More From GoodReturns

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

ಶೀಘ್ರ ನಿವೃತ್ತಿ ಮತ್ತು ಆರ್ಥಿಕ ಸ್ವಾತಂತ್ರ್ಯ...ಭಾರತೀಯ ಯುವಕರಿಗಾಗಿ FIRE ಚಳುವಳಿ ರಹಸ್ಯಗಳು!



Click it and Unblock the Notifications