ಆದಾಯ ತೆರಿಗೆ ದಾಖಲೆ (ITR) ಸಲ್ಲಿಸುವಾಗ, ತೆರಿಗೆಯಿಂದ ವಿನಾಯಿತಿ ಪಡೆದ ಆದಾಯವನ್ನು ಸಹ ಸ್ಪಷ್ಟವಾಗಿ ಘೋಷಿಸುವುದು ಕಡ್ಡಾಯ. ನೀವು ಕೃಷಿ ಆದಾಯ, ಪಿಪಿಎಫ್ ಬಡ್ಡಿ, ಸಂಬಂಧಿಕರಿಂದ ಉಡುಗೊರೆ ಅಥವಾ ಜೀವ ವಿಮೆಯಿಂದ ಬಂದ ಹಣ ಪಡೆದರೂ ಸಹ, ಅದನ್ನು ಐಟಿಆರ್‌ನಲ್ಲಿ 'ವಿನಾಯಿತಿ ಆದಾಯ' ಎಂಬ ವಿಭಾಗದಲ್ಲಿ ಸರಿಯಾಗಿ ದಾಖಲಿಸಬೇಕು.

ಐಟಿಆರ್‌ನಲ್ಲಿ ಶೆಡ್ಯೂಲ್ EI ಅನ್ನು ಬಳಸಬೇಕು:
ಐಟಿಆರ್-1 ಮತ್ತು ಐಟಿಆರ್-2 ರೂಪಗಳಲ್ಲಿ 'ಶೆಡ್ಯೂಲ್ ಇಐ' (Exempt Income) ಎಂಬ ಪ್ರತ್ಯೇಕ ವಿಭಾಗವಿದೆ. ಈ ವಿಭಾಗದಲ್ಲಿ ನೀವು ಪಡೆದ ವಿನಾಯಿತಿ ಆದಾಯದ ಸ್ವರೂಪ ಮತ್ತು ಮೊತ್ತವನ್ನು ನಮೂದಿಸಬೇಕು. ಉದಾಹರಣೆಗೆ..
- ಕೃಷಿಯಿಂದ ಆದಾಯ
- ಪಿಪಿಎಫ್ ಬಡ್ಡಿ
- ಎಲ್‌ಐಸಿ ಮೆಚುರಿಟಿ ಹಣ
- ಶೇರುಗಳಿಂದ ದೀರ್ಘಾವಧಿಯ ಬಂಡವಾಳ ಲಾಭ
- ಸಂಬಂಧಿಕರಿಂದ ಪಡೆದ ಉಡುಗೊರೆಗಳು
ಕೃಷಿ ಆದಾಯ ವರದಿಗೆ ವಿಶೇಷ ನಿಯಮ:
ಕೃಷಿಯಿಂದ ಬರುವ ಆದಾಯವು ಸೆಕ್ಷನ್ 10(1) ಅಡಿಯಲ್ಲಿ ತೆರಿಗೆಯಿಂದ ವಿನಾಯಿತಿಯಾಗಿದೆ. ಆದರೆ ಅದು 5,000 ರೂ.ಗಿಂತ ಹೆಚ್ಚು ಇದ್ದರೆ, ನೀವು ಐಟಿಆರ್-2 ಅಥವಾ ಐಟಿಆರ್-3 ಸಲ್ಲಿಸಬೇಕು. ಜೊತೆಗೆ, ಕೃಷಿ ಆದಾಯದ ಪ್ರಮಾಣ, ಭೂಮಿಯ ವಿವರ, ಸ್ಥಳ ಮತ್ತು ಸಂಪಾದನೆ ಹೇಗೆ ಆಗಿದೆ ಎಂಬ ಮಾಹಿತಿಯೂ ನೀಡಬೇಕು. ಡೈರಿ, ಮೀನುಗಾರಿಕೆ, ಕೋಳಿ ಸಾಕಣೆ ಮುಂತಾದ ಉಪಕೃಷಿ ಚಟುವಟಿಕೆಗಳಿಂದ ಬಂದ ಆದಾಯವನ್ನು ಪ್ರತ್ಯೇಕವಾಗಿ ನಮೂದಿಸಬೇಕು.
ಜೀವ ವಿಮಾ ಮತ್ತು ಪಿಎಫ್ ಮೆಚುರಿಟಿಯ ವರದಿ:
ಜೀವ ವಿಮಾ ಪಾಲಿಸಿಯಿಂದ ಬಂದ ಹಣವೂ 'ವಿನಾಯಿತ ಆದಾಯ' ಆಗಿರಬಹುದು. ಆದರೆ 2023 ರಿಂದ, ಕೆಲವೊಂದು ಪಾಲಿಸಿಗಳ (ಉದಾ: ವರ್ಷಕ್ಕೆ 5 ಲಕ್ಷಕ್ಕಿಂತ ಹೆಚ್ಚು ಪ್ರೀಮಿಯಂ ಇರುವ ಪಾಲಿಸಿಗಳು) ಮೆಚುರಿಟಿ ಮೊತ್ತದ ಮೇಲೆ ತೆರಿಗೆ ವಿಧಿಸಬಹುದು. ಈ ಆದಾಯ ಸೆಕ್ಷನ್ 10(10D) ಅಡಿಯಲ್ಲಿ ವಿನಾಯಿತಿಯಲ್ಲದಿದ್ದರೆ, ತೆರಿಗೆ ವಿಧಿಸಲಾಗುವುದು. ಹೀಗಾಗಿ, ಅದನ್ನು ಸ್ಪಷ್ಟವಾಗಿ ಘೋಷಿಸಿ.
ಸಂಬಂಧಿಕರಿಂದ ಉಡುಗೊರೆ ಘೋಷಣೆ ಮಾಡುವುದು ಅಗತ್ಯ:
ಪೋಷಕರು, ಸಹೋದರರು, ಪತಿ ಅಥವಾ ಪತ್ನಿ ಮುಂತಾದ ಸಂಬಂಧಿಕರಿಂದ ಪಡೆದ ಉಡುಗೊರೆಗಳು ತೆರಿಗೆಯಿಂದ ವಿನಾಯಿತಿ ಹೊಂದಿವೆ (ಸೆಕ್ಷನ್ 56(2)(x)). ಆದರೆ 50,000 ರೂ. ಕ್ಕಿಂತ ಹೆಚ್ಚಿನ ಮೊತ್ತದ ಉಡುಗೊರೆಗಳನ್ನು 'ವಿನಾಯಿತ ಆದಾಯ' ಅಡಿಯಲ್ಲಿ ಘೋಷಣೆ ಮಾಡಬೇಕು. ಮದುವೆ ಸಂದರ್ಭ ಅಥವಾ ವಿಲ್ ಮೂಲಕ ಬಂದ ಹಣಕ್ಕೂ ಇದೇ ನಿಯಮ ಅನ್ವಯಿಸುತ್ತದೆ.
ಕ್ಲಬ್ಬಿಂಗ್ ನಿಯಮದ ಬಗ್ಗೆ ಜಾಗರೂಕವಾಗಿರಿ:
ನೀವು ನಿಮ್ಮ ಸಂಗಾತಿ ಅಥವಾ ಮಕ್ಕಳಿಗೆ ಹಣ ಉಡುಗೊರೆಯಾಗಿ ನೀಡಿದರೆ, ಆ ಹಣದಿಂದ ಲಭಿಸುವ ಬಡ್ಡಿ ಅಥವಾ ಲಾಭಗಳನ್ನು ನಿಮ್ಮ ಆದಾಯದ ಭಾಗವನ್ನಾಗಿ ಪರಿಗಣಿಸಬಹುದು. ಇದನ್ನು ಕ್ಲಬ್ಬಿಂಗ್ ನಿಯಮ ಎಂದು ಕರೆಯುತ್ತಾರೆ. ಆದ್ದರಿಂದ, ಇಂತಹ ವಹಿವಾಟುಗಳ ಬಗ್ಗೆ ಜಾಗರೂಕರಾಗಿ ವರದಿ ಮಾಡುವುದು ಅತ್ಯಾವಶ್ಯಕ.
ದಾಖಲೆಗಳನ್ನು ಇಟ್ಟುಕೊಳ್ಳುವುದು ಸುರಕ್ಷಿತ:
ವಿನಾಯಿತ ಆದಾಯದ ಪ್ರಮಾಣ ಹೆಚ್ಚಿನದಾದರೆ. ಉದಾ: ವೃದ್ಧರು ₹20 ಲಕ್ಷದಷ್ಟು ಉಡುಗೊರೆ ನೀಡಿದ್ದರೆ, ಉಡುಗೊರೆ ಪತ್ರ, ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಇತರ ಪುರಾವೆಗಳನ್ನು ಇಟ್ಟುಕೊಳ್ಳುವುದು ಉತ್ತಮ. ಐಟಿಆರ್ ಸಲ್ಲಿಸುವಾಗ ದಾಖಲೆ ಅಪ್‌ಲೋಡ್ ಮಾಡಬೇಕಾಗಿಲ್ಲ, ಆದರೆ ಭವಿಷ್ಯದಲ್ಲಿ ಪರಿಶೀಲನೆ ಬಂದಾಗ ಉಪಯುಕ್ತವಾಗಬಹುದು.
ಸರಿಯಾದ ವರದಿ: ಮರುಪಾವತಿ ಕೂಡ ವೇಗ:
ಸರಿ ರೀತಿಯಲ್ಲಿ ಎಲ್ಲಾ ಆದಾಯವನ್ನು ವರದಿ ಮಾಡಿದರೆ, ಯಾವುದೇ ಗೊಂದಲ ಅಥವಾ ಸಂದೇಹ ಬಾರದಂತೆ ಮಾಡಬಹುದು. ಇದರಿಂದಾಗಿ, ನಿಮ್ಮ ಐಟಿಆರ್ ಸುಲಭವಾಗಿ ಪ್ರಕ್ರಿಯೆಯಾಗುವುದು ಮತ್ತು ಮರುಪಾವತಿ ಕೂಡ ಬೇಗ ಬರುತ್ತದೆ. 2024-25ನೇ ಸಾಲಿನಲ್ಲಿ, ಐಟಿಆರ್ ಹೊಂದಾಣಿಕೆ ಸೂಚನೆಗಳಲ್ಲಿ ಬಹುಮಟ್ಟಿಗೆ ಸಮಸ್ಯೆಯಾದದ್ದು, ವಿನಾಯಿತ ಆದಾಯವನ್ನು ಸರಿಯಾಗಿ ಘೋಷಿಸದ ಕಾರಣವೇ ಆಗಿದೆ ಎಂಬ ಮಾಹಿತಿ ಕೂಡ ಇದೆ.
ವಿನಾಯಿತಿ ಪಡೆದ ಆದಾಯವು ತೆರಿಗೆ ಭಾರದಿಂದ ಮುಕ್ತವಾದರೂ, ಅದು ವರದಿ ಮಾಡಲೇಬೇಕಾದದ್ದು. ಇದು ನಿಮ್ಮ ಹಣಕಾಸು ಪಾರದರ್ಶಕತೆಯನ್ನು ನಿರೂಪಿಸುತ್ತದೆ ಮತ್ತು ಭವಿಷ್ಯದ ಯಾವುದೇ ತೆರಿಗೆ ಸಮಸ್ಯೆಗಳನ್ನು ತಪ್ಪಿಸುತ್ತದೆ. ಸರಿಯಾದ ಫಾರ್ಮ್ ಆಯ್ಕೆ, ಶೆಡ್ಯೂಲ್ ಇಐ ಪ್ರಕ್ರಿಯೆ, ಮತ್ತು ಸಂಪೂರ್ಣ ವಿವರಗಳೊಂದಿಗೆ ಆದಾಯ ಘೋಷಣೆಯು ನಂಬಿಕೆ ಮತ್ತು ಸುರಕ್ಷತೆ ಒದಗಿಸುತ್ತದೆ.
(ಹಕ್ಕು ನಿರಾಕರಣೆ: ಈ ಲೇಖನವು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದು ಅಮೂಲ್ಯವಾದ ಲೋಹದ ಉತ್ಪನ್ನಗಳು, ಸರಕುಗಳು, ಭದ್ರತೆಗಳು ಅಥವಾ ಇತರ ಹಣಕಾಸು ಸಾಧನಗಳನ್ನು ಖರೀದಿಸಲು, ಮಾರಾಟ ಮಾಡಲು ವಿನಂತಿಯಲ್ಲ. ಗ್ರೇನಿಯಂ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಅದರ ಅಂಗಸಂಸ್ಥೆಗಳು, ಸಹವರ್ತಿಗಳು ಮತ್ತು ಈ ಲೇಖನದ ಲೇಖಕರು ಈ ಲೇಖನದಲ್ಲಿನ ಮಾಹಿತಿಯ ಆಧಾರದ ಮೇಲೆ ಉಂಟಾಗುವ ನಷ್ಟಗಳು ಮತ್ತು/ಅಥವಾ ಹಾನಿಗಳಿಗೆ ಹೊಣೆಗಾರರಾಗಿಲ್ಲ.)


Click it and Unblock the Notifications