ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್ ತನ್ನ ಆಯ್ದ ಡೆಬಿಟ್ ಕಾರ್ಡ್ ಬಳಕೆದಾರರಿಗೆ ವಿಮಾನ ನಿಲ್ದಾಣ ಲಾಂಜ್ ಪ್ರವೇಶ ನೀತಿಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ. ಅಕ್ಟೋಬರ್ 1 ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ.
ಐಸಿಐಸಿಐ ಬ್ಯಾಂಕ್ ಬದಲಾವಣೆ ಮಾಡಿರುವ ಹೊಸ ಮಾರ್ಗಸೂಚಿಗಳ ಪ್ರಕಾರ, ವಿಮಾನ ನಿಲ್ದಾಣದ ಕಾಂಪ್ಲಿಮೆಂಟರಿ ಲಾಂಜ್‌ಗೆ ಭೇಟಿ ಕೊಡುವ ಅರ್ಹತೆ ಹೊಂದಲು ಡೆಬಿಟ್ ಕಾರ್ಡ್ ಮೂಲಕ ಕನಿಷ್ಠ 10,000 ರೂಪಾಯಿಗಳನ್ನು ಖರ್ಚು ಮಾಡಿರಬೇಕಾಗುತ್ತದೆ. ಐಸಿಐಸಿಐ ಬ್ಯಾಂಕ್‌ನ ಡೆಬಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಆರ್ಥಿಕ ವರ್ಷದ ಪ್ರತಿ ತ್ರೈಮಾಸಿಕದಲ್ಲಿ ಎರಡು ಬಾರಿ ದೇಶೀಯ ವಿಮಾನ ನಿಲ್ದಾಣದ ಲಾಂಜ್‌ಗೆ ಉಚಿತ ಪ್ರವೇಶ ಪಡೆಯಲು ಅರ್ಹತೆ ಹೊಂದಿರುತ್ತಾರೆ.

ಹೊಸ ನಿಯಮದ ಪ್ರಕಾರ ಅರ್ಹತೆ ಪಡೆಯಲು ಹಿಂದಿನ ತ್ರೈಮಾಸಿಕದಲ್ಲಿ ಡೆಬಿಟ್ ಕಾರ್ಡ್ ಮೂಲಕ ಗ್ರಾಹಕರು ಕನಿಷ್ಠ 10,000 ರೂಪಾಯಿ ಖರ್ಚು ಮಾಡಿಬೇಕು. ಉದಾಹರಣೆಗೆ 2024ರ ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳಿನಲ್ಲಿ ಎರಡು ಬಾರಿ ವಿಮಾನ ನಿಲ್ದಾಣ ಲಾಂಜ್‌ಗೆ ಉಚಿತ ಪ್ರವೇಶ ಪಡೆಯಬೇಕು ಎಂದಾದರೆ, 2024ರ ಜುಲೈನಿಂದ ಸೆಪ್ಟೆಂಬರ್ ಅವಧಿಯ ತ್ರೈಮಾಸಿಕದಲ್ಲಿ ಐಸಿಐಸಿಐ ಡೆಬಿಟ್ ಕಾರ್ಡ್ ಮೂಲಕ ಕನಿಷ್ಠ 10,000 ರೂಪಾಯಿ ಖರ್ಚು ಮಾಡಬೇಕು.
ಡೆಬಿಟ್ ಕಾರ್ಡ್ ಬಳಕೆಗೆ ಉತ್ತೇಜನ
ಡೆಬಿಟ್ ಕಾರ್ಡ್‌ಗಳ ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಐಸಿಐಸಿಐ ಬ್ಯಾಂಕ್ ಈ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಡೆಬಿಟ್ ಕಾರ್ಡ್ ಮೂಲಕ ನಿಯಮಿತವಾಗಿ ಹಣವನ್ನು ಖರ್ಚು ಮಾಡುವವರಿಗೆ ಮಾತ್ರ ಲಾಂಜ್ ಪ್ರವೇಶದಂತಹ ಪ್ರಯೋಜನಗಳು ಸಿಗಲಿವೆ. ಹಾಗೆಂದ ಮಾತ್ರಕ್ಕೆ ಐಸಿಐಸಿಐ ಬ್ಯಾಂಕ್ ಡೆಬಿಟ್ ಕಾರ್ಡ್ ಬಳಸಿ ಎಟಿಎಂನಲ್ಲಿ 10,000 ರೂಪಾಯಿ ಡ್ರಾ ಮಾಡಿದರೆ ಇದನ್ನು ವಹಿವಾಟುಗಳೆಂದು ಪರಿಗಣಿಸುವುದಿಲ್ಲ, ಬದಲಾಗಿ ಡೆಬಿಟ್ ಕಾರ್ಡ್ ಬಳಸಿ ಇ-ಕಾಮರ್ಸ್ ಖರೀದಿಗಳು, ಚಿಲ್ಲರೆ ಮಾರಾಟ ಮಳಿಗೆಯಲ್ಲಿನ ಖರೀದಿಗಳಂತಹ ವಹಿವಾಟುಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಜುಲೈ-ಸೆಪ್ಟೆಂಬರ್ 2024 ರ ನಡುವೆ ₹10,000 ಖರ್ಚು ಮಾಡಿದವರಿಗೆ ಅಕ್ಟೋಬರ್-ಡಿಸೆಂಬರ್ 2024 ನಡುವೆ ಲಾಂಜ್ ಪ್ರವೇಶಕ್ಕೆ ಅವಕಾಸ ಸಿಗಲಿದೆ. ಅಕ್ಟೋಬರ್-ಡಿಸೆಂಬರ್ 2024 ರ ನಡುವೆ ₹10,000 ಖರ್ಚು ಮಾಡಿದ ಗ್ರಾಹಕರು 2025ರ ಜನವರಿಯಿಂದ ಮಾರ್ಚ್ ನಡುವೆ ಎರಡು ಬಾರಿ ಲಾಂಜ್ ಪ್ರವೇಶಿಸಲು ಅರ್ಹರಾಗಲಿದ್ದಾರೆ.
ಯಾರಿಗೆಲ್ಲಾ ಪ್ರಯೋಜನ?
ಐಸಿಐಸಿಐನ ವಿವಿಧ ಡೆಬಿಟ್ ಕಾರ್ಡ್ ಮಾದರಿಗಳಿಗೆ ಮಾತ್ರ ಈ ಷರತ್ತು ಅನ್ವಯಿಸುತ್ತದೆ. ಐಸಿಐಸಿಐ ಕೋರಲ್ ಪೇವೇವ್ ಡೆಬಿಟ್ ಕಾರ್ಡ್, ರುಪೇ ಕೋರಲ್ ಡೆಬಿಟ್ ಕಾರ್ಡ್, ಕೋರಲ್ ಬಿಸಿನೆಸ್ ಮಾಸ್ಟರ್ ಕಾರ್ಡ್, ರೂಬಿಕ್ಸ್ ಮಾಸ್ಟರ್ ಡೆಬಿಟ್ ಕಾರ್ಡ್ ಸೇರಿದಂತೆ ಹಲವು ಕಾರ್ಡ್‌ಗಳ ಬಳಕೆದಾರರು ಲಾಂಜ್‌ಗೆ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ.
ಡೆಬಿಟ್ ಕಾರ್ಡ್ ಬಳಸಿ ಲಾಂಜ್ ಪ್ರವೇಶ ಹೇಗೆ?
ಮೇಲಿನ ಷರತ್ತುಗಳನ್ನು ಪೂರೈಸಿದ್ದರೆ ಡೆಬಿಟ್ ಕಾರ್ಡ್ ಬಳಕೆ ಮಾಡಿ ತ್ರೈಮಾಸಿಕದಲ್ಲಿ ಎರಡು ಬಾರಿ ವಿಮಾನ ನಿಲ್ದಾಣದ ಲಾಂಜ್‌ಗಳಿಗೆ ಉಚಿತ (ಕಾಂಪ್ಲಿಮೆಂಟರಿ) ಪ್ರವೇಶಗಳನ್ನು ಪಡೆಯಬಹುದು.
ಲಾಂಜ್ ಪ್ರವೇಶದಲ್ಲಿ ಮೇಲಿನ ಅರ್ಹತೆಗಳನ್ನು ಪೂರೈಸಿದ ಐಸಿಐಸಿಐ ಡೆಬಿಟ್ ಕಾರ್ಡ್ ಅನ್ನು ಪ್ರಸ್ತುತಪಡಿಸಬೇಕು. ಆ ದಿನ ಅಥವಾ ಮರುದಿನ ಪ್ರಯಾಣಿಸುವ ವಿಮಾನ ಪ್ರಯಾಣದ ಟಿಕೆಟ್ ಅಥವಾ ಬೋರ್ಡಿಂಗ್ ಪಾಸ್ ತೋರಿಸಬೇಕು. ಪ್ರತಿ ಬಾರಿ ನೀವು ಲಾಂಜ್‌ಗೆ ಪ್ರವೇಶ ಮಾಡಿದಾಗ ಕಾರ್ಡ್ ಮೂಲಕ 2 ರೂಪಾಯಿ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ. ಇದು ಐಸಿಐಸಿಐ ಕಾರ್ಡ್ ಬಳಕೆದಾರರಿಗೆ ಮಾತ್ರ ಅನ್ವಯವಾಗಲಿದ್ದು ನಿಮ್ಮ ಜೊತೆಗಿರುವವರಿಗೆ ನಿಮ್ಮ ಕಾರ್ಡ್ ಬಳಸಿ ಲಾಂಜ್‌ಗೆ ಪ್ರವೇಶಿಸಲು ಅನುಮತಿ ಇರುವುದಿಲ್ಲ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications