ಬೆಂಗಳೂರು, ಆಗಸ್ಟ್ 6: ನಮಗೆ ಹೆಚ್ಚಿನ ಉಪಯೋಗವಾಗಲಿ, ಯಾವುದೇ ದಂಡ ಕಟ್ಟುವ ಸಂದರ್ಭ ಬರಬಾರದು ಎಂದು ನಾವು ಆನ್ ಲೈನ್ ನಲ್ಲಿ ಒಂದಿಷ್ಟು ವ್ಯವಸ್ಥೆ ಮಾಡಿಕೊಂಡಿರುತ್ತೇವೆ. ಆದರೆ ಈ ವ್ಯವಸ್ಥೆಗಳೆ ನಮಗೆ ಮುಳುವಾಗುವ ಸಂದರ್ಭ ಬರುತ್ತದೆ! ಎಸ್ ಐಪಿ ಹೂಡಿಕೆ ಮಾಡಿಕೊಂಡಿದ್ದರೆ ಆಟೋಮ್ಯಾಟಿಕ್ ಡೆಬಿಟ್ ಆಯ್ಕೆ ಇಟ್ಟುಕೊಂಡಿರುತ್ತೇವೆ. ಆದರೆ ಡೆಬಿಟ್ ಆಗುವ ವೇಳೆ ನಮ್ಮ ಖಾತೆಯಲ್ಲಿ ಹಣ ಇಲ್ಲದೆ ದಂಡ ಕಟ್ಟಬೇಕಾದ ಸ್ಥಿತಿ ಬಂದುಬಿಡುತ್ತದೆ. ಇದರಿಂದ ರಕ್ಷಿಸಿಕೊಳ್ಳಲು ಕೆಲವೊಂದು ಸೂತ್ರಗಳಿವೆ.
ಕ್ರೆಡಿಟ್ ಕಾರ್ಡ್ ನಿಂದ ಹಣ ವರ್ಗಾವಣೆ:
ಇಂಥ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ನಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುವ ಆಯ್ಕೆ ಒಂದು ಇರುತ್ತದೆ. ಇಲ್ಲಿ ಲಾಭವೂ ಇದೆ ಜತೆಗೆ ನಷ್ಟವೂ ಇದೆ. ಹಾಗಿದ್ದರೆ ನೀವು ಕ್ರೆಡಿಟ್ ಕಾರ್ಡ್‌ನಿಂದ ಬ್ಯಾಂಕ್ ಖಾತೆಗೆ ಹಣವನ್ನು ಹೇಗೆ ವರ್ಗಾಯಿಸಬಹುದು? ಮೊದಲನೆಯಾದಾಗಿ ನೀವು ಡೈರೆಕ್ಟ್ ಟ್ರಾನ್ಸಫರ್ ಮಾಡಬಹುದು. ನಿಮ್ಮ ಕ್ರೆಡಿಟ್ ಕಾರ್ಡ್‌ನಿಂದ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬ್ಯಾಂಕಿಂಗ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಹಣವನ್ನು ವರ್ಗಾಯಿಸಲು ಹಲವು ಬ್ಯಾಂಕ್‌ಗಳು ನಿಮಗೆ ಅವಕಾಶ ಮಾಡಿಕೊಡುತ್ತವೆ. ವಿವಿಧ ಬ್ಯಾಂಕ್‌ಗಳು ವಿಭಿನ್ನ ದೈನಂದಿನ ವರ್ಗಾವಣೆ ಲಿಮಿಟ್ ವಿಧಿಸಬಹುದು ಎನ್ನುವುದು ನಿಮ್ಮ ಗಮನದಲ್ಲಿರಲಿ. ಆದ್ದರಿಂದ ವಿವರಗಳಿಗಾಗಿ ನಿಮಗೆ ಸಂಬಂಧಿಸಿದ ಬ್ಯಾಂಕ್ ಅನ್ನು ಪರಿಶೀಲಿಸಿಕೊಳ್ಳಿ.

ನೆಟ್ ಬ್ಯಾಂಕಿಂಗ್ ಮೂಲಕವೂ ಹಣ ವರ್ಗಾವಣೆ ಮಾಡಬಹುದು. ನಿಮ್ಮ ಬ್ಯಾಂಕ್ ನೆಟ್ ಬ್ಯಾಂಕಿಂಗ್ ಸೇವೆಗಳನ್ನು ನೀಡದಿದ್ದರೆ, ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ, 'ಕ್ರೆಡಿಟ್ ಕಾರ್ಡ್' ವಿಭಾಗಕ್ಕೆ ಹೋಗಿ, 'ವರ್ಗಾವಣೆ ಅಂದರೆ ಟ್ರಾನ್ಸ್ಫರ್ ಆಪ್ಶನ್ ಆರಿಸಿ, ನಿಮ್ಮ ಬ್ಯಾಂಕ್ ಖಾತೆಗೆ ನೀವು ವರ್ಗಾಯಿಸಲು ಬಯಸುವ ಮೊತ್ತವನ್ನು ನಮೂದಿಸಿ ಅಲ್ಲಿ ದೊರೆಯುವ ಸೂಚನೆಗಳ ಆಧಾರದಲ್ಲಿ ನೀವು ಪ್ರಕ್ರಿಯೆ ಪೂರೈಸಬಹುದು.
ಪೋನ್ ಕಾಲ್ ಮುಖಾಂತರ ಸಹ ಹಣ ವರ್ಗಾವಣೆ ಮಾಡಲು ಅವಕಾಶ ಇದೆ. ಕೆಲವು ಕ್ರೆಡಿಟ್ ಕಾರ್ಡ್ ಕಂಪನಿಗಳು ಫೋನ್ ಕರೆ ಮೂಲಕ ಹಣ ವರ್ಗಾವಣೆಯನ್ನು ನೀಡುತ್ತವೆ. ನೀವು ಕ್ರೆಡಿಟ್ ಕಾರ್ಡ್ ಕಂಪನಿಗೆ ಅಗತ್ಯ ವಿವರಗಳನ್ನು ಒದಗಿಸಬೇಕಾಗುತ್ತದೆ. ತದನಂತರ ನೀವು ಹಣ ವರ್ಗಾವಣೆಗೆ ವಿನಂತಿಸಬಹುದು. ಮೊತ್ತವನ್ನು ದೃಢೀಕರಿಸಿದ ನಂತರ, ನೀವು ವರ್ಗಾವಣೆ ಪ್ರಕ್ರಿಯೆ ಮುಂದುವರಿಸಬಹುದು.
ಕೊನೆಯ ವಿಧಾನ ಸಹ ಒಂದಿದೆ. ಇದಕ್ಕಾಗಿ ನೀವು ಚೆಕ್ ಭರ್ತಿ ಮಾಡಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಕಂಪನಿಗಳು ಚೆಕ್‌ಬುಕ್‌ಗಳನ್ನು ಒದಗಿಸುವುದಿಲ್ಲ, ನೀವು ಚೆಕ್ ಬುಕ್ ಗಾಗಿ ರಿಕ್ವೆಸ್ಟ್ ಸಲ್ಲಿಸಬೇಕಾಗುತ್ತದೆ. ಈ ವಿಧಾನವನ್ನು 'ಚೆಕ್ ಟು ಸೆಲ್ಫ್' ಎಂದು ಕರೆಯಲಾಗುತ್ತದೆ. ಚೆಕ್‌ನಲ್ಲಿ ಸೆಲ್ಫ್' ಎಂದು ಬರೆಯಬೇಕಾಗುತ್ತದೆ ಜತೆಗೆ ಅಗತ್ಯವಿರುವ ಇತರ ಮಾಹಿತಿಯನ್ನು ಸೇರಿಸಬೇಕಾಗುತ್ತದೆ. ಇದೆಲ್ಲ ವಿವರ ನಮೂದಿಸಿದ ನಂತರ ಬ್ಯಾಂಕ್ ಗೆ ಚೆಕ್ ನೀಡಿದ ನಂತರ ಅದು ಕ್ಲೀಯರ್ ಆದ ಬಳಿಕ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಿರುತ್ತದೆ.
ಕ್ರೆಡಿಟ್ ಕಾರ್ಡ್ ಮೂಲಕ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವುದು ನಿಮ್ಮ ಹಣದ ತುರ್ತು ಅಗತ್ಯ ಪೂರೈಸಬಹದು. ಆದರೆ ಕೆಲವೊಂದು ನಷ್ಟ ಸಹ ಇದರಲ್ಲಿದೆ. ಕ್ರೆಡಿಟ್ ಕಾರ್ಡ್‌ನ ಪ್ರಮುಖ ಉದ್ದೇಶವೆ ಡೈರೆಕ್ಟ್ ಪೇಮೆಂಟ್. ಈ ರೀತಿಯ ಫಂಡ್ ಟ್ರಾನ್ಸಫರ್ ನಿಮ್ಮ ಶಾಪಿಂಗ್ ಮತ್ತು ರಿವಾರ್ಡ್ ಪಾಯಿಂಟ್‌ಗಳ ಗಳಿಕೆಗೆ ಅಡ್ಡಿಯಾಗಬಹುದು.
ಕ್ರೆಡಿಟ್ ಕಾರ್ಡ್‌ನ ಬಳಕೆ ಮಿತಿಯನ್ನು ಮೀರಿದರೆ ಆದಾಯ ತೆರಿಗೆ ಇಲಾಖೆ ನಿಮ್ಮ ವಹಿವಾಟುಗಳನ್ನು ಪರಿಶೀಲಿಸಬಹುದು. ಬ್ಯಾಂಕ್ ಕ್ರೆಡಿಟ್ ಕಾರ್ಡ್ ನೊಂದಿಗೆ 2 ಲಕ್ಷ ರೂಪಾಯಿಗಳನ್ನು ಮೀರಿದ ವಾರ್ಷಿಕ ವೆಚ್ಚದ ಮಾಹಿತಿಯನ್ನು IT ಇಲಾಖೆಗೆ ಬಹಿರಂಗಪಡಿಸಲಾಗುತ್ತದೆ. ಕ್ರೆಡಿಟ್ ಕಾರ್ಡ್ ನಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುವ ಅವಕಾಶ ಒಂದಿದೆ ಎನ್ನುವುದನ್ನು ತಿಳಿದುಕೊಂಡ ಮಾತ್ರಕ್ಕೆ ಈ ಆಯ್ಕೆ ಬಳಸಿಕೊಳ್ಳಬೇಕು ಅಂತೇನೂ ಇಲ್ಲ. ಕ್ರೆಡಿಟ್ ಕಾರ್ಡ್ ಅಂದರೆ ಸಾಲ ಎಂಬ ಅರ್ಥ ನೀಡುತ್ತದೆ. ಹಣ ಹೊಂದಿಸಲು ಯಾವುದೆ ಆಯ್ಕೆ ಇಲ್ಲೆ ಎಂದಾದರೆ ಮಾತ್ರ ಇದನ್ನು ಬಳಸಿಕೊಳ್ಳಿ.


Click it and Unblock the Notifications