ನವದೆಹಲಿ, ಜೂನ್ 29: ಖರೀದಿಗಾಗಿ ಮನೆ ಹುಡುಕಾಟ ನಡೆಸಲು ಈಗ ಹಲವಾರು ಆನ್ ಲೈನ್ ಅಪ್ಲಿಕೇಶನ್ ಗಳು ಲಭ್ಯವಿವೆ. ಆದರೆ ಮನೆ ಹುಡುಕುವುದಕ್ಕೂ ಒಂದು ಸರಿಯಾದ ಕ್ರಮ ಇದೆ. ಈ ಬಗ್ಗೆ ಒಂದಿಷ್ಟು ಟಿಪ್ಸ್ ಗಳನ್ನು ನಾವು ನಿಮಗೆ ತಿಳಿಸುತ್ತೇವೆ. ಕೆಲವೊಮ್ಮೆ ಗಡಿಬಿಡಿಯಲ್ಲಿ ಮನೆ ಫೈನಲ್ ಮಾಡಿ ನಂತರ ನಷ್ಟ ಮಾಡಿಕೊಳ್ಳುವ ಉದಾಹರಣೆ ಸಹ ಇದೆ.
ಆನ್ ಲೈನ್ ಪ್ರಾಪರ್ಟಿ ಪೋರ್ಟಲ್‌ಗಳ ಅನುಕೂಲವೆಂದರೆ ಕೆಲವೇ ಕ್ಲಿಕ್‌ಗಳಲ್ಲಿ ನಿಮಗೆ ನೂರಾರು ಪ್ರಾಪರ್ಟಿಗಳು ಸಿಗುತ್ತವೆ. ಇದರಿಂದ, ನಿಮ್ಮ ಬಜೆಟ್‌ನಲ್ಲಿ, ನಿಮಗೆ ಬೇಕಾದ ಸ್ಥಳದಲ್ಲಿ ಮನೆ ಹುಡುಕುವುದು ಸುಲಭವಾಗುತ್ತದೆ. ಆ ಸ್ಥಳದಲ್ಲಿ ಇತರ ಪ್ರಾಪರ್ಟಿಗಳ ಬೆಲೆ ಎಷ್ಟಿದೆ ಎಂದೂ ನೀವು ಹೋಲಿಕೆ ಮಾಡಬಹುದು. ಇಂತಹ ಪೋರ್ಟಲ್‌ಗಳಲ್ಲಿ ಲಿಸ್ಟ್ ಆದ ಬಹುತೇಕ ಪ್ರಾಪರ್ಟಿಗಳು ಸಾಮಾನ್ಯವಾಗಿ ರೀಸೇಲ್ ಕ್ಯಾಟಗರಿಗೆ ಸೇರುತ್ತವೆ. ರಿಯಲ್ ಎಸ್ಟೇಟ್ ಪರಿಣಿತರ ಪ್ರಕಾರ, ಇಂಟರ್ನೆಟ್‌ನಲ್ಲಿ ಇತ್ತೀಚೆಗೆ ಹಲವು ಪ್ರಾಪರ್ಟಿಗಳ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಆದರೆ, ಬೆಲೆ ವಿಷಯದಲ್ಲಿ ಈ ಜಾಹೀರಾತುಗಳ ಅಸಲಿತನದ ಬಗ್ಗೆ ಒಂದು ಅನುಮಾನವಿದೆ. ಒಂದೇ ಜಾಗದಲ್ಲಿಣ ಫ್ಲಾಟ್ ಗೆ ಬೇರೆ ಬೇರೆ ಪೋರ್ಟಲ್ ಗಳು ಬೇರೆ ಬೇರೆ ದರ ತೋರಿಸಿದ ಉದಾಹರಣೆಗಳು ಇರುತ್ತವೆ. ಅಂದರೆ ಸೇಮ್ ಪ್ರಾಪರ್ಟಿಯ ದರ ವ್ಯತ್ಯಾಸವಾಗಿರುತ್ತದೆ.

ಏಜೆಂಟ್‌ಗಳು ಪ್ರಾಪರ್ಟಿಗಳನ್ನು ಆನ್‌ಲೈನ್‌ನಲ್ಲಿ ಲಿಸ್ಟ್ ಮಾಡುವಾಗ, ಸಾಮಾನ್ಯವಾಗಿ ಯಾವುದೋ ಫೋಟೋ ಹಾಕಿರುತ್ತಾರೆ. ಫ್ಲಾಟ್‌ನ ವಿವರಗಳೂ ತಪ್ಪಾಗಿರುತ್ತವೆ. ಬೆಲೆ ಕಡಿಮೆ ತೋರಿಸಿರುತ್ತಾರೆ. ಮನೆ ಖರೀದಿ ಮಾಡಲು ಆಸಕ್ತಿ ಇರುವವರನ್ನು ಆಕರ್ಷಿಸುವುದಕ್ಕೆ ಮತ್ತು ಲೀಡ್ ಜನರೇಟ್ ಮಾಡುವುದಕ್ಕೆ ಈ ತಂತ್ರವನ್ನು ಅನುಸರಿಸಲಾಗುತ್ತದೆ. ಏಜೆಂಟ್ ಅನ್ನು ಜನರು ಸಂಪರ್ಕಿಸಿದಾಗ, ಲಿಸ್ಟ್ ಮಾಡಿದ ಪ್ರಾಪರ್ಟಿ ಈಗಾಗಲೇ ಮಾರಾಟವಾಗಿದೆ. ಬೇರೆ ಪ್ರಾಪರ್ಟಿ ತೋರಿಸುತ್ತೇನೆ ಎಂದು ಹೇಳುತ್ತಾರೆ. ಇಂಥ ಸಂದರ್ಭದಲ್ಲಿಯೂ ನೀವು ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.
ರಿಯಲ್ ಎಸ್ಟೇಟ್ ಪೋರ್ಟಲ್‌ಗಳು ತಮ್ಮ ಪ್ಲಾಟ್‌ಫಾರಂಗಳಲ್ಲಿ ಲಿಸ್ಟ್ ಮಾಡುವ ಸಮಯದಲ್ಲೇ ಪ್ರಾಪರ್ಟಿಯನ್ನು ಮತ್ತು ಏಜೆಂಟ್ ಮಾಹಿತಿಯನ್ನು ಪರಿಶೀಲಿಸುತ್ತವೆ. ಆದರೆ, ಪರಿಶೀಲನೆ ಮಾಡುವುದಕ್ಕೆ ಯಾವ ಪ್ರಕ್ರಿಯೆ ಅನುಸರಿಸಲಾಗುತ್ತದೆ? ಇದರ ಬಗ್ಗೆ ಏನು ಹೇಳುತ್ತಾರೆ? ಈ ಬಗ್ಗೆ ಸ್ಪಷ್ಟ ಮಾಹಿತಿ ನಿಮಗೆ ಸಿಗುವುದು ಕಷ್ಟ.
ಬಹಳಷ್ಟು ಬಾರಿ, ರಿಯಲ್ ಎಸ್ಟೇಟ್ ಬ್ರೋಕರ್‌ಗಳು ನಿಮ್ಮ ಮನವೊಲಿಸಲು ಪ್ರಯತ್ನಿಸುತ್ತಾರೆ. ನೀವು ಫ್ಲಾಟ್ ಹುಡುಕುತ್ತಿರುವ ಪ್ರದೇಶದಲ್ಲಿ ತುಂಬಾ ಬೇಗ ಬೆಲೆ ಏರುತ್ತಿದೆ ಎಂದು ಹೇಳುತ್ತಾರೆ. ಇದರಿಂದ ನೀವು ಬೇಗ ಬೇಗ ಖರೀದಿ ಮಾಡಬೇಕು ಎಂಬ ತುರ್ತು ಮೂಡುತ್ತದೆ. ಬೇಗ ನಿರ್ಧಾರ ಮಾಡಿ ಎಂದು ಹೇಳುತ್ತಾರೆ. ಬೆಲೆ ಏರುವುದಕ್ಕೂ ಮೊದಲೇ ಮನೆ ಖರೀದಿ ಮಾಡಿಬಿಡುವುದು ಒಳಿತು ಎಂದು ಯೋಚನೆ ಮಾಡುವಂತೆ ನಿಮ್ಮನ್ನು ಪ್ರಚೋದಿಸುತ್ತಾರೆ. ಆನ್‌ಲೈನ್ ಪೋರ್ಟಲ್‌ಗಳಲ್ಲಿ ಪ್ರಾಪರ್ಟಿಗಳನ್ನು ನೋಡಿದ ನಂತರ, ಆಫ್‌ಲೈನ್ ಮತ್ತು ಆನ್‌ಲೈನ್ ಸಂಶೋಧನೆಯನ್ನು ಮಾಡುವುದು ಉತ್ತಮ. ಒಂದು ಫ್ಲಾಟ್ ಖರೀದಿ ಮಾಡುವ ಬಗ್ಗೆ ಯೋಚನೆ ಮಾಡುತ್ತಿದ್ದರೆ, ಆ ಸ್ಥಳದಲ್ಲಿನ ಇತರ ಬ್ರೋಕರ್‌ಗಳ ಜೊತೆಗೆ ಮಾತನಾಡಿ. ಆ ಸೊಸೈಟಿ ಅಥವಾ ಪ್ರದೇಶದಲ್ಲಿ ಇತ್ತೀಚೆಗೆ ಖರೀದಿ ಮಾಡಿದವರ ಜೊತೆಗೂ ನೀವು ಮಾತನಾಡಬಹುದು.
ಮನೆ ಖರೀದಿ ಮಾಡುವುದಕ್ಕೂ ಮೊದಲು ಪ್ರಾಪರ್ಟಿಯನ್ನು ನೋಡಿ. ಗೆಳೆಯರು, ಸ್ನೇಹಿತರು ಇಲ್ಲವೇ ಏಜೆಂಟರು ಹೇಳಿದರು ಎನ್ನುವ ಕಾರಣಕ್ಕೆ ಕಣ್ಣು ಮುಚ್ಚಿಕೊಂಡು ಮನೆ ಖರೀದಿ ಮಾಡುವ ಸಾಹಸ ಮಾಡಬೇಡಿ. ನಿಮ್ಮದೆ ಆದ ಒಂಷದಿಟಷ್ಟು ಸಂಶೋಧನೆ ಮಾಡಿಕೊಳ್ಳಿ. ಸಾಧ್ಯವಾದರೆ ಸಂಬಂಧಿಸಿದ ಇಲಾಖೆ ಮಟ್ಟದಲ್ಲಿಯೂ ಒಂದಿಷ್ಟು ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡಿ.


Click it and Unblock the Notifications