ರಿಯಲ್ ಎಸ್ಟೇಟ್ ಅಂದ್ರೆ ಪುರುಷ ಉದ್ಯಮಿಗಳ ಬಲಾಢ್ಯ ಕ್ಷೇತ್ರವಾಗಿದೆ. ಆದರೆ ಇದಕ್ಕೆ ಭಿನ್ನ ಎಂಬಂತೆ ಭಾರತೀಯ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮಹಿಳಾ ಉದ್ಯಮಿ ಪಿಯಾ ಸಿಂಗ್ ಒಂದು ಹೆಸರು ಪ್ರಮುಖವಾಗಿ ಕೇಳಿಬರುತ್ತದೆ. ಇವರು ಡಿಎಲ್ಎಫ್ (DLF) ಸಂಸ್ಥಾಪಕ ಕುಶಾಲ್ ಪಾಲ್ ಸಿಂಗ್ ಅವರ ಪುತ್ರಿ. ಭಾರತೀಯ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತಮ್ಮದೇ ಆದ ಸಾಮರ್ಥ್ಯದಿಂದ ಉದ್ಯಮದಲ್ಲಿ ಛಾಪು ಮೂಡಿಸಿದ್ದಾರೆ. ಡಿಎಲ್‌ಎಫ್ ಸಂಸ್ಥೆಯಿ ಗುರುಗ್ರಾಮವನ್ನು ಅನ್ನು ಇಂದಿನ ಸೈಬರ್ ಸಿಟಿಯನ್ನಾಗಿ ಪರಿವರ್ತಿಸಿತು ಎಂದರೆ ತಪ್ಪಾಗಲಾರದು.

ಕುಶಾಲ್ ಪಾಲ್ ಸಿಂಗ್ ಅವರ ಮೂವರು ಮಕ್ಕಳಲ್ಲಿ ಕಿರಿಯ ಪುತ್ರಿಯಾಗಿರುವ ಪಿಯಾ,ಕುಟುಂಬದ ವ್ಯವಹಾರದ ಅವಿಭಾಜ್ಯ ಅಂಗವಾಗಿದ್ದಾರೆ. ಪಿಯಾ ಅವರಿಗೆ ಕೇವಲ 20 ವರ್ಷದವರಾಗಿದ್ದ ವೇಳೆಯಿಂದ ತಮ್ಮನ್ನು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಪ್ರಸ್ತುತ ಸಂಸ್ಥೆಯಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ, ಡಿಎಲ್‌ಎಫ್‌ನ ಮನರಂಜನಾ ಉದ್ಯಮಗಳ ಅಧ್ಯಕ್ಷೆಯಾಗಿ, ಡಿಟಿ ಸಿನಿಮಾಸ್‌ನ ವ್ಯವಸ್ಥಾಪಕ ನಿರ್ದೇಶಕಿಯಾಗಿ ಮತ್ತು 2003 ರಿಂದ ಡಿಎಲ್‌ಎಫ್‌ನ ಮಂಡಳಿಯಲ್ಲಿ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪಿಯಾ ಸಿಂಗ್ ಅವರ ಸಾಧನೆಗಳು
DLF ಗೆ ಸೇರುವ ಮೊದಲು, ಪಿಯಾ ಅವರು ಜಿಇ ಕ್ಯಾಪಿಟಲ್ ನಲ್ಲಿ ರಿಸ್ಕ್ ಅಂಡರ್ಟೇಕಿಂಗ್ ವಿಭಾಗದಲ್ಲಿ ಕೆಲಸ ಮಾಡಿ ಅಮೂಲ್ಯವಾದ ಕಾರ್ಪೊರೇಟ್ ಅನುಭವವನ್ನು ಸಂಪಾದಿಸಿಕೊಂಡರು. ನಂತರ 2008 ರಲ್ಲಿ, ಪಿಯಾ ಭಾರತದ ಮೊದಲ ಐಷಾರಾಮಿ ಮಾಲ್, DLF ಎಂಪೋರಿಯೊವನ್ನು ಆರಂಭಿಸುವ ಮೂಲಕ ಉದ್ಯಮ ಜಗತ್ತಿನಲ್ಲಿ ಗಮನಾರ್ಹ ಛಾಪು ಮೂಡಿಸಿದರು, ಇದು ಜಾಗತಿಕ ಉನ್ನತ ಮಟ್ಟದ ಬ್ರ್ಯಾಂಡ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತು.
2012 ರಲ್ಲಿ, ಅವರು ಕೌಶಲ್ಯ ಅಭಿವೃದ್ಧಿ ವ್ಯವಹಾರವನ್ನು ಸ್ಥಾಪಿಸಲು Genpact ಮತ್ತು DLF ನಡುವಿನ ಕೊಲಾಬರೇಷನ್ ನ ಉಸ್ತುವಾರಿ ವಹಿಸಿಕೊಂಡಿರು ಇದರೊಂದಿಗೆ ಅವರು ಕೌಶಲ್ಯ ಅಕಾಡೆಮಿಯನ್ನು ಕೂಡಾ ಸಹ-ಸ್ಥಾಪಿಸಿದರು.
ಪಿಯಾ ಅವರ ಶೈಕ್ಷಣಿಕ ಅರ್ಹತೆ ಮತ್ತು ವೈಯಕ್ತಿಕ ಜೀವನ
ಪಿಯಾ ಪ್ರತಿಷ್ಠಿತ ವಾರ್ಟನ್ ಸ್ಕೂಲ್ ನಿಂದ ಹಣಕಾಸು ವಿಷಯದಲ್ಲಿ ಪದವಿ ಪಡೆದಿದ್ದು, ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಚಲನಚಿತ್ರ ನಿರ್ಮಾಣವನ್ನೂ ಅಧ್ಯಯನ ಮಾಡಿದ್ದಾರೆ. ಪಿಯಾ ಸರ್ನಾ ಎಕ್ಸ್‌ಪೋರ್ಟ್ಸ್‌ನ ಮಾಲೀಕ ಟಿಮ್ಮಿ ಸರ್ನಾ ಅವರನ್ನು ವಿವಾಹವಾಗಿದ್ದಾರೆ. ಮದುವೆಯ ನಂತರ, ಟಿಮ್ಮಿ ಡಿಎಲ್‌ಎಫ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ದಂಪತಿಗಳು ತಮ್ಮ ಮೂವರು ಮಕ್ಕಳೊಂದಿಗೆ ದೆಹಲಿಯ ಔರಂಗಜೇಬ್ ರಸ್ತೆಯಲ್ಲಿರುವ ಒಂದು ಐಷಾರಾಮಿ ಮನೆಯಲ್ಲಿ ವಾಸವಾಗಿದ್ದಾರೆ.
ಪಿಯಾ ಸಿಂಗ್ ನಿವ್ವಳ ಮೌಲ್ಯ
ಎಕನಾಮಿಕ್ ಟೈಮ್ಸ್ ಪ್ರಕಾರ, ಪಿಯಾ ಸಿಂಗ್ ಅವರ ವೈಯಕ್ತಿಕ ನಿವ್ವಳ ಮೌಲ್ಯ ಸುಮಾರು 814.3 ಕೋಟಿ ರೂ. ಆಗಿದ್ದು, ಅವರು ಉದ್ಯಮ - ವ್ಯವಹಾರ ಜಗತ್ತಿಗೆ ನೀಡಿದ ಕೊಡುಗೆಗಳಿಗಾಗಿ ಫೋರ್ಬ್ಸ್ ಇಂಡಿಯಾದಲ್ಲಿ ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಲಿಸ್ಟ್ ನಲ್ಲಿ ಅವರು ಕೂಡಾ ಸ್ಥಾನ ಗಳಿಸಿಕೊಂಡಿದ್ದಾರೆ.
ಪಿಯಾ ಒಬ್ಬ ಯಶಸ್ವಿ ಉದ್ಯಮಿ ಮಾತ್ರವಲ್ಲದೆ, ಪಾರ್ಟಿಗಳ ಮೇಲಿನ ಪ್ರೀತಿಗೆ ಹೆಸರುವಾಸಿಯಾಗಿದ್ದು, ಇದರಿಂದಾಗಿ ಅವರು "ಪಾರ್ಟಿ ಮಹಿಳೆ" ಎಂಬ ಬಿರುದನ್ನು ಗಳಿಸಿದ್ದಾರೆ. ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ನಡೆಯುವ page-three ಪಾರ್ಟಿ ಕಾರ್ಯಕ್ರಮಗಳಲ್ಲಿ ಅವರು ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ. ಒಟ್ಟಾರೆ ರಿಯಲ್ ಎಸ್ಟೇಟ್ ಮತ್ತು ಮನರಂಜನಾ ಉದ್ಯಮಗಳಿಗೆ ಇವರ ಕೊಡುಗೆ ಅಪಾರ. ಅವರ ಸೃಜನಶೀಲತೆ, ನಾಯಕತ್ವದ ಗುಣಗಳು ಮತ್ತು ಸಾಮಾಜಿಕ ಬದ್ಧತೆ ಅವರನ್ನು ಭಾರತೀಯ ಕಾರ್ಪೊರೇಟ್ ಜಗತ್ತಿನಲ್ಲಿ ಒಬ್ಬ ವಿಶೇಷ ವ್ಯಕ್ತಿಯನ್ನಾಗಿ ಮಾಡಿವೆ.


Click it and Unblock the Notifications