ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ ಮಹತ್ವದ ಸೌಲಭ್ಯವೊಂದನ್ನು ಈಗಾಗಲೇ ಘೋಷಣೆ ಮಾಡಿದೆ. ಅದೇನೆಂದರೆ ಇನ್ಮೇಲೆ ಇಪಿಎಫ್ ಖಾತೆಯಿಂದ ಉದ್ಯೋಗಿಗಳು ಸಂಪೂರ್ಣ ಹಣವನ್ನು ಹಿಂಪಡೆಯಬಹುದು. ಹಾಗಿದ್ರೆ ಇಪಿಎಫ್ ಖಾತೆಯಿಂದ ಶೇಕಡಾ 100ರಷ್ಟು ಹಣವನ್ನು ಹಿಂಪಡೆಯುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಉದ್ಯೋಗಿಗಳ ಅನುಕೂಲಕ್ಕಾಗಿ ಹೊಸ ನಿರ್ಧಾರ
ಇತ್ತೀಚೆಗೆ ಉದ್ಯೋಗಿಗಳಿಗೆ ತುರ್ತು ಆರ್ಥಿಕ ಪರಿಸ್ಥಿತಿಗಳೇ ಹೆಚ್ಚಾಗಿಬಿಟ್ಟಿದೆ. ಇಂತಹ ಸಂದರ್ಭಗಳಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ (EPF) ಹಣವನ್ನು ತ್ವರಿತವಾಗಿ ಪಡೆಯಬೇಕಾಗುತ್ತದೆ. ಇಪಿಎಫ್‌ಒ ಇತ್ತೀಚಿನ ನಿರ್ಧಾರದಿಂದ, ಈಗ ಸದಸ್ಯರು ತಮ್ಮ ಅರ್ಹತೆಯ ಸಂಪೂರ್ಣ ಮೊತ್ತವನ್ನು, ಅಂದರೆ ಶೇಕಡಾ 100ರಷ್ಟು, ಹಿಂಪಡೆಯಬಹುದು.
ಕೇಂದ್ರ ಕಾರ್ಮಿಕ ಸಚಿವ ಮಾನ್ಸುಖ್ ಮಾಂಡವಿಯಾ ನೇತೃತ್ವದ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ದೇಶಾದ್ಯಂತ 7 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿರುವ ಇಪಿಎಫ್‌ಒ ಈ ಕ್ರಮದ ಮೂಲಕ ಅವರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸಲು ಮುಂದಾಗಿದೆ.
ಹಲವು ನಿಯಮಗಳಲ್ಲಿ ಬದಲಾವಣೆ
ಈ ಹಿಂದೆ ಇಪಿಎಫ್ ಹಿಂಪಡೆಯಲು 13 ವಿವಿಧ ನಿಯಮಗಳಿದ್ದವು. ಈಗ ಅವುಗಳನ್ನು ಮೂರು ಮುಖ್ಯ ವರ್ಗಗಳಾಗಿ ವಿಂಗಡಿಸಿ ಸರಳೀಕರಿಸಲಾಗಿದೆ. ಅವುಗಳೆಂದರೆ, ತುರ್ತು ಅಗತ್ಯಗಳಿಗಾಗಿ (ವೈದ್ಯಕೀಯ, ಶಿಕ್ಷಣ, ಮದುವೆ), ಗೃಹ ಅಗತ್ಯಗಳಿಗಾಗಿ (ಮನೆ ಖರೀದಿ, ನಿರ್ಮಾಣ, ಗೃಹ ಸಾಲ ಮರುಪಾವತಿ), ಮತ್ತು ವಿಶೇಷ ಸಂದರ್ಭಗಳಿಗಾಗಿ (ಉದ್ಯೋಗ ನಷ್ಟ, ನೈಸರ್ಗಿಕ ವಿಕೋಪಗಳು, ಸಾಂಕ್ರಾಮಿಕ ರೋಗಗಳು) ವಿಂಗಡಿಸಲಾಗಿದೆ.
ಈ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ, ಸದಸ್ಯರು ತಮ್ಮ ಮತ್ತು ಮಾಲೀಕರ ಪಾಲನ್ನು ಸೇರಿಸಿ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ವಿಶೇಷವಾಗಿ, ಶಿಕ್ಷಣಕ್ಕಾಗಿ ಗರಿಷ್ಠ 10 ಬಾರಿ ಮತ್ತು ಮದುವೆಗಾಗಿ 5 ಬಾರಿ ಹಣವನ್ನು ಹಿಂಪಡೆಯಲು ಅವಕಾಶವಿದೆ. ಹಿಂದೆ, ಶಿಕ್ಷಣ ಮತ್ತು ಮದುವೆ ಎರಡಕ್ಕೂ ಒಟ್ಟಾಗಿ ಕೇವಲ 3 ಬಾರಿ ಮಾತ್ರ ಹಿಂಪಡೆಯಲು ಅವಕಾಶವಿತ್ತು. ಆದರೆ ಈಗ ನಿಯಮ ಬದಲಾಗಿದೆ.
ಕನಿಷ್ಠ 12 ತಿಂಗಳ ಕಾಲ ಉದ್ಯೋಗದಲ್ಲಿರುವವರು ಈ ಭಾಗಶಃ ಹಿಂಪಡೆಯುವಿಕೆಗೆ ಅರ್ಹರಾಗಿರುತ್ತಾರೆ. ಹಿಂದೆ, ವಿವಿಧ ಕಾರಣಗಳಿಗೆ ವಿಭಿನ್ನ ನಿಯಮಗಳಿದ್ದವು. ಈಗ ಎಲ್ಲಾ ಹಿಂಪಡೆಯುವಿಕೆಗಳಿಗೆ 12 ತಿಂಗಳ ಉದ್ಯೋಗ ಅನುಭವ ಸಾಕು.
ಹಿಂಪಡೆಯಲು ಮೂರೇ ದಿನ ಸಾಕು
ಹಿಂದೆ, ಹಿಂಪಡೆಯುವ ಪ್ರಕ್ರಿಯೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಈಗ ಹೆಚ್ಚಿನ ಕ್ಲೈಮ್‌ಗಳು ಮೂರು ದಿನಗಳಲ್ಲಿ ಇತ್ಯರ್ಥವಾಗುತ್ತಿವೆ. ಈ ಹಿನ್ನೆಲೆ ಹಣವು ನೇರವಾಗಿ ಸದಸ್ಯರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ.
ಉತ್ತಮ ಉಳಿತಾಯ ಯೋಜನೆ ಪಿಎಫ್
ಪ್ರತಿ ತಿಂಗಳು, ನೌಕರರ ಸಂಬಳದಿಂದ ಶೇಕಡಾ 12 ಮತ್ತು ಮಾಲೀಕರಿಂದ ಮತ್ತೊಂದು ಶೇಕಡಾ 12 ಈ ಖಾತೆಗೆ ಜಮೆಯಾಗುತ್ತದೆ. ಇದಕ್ಕೆ ಸರ್ಕಾರದ ದರಕ್ಕೆ ಅನುಗುಣವಾಗಿ ಬಡ್ಡಿಯೂ ಬರುತ್ತದೆ. ಆದರೆ ಇಂತಹ ಉಳಿತಾಯವನ್ನು ಅಗತ್ಯವಿದ್ದಾಗ ಹಿಂಪಡೆಯಲು ಅವಕಾಶವಿರುವುದು ಬಹಳ ಉಪಯುಕ್ತವಾಗಿದೆ.
ಸಂಪೂರ್ಣ ಇಪಿಎಫ್ ಹಣವನ್ನು ಹಿಂಪಡೆಯುವ ಹಂತ ಹಂತದ ಪ್ರಕ್ರಿಯೆ ಹೀಗಿದೆ:
1. ಯುಎಎನ್ (Universal Account Number) ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಬೇಕು.
2. ಆನ್‌ಲೈನ್ ಸೇವೆಗಳಲ್ಲಿ "ಕ್ಲೈಮ್ (ಫಾರ್ಮ್-31, 19, 10ಸಿ ಮತ್ತು 10ಡಿ)" ಆಯ್ಕೆಯನ್ನು ಆರಿಸಬೇಕು.
3. ನಿಮ್ಮ ಆಧಾರ್ ಮತ್ತು ಬ್ಯಾಂಕ್ ಖಾತೆ ವಿವರಗಳು ಸರಿಯಾಗಿವೆಯೇ ಎಂದು ಚೆಕ್ ಮಾಡಬೇಕು.
4. ನಂತರ ನೀವು ಆಯ್ಕೆ ಮಾಡಿ ಫಾರ್ಮ್ ಭರ್ತಿ ಮಾಡಬೇಕು.
5. ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ಫಾರ್ಮ್ ಸಲ್ಲಿಸಬೇಕು.
ಈ ಪ್ರಕ್ರಿಯೆ ಪೂರ್ಣಗೊಂಡ ಮೂರು ದಿನಗಳಲ್ಲಿ ನಿಮ್ಮ ಅಕೌಂಟ್‌ಗೆ ಹಣ ಜಮಾ ಆಗುತ್ತದೆ. ಆದರೆ ಒಂದು ವಿಷಯ ನೆನಪಿರಲಿ ನಿಮ್ಮ ಬ್ಯಾಂಕ್ ಖಾತೆ, ಆಧಾರ್ ಮತ್ತು ಪ್ಯಾನ್ ಯುಎಎನ್‌ನೊಂದಿಗೆ ಲಿಂಕ್ ಆಗಿರಬೇಕು. ಇದರಲ್ಲಿ ಏನಾದರೂ ತಪ್ಪಾಗಿದ್ದರೆ, ಹಣ ವಿಥ್‌ಡ್ರಾ ಆಗಲು ವಿಳಂಬವಾಗಬಹುದು ಅಥವಾ ಕ್ಯಾನ್ಸಲ್ ಆಗಬಹುದು.
ಇನ್ನು ನೀವು ಈ ಪಿಎಫ್ ಹಣ ಯಾವಾಗ 100% ವಿಥ್‌ಡ್ರಾ ಮಾಡಬಹುದೆಂದರೆ, ನಿವೃತ್ತಿಯ ನಂತರ (58 ವರ್ಷ ತುಂಬಿದ ನಂತರ), ಅಥವಾ ಎರಡು ತಿಂಗಳಿಗಿಂತ ಹೆಚ್ಚು ಕಾಲ ಜಾಬ್ ಇಲ್ಲದಿದ್ದಾಗ ಅಥವಾ ಈಗ ಜಾರಿಗೊಳಿಸಿದ ಹೊಸ ನಿಯಮಗಳ ಪ್ರಕಾರ ಅಗತ್ಯಕ್ಕನುಗುಣವಾಗಿ ಹಿಂಪಡೆಯಬಹುದು. ಈ ಹೊಸ ನಿಯಮದ ಮೂಲಕ, EPFO ಸದಸ್ಯರು ತಮ್ಮ ಖಾತೆಯಲ್ಲಿ ನೌಕರ ಮತ್ತು ಉದ್ಯೋಗದಾತರ ಪಾಲು ಸೇರಿ ಅರ್ಹ ಬಾಕಿಯ 100% ವರೆಗೆ ಹಣವನ್ನು ಹಿಂಪಡೆಯುವ ಅವಕಾಶ ಹೊಂದಿದ್ದಾರೆ. ಆದರೆ 25% ಶೇಕಡಾದಷ್ಟು ಬ್ಯಾಲೆನ್ಸ್ ಇಟ್ಟುಕೊಳ್ಳಬೇಕು. ಏಕೆಂದರೆ ಇದು ಉದ್ಯೋಗಿಗಳು ನಿವೃತ್ತರಾದಾಗ ಈ ಇಪಿಎಫ್ ಹಣ ಸಹಾಯಕ್ಕೆ ಬರುತ್ತದೆ.
(ಹಕ್ಕುತ್ಯಾಗ: ವ್ಯಕ್ತಿಗತ ವಿಶ್ಲೇಷಕರ ಅಥವಾ ಘಟಕಗಳ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಮಾತ್ರ ಇಲ್ಲಿ ಸೂಚಿಸಲಾಗಿದೆ ಮತ್ತು ಅವು Goodreturns.in ಅಥವಾ Greynium Information Technologies Private Limited (ಒಟ್ಟಿಗೆ "ನಾವು" ಎಂದು ಉಲ್ಲೇಖಿಸಲಾಗಿದೆ) ಅವರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾವುದೇ ವಿಷಯದ ನಿಖರತೆ, ಪೂರ್ಣತೆ ಅಥವಾ ನಂಬಿಕಾರ್ಹತೆಯನ್ನು ನಾವು ಖಚಿತಪಡಿಸುವುದಿಲ್ಲ, ಸಮರ್ಥಿಸುತ್ತಿಲ್ಲ ಅಥವಾ ಹೊಣೆಗಾರರಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ_SECURITIES_ ಖರೀದಿ ಅಥವಾ ಮಾರಾಟವನ್ನು ಪ್ರೇರೇಪಿಸುವುದಿಲ್ಲ. ಎಲ್ಲಾ ಮಾಹಿತಿಯು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದ್ದು, ಯಾವುದೇ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಲೈಸೆನ್ಸ್ ಪಡೆದ ಹಣಕಾಸು ಸಲಹೆಗಾರರಿಂದ ಸ್ವತಃ ಪರಿಶೀಲಿಸುವುದು ಅಗತ್ಯ.)
More From GoodReturns

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications