ಇಂದು ಹೆಚ್ಚಿನವರು ಕಂಟೆಂಟ್ ಕ್ರಿಯೇಟರ್ಸ್ (Content Creators) ಆಗಿದ್ದಾರೆ. ಯೂಟ್ಯೂಬ್ ಮೂಲಕ ಅದೆಷ್ಟೋ ಜನ ಮನೆಯಲ್ಲೇ ಕುಳಿತು ಲಕ್ಷಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ. ಆದರೆ ಇದರ ಹಿಂದೆ ಸಾಕಷ್ಟು ಪರಿಶ್ರಮವಿದೆ. ಹಾಗಿದ್ರೆ ಯೂಟ್ಯೂಬ್‌ನಿಂದ ಹಣ ಗಳಿಸೋದು (YouTube Money) ಹೇಗೆ ಗೊತ್ತಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

YouTube ಶಾರ್ಟ್ಸ್ ಮೂಲಕ ಹಣ ಗಳಿಸಬಹುದು ಎಂಬುದನ್ನು ಹೆಚ್ಚಿನವರು ಹೇಳುವುದನ್ನು ಕೇಳಿರಬಹುದು, ಆದ್ರೆ 60 ಸೆಕೆಂಡುಗಳ ವಿಡಿಯೋದಲ್ಲಿ ಹಣ ಹೇಗೆ ಬರುತ್ತದೆ ಎಂಬುದು ಹಲವರ ಪ್ರಶ್ನೆ. ಆದರೆ ನೀವೂ ಕೂಡಾ ಯೂಟ್ಯೂಬ್ ಶಾರ್ಟ್ಸ್ ಮೂಲಕ ಹಣ ಮಾಡ್ಬೇಕಾದ್ರೆ ಕೆಲವು ನಿಯಮಗಳು ಮತ್ತು ಅರ್ಹತೆ ಪಡೆಯಬೇಕು. ಅದಕ್ಕೂ ಮೊದಲು YouTube ಪಾರ್ಟ್‌ನರ್ ಪ್ರೋಗ್ರಾಂ (YPP) ಸದಸ್ಯತ್ವ ಪಡೆಯಬೇಕು. ಆ ನಂತರವಷ್ಟೇ ನಿಮ್ಮ ವೀಡಿಯೊಗಳಿಗೆ ಬರುವ ಜಾಹೀರಾತುಗಳಿಂದ ಆದಾಯ ಗಳಿಸಲು ಸಾಧ್ಯ. .
ಇನ್ನು YPP ಗೆ ಸೇರಲು ನಿಮ್ಮ ಚಾನೆಲ್ ಕನಿಷ್ಠ ಅಂದರೂ 1000 ಸಬ್‌ಸ್ಕ್ರೈಬರ್ಸ್ ಅನ್ನು ಹೊಂದಿರಬೇಕು. ಬರೀ ಒಂದೇ ವರ್ಷದಲ್ಲಿ ನೀವು ಅಪ್‌ಲೋಡ್ ಮಾಡಿದ ವಿಡಿಯೋಗಳು ಒಟ್ಟು 4000 ಗಂಟೆಗಳಷ್ಟು ವ್ಯೂವ್ಸ್ ಪಡೆದಿರಬೇಕು ಅಥವಾ ಕಳೆದ 90 ದಿನಗಳಲ್ಲಿ 10 ಮಿಲಿಯನ್ ಶಾರ್ಟ್ಸ್ ವೀಕ್ಷಣೆಗಳನ್ನು ಪಡೆದಿರಬೇಕು. ಇದಿಷ್ಟು ಆದ್ರೆ ಮಾತ್ರ ನೀವು ಯೂಟ್ಯೂಬ್‌ನಿಂದ ಹಣ ಮಾಡಬಹುದು.
ಯೂಟ್ಯೂಬ್ ಹೊಸ ಅಪ್ಡೇಟ್:
YouTube ಇತ್ತೀಚೆಗಷ್ಟೇ ಹೊಸ ಫೀಚರ್‌ವೊಂದನ್ನು ಬಿಡುಗಡೆ ಮಾಡಿತ್ತು. ಅದೇನೆಂದರೆ ಸೀಮಿತ ಅರ್ಹತೆಗಾಗಿ 1000 ಸಬ್‌ಸ್ಕ್ರೈಬರ್ಸ್ ಹೊಂದಿಲ್ಲದಿದ್ದರೂ, ನೀವು ಕನಿಷ್ಠ 500 ಸಬ್‌ಸ್ಕ್ರೈಬರ್ಸ್, 3 ವಿಡಿಯೋಗಳನ್ನು ಅಪ್ಲೋಡ್ ಮಾಡಿಬೇಕು ಮತ್ತು 3,000 ಗಂಟೆಗಳ ವ್ಯೂವ್ಸ್ ಬಂದಿರಬೇಕು ಎಂದು ಹೇಳಿತ್ತು ಅಥವಾ ನೀವು ಅಪ್‌ಲೋಡ್ ಮಾಡಿದ ಶಾರ್ಟ್ಸ್ ಕೇವಲ 90 ದಿನದಲ್ಲಿ 30 ಲಕ್ಷ ವೀಕ್ಷಣೆಗಳನ್ನು ಪಡೆದಿರಬೇಕು. ಇದನ್ನು ಪೂರೈಸಿದರೆ ಮಾತ್ರ ಹಣ ಗಳಿಸಲು ಅರ್ಹರಾಗುತ್ತಾರೆ.
ಮಾನಿಟೈಸೇಷನ್ ಅರ್ಹತೆ ಪಡೆದ ನಂತರ, ನೀವು ಹಣ ಗಳಿಸಲು ಅರ್ಜಿ ಸಲ್ಲಿಸಬೇಕು. ಅದಕ್ಕಾಗಗಿ ಮೊದಲು YouTube ಗೆ ಲಾಗಿನ್ ಮಾಡಿ, ನಂತರ ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ YouTube Studio ಗೆ ಹೋಗಿ. ಆ ನಂತರ ನೀವು ಎಡಭಾಗದಲ್ಲಿರುವ 'Earn' ವಿಭಾಗವನ್ನು ಓಪನ್ ಮಾಡಬೇಕು.
ಒಂದು ವೇಳೆ ನೀವು ಹಣ ಗಳಿಸಲು ಅರ್ಹರಾಗಿದ್ದರೆ, ಅಲ್ಲಿ ನಿಮಗೆ "Apply Now" ಬಟನ್ ಕಾಣಿಸುತ್ತದೆ. ಒಂದು ವೇಳೆ ಅರ್ಹರಾಗಿರದಿದ್ದರೆ, "Notify Me" ಆಯ್ಕೆಯ ಜೊತೆಗೆ ನಿಮ್ಮ ಮುಂದಿನ ಟಾರ್ಗೆಟ್ ಏನು ಎಂಬುದನ್ನು ತೋರಿಸುತ್ತದೆ. ಅರ್ಜಿ ಸಲ್ಲಿಸುವಾಗ ನೀವು YouTube ನಿಯಮಗಳನ್ನು ಒಪ್ಪಿಕೊಂಡಿದ್ದೀರಿ ಎಂದು 'I Agree' ಮೇಲೆ ಕ್ಲಿಕ್ ಮಾಡಬೇಕು. ನಂತರ, ನಿಮ್ಮ AdSense ಖಾತೆಯನ್ನು ಲಿಂಕ್ ಮಾಡಬೇಕು. ನಿಮ್ಮ ಬಳಿ AdSense ಖಾತೆ ಇಲ್ಲದಿದ್ದರೆ, ಹೊಸದಾಗಿ ಕ್ರಿಯೇಟ್ ಮಾಡಬಹುದು. ನಿಮ್ಮ ಮಾನಿಟೈಸೇಷನ್ ಅರ್ಜಿ ಅನುಮೋದನೆ ನಂತರ, ನೀವು Shorts monetization module ಅನ್ನು ಆನ್ ಮಾಡಬೇಕು.
ಇನ್ನು ಯೂಟ್ಯೂಬ್ ಶಾರ್ಟ್‌ನಲ್ಲಿ ಬರುವ ಆದಾಯ ಜಾಹೀರಾತಿನಿಂದಾಗಿರುತ್ತದೆ. ವಿಡಿಯೋ ಪ್ಲೇ ಮಾಡುವಾಗ ಬರುವ ಜಾಹೀರಾತು, ಕಂಟೆಂಟ್ ಕ್ರಿಯೇಟರ್‌ಗೆ ಆದಾಯವಾಗಿ ಪರಿವರ್ತನೆಯಾಗುತ್ತದೆ. ಉದಾಹರಣೆಗೆ ಪ್ರತಿ 1,000 ವೀಕ್ಷಣೆಗಳಿಗೆ ಸುಮಾರು $0.05 ರಿಂದ $0.07 ಡಾಲರ್ ಗಳಿಸಬಹುದು ಎನ್ನಲಾಗಿದೆ. ಅಂದರೆ ಇದು ಭಾರತೀಯ ಕರೆನ್ಸಿಯಲ್ಲಿ ₹4 ರಿಂದ ₹6 ಆಗುತ್ತದೆ. ಒಂದು ವೇಳೆ ನಿಮ್ಮ ವಿಡಿಯೋ 1 ಮಿಲಿಯನ್ ಅಥವಾ 10 ಲಕ್ಷ ವೀಕ್ಷಣೆ ಪಡೆದರೆ, ನೀವು ₹4,000 ರಿಂದ ₹6,000 ರೂ.ವರೆಗೆ ಆದಾಯ ಗಳಿಸಬಹುದು.


Click it and Unblock the Notifications