ಭಾರತ ಸದ್ಯ "ಡಿಜಿಟಲ್ ಇಂಡಿಯಾ" (Digital India) ಆಗಿಬಿಟ್ಟಿದೆ. ಅತ್ತ ಯಾವುದೇ ದಾಖಲೆಗಳನ್ನು ಪಡೆಯಬೇಕೆಂದರು ಮೊಬೈಲ್, ಲ್ಯಾಪ್‌ಟಾಪ್ ಮೂಲಕ ಪಡೆಯಬಹುದು. ಯಾವುದೇ ಯೋಜನೆಗಳಿಗೆ ಅರ್ಜಿ ಸಲ್ಲಿಸಬೇಕೆಂದರೆ ಆನ್‌ಲೈನ್ ಮೂಲಕ ಸಲ್ಲಿಸಬಹುದು. ಇತ್ತೀಚೆಗೆ ಯುಪಿಐ ಬಳಕೆ ಕೂಡಾ ಹೆಚ್ಚಾಗಿದೆ. ಯಾವುದೇ ಪೇಮೆಂಟ್ (Online Payment) ಮಾಡಬೇಕೆಂದರು ಥಟ್ ಅಂತ ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡುತ್ತಾರೆ. ಆದರೂ ಹೆಚ್ಚಿನವರು ನಗದಿನ ಅಗತ್ಯದಿಂದ ಎಟಿಎಂ (ATM), ಬ್ಯಾಂಕ್‌ಗಳಿಗೆ ಹೋಗುತ್ತಾರೆ.

ಹೌದು, ಗೂಗಲ್‌ಪೇ, ಫೋನ್‌ಪೇ ಮೂಲಕ ಪಾವತಿಗಳು ಹೆಚ್ಚಾಗಿದ್ದರೂ, ಅನೇಕರು ನಗದು ಹಣ ಇಟ್ಟುಕೊಂಡಿರುತ್ತಾರೆ. ಏಕೆಂದರೆ ನೆಟ್‌ವರ್ಕ್ ಸಮಸ್ಯೆ, ಯುಪಿಐ ಸರ್ವರ್ ಸಮಸ್ಯೆ, ಮೊಬೈಲ್ ಸಮಸ್ಯೆಗಳಾದಾಗ ನಗದು ಉಪಯೋಗಕ್ಕೆ ಬರುತ್ತದೆ. ಅದಕ್ಕಾಗಿ ಹೆಚ್ಚಿನವರು ಎಟಿಎಂ ಯೂಸ್ ಮಾಡ್ತಾರೆ. ಆದರೆ ಎಟಿಎಂನಲ್ಲಿ ಹಲವರು ಸಾಮಾನ್ಯ ಸಮಸ್ಯೆಯೊಂದನ್ನು ಫೇಸ್ ಮಾಡಿದ್ದಾರೆ. ಆ ಬಗ್ಗೆ ಇಂದು ನಾವು ನಿಮಗೆ ಹೇಳ್ತೀವಿ.
ಎಟಿಎಂನಲ್ಲಿ ಹಣ ವಿಥ್‌ಡ್ರಾ ಮಾಡಲು ಹೋದಾಗ, ಕೆಲವೊಮ್ಮೆ ಎಟಿಎಂ ಕಾರ್ಡ್ ಸಿಕ್ಕಿಹಾಕಿಳ್ಳುತ್ತದೆ. ಆ ಸಂದರ್ಭದಲ್ಲಿ ಏನ್ ಮಾಡ್ಬೇಕು ಅಂತ ಗೊತ್ತೇ ಆಗಲ್ಲ. ಅಲ್ಲದೇ ಬಲವಂತವಾಗಿ ಎಳೆಯಲು ಶುರು ಮಾಡ್ತೀವಿ. ಆದರೆ ಆ ಸಂದರ್ಭದಲ್ಲಿ ಏನ್ ಮಾಡ್ಬೇಕು ಅನ್ನೋದರ ಮಾಹಿತಿ ಇಲ್ಲಿದೆ ಓದಿ.
ಈ ಸಮಯದಲ್ಲಿ ನೀವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ರೆ ನಿಮ್ಮ ಖಾತೆಯಲ್ಲಿದ್ದ ಹಣವೆಲ್ಲಾ ಖಾಲಿಯಾಗುತ್ತೆ.
1. ಎಟಿಎಂ ಕಾರ್ಡ್ ಬ್ಲಾಕ್ ಮಾಡಿ:
ಕಾರ್ಡ್ ಮೆಷಿನ್‌ನಲ್ಲಿ ಲಾಕ್ ಆಗಿದೆ ಎಂದು ಗೊತ್ತಾಗುತ್ತಿದ್ದಂತೆ, ತಕ್ಷಣ ಕ್ಯಾನ್ಸಲ್ ಬಟನ್ ಒತ್ತಿ. ನಂತರ, ನಿಮ್ಮ ಬ್ಯಾಂಕಿನ 24/7 ಸಹಾಯವಾಣಿ ನಂಬರ್‌ಗೆ ಕಾಲ್ ಮಾಡಿ. ಅಲ್ಲಿ ನೀವು ನಿಮ್ಮ ಎಟಿಎಂ ಕಾರ್ಡ್ ಅನ್ನು ಬ್ಲಾಕ್ ಮಾಡುವಂತೆ ಹೇಳಿ. ಇದನ್ನು 'ಹಾಟ್‌ಲಿಸ್ಟಿಂಗ್' ಎಂದೂ ಕರೆಯಲಾಗುತ್ತದೆ. ಇದರ ಮೂಲಕ ನಿಮ್ಮ ಕಾರ್ಡ್ ಶಾಶ್ವತವಾಗಿ ನಿರ್ಬಂಧಿಸಲ್ಪಡುತ್ತದೆ. ಯಾವುದೇ ಅನಧಿಕೃತ ವಹಿವಾಟುಗಳು ನಡೆಯದಂತೆ ನೋಡಿಕೊಳ್ಳುತ್ತದೆ.
2. ಬ್ಯಾಂಕ್ ಮಾರ್ಗಸೂಚಿಗಳನ್ನು ತಿಳಿದುಕೊಳ್ಳಿ:
ನಿಮ್ಮ ಬ್ಯಾಂಕ್‌ನ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಸೇರಿದಂತೆ ದೇಶದ ಎಲ್ಲಾ ಪ್ರಮುಖ ಬ್ಯಾಂಕುಗಳು ಗ್ರಾಹಕರಿಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡುತ್ತದೆ. ಎಟಿಎಂ ಸ್ಕ್ರೀನ್ ಮೇಲೆ ಕಾಣುವ ಸಂದೇಶಗಳನ್ನು ಎಚ್ಚರಿಕೆಯಿಂದ ಓದುವುದು ಸೇರಿದಂತೆ ಇಂತಹ ಮೂಲಭೂತ ವಿಷಯಗಳನ್ನು ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. ಆ ನಂತರ ಮುಂದಿನ ಕ್ರಮ ತೆಗೆದುಕೊಳ್ಳಿ
3. ಸಹಾಯವಾಣಿಗೆ ಕರೆ ಮಾಡುವುದು ಹೇಗೆ?
ಕಾರ್ಡ್ ಸಲುಕಿಕೊಂಡ ತಕ್ಷಣ ಸಹಾಯವಾಣಿ ನಂಬರ್‌ಗೆ ಕರೆ ಮಾಡಿ ಎಂದು ಹೇಳಲಾಗಿದೆ. ಆದ್ರೆ ನಂಬರ್ ಎಲ್ಲಿರುತ್ತೆ ಎಂದು ಯಾರಿಗೂ ಗೊತ್ತಿರಲ್ಲ. ಆದ್ರೆ ಕೆಲವು ಎಟಿಎಂಗಳಲ್ಲಿ ಅಲ್ಲೇ ಬರೆದಿರುತ್ತಾರೆ. ಅಲ್ಲದೇ ಗೂಗಲ್ ಮೂಲಕ ಅಧಿಕೃತ ವೆಬ್‌ಸೈಟ್‌ಗೆ ಹೋಗುವ ಮೂಲಕ ನಂಬರ್ ತೆಗೆದುಕೊಳ್ಳಬಹುದು. ಇಲ್ಲದಿದ್ರೆ ಎಮರ್ಜೆನ್ಸಿಗಾಗಿ ಮೊಬೈಲ್‌ನಲ್ಲೇ ಮೊದಲೇ ಸೇವ್ ಮಾಡಿಟ್ಟುಕೊಳ್ಳುವುದು ಉತ್ತಮ. ಇನ್ನು ಕರೆ ಮಾಡಿದಾಗ ನಿಮ್ಮ ಎಟಿಎಂ ಕಾರ್ಡ್ ಸಂಖ್ಯೆ, ಸ್ಥಳ ಮತ್ತು ಸಮಯವನ್ನು ಸಹಾಯವಾಣಿಗೆ ನೀಡಬೇಕಾಗಬಹುದು. ಆದ್ದರಿಂದ ಅದನ್ನು ಮೊದಲೂ ತಿಳಿದುಕೊಳ್ಳಬೇಕು.
ಏನು ಮಾಡಬಾರದು?
ಕಾರ್ಡ್ ಮೆಷಿನ್‌ನಲ್ಲಿ ಸಿಲುಕಿಕೊಂಡಾಗ ಅದನ್ನು ಅಲ್ಲಿಯೇ ಬಿಟ್ಟು ಯಾವತ್ತೂ ಬರಬಾರದು. ಕಾರ್ಡ್ ಬ್ಲಾಕ್ ಮಾಡುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡಿದ ನಂತರವೇ ಅಲ್ಲಿಂದ ಬರಬೇಕು. ಆದರೆ ಯಾವತ್ತೂ ಬಲವಂತವಾಗಿ ಕಾರ್ಡ್ ಹಿಂತೆಗೆಯಲು ಯತ್ನಿಸಬೇಡಿ. ಇದರಿಂದ ಎಟಿಎಂ ಕಾರ್ಡ್‌ಗೂ ಹಾನಿ, ಮೆಷಿನ್ ಕೂಡಾ ಹಾನಿಯಾಗುತ್ತದೆ.


Click it and Unblock the Notifications