ಸಾಮಾನ್ಯವಾಗಿ ಬಾಯಾರಿಕೆಯಾದರೆ ನಾವು ಅಂಗಡಿಗೆ ಹೋಗಿ ಬಿಸ್ಲೆರಿ ಕೇಳುತ್ತೇವೆಯೇ ಹೊರತು ನೀರು ಕೊಡಿ ಎಂದು ಕೇಳುವುದು ಬಹಳ ಕಡಿಮೆ ಎಂದರೆ ತಪ್ಪಾಗಲಾರದು. ಅಲ್ಲದೆ ಇದು ಕೇವಲ ಒಂದಿಬ್ಬರ ಕತೆಯಲ್ಲದೆ ಹೆಚ್ಚಿನವರ ಅನುಭವದ ಮಾತು. ನೇರವಾಗಿ ವಿಷಯಕ್ಕೆ ಬರುವುದಾದರೆ ಅಂಥ ಬಿಸ್ಲೆರಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕೀರ್ತಿ ಅದರ ಮಾಲಕ ರಮೇಶ್ ಚೌಹಾಣ್ ಅವರಿಗೆ ಸಲ್ಲಬೇಕು.
ಭಾರತದಲ್ಲಿ ಮಿನರಲ್ ವಾಟರ್ ಎಂದರೆ ಬಿಸ್ಲೆರಿ ಎಂಬ ಮಟ್ಟಕ್ಕೆ ಬಿಸ್ಲೆರಿ ಸಂಸ್ಥೆ ಅಗಾಧವಾಗಿ ಬೆಳೆದಿದೆ. ಇನ್ನು ರಮೇಶ್ ಚೌಹಾಣ್ ಅವರಿಗೆ ಎಷ್ಟು ಶ್ರೇಯ ಸಲ್ಲಬೇಕೋ ಅದೇ ರೀತಿ ಅವರ ಮಗಳು ಜಯಂತಿ ಚೌಹಾಣ್ ಕೂಡ ಪ್ರಶಾಂಸೆಗೆ ಅರ್ಹರಾಗಿದ್ದಾರೆ. ಭಾರತದ ಬಾಟಲ್ ವಾಟರ್ ಬ್ರ್ಯಾಂಡ್‌ನ ಭವಿಷ್ಯವನ್ನು ಬದಲಿಸಿದ ಪ್ರಬಲ ನಾಯಕರಾಗಿ ಜಯಂತಿ ಹೊರಹೊಮ್ಮಿದ್ದಾರೆ. ಜಯಂತಿ ಇಂದು ಸಂಸ್ಥೆಯ ಪ್ರಮುಖ ನಾಯಕನಾಗಿ ಹೊರಹೊಮ್ಮಿದ್ದರೂ ಆರಂಭಿಕ ಘಟ್ಟದಲ್ಲಿ ಈ ಪರಿಸ್ಥಿತಿ ಇರಲಿಲ್ಲ.

ಆರಂಭಿಕ ಹಂತದಲ್ಲಿ ತಂದೆಯ ವ್ಯವಹಾರದಲ್ಲಿ ಕೈಯಾಡಿಸುವುದು ಜಯಂತಿಗೆ ಇಷ್ಟವಿಲ್ಲದ ಕೆಲಸವಾಗಿತ್ತು. ಇದೇ ರೀತಿ ಜಯಂತಿ ಅವರು ಬಿಸ್ಲೇರಿ ಮಾರಾಟವಾಗುವ ಹಂತದಲ್ಲಿದ್ದ ನಿರ್ಣಾಯಕ ಸಮಯದಲ್ಲಿ ಅಧಿಕಾರ ವಹಿಸಿಕೊಂಡರು. ಒಲ್ಲದ ಮನಸ್ಸಿನಲ್ಲಿ ಅಧಿಕಾರ ವಹಿಸಿಕೊಂಡ ಜಯಂತಿ ಬಳಿಕ ಕಂಪೆನಿಯಲ್ಲಿ ತೆಗೆದುಕೊಂಡ ಕ್ರಾಂತಿಕಾರಕ ಬದಲಾವಣೆಯಿಂದ ಸದ್ಯ ಕಂಪೆನಿ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.
ಬಿಸ್ಲೇರಿ ಕಂಪೆನಿ ಬಗ್ಗೆ ಒಂದಿಷ್ಟು ಮಾತು
ಇನ್ನು ಬಿಸ್ಲೆರಿ ಸಂಸ್ಥೆ ಬಗ್ಗೆ ಬಹುಷಃ ಎಲ್ಲರಿಗೂ ತಿಳಿದಿರುವ ವಿಚಾರ. ಸಂಸ್ಥೆಯ ಇಂದು ಯಾವ ಮಟ್ಟಕ್ಕೆ ಬೆಳೆದಿದೆ ಎಂದು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಆದರೆ ಕಂಪೆನಿಯ ಸೋಲು ಗೆಲುವಿನ ಹಾದಿಯನ್ನೊಮ್ಮೆ ನಾವು ನೋಡಲೇಬೇಕಿದೆ. ಕಳೆದ 50 ವರ್ಷಗಳಿಂದ ಬಿಸ್ಲೆರಿ ಸಂಸ್ಥೆಯು ಭಾರತದಲ್ಲಿ 32% ಮಾರುಕಟ್ಟೆ ಪಾಲನ್ನು ಹೊಂದಿರುವ ಅಗ್ರ ಬಾಟಲ್ ವಾಟರ್ ಬ್ರ್ಯಾಂಡ್ ಆಗಿದೆ.
ನೇರ ಅರ್ಥದಲ್ಲಿ ಹೇಳುವುದಾದರೆ ಇಂದು ಭಾರತದಲ್ಲಿ ಮಾರಾಟವಾಗುವ ವಾಟರ್ ಬಾಟಲ್ ಉದ್ಯಮದಲ್ಲಿ ಬಿಸ್ಲೆರಿ ಕಂಪೆನಿಯ ಪಾಲೇ 32 ಪ್ರತಿಶತ ಇದ್ದು, ಅಗ್ರಕ್ರಮಾಂಕದಲ್ಲಿದೆ. ಇಂದು ಭಾರತದಲ್ಲಿ ಬಿಸ್ಲೆರಿ ಸಂಸ್ಥೆಯ ಪ್ಲ್ಯಾಂಟ್‌ಗಳಿದ್ದು, 4,500 ವಿತರಕರ ವಿಶಾಲ ಜಾಲವನ್ನು ಹೊಂದಿದೆ. ಸದ್ಯ ಮಧ್ಯಪ್ರಾಚ್ಯ ನಗರಗಳಾದ ದುಬೈ ಮತ್ತು ಅಬುಧಾಬಿಗೆ ಕೂಡ ಬಿಸ್ಲೆರಿ ಸಂಸ್ಥೆಯ ಕೀರ್ತಿ ವಿಸ್ತರಿಸಿದೆ. 2022-23ರ ಹಣಕಾಸು ವರ್ಷದಲ್ಲಿ ಬಿಸ್ಲೆರಿ ಇಂಟರ್‌ನ್ಯಾಷನಲ್ 2,300 ಕೋಟಿಗೂ ರೂ.ಗೂ ಹೆಚ್ಚು ಆದಾಯವನ್ನು ಗಳಿಸಿಕೊಂಡಿದೆ. ಸದ್ಯ ಬಿಸ್ಲೆರಿ ಬ್ರ್ಯಾಂಡ್‌ನ ಒಟ್ಟು ಮೌಲ್ಯ ₹7,000 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಪಾನೀಯ ಮಾರುಕಟ್ಟೆಯಲ್ಲಿ ಸ್ಪರ್ಧೆ
ಭಾರತದ ಮಿನರಲ್ ವಾಟರ್ ಬಾಟಲ್ ಉದ್ಯಮದಲ್ಲಿ ಬಿಸ್ಲೆರಿ ಪ್ರಮುಖ ಕಂಪೆನಿಯಾಗಿ ಹೊರಹೊಮ್ಮಿದ್ದರೂ ಪಾನೀಯ ಮಾರುಕಟ್ಟೆಯು ಎಲ್ಲಾ ಪ್ರತಿಸ್ಪರ್ಧಿಗಳಿಂದ ಸ್ಪರ್ಧೆಯನ್ನು ಎದುರಿಸುತ್ತಿದೆ. ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ 2022 ರಲ್ಲಿ ಕ್ಯಾಂಪಾ ಕೋಲಾವನ್ನು ಮರುಪ್ರಾರಂಭಿಸಿತು, ಕೈಗೆಟುಕುವ ಬೆಲೆಗಳು ಮತ್ತು ವಿವಿಧ ರುಚಿಗಳೊಂದಿಗೆ ಭಾರತದಲ್ಲಿ ಫಿಝ್ ಪಾನೀಯಗಳ ವಿಭಾಗದಲ್ಲೇ ಕ್ರಾಂತಿ ನಡೆಸಿತು. ಸದ್ಯ ಇದು ಕೋಕಾ-ಕೋಲಾ, ಪೆಪ್ಸಿಕೋ ಮತ್ತು ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ನಂತಹ ದೊಡ್ಡ ದೊಡ್ಡ ಕಂಪೆನಿಗಳ ಉತ್ಪನ್ನಗಳ ಮೇಲೆ ಪರಿಣಾಮ ಬೀರಿದೆ.
ಬಿಸ್ಲೆರಿ ಸಂಸ್ಥೆಯ ಕ್ಯಾಂಪಾ ಕೋಲಾ ಎಷ್ಟು ಪ್ರಸಿದ್ದತೆ ಪಡೆದುಕೊಂಡಿತೆಂದರೆ ಅದರ ಸ್ಪರ್ಧಾತ್ಮಕ ಬೆಲೆಯನ್ನು ಎದುರಿಸಲು, ಕೋಕಾ-ಕೋಲಾ ತನ್ನ 400 ಮಿಲಿ ಬಾಟಲಿಯ ಬೆಲೆಯನ್ನು ₹ 5 ರಷ್ಟು ಕಡಿಮೆ ಮಾಡಿಕೊಂಡಿತು. ಈ ಮೂಲಕ ಕ್ಯಾಂಪಾ ಕೋಲಾದ ₹ 20 ಬೆಲೆಯನ್ನು ಅದರ 500 ಮಿಲಿ ಬಾಟಲಿಗೆ ಹೊಂದಿಸಿದೆ. ಅಲ್ಲದೆ ಅತ್ತ ಪೆಪ್ಸಿಕೋ ತನ್ನ ಪ್ರಚಾರ ಚಟುವಟಿಕೆಗಳನ್ನು ಹೆಚ್ಚಿಸಿದೆ. ಉಳಿದಂತೆ ಟಾಟಾ ಸಂಸ್ಥೆಯು ಗ್ರಾಹಕ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಲು ಹೊಸ ಸುವಾಸನೆ ಮತ್ತು ಸ್ವರೂಪಗಳೊಂದಿಗೆ ತನ್ನ ಪೋರ್ಟ್‌ಫೋಲಿಯೊವನ್ನು ನವೀಕರಿಸುತ್ತಿದೆ.
ಕಂಪೆನಿಯ ಹಣೆಬರಹ ಬದಲಿಸಿದ ಜಯಂತಿ ನಿರ್ಧಾರ
ಆರಂಭದಲ್ಲಿ ತಂದೆಯ ವ್ಯವಹಾರವನ್ನು ನಡೆಸಿಕೊಂಡು ಹೋಗಲು ಜಯಂತಿ ಚೌಹಾಣ್ ನಿರುತ್ಸಾಹ ತೋರಿಸಿದ್ದರು. ಇದರ ಪರಿಣಾಮ ರಮೇಶ್ ಚೌಹಾಣ್ ಅವರು ತಮ್ಮ ಬಿಸ್ಲೆರಿ ಸಂಸ್ಥೆಯನ್ನು ಸುಮಾರು 7,000 ಕೋಟಿ ರೂ.ಗೆ ಟಾಟಾ ಸಂಸ್ಥೆಗೆ ಮಾರಾಟ ಮಾಡಲು ನಿರ್ಧರಿಸಿದ್ದರು ಎನ್ನಲಾಗಿದೆ. ಆದರೆ ಬಳಿಕ ತಂದೆಯ ವ್ಯವಹಾರದ ಬಗ್ಗೆ ಹೆಚ್ಚಿನ ಅರಿವು ಪಡೆದುಕೊಂಡ ಜಯಂತಿ ತಾನೇ ಉದ್ಯಮವನ್ನು ವಹಿಸಿಕೊಂಡು ಕಂಪೆನಿಯನ್ನು ಯಶಸ್ವಿಯಾಗಿ ಮುಂದುವರೆಸಿದರು. ಸದ್ಯ ಜಯಂತಿ ತೆಗೆದುಕೊಂಡ ಯಶಸ್ವಿ ನಿರ್ಧಾರವು ಯಾವ ರೀತಿ ಪರಿಣಾಮ ಬೀರಿದೆ ಎಂಬುದು ಸದ್ಯ ದೇಶ ಕಂಡುಕೊಂಡಿದೆ.


Click it and Unblock the Notifications