Mobile Number: ನಿಮ್ಮ ಹಳೆಯ ಮೊಬೈಲ್‌ ನಂಬರ್‌ ಬೇರೆಯವರಿಗೆ ಕೊಟ್ಟರೆ ಮೊದಲು ಈ ಕೆಲಸ ಮಾಡಿ! ಇಲ್ಲಾಂದ್ರೆ ಪಕ್ಕಾ ಮೋಸ ಹೋಗ್ತೀರ

ಇಂದಿನ ದಿನಗಳಲ್ಲಿ ಮೊಬೈಲ್‌ (Mobile) ಪ್ರತಿಯೊಬ್ಬರ ಅಗತ್ಯ ಸಾಧನವಾಗಿದೆ. ಮೊಬೈಲ್‌ ಇದ್ದವರು ಪ್ರತಿಯೊಬ್ಬರೂ ಕೂಡಾ ಸಿಮ್‌ ಕಾರ್ಡ್‌ ಹೊಂದಿರುತ್ತಾರೆ. ಮೊಬೈಲ್‌ ಬಳಸುವವರು ಸಿಮ್‌ ಕಾರ್ಡ್‌ (SIM Card) ಹೊಂದಿರದಿದ್ದರೆ ಯಾವುದೇ ವೈಯಕ್ತಿಕ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದ್ರೆ ಕೆಲವು ವರ್ಷಗಳ ನಂತರ ಮೊಬೈಲ್‌ ನಂಬರ್‌ (Number) ಆಟೋಮೆಟಿಕ್‌ ಆಗಿ ಬ್ಲಾಕ್‌ ಆಗುತ್ತದೆ. ಆ ಸಂದರ್ಭದಲ್ಲಿ ಮರಳಿ ಪಡೆಯಬೇಕಾಗುತ್ತದೆ.

ಹಳೆಯ ಮೊಬೈಲ್‌ ನಂಬರ್‌ ಬೇರೆಯವರಿಗೆ ಕೊಟ್ಟರೆ ಮೊದಲು ಈ ಕೆಲಸ ಮಾಡಿ!

ಇನ್ನು ಮೊಬೈಲ್‌ ನಂಬರ್‌ಗಳನ್ನು ಕೆಲವರು ಆಗಾಗ ಬದಲಾಯಿಸುತ್ತಲೇ ಇರುತ್ತಾರೆ. ಇನ್ನೂ ಕೆಲವರು ವರ್ಷಗಳ ನಂತರ ಬದಲಾಯಿಸುತ್ತಾರೆ. ಆದ್ದರಿಂದ ಫೋನ್‌ ನಂಬರ್‌ಗಳನ್ನು ಬದಲಾಯಿಸುವುದು ಸಾಮಾನ್ಯ ಸಂಗತಿಯಾಗಿದೆ. ಒಂದು ವೇಳೆ ಒಬ್ಬ ವ್ಯಕ್ತಿ ಒಂದು ನಂಬರ್‌ ಬಳಕೆಯೇ ಮಾಡದಿದ್ದರೆ, ಟೆಲಿಕಾಂ ಕಂಪನಿಗಳೇ ಆ ನಂಬರ್‌ ಅನ್ನು ಬ್ಲಾಕ್‌ ಮಾಡುತ್ತದೆ ಅಥವಾ ಮತ್ತೊಬ್ಬರಿಗೆ ನೀಡುತ್ತದೆ. ಹಾಗಿದ್ರೆ ಮೊಬೈಲ್‌ ನಂಬರ್‌ ಮತ್ತೊಬ್ಬರಿಗೆ ನೀಡಿದರೆ ಏನು ಮಾಡ್ಬೇಕು ಗೊತ್ತಾ? ಈ ಟಿಪ್ಸ್‌ ಫಾಲೋ ಮಾಡಲೇಬೇಕು.

ಸಾಮಾನ್ಯವಾಗಿ ಇಂದು ಸಿಮ್‌ ಕಾರ್ಡ್‌ ಕೇವಲ ಕರೆಗಳಿಗೆ ಮಾತ್ರವಲ್ಲದೇ, ಬ್ಯಾಂಕ್‌ ಖಾತೆಗಳಿಂದ ಹಿಡಿದು ಆಧಾರ್‌ ಕಾರ್ಡ್‌ವರೆಗೂ ಲಿಂಕ್‌ ಆಗಿರುತ್ತದೆ.. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಫೋನ್‌ ನಂಬರ್‌ ಬ್ಯಾಂಕ್ ಖಾತೆಗಳು, ಸೋಷಿಯಲ್‌ ಮೀಡಿಯಾ ಮತ್ತು ವಿವಿಧ ಡಿಜಿಟಲ್ ಸೇವೆಗಳಲ್ಲಿ ಲಿಂಕ್‌ ಆಗಿರುತ್ತದೆ. ಹಾಗಿದ್ದರೆ ಒಂದು ವೇಳೆ ನಿಮ್ಮ ಹಳೆಯ ಸಂಖ್ಯೆ ಹೊಸಬರಿಗೆ ಸಿಕ್ಕರೆ ಏನಾಗಬಹುದು? ಇತ್ತೀಚೆಗೆ ವೈರಲ್ ಆದ ರೆಡ್ಡಿಟ್ ಪೋಸ್ಟ್‌ನಲ್ಲಿ, ಒಬ್ಬ ಬಳಕೆದಾರರು ಹಳೆಯ ಫೋನ್ ಸಂಖ್ಯೆಗಳನ್ನು ಹೊಸಬರಿಗೆ ನೀಡಿದಾಗ ಉಂಟಾದ ಸಮಸ್ಯೆಗಳ ಬಗ್ಗೆ ಶೇರ್‌ ಮಾಡಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್‌ ಭಾರೀ ಚರ್ಚೆಗೆ ಗ್ರಾಸವಾಗಿದೆ.

ರೆಡ್ಡಿಟ್ ಬಳಕೆದಾರರೊಬ್ಬರು, ಹೊಸ ಸಿಮ್ ಕಾರ್ಡ್ ಖರೀದಿಸಿದ ಕೆಲವೇ ದಿನಗಳಲ್ಲಿ ಅಪರಿಚಿತರಿಂದ ಕರೆಗಳು ಮತ್ತು ಸಂದೇಶಗಳನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಟ್ರೂಕಾಲರ್ ಪರಿಶೀಲಿಸಿದಾಗ, ಆ ಸಂಖ್ಯೆ ಒಬ್ಬ ಮಹಿಳೆಯ ಹೆಸರಿನಲ್ಲಿ ರಿಜಿಸ್ಟರ್‌ ಆಗಿತ್ತು ಎನ್ನಲಾಗಿದೆ. ಅಷ್ಟೇ ಅಲ್ಲದೇ ಆ ಮೊಬೈಲ್‌ ನಂಬರ್‌ Zomato, Swiggy, Uber, Facebook ನಂತಹ ಪ್ಲಾಟ್‌ಫಾರ್ಮ್‌ಗಳಿಗೆ ಜೊತೆಗೆ ಇತರ ಅಕೌಂಟ್‌ಗಳಲ್ಲೂ ಲಿಂಕ್‌ ಆಗಿತ್ತು ಎನ್ನಲಾಗಿದೆ.

ಬಳಕೆದಾರರು, "ನಾನು ಆ ಮಹಿಳೆಯ ಫೇಸ್‌ಬುಕ್ ಖಾತೆಗೆ ಲಾಗಿನ್ ಆಗಿ ಅವರ ವೈಯಕ್ತಿಕ ವಿವರಗಳನ್ನು ನೋಡಿದೆ. Zomato ನಲ್ಲಿ ಯಾವುದೇ ಹೊಸ ಆಫರ್‌ ಇರಲಿಲ್ಲ. ಊಬರ್‌ ರೇಟಿಂಗ್‌ಗಳು ಕೂಡಾ ಸರಿಯಾಗಿರಲಿಲ್ಲ, ಸಾಲದ ವಿಚಾರವಾಗಿ ಕರೆಗಳು ಬರುತ್ತಿತ್ತು. " ಎಂದು ಬರೆದಿದ್ದಾರೆ.

ಸದ್ಯ ಈ ಘಟನೆ ಒಂದು ಸಿಮ್‌ ಕಾರ್ಡ್‌ನಿಂದ ಆಗಬಹುದಾದ ಗೌಪ್ಯತೆ ಸಮಸ್ಯೆಯನ್ನು ಎತ್ತಿತೋರಿಸಿದೆ. ಆದ್ದರಿಂದ ಯಾರಾದರೂ ಸರಿ, ಸಿಮ್‌ ಚೇಂಜ್‌ ಮಾಡುವಾಗ, ನಂಬರ್‌ ಚೇಂಜ್‌ ಮಾಡುವಾಗ ವೈಯಕ್ತಿಕ ದಾಖಲೆಗಳನ್ನು ಸಹ ಅಪ್ಡೇಟ್‌ ಮಾಡಬೇಕು. ಇಲ್ಲದಿದ್ರೆ ಹೊಸ ಬಳಕೆದಾರರು ಸುಲಭವಾಗಿ ನಿಮ್ಮ ದಾಖಲೆಗಳನ್ನು ವಶಪಡಿಸಿಕೊಳ್ಳಬಹುದು. ಇದರಿಂದ ನಿಮ್ಮ ಬ್ಯಾಂಕ್‌ ಖಾತೆಗೂ ಸಮಸ್ಯೆ ಎದುರಾಗಬಹುದು.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ನಿಯಮಗಳ ಪ್ರಕಾರ, ಒಂದು ಫೋನ್‌ ನಂಬರ್‌ 90 ದಿನಗಳವರೆಗೆ ಕಾರ್ಯನಿರ್ವಹಿಸದಿದ್ರೆ ಅಥವಾ ರೀಚಾರ್ಜ್ ಮಾಡದಿದ್ದರೆ, ಅದನ್ನು ಬ್ಲಾಕ್‌ ಮಾಡಿ ಮತ್ತೊಬ್ಬರಿಗೆ ನೀಡಬಹುದು. 2023 ರಲ್ಲಿ, ಸುಪ್ರೀಂ ಕೋರ್ಟ್ ಕೂಡ ತೀರ್ಪು ನೀಡಿ, ಬ್ಲಾಕ್‌ ಮಾಡಲಾದ ನಂಬರ್‌ಗಳನ್ನು ಮರು ಹಂಚಿಕೆ ಮಾಡಬಹುದು ಎಂದು ಹೇಳಿತ್ತು. ಆದರೆ ಇತ್ತೀಚೆಗೆ ಡೇಟಾ ಸುರಕ್ಷತೆ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿದೆ.

ಹಳೆಯ ನಂಬರ್‌ ಮತ್ತೊಬ್ಬರಿಗೆ ಕೊಟ್ಟರೆ ತಕ್ಷಣ ಈ ಕೆಲಸ ಮಾಡಿ:
ನಿಮ್ಮ ಹಳೆಯ ಸಂಖ್ಯೆ ನಿಷ್ಕ್ರಿಯಗೊಂಡಿದ್ದರೆ ಅಥವಾ ಮತ್ತೊಬ್ಬರಿಗೆ ನೀಡಿದ್ದರೆ, ತಕ್ಷಣ ಕ್ರಮ ತೆಗೆದುಕೊಳ್ಳುವುದು ಬೆಸ್ಟ್‌. ಅದರಲ್ಲೂ ಸೋಷಿಯಲ್‌ ಮೀಡಿಯಾಗಳಲ್ಲಿ ನಿಮ್ಮ ಹೊಸ ನಂಬರ್‌ ಅಪ್ಡೇಟ್‌ ಮಾಡಿ. ಬ್ಯಾಂಕ್ ಖಾತೆಗಳು, Paytm, Google Pay, PhonePe UPI ಆ್ಯಪ್‌ಗಳಲ್ಲೂ ಹೊಸ ನಂಬರ್‌ ಆಡ್‌ ಮಾಡಿ. ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ ಗ್ರಾಹಕ ಸೇವಾ ಕೇಂದ್ರದ ಮೂಲಕ ನೋಂದಾಯಿತ ಸಂಖ್ಯೆಯನ್ನು ಬದಲಾಯಿಸಿ ಹೊಸ ನಂಬರ್‌ ಅಪ್ಡೇಟ್‌ ಮಾಡಬಹುದು.

ಅದೇ ರೀತಿ ಲಿಂಕ್ಡ್‌ಇನ್‌, Facebook, Instagram, X ನಂತಹ ಸೋಷಿಯಲ್‌ ಮೀಡಿಯಾಗಳಲ್ಲಿ ಆಡ್‌ ಮಾಡಿರುವ ಹಳೆಯ ನಂಬರ್‌ ಅನ್ನು ಬದಲಾಯಿ ಹೊಸ ನಂಬರ್‌ ಆಡ್‌ ಮಾಡಿ. ಅಷ್ಟೇ ಅಲ್ಲದೇ ಫ್ಲಿಪ್‌ಕಾರ್ಟ್‌, ಅಮೆಜಾನ್‌, Zomato, Swiggy, Ola, Uber ನಂತಹ ಇ-ಕಾಮರ್ಸ್ ಮತ್ತು ರೈಡಿಂಗ್‌ ಆ್ಯಪ್‌ಗಳಲ್ಲಿಯೂ ನಂಬರ್‌ ಚೇಂಜ್‌ ಮಾಡಿದರೆ ಒಳ್ಳೆಯದು. ಈ ಮೂಲಕ ನಿಮ್ಮ ಸುರಕ್ಷತೆಯನ್ನು ನೀವೇ ಕಾಪಾಡಿಕೊಳ್ಳಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+