ಬೆಂಗಳೂರು, ಜೂನ್ 14: ಆರೋಗ್ಯ ವಿಮೆ ಅಂದರೆ ಹೆಲ್ತ್ ಇನ್ಶೂರೆನ್ಸ್ ಅಗತ್ಯದ ಬಗ್ಗೆ ನೀವು ಈಗಾಗಲೇ ಸಾಕಷ್ಟು ತಿಳಿದುಕೊಂಡಿದ್ದೀರಿ. ಹಾಗಿದ್ದರೆ ಈ ಆರೋಗ್ಯ ವಿಮೆಯ ಪ್ರಕಾರಗಳು ಯಾವುವು? ಯಾವುದು ಹೆಚ್ಚು ಪ್ರಯೋಜನಕಜಾರಿ ಎನ್ನುವುದನ್ನು ನಾವು ನೋಡಬೇಕಾಗುತ್ತದೆ.
ಆರೋಗ್ಯ ವಿಮೆಯಲ್ಲಿ ಎರಡು ವಿಧ. ವೈಯಕ್ತಿಕ ಅಂದರೆ ಪರ್ಸನಲ್ ಮತ್ತು ಫ್ಯಾಮಿಲಿ ಫ್ಲೋಟರ್ ಪ್ಲಾನ್. ವೈಯಕ್ತಿಕ ಪ್ಲಾನ್ ನಲ್ಲಿ ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ವಿಮಾ ಮೊತ್ತದೊಂದಿಗೆ ಪ್ರತ್ಯೇಕ ಪಾಲಿಸಿ ಪಡೆಯುತ್ತಾನೆ. ಆದರೆ ಫ್ಯಾಮಿಲಿ ಫ್ಲೋಟರ್ ಪ್ಲಾನ್ ನಲ್ಲಿ ಕುಟುಂಬದ ಎಲ್ಲಾ ಸದಸ್ಯರು ಸಾಮಾನ್ಯ ಇನ್ಶೂರೆನ್ಸ್ ಕವರ್ ಪಡೆದುಕೊಳ್ಳುತ್ತಾರೆ. ವೈಯಕ್ತಿಕ ಯೋಜನೆಯನ್ನು ಯಾರು ಪಡೆಯಬೇಕು? ಫ್ಯಾಮಿಲಿ ಫ್ಲೋಟರ್ ಪ್ಲಾನ್ ಅನ್ನು ಯಾರು ಪಡೆಯಬೇಕು? ಈ ಬಗ್ಗೆ ಸಹ ಪರಿಣಿತರು ಸಲಹೆ ನೀಡುತ್ತಾರೆ.

ಇಡೀ ಕುಟುಂಬದವರನ್ನು ಒಳಗೊಂಡು ಆರೋಗ್ಯ ವಿಮೆ ಖರೀದಿ ಮಾಡಿದರೆ ಎಲ್ಲರಿಗೂ ಕವರೇಜ್ ಸಿಗುತ್ತದೆ. ಆಯಾ ವಿಮಾ ಕಂಪನಿಗಳ ನಿಯಮಗಳು ಬದಲಾಗುತ್ತಿರುತ್ತವೆ. ನೀವು ಅಗತ್ಯ ಬಿದ್ದರೆ ಹೆಚ್ಚಿನ ರೈಡರ್ ಗಳನ್ನು ಸೇರಿಸಿಕೊಳ್ಳಬಹುದು.
ಸಂಭವನೀಯ ಕಾಯಿಲೆಗಳ ಸಾಧ್ಯತೆ ಇರುವವರು, ಅನುವಂಶಿಕ ರೋಗದ ಹಿಸ್ಟರಿ ಹೊಂದಿರುವವರು ವೈಯಕ್ತಿಕ ವಿಮೆ ಖರೀದಿ ಮಾಡಿಕೊಳ್ಳಬಹುದು.
ಯುವ ಜೋಡಿಗಳು, ಸಣ್ಣ ಅಥವಾ ವಿಭಕ್ತ ಕುಟುಂಬಗಳು, ಪರಿಣಾಮಕಾರಿ ಆರೋಗ್ಯ ಸುರಕ್ಷತೆ ಹುಡುಕುತ್ತಿರುವ ಕುಟುಂಬ, ಎಲ್ಲಾ ಕುಟುಂಬ ಸದಸ್ಯರಿಗೆ ಒಂದೇ ಪ್ರೀಮಿಯಂ ಪಾವತಿಸಲು ಸಿದ್ಧರಿರುವ ಜನರು ಈ ಫ್ಯಾಮಿಲಿ ಪ್ಲೋಟರ್ ಯೋಜನೆ ಕೊಳ್ಳಬಹುದು. ವೈಯಕ್ತಿಕ ಆರೋಗ್ಯ ವಿಮೆ ಮತ್ತು ಫ್ಯಾಮಿಲಿ ಫ್ಲೋಟರ್ ನಲ್ಲಿ ಪ್ರೀಮಿಯಂ ಮೊತ್ತ ವ್ಯತ್ಯಾಸವಾಗಬಹುದು.
ನಿಮ್ಮ ಹೆಲ್ತ್ ಕವರೇಜ್ ಇಂದಿನ ವೈದಕೀಯ ವೆಚ್ಚಗಳನ್ನ ಮಾತ್ರವಲ್ಲದೇ ಭವಿಷ್ಯದ ಚಿಕಿತ್ಸಾ ವೆಚ್ಚ ಭರಿಸಲು ಸಾಕಾಗುವಷ್ಟು ಇರಬೇಕಾಗುತ್ತದೆ. ಸದ್ಯ ಆರೋಗ್ಯ ವೆಚ್ಚಗಳ ಹಣದುಬ್ಬರವು ಶೇಕಡಾ 10 ರಿಂದ 15ರಷ್ಟಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಇನ್ಶೂರೆನ್ಸ್ ಕವರೇಜ್ ಹೆಚ್ಚು ಇರಿಸಿಕೊಳ್ಳುವುದು ಒಳ್ಳೆಯದು.
ಪಾಲಿಸಿ ತೆಗೆದುಕೊಳ್ಳುವ ಮುನ್ನ ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ಖರ್ಚುಗಳು, ಓಪಿಡಿ ಕವರೇಜ್, ಆ್ಯಂಬುಲೆನ್ಸ್ ಚಾರ್ಜ್, ಆಯುಷ್ ಮತ್ತು ಅತ್ಯಾಧುನಿಕ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಒಳಗೊಂಡಿದೆಯಾ ಎನ್ನುವುದನ್ನು ಪರಿಶೀಲಿಸಿ. ಜೊತೆಗೆ ಪಾಲಿಸಿಯಲ್ಲಿ ಏನೆಲ್ಲಾ ವಿನಾಯಿತಿ ಇದೆ ಎನ್ನುವುದನ್ನು ತಿಳಿದುಳ್ಳಬೇಕು. ಕೋ ಪೇಮೆಂಟ್, ನಿರ್ದಿಷ್ಟ ಚಿಕಿತ್ಸೆ, ರೂಮ್ ರೆಂಟ್ ಮತ್ತು ಐಸಿಯು ಚಾರ್ಜ್ ಗಳಂತಹ ವಿಷ್ಯಗಳಿಗೆ ಯಾವುದೇ ಉಪ-ಮಿತಿ ಇಲ್ಲ ಅನ್ನೋದನ್ನು ಖಾತರಿಪಡಿಸಿಕೊಳ್ಳಬೇಕು. ಸುಲಭ ನಗದು ರಹಿತ ಚಿಕಿತ್ಸೆಗಾಗಿ ಉತ್ತಮ ಆಸ್ಪತ್ರೆಗಳು ಇನ್ಶೂರೆನ್ಸ್ ಕಂಪನಿಯ ಲಿಸ್ಟ್ ನಲ್ಲಿ ಒಳಗೊಂಡಿರಬೇಕು. ಪಾಲಿಸಿಯಲ್ಲಿ ವೇಯ್ಟಿಂಗ್ ಪಿರೇಡ್ ಕಡಿಮೆ ಇರಬೇಕು. ಇದರ ಜೊತೆಗೆ ಇನ್ಶೂರೆನ್ಸ್ ಕಂಪನಿಯ ಕ್ಲೈಮ್ ಸೆಟಲ್ ಮೆಂಟ್ ರೇಷ್ಯೋ ಮತ್ತು ಗ್ರಾಹಕ ಸೇವೆ ಚನ್ನಾಗಿದೆಯಾ ಎನ್ನುವುದನ್ನು ನೀವು ಪರಿಶೀಲನೆ ಮಾಡಿರಬೇಕು.


Click it and Unblock the Notifications