ಕರಿಷ್ಮಾ ಶಾಂಘ್ವಿ: 4.40 ಲಕ್ಷ ಕೋಟಿ ರೂ ಮೌಲ್ಯದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಈಕೆ ಸಾಮಾನ್ಯರಲ್ಲ.!

ಭಾರತದ ಅನೇಕ ಬಿಲಿಯನೇರ್ ಉದ್ಯಮಿಗಳು ತಮ್ಮ ವ್ಯವಹಾರಗಳ ಪ್ರಮುಖ ಜವಾಬ್ದಾರಿಗಳನ್ನು ತಮ್ಮ ಕುಟುಂಬ ಸದಸ್ಯರಿಗೆ ನೀಡುವುದು ಹೊಸದಲ್ಲ. ಹೀಗೆ ನೀಡಿದಾಗ ಉದ್ಯಮಿಗಳ ಮಕ್ಕಳು, ಸಹೋದರರು, ಯಶಸ್ವಿಯಾಗಿ ವ್ಯವಹಾರವನ್ನು ಮುನ್ನಡೆಸಿರುವುದನ್ನು ನೋಡಿದ್ದೇವೆ. 4,40,000 ಕೋಟಿ ರೂಪಾಯಿ ಮೌಲ್ಯದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಅಂತಹ ವ್ಯಕ್ತಿಗಳಲ್ಲಿ ಒಬ್ಬರು ಕರಿಷ್ಮಾ ಶಾಂಘ್ವಿ. ಅವರು ಭಾರತದ ಅತ್ಯಂತ ಶ್ರೀಮಂತ ಔಷಧೀಯ ಉದ್ಯಮಿ ದಿಲೀಪ್ ಶಾಂಘ್ವಿ ಅವರ ಸೊಸೆ. ದಿಲೀಪ್ ಅವರು 4.40 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸನ್ ಫಾರ್ಮಾ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಫೋರ್ಬ್ಸ್ ಪ್ರಕಾರ ಅವರ ನಿವ್ವಳ ಮೌಲ್ಯವು 28.7 ಬಿಲಿಯನ್ ಡಾಲರ್ ಆಗಿದೆ. ಅವರು ಭಾರತದ ಆರೋಗ್ಯ ಕ್ಷೇತ್ರದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಕರಿಷ್ಮಾ ಅವರು ದಿಲೀಪ್ ಅವರ ಪುತ್ರ ಅಲೋಕ್ ಶಾಂಘ್ವಿ ಅವರನ್ನು ವಿವಾಹವಾಗಿದ್ದಾರೆ, ಅವರು ಸನ್ ಫಾರ್ಮಾದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.

ಕರಿಷ್ಮಾ ಅವರು ಸನ್ ಫಾರ್ಮಾದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಉಪಕ್ರಮಗಳಲ್ಲಿ ಕೆಲಸ ಮಾಡುವ ಸುಪ್ರಸಿದ್ಧ ಮಹಿಳೆಯಾಗಿದ್ದಾರೆ . ಅವರು ತಮ್ಮ ಮಾವನವರಾದ ದಿಲೀಪ್ ಶಾಂಗ್ವಿ ಅವರು ಪ್ರಾರಂಭಿಸಿದ ಭಾರತದ ಪ್ರಮುಖ ತೈಲ ಮತ್ತು ಅನಿಲ ಕಂಪನಿಯಾದ ಸನ್ ಪೆಟ್ರೋಕೆಮಿಕಲ್ಸ್‌ನ ನಿರ್ದೇಶಕಿಯೂ ಆಗಿದ್ದಾರೆ.

ಕರಿಷ್ಮಾ ಶಾಂಘ್ವಿ: ಸಿರಿವಂತ ಫಾರ್ಮಾ ಉದ್ಯಮಿಯ ಸೊಸೆ ಈಕೆ.!

ಕರಿಷ್ಮಾ ಅವರು ಮುಂಬೈನಲ್ಲಿರುವ ಶಿಖಾ ಅಕಾಡೆಮಿ(Shikha Academy,)ಯ ಸಂಸ್ಥಾಪಕ ನಿರ್ದೇಶಕರಾಗಿದ್ದು, ಇದು ಕಡಿಮೆ ವೆಚ್ಚದ ಅಂತರಾಷ್ಟ್ರೀಯ ಶಾಲೆಯಾಗಿದ್ದು, ಹೆಚ್ಚಿನ ಸಾಮರ್ಥ್ಯವಿರುವ ಕಡಿಮೆ ಆದಾಯದ ಮಕ್ಕಳಿಗೆ ಸೇವೆ ಸಲ್ಲಿಸುತ್ತದೆ. ಅವರು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಕ್ಷೇತ್ರಗಳಲ್ಲಿ ಶಾಂತಿಲಾಲ್ ಶಾಂಗ್ವಿ ಫೌಂಡೇಶನ್‌ನೊಂದಿಗೆ ಸಹ ಕಾರ್ಯನಿರ್ವಹಿಸುತ್ತಾರೆ. ಕರಿಷ್ಮಾ ಅಶೋಕ ವಿಶ್ವವಿದ್ಯಾನಿಲಯದ ಬೋರ್ಡ್ ಆಫ್ ಟ್ರಸ್ಟಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದಾರೆ.

ಕರಿಷ್ಮಾ ಅವರ ಶೈಕ್ಷಣಿಕ ಅರ್ಹತೆಗಳು ಅತ್ಯುನ್ನತವಾಗಿದ್ದು, ಅವರು ವಾರ್ಟನ್ ಸ್ಕೂಲ್‌ನಿಂದ ಅರ್ಥಶಾಸ್ತ್ರದಲ್ಲಿ ಬಿಎಸ್‌ನೊಂದಿಗೆ ಮ್ಯಾನೇಜ್‌ಮೆಂಟ್ ಮತ್ತು ಟೆಕ್ನಾಲಜಿಯಲ್ಲಿ ಜೆರೋಮ್ ಫಿಶರ್ ಪ್ರೋಗ್ರಾಂನಿಂದ ಪದವಿ ಪಡೆದುಕೊಂಡಿದ್ದಾರೆ. ಕರಿಷ್ಮಾ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಯಾಗಿದ್ದು, ಅಲ್ಲಿ ದಿ ಮೈನರ್ ಇನ್ ಸೌತ್ ಏಶಿಯನ್ ಸ್ಟಡೀಸ್ ನಲ್ಲಿ ಅವರು ಬಯೋಇಂಜಿನಿಯರಿಂಗ್ ಮತ್ತು ಬಯೋ ಟೆಕ್ನಾಲಜಿಯಲ್ಲಿ ಬಿಎಎಸ್ ಮತ್ತು ಎಂಎಸ್ ಮಾಡಿದ್ದಾರೆ. ಮಾತ್ರವಲ್ಲದೇ ಹಾರ್ವರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಎಜುಕೇಶನ್‌ನಿಂದ ಮಾಸ್ಟರ್'ಸ್ ಇನ್ ಎಜುಕೇಶನ್ (Ed.M.) ಪದವಿ ಪಡೆದುಕೊಂಡಿದ್ದಾರೆ.

ಸನ್ ಫಾರ್ಮಾದ ಕಾರ್ಯಕ್ಷಮತೆ

ಕರಿಷ್ಮಾ ಅವರ ಮಾವ 1983 ರಲ್ಲಿ ಮನೋವೈದ್ಯಕೀಯ ಔಷಧಗಳನ್ನು ತಯಾರಿಸಲು ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ ಅನ್ನುಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಪ್ರಾರಂಭಿಸಿದ್ದರು. ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ (ಡಬ್ಲ್ಯು/ಬಿ/ಎ ಸನ್ ಫಾರ್ಮಾ) ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಬಹುರಾಷ್ಟ್ರೀಯ ಔಷಧೀಯ ಕಂಪನಿಯಾಗಿದೆ, ಇದು ಔಷಧೀಯ ಸಿದ್ಧತೆಗಳು ಮತ್ತು ಸಕ್ರಿಯ ಔಷಧೀಯ ಪದಾರ್ಥಗಳನ್ನು (ಎಪಿಐಗಳು) ಜಗತ್ತಿನಾದ್ಯಂತ 100 ಕ್ಕೂ ಹೆಚ್ಚು ದೇಶಗಳಲ್ಲಿ ತಯಾರಿಸಿ ಮಾರಾಟ ಮಾಡುತ್ತದೆ. ಇದು ಭಾರತದ ಅತಿ ದೊಡ್ಡ ಔಷಧೀಯ ಕಂಪನಿಯಾಗಿದೆ ಮತ್ತು ವಿಶ್ವದ ನಾಲ್ಕನೇ ಅತಿದೊಡ್ಡ ವಿಶೇಷ ಜನರಿಕ್ ಔಷಧೀಯ ಕಂಪನಿಯಾಗಿದೆ.

ಸನ್ ಫಾರ್ಮಾದ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಪ್ರಕಾರ, ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕೂಡಿಕೆ ನಿವ್ವಳ ಲಾಭದಲ್ಲಿ 28% ಏರಿಕೆಯನ್ನು ದಾಖಲಿಸಿದೆ. ಇದು ಕಳೆದ ವರ್ಷದ ಅದೇ ಅವಧಿಯಲ್ಲಿ 2,375 ಕೋಟಿ ರೂಪಾಯಿಗಳಿಂದ 3,040 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಒಟ್ಟು ಆದಾಯವು 12,486 ಕೋಟಿ ರೂಪಾಯಿಗಳಿಂದ 13,645 ಕೋಟಿ ರೂಪಾಯಿಗಳಿಗೆ ಏರಿದೆ, ಇದು ಔಷಧೀಯ ಕ್ಷೇತ್ರದಲ್ಲಿ ಕಂಪನಿಯ ಬೆಳವಣಿಗೆಯ ಯೋಜನೆಯನ್ನು ತೋರಿಸುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+