ಬೆಂಗಳೂರು, ಜುಲೈ 10: ಹೊಸದೊಂದು ಮೊಬೈಲ್ ತೆಗೆದುಕೊಂಡ ಮೇಲೆ ಅದಕ್ಕೆ ಒಂದಿಷ್ಟು ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುತ್ತೇವೆ. ಡೌನ್‌ಲೋಡ್ ಮಾಡಿಕೊಂಡ ಮೇಲೆ ಅಪ್ಲಿಕೇಶನ್ ಕೆಲಸ ಮಾಡಲಿ ಎಂದು ಕಂಡ ಕಂಡ ಎಲ್ಲಾ ಬಗೆಯ ಆಕ್ಸೆಸ್ ಮತ್ತು ಪರ್ಮಿಷನ್ ಕೊಡುತ್ತಾ ಹೋಗುತ್ತೇವೆ. ಆದರೆ ಹೀಗೆ ಪರ್ಮಿಶನ್ ಕೊಡುವ ಮುನ್ನ ಎಚ್ಚರಿಕೆ ಇರಬೇಕು.
ನಿಮ್ಮ ಫೋನಿನ ಎಲ್ಲದ್ದಕ್ಕೂ ಆ್ಯಪ್ ಗಳಿಗೆ ಆ್ಯಕ್ಸಿಸ್ ಕೊಡೋದು ಜಾಣತನವಲ್ಲ. ಈ ಆ್ಯಪ್ ಗಳು ಇವೆಲ್ಲದರ ಪರ್ಮಿಷನ್ ಯಾಕೆ ಕೇಳುತ್ತಿವೆ? ನಾವ್ಯಾಕೆ ಇವೆಲ್ಲಕ್ಕೂ ಅನುಮತಿ ಕೊಡಬೇಕು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ನೀವು ಎಲ್ಲಾ ಆ್ಯಪ್ ಗಳಿಗೂ ಎಲ್ಲಾ ಆ್ಯಕ್ಸೆಸ್ ಕೊಟ್ಟರೆ ಮುಂದೆ ಏನಾಗಬಹುದು ಎನ್ನುವುದು ನಮಗೆ ಗೊತ್ತಿರಬೇಕು.

ಸೈಬರ್ ವಂಚನೆಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ನಿಮ್ಮ ಫೋನ್ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಅನೇಕರು ತಮ್ಮ ಪ್ರಮುಖ ದಾಖಲೆಗಳನ್ನು, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು, ಬ್ಯಾಂಕ್ ಆ್ಯಪ್ ಪಾಸ್ ವರ್ಡ್ ಮೊದಲಾದ ವಿವರಗಳನ್ನು ಸ್ಮಾರ್ಟ್ ಫೋನ್ ನಲ್ಲಿ ಸೇವ್ ಮಾಡಿರುತ್ತಾರೆ. ನೀವು ಲೊಕೇಷನ್, ಕ್ಯಾಮೆರಾ, ಮೈಕ್ರೋಫೋನ್, ಕಾಂಟ್ಯಾಕ್ಟ್, ಬ್ರೌಸಿಂಗ್ ಹಿಸ್ಟರಿ ಮತ್ತು ಫೋಟೋ ಲೈಬ್ರರಿಗಳ ಆ್ಯಕ್ಸೆಸ್ ಗಳನ್ನು ಯಾವ ಆ್ಯಪ್ ಗಳಿಗೆ ಕೊಟ್ಟಿದ್ದೀರಾ ಎನ್ನುವ ಬಗ್ಗೆ ಗಮನ ಇರಬೇಕು. ಈ ಪರ್ಮಿಷನ್ ಗಳ ಮೂಲಕ ನೀವು ಡೇಟಾ ಕಳ್ಳತನಕ್ಕೆ ಗುರಿಯಾಗೋ ಸಾಧ್ಯತೆ ಇದೆ. ಆ್ಯಪ್ ಗಳು ನಿಮ್ಮ ವೈಯಕ್ತಿಕ ಮಾಹಿತಿ ಸಂಗ್ರಹಿಸುತ್ತದೆ. ಡೇಟಾ ಬ್ರೀಚ್ ಅಥವಾ ಥೆಪ್ಟ್ ಆದಲ್ಲಿ ನಿಮ್ಮ ಪ್ರೈವೆಸಿ ರಿಸ್ಕ್ ನಲ್ಲಿರಬಹುದು. ಅಪ್ಲಿಕೇಷನ್ ಗಳಿಗೆ ಅನಗತ್ಯ ಅನುಮತಿಗಳನ್ನು ಕೊಟ್ಟರೆ ನಿಮ್ಮ ಮಾಹಿತಿಯು ನಿಮಗೆ ಅಪಾಯ ತಂದೊಡ್ಡಬಹುದು!
ಇದನ್ನು ಉದಾಹರಣೆ ಮೂಲಕ ಅರ್ಥ ಮಾಡಿಕೊಳ್ಳೋಣ. ನೀವು ಯಾವುದಾದರೂ ಆ್ಯಪ್ ಗೆ ಮೈಕ್ರೋಫೋನ್ ಆ್ಯಕ್ಸೆಸ್ ಕೊಟ್ಟಿದೀರಾ ಅಂತಿಟ್ಕೋಳೋಣ. ನೀವು ಆ ಆ್ಯಪ್ ಓಪನ್ ಮಾಡ್ದಾಗ್ಲೆಲ್ಲಾ ಅದು ನಿಮ್ಮ ಮಾತುಗಳನ್ನ ಕೇಳಿಸಿಕೊಳ್ಳುತ್ತದೆ. ನೀವು ಆ ಆ್ಯಪ್ ಅನ್ನು ಒಂದು ವೇಳೆ ಕ್ಲೋಸ್ ಮಾಡುವುದಕ್ಕೆ ಮರೆತುಹೋದರೆ, ಅದು ನಿಮ್ಮ ಸಂಭಾಷಣೆಗಳನ್ನ ನಿರಂತರವಾಗಿ ಕೇಳಿಸಿಕೊಳ್ಳುತ್ತಲೇ ಇರುತ್ತದೆ. ಅದೇ ರೀತಿ ನೀವು ಫೋಟೋ ಲೈಬ್ರರಿಗೆ ಆ್ಯಕ್ಸೆಸ್ ಕೊಟ್ರೆ, ಆ್ಯಪ್ ಗೆ ಬೇಕೋ ಬೇಡವೋ ಅದು ನಿಮ್ಮ ಫೋಟೋ ಗ್ಯಾಲರಿ ಯನ್ನ ನಿರಂತರವಾಗಿ ಹುಡುಕುತ್ತಾ ಬ್ಯಾಕ್ ಎಂಡ್ ನಲ್ಲಿ ಬೇಕಾದ ಕಂಟೆಂಟ್ ಡೇಟಾ ಹುಡುಕಿ ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಹುದು.
ಇದು ನಿಮ್ಮ ಖಾಸಗಿತನಕ್ಕೆ ಧಕ್ಕೆ ತರಬಹುದಾಗಿದೆ
ನಿಮ್ಮ ಬಗ್ಗೆ ಸಾಧ್ಯವಾದಷ್ಟೂ ಮಾಹಿತಿ ಸಂಗ್ರಹಿಸುವುದು ಈ ಆಪ್ ಗಳ ಗುರಿಯಾಗಿದೆ. ಹೀಗೆ ಮಾಡುವ ಮೂಲಕ, ಅವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಥರ್ಡ್ ಪಾರ್ಟಿ ಆಪ್ ಗಳಿಗೆ ಮಾರಾಟ ಮಾಡುತ್ತವೆ. ಅಂದರೆ ಜಾಹೀರಾತುದಾರರು ಅಥವಾ ಡೇಟಾ ಬ್ರೋಕರ್ ಗಳೊಂದಿಗೆ ನಿಮ್ಮ ಮಾಹಿತಿ ಹಂಚಿಕೊಳ್ಳುತ್ತದೆ. ಹೀಗೆ ನಿಮ್ಮ ಫೋನ್ ನಂಬರ್ ಅಥವಾ ಸೋಷಿಯಲ್ ಮೀಡಿಯಾ ಪ್ರೊಫೈಲ್ ಮೂಲಕ, ಅವರು ನಿಮ್ಮನ್ನ ಸಂಪರ್ಕಿಸಿ ನಿಮ್ಮನ್ನು ವಂಚನೆಯ ಬಲೆಗೆ ಬೀಳಿಸುತ್ತಾರೆ.
ನೀವು ಪರ್ಮಿಷನ್ ನೀಡದೆ ಹೋದರೆ, ಆಪ್ ಸರಿಯಾಗಿ ಕಾರ್ಯನಿರ್ವಹಿಸದೇ ಇರಬಹುದು ಎನ್ನುವ ಮೆಸೇಜ್ ಡಿಸ್ ಪ್ಲೇ ಆದರೆ ಅಂಥ ಆ್ಯಪ್ ತಕ್ಷಣ ಅನ್ ಇನ್ ಸ್ಟಾಲ್ ಮಾಡಿ. ಆಗ ಇಂಟರ್ ಮೀಡಿಯರೀಸ್ ಅಂತಾ ಕರೆಯಲ್ಪಡುವ ಈ ಸಂಸ್ಥೆಗಳಿಗೆ ಬಳಕೆದಾರರ ಪ್ರೈವಸಿಯನ್ನ ಹೇಗೆ ಗೌರವಿಸಬೇಕು ಎನ್ನುವುದು ತಿಳಿಯುತ್ತದೆ. ಇದಲ್ಲದೇ, ಆಪ್ ಪರ್ಮಿಷನ್ ಕೊಡೋವಾಗ ಜಾಗೃತರಾಗಿರಿ. ಆಪ್ ಆಧಾರಿತವಾಗಿ ಕೂಡ ನೀವು ಪರ್ಮಿಷನ್ ಗಳನ್ನ ಮ್ಯಾನೇಜ್ ಮಾಡಬಹುದು. ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡುವುದೆ ಒಳ್ಳೆಯದಲ್ಲ. ಒಂದು ವೇಳೆ ಅನಿವಾರ್ಯಕ್ಕೆ ಬಿದ್ದು ಡೌನ್ ಲೋಡ್ ಮಾಡಿದರೆ ಪರ್ಮಿಶನ್ ನೀಡಬೇಕಾದರೆ ಸಾಕಷ್ಟು ಜಾಗೃತೆ ವಹಿಸಿ.


Click it and Unblock the Notifications