ಭಾರತ ಸರ್ಕಾರ 2025-26 ರಲ್ಲಿ ಇ-ಪಾಸ್‌ಪೋರ್ಟ್ (E-Passport) ಸೇವೆಯನ್ನು ಸಂಪೂರ್ಣವಾಗಿ ಜಾರಿಗೆ ತಂದಿತು. ಇದು ಸಾಮಾನ್ಯ ಪಾಸ್‌ಪೋರ್ಟ್‌ನಂತೆಯೇ ಕಾರ್ಯ ನಿರ್ವಹಿಸಿದರೂ, ವಿಶೇಷವಾಗಿ ಎಲೆಕ್ಟ್ರಾನಿಕ್ ಚಿಪ್ ಹೊಂದಿರುತ್ತದೆ. ಆದ್ದರಿಂದ ಇ-ಪಾಸ್‌ಪೋರ್ಟ್ ಹೆಚ್ಚು ಸುರಕ್ಷಿತ ಮಯ್ಯ ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿರುತ್ತದೆ. ಇದು ಫಿಂಗರ್‌ಪ್ರಿಂಟ್, ಫೇಸ್ ರೆಕಗ್ನಿಷನ್ ಮೂಲಕ ಕಾರ್ಯನಿರ್ವಹಿಸುತ್ತದೆ.

ಭಾರತ ಸರ್ಕಾರ ಇ-ಪಾಸ್‌ಪೋರ್ಟ್‌ಗಳನ್ನು ಈಗಾಗಲೇ ಜಾರಿಗೊಳಿಸುತ್ತಿದೆ, ಇದು ಪಾಸ್‌ಪೋರ್ಟ್ ಸೇವಾ ಕ್ಷೇತ್ರದಲ್ಲಿ ಹೊಸ ಬದಲಾವಣೆಯಾಗಿದೆ. ಭದ್ರತೆ ಸುಧಾರಿಸಲು ಮತ್ತು ವಲಸೆ ಪ್ರಕ್ರಿಯೆಗಳನ್ನು ವೇಗಗೊಳಿಸುವುದೇ ಇದರ ಮುಖ್ಯ ಉದ್ದೇಶ.
ಇ-ಪಾಸ್‌ಪೋರ್ಟ್ ಸಾಮಾನ್ಯ ಪಾಸ್‌ಪೋರ್ಟ್‌ಗೆ ಹೋಲಿಸಿದ್ರೆ ಆಧುನಿಕ ರೂಪ. ಇದರ ಹಿಂಬದಿ ಕವರ್‌ನಲ್ಲಿ ಎಲೆಕ್ಟ್ರಾನಿಕ್ ಚಿಪ್ ಅಳವಡಿಸಲಾಗಿದ್ದು, ಭಾವಚಿತ್ರ, ಫಿಂಗರ್‌ಪ್ರಿಂಟ್, ಫೇಸ್ ರೆಕಗ್ನಿಷನ್ ಹಾಗೂ ಇತರ ಗುರುತಿನ ಮಾಹಿತಿ ಸೇರಿ ವ್ಯಕ್ತಿ ಮತ್ತು ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸುತ್ತದೆ.
ಹೊಸ ತಂತ್ರಜ್ಞಾನ
ಇದು ಸಾಮಾನ್ಯ ಭಾರತೀಯ ಪಾಸ್‌ಪೋರ್ಟ್‌ನಂತೆ ಕಂಡರೂ, ಸುಧಾರಿತ ತಂತ್ರಜ್ಞಾನ ಹೊಂದಿದೆ. ಚಿಪ್‌ನಲ್ಲಿನ ದತ್ತಾಂಶ ಎನ್‌ಕ್ರಿಪ್ಟ್ ಆಗಿರುವುದರಿಂದ ನಕಲಿ ಅಥವಾ ದುರುಪಯೋಗ ಮಾಡಲು ಸಾಧ್ಯವಿಲ್ಲ. ICAO ಜಾಗತಿಕ ಭದ್ರತಾ ಮಾನದಂಡಗಳ ಪ್ರಕಾರ ಅಭಿವೃದ್ಧಿಪಡಿಸಿರುವ ಇ-ಪಾಸ್‌ಪೋರ್ಟ್ ಸದ್ಯ ವಿಶ್ವದಾದ್ಯಂತ ಗುರುತಿಸಲಾಗುತ್ತದೆ.
ಎಲ್ಲೆಲ್ಲಿ ಲಭ್ಯವಿದೆ?
ಪ್ರಸ್ತುತ, ಇ-ಪಾಸ್‌ಪೋರ್ಟ್ ಸೌಲಭ್ಯ ದೇಶದ ಆಯ್ದ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು (PSKs) ಮತ್ತು ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ (POPSKs) ಮಾತ್ರ ನೀಡಲಾಗುತ್ತಿದೆ. ಹಂತ ಹಂತವಾಗಿ ದೇಶದೆಲ್ಲೆಡೆ ವಿತರಿಸುವ ಕೆಲಸ ನಡೆಯುತ್ತಿದೆ. ಅಪಾಯಿಂಟ್‌ಮೆಂಟ್ ಬುಕ್ ಮಾಡುವ ಮೊದಲು, ಹತ್ತಿರದ ಕಚೇರಿಯಲ್ಲಿ ಸೌಲಭ್ಯವಿದೆಯೇ ಎಂದು ಅರ್ಜಿದಾರರು ಮೊದಲು ಚೆಕ್ ಮಾಡಿಕೊಳ್ಳಬೇಕು.
ಯಾರೆಲ್ಲಾ ಅರ್ಹರು?
ಇ-ಪಾಸ್‌ಪೋರ್ಟ್‌ಗೆ ಅರ್ಹತಾ ಮಾನದಂಡಗಳು ಸಾಮಾನ್ಯ ಪಾಸ್‌ಪೋರ್ಟ್‌ಗೆ ಇರುವಂತೆಯೇ ಇವೆ. ಯಾವುದೇ ಅರ್ಹ ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಬಹುದು. ಹೊಸ ಪಾಸ್‌ಪೋರ್ಟ್, ಅಪ್ಡೇಟ್ ಅಥವಾ ರೀ-ಡಿಸ್ಟ್ರಿಬ್ಯೂಷನ್ ಬಯಸುವವರು ಇದಕ್ಕೆ ಅರ್ಹರು. ಅಸ್ತಿತ್ವದಲ್ಲಿರುವ ನಿಯಮಗಳಿಗೆ ಒಳಪಟ್ಟು ಅಪ್ರಾಪ್ತ ವಯಸ್ಕರೂ ಕೂಡಾ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಇ-ಪಾಸ್‌ಪೋರ್ಟ್ ಅರ್ಜಿ ಪ್ರಕ್ರಿಯೆ ಸಾಮಾನ್ಯ ಪಾಸ್‌ಪೋರ್ಟ್‌ಗೆ ಸಮಾನವಾಗಿದ್ದು, ಪರಿಶೀಲನಾ ಹಂತದವರೆಗೆ ಆನ್‌ಲೈನ್ ಮೂಲಕ, passportindia.gov.in ಗೆ ಲಾಗಿನ್ ಮಾಡಬೇಕು. ಆನ್‌ಲೈನ್ ಅರ್ಜಿ (ಹೊಸ/ಮರು-ವಿತರಣೆ) ಭರ್ತಿ ಮಾಡಿ. ಅಗತ್ಯ ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ, ಶುಲ್ಕ ಪಾವತಿಸಿ PSK/POPSK ನಲ್ಲಿ ಅಪಾಯಿಂಟ್‌ಮೆಂಟ್ ಬುಕ್ ಮಾಡಿ.
ಆ ನಂತರ ಫಿಂಗರ್ ಪ್ರಿಂಟ್, ಫೇಸ್ ರೆಕಗ್ನಿಷನ್‌ಗಾಗಿ ಹಾಗೂ ದಾಖಲೆ ಪರಿಶೀಲನೆಗಾಗಿ ಕೇಂದ್ರಕ್ಕೆ ಭೇಟಿ ನೀಡಿ. ನಂತರ ಆನ್‌ಲೈನ್‌ನಲ್ಲಿ ಅರ್ಜಿ ಸ್ಥಿತಿ ಟ್ರ್ಯಾಕ್ ಮಾಡಿ. ಸಾಮಾನ್ಯ ಪ್ರಕ್ರಿಯೆಯಡಿ, ಇ-ಪಾಸ್‌ಪೋರ್ಟ್ ಸಾಮಾನ್ಯವಾಗಿ 30 ರಿಂದ 45 ದಿನಗಳಲ್ಲಿ ಅಂಚೆ ಮೂಲಕ ತಲುಪುತ್ತದೆ.
ಎಷ್ಟು ಶುಲ್ಕ?
ಭಾರತದಲ್ಲಿ ಇ-ಪಾಸ್‌ಪೋರ್ಟ್‌ಗೆ ಶುಲ್ಕಗಳು ಸಾಮಾನ್ಯ ಪಾಸ್‌ಪೋರ್ಟ್‌ಗೆ ಸಮನಾಗಿವೆ. 36 ಪುಟಗಳ ಬುಕ್‌ಲೆಟ್‌ಗೆ ₹1500 (ತತ್ಕಾಲ್ ₹3500). 60 ಪುಟಗಳ ಬುಕ್‌ಲೆಟ್‌ಗೆ ₹2000 (ತತ್ಕಾಲ್ ₹4000). 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರಿಗೆ ಸಾಮಾನ್ಯ ಪಾಸ್‌ಪೋರ್ಟ್ ಶುಲ್ಕ ₹1000 ಆಗಿದ್ದು, ತತ್ಕಾಲ್ ಶುಲ್ಕ ಸಾಮಾನ್ಯ ಪಾಸ್‌ಪೋರ್ಟ್‌ಗೆ ಇರುವಂತೆಯೇ ಇರುತ್ತದೆ.


Click it and Unblock the Notifications