ವಾರಂಟಿ ಇದ್ದಾಗಲೇ ಹೋಮ್ ಅಪ್ಲೈಯನ್ಸ್‌ ಹಾಳಾಯ್ತಾ? ಆಗ್ರಿದೆ ಏನು ಮಾಡಬೇಕು ತಿಳಿಯಿರಿ

ಬೆಂಗಳೂರು, ಜುಲೈ 8: ಮನೆಗೆ ಅತಿ ಅಗತ್ಯವಾಗಿ ಬೇಕಾದ ರೆಫ್ರಿಜರೇಟರ್, ಟಿವಿ, ವಾಟರ್ ಪ್ಯೂರಿಫಾಯರ್ ವರ್ಷದ ಒಳಗೆ ಅಂದರೆ ವಾರಂಟಿ ಅವಧಿ ಇದ್ದಾಗಲೇ ಹಾಳಾಗುತ್ತದೆ. ವಾರಂಟಿ ಇದೆ ಎಂದು ನೀವು ಕಸ್ಟಮರ್ ಕೇರ್ ಗೆ ಕರೆ ಮಾಡಿದರೆ ಅವರಿಂದ ಯಾವ ರೆಸ್ಪಾನ್ಸ್ ಸಿಗುವುದಿಲ್ಲ. ಹೋಮ್ ಅಪ್ಲೈಯನ್ಸ್‌ ಮ್ಯಾನ್ಯುಫ್ಯಾಕ್ಚರ್‌ಗಳ ಆಫ್ಟರ್ ಸೇಲ್ಸ್ ಸರ್ವೀಸ್‌ ಬಗ್ಗೆ ಹಲವು ಗ್ರಾಹಕರು ಬೇಸತ್ತಿದ್ದಾರೆ.

ವಾಶಿಂಗ್ ಮಶಿನ್ ಗಳು, ಟಿವಿಗಳು, ಫ್ರಿಜ್‌ಗಳು, ಎಸಿಗಳು ಜೀವನವನ್ನು ಹಗುರಾಗಿಸುತ್ತವೆಯೇನೋ ನಿಜ. ಆದರೆ, ಇವು ಕೆಟ್ಟು ನಿಂತರೆ ಜೀವನ ದುರ್ಭರವಾಗುವುದೂ ಸತ್ಯ. ಸಮಸ್ಯೆ ಎದುರಾದಾಗ ನೀವು ಆ ಕಂಪನಿಗೆ ಕರೆ ಮಾಡಿದರೆ, ಸಮಸ್ಯೆ ಪರಿಹಾರವಾಗುವುದರ ಬದಲಿಗೆ ಹೆಚ್ಚಾಗುತ್ತದೆ. ಯಾಕೆಂದರೆ, ಅವರಿಂದ ಸರಿಯಾದ ಪ್ರತಿಕ್ರಿಯೆ ಸಿಗುವುದಿಲ್ಲ, ತಕ್ಷಣಕ್ಕೆ ಪರಿಹಾರವೂ ಸಿಗುವುದಿಲ್ಲ.

ಹೋಮ್ ಅಪ್ಲೈಯನ್ಸ್‌ ಹಾಳಾಯ್ತಾ? ಆಗ್ರಿದೆ ಏನು ಮಾಡಬೇಕು

ವಾರಂಟಿ ಸಮಯದೊಳಗೇ ನಿಮ್ಮ ಅಪ್ಲೈನ್ಸ್‌ಗೆ ಸಮಸ್ಯೆಯಾದರೂ ಇದೇ ಆಗುತ್ತದೆ. ಅಷ್ಟೇ ಅಲ್ಲ, ಕೆಲವು ಬಾರಿ ವಾರಂಟಿ ಅವಧಿಯಲ್ಲೇ ನೀವು ಹಾಳಾದ ಬಿಡಿ ಭಾಗಕ್ಕೆ ಹಣ ಕಟ್ಟಬೇಕಾದ ಪರಿಸ್ಥಿತಿ ಬರುವುದು ಇದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಮಾರಾಟ ಮಾಡುವಾಗ ಅವರು ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ಆದರೆ, ಪ್ರಾಡಕ್ಟ್ ಹಾಳಾದಾಗ ದೂರುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಆಫ್ಟರ್ ಸೇಲ್ಸ್‌ ಸರ್ವೀಸ್‌ನಲ್ಲಿ ಗ್ರಾಹಕರು ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವು ಬಾರಿ ಸರ್ವೀಸ್ ತುಂಬಾ ನಿಧಾನವಾಗುತ್ತದೆ. ಇನ್ನೂ ಕೆಲವು ಬಾರಿ ತಾನು ಕೊಟ್ಟ ಭರವಸೆಗೆ ಅನುಗುಣವಾಗಿ ಕೆಲಸ ಮಾಡುವುದಿಲ್ಲ. ಕೆಲವು ಬಾರಿ ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ಸರ್ವೀಸ್ ಮಾಡುವುದಿಲ್ಲ. ಇನ್ನೂ ಕೆಲವು ಬಾರಿ ತನ್ನ ಆಫ್ಟರ್ ಸೇಲ್ಸ್ ಸರ್ವೀಸ್ ಪಾಲಿಸಿಯನ್ನು ಸರಿಯಾಗಿ ವಿವರಿಸುವುದಿಲ್ಲ. ಬಹುತೇಕ ಸಂದರ್ಭಗಳಲ್ಲಂತೂ ಕಂಪನಿಗಳು ಗ್ರಾಹಕರ ದೂರುಗಳನ್ನು ಪೂರ್ತಿಯಾಗಿ ನಿರ್ಲಕ್ಷಿಸುತ್ತವೆ. ಇನ್ನು ಹಲವು ಬಾರಿ ಆನ್‌ಲೈನ್ ಕಸ್ಟಮರ್ ಇಂಟರ್ಫೇಸ್‌ಗಳಲ್ಲಿ ಸರಿಯಾದ ಪ್ರತಿಕ್ರಿಯೆಯನ್ನು ಪಡೆಯುವುದಕ್ಕೆ ಗ್ರಾಹಕರು ಕಷ್ಟಪಡುತ್ತಿರುತ್ತಾರೆ.

ಹಾಗಿದ್ದರೆ ಇಂಥ ಸಮಸ್ಯೆ ಎದುರಾದಾಗ ಗ್ರಾಹಕರು ಏನು ಮಾಡಬೇಕು? ಸೋಷಿಯಲ್ ಮೀಡಿಯಾದಲ್ಲಿ ಕಂಪನಿ ಟ್ಯಾಗ್ ಮಾಡಿ ದೂರು ಬರೆಯಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲೂ ವಿಚಿತ್ರ ಪ್ರತಿಕ್ರಿಯೆಗಳನ್ನು ಕೊಟ್ಟು ದೂರುಗಳನ್ನು ನಿರ್ಲಕ್ಷ್ಯ ಮಾಡುತ್ತವೆ. ಇದರ ಜೊತೆಗೆ, ಸಮಸ್ಯೆಯನ್ನು ತಕ್ಷಣ ಪರಿಹಾರ ಮಾಡಿಕೊಳ್ಳಲು ಆನ್‌ಲೈನ್‌ನಲ್ಲಿ ವಿವರಗಳನ್ನು ನೀಡಿದರೆ, ಸೈಬರ್ ದುಷ್ಟರು ನಿಮ್ಮನ್ನು ಟಾರ್ಗೆಟ್ ಮಾಡುವ ಕಿರಿಕಿರಿಯೂ ಶುರುವಾಗಬಹುದು.

ಗ್ರಾಹಕರ ಹಕ್ಕುಗಳನ್ನು ರಕ್ಷಿಸುವುದಕ್ಕೆ ಭಾರತದಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ ಜವಾಬ್ದಾರಿ ಹೊತ್ತಿದೆ. ಗ್ರಾಹಕ ರಕ್ಷಣೆ ಕಾಯ್ದೆ 2019ರ ಅಡಿಯಲ್ಲಿ, ಒಬ್ಬ ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸಿದರೆ, ಯಾವುದೇ ದೋಷವನ್ನು ಹೊಂದಿರುವ ಯಾವುದೇ ಸರ್ವೀಸ್ ಅಥವಾ ಸರಕುಗಳನ್ನು ಖರೀದಿ ಮಾಡಿದ್ದರೆ, ಕಂಪನಿ ಅಥವಾ ಡೀಲರ್ ಅನ್ನು ಸರಿಪಡಿಸಿಕೊಡದಿದ್ದರೆ, ಜಿಲ್ಲಾ ಗ್ರಾಹಕ ನ್ಯಾಯಾಲಯಗಳಲ್ಲಿ ಅದಕ್ಕೆ ಸಂಬಂಧಿಸಿದಂತೆ ದೂರು ಕೊಡಬಹುದು. ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಬಂದ ತೀರ್ಪಿಗೆ ಸಂತೃಪ್ತಿ ಇಲ್ಲದಿದ್ದರೆ, 30 ದಿನಗಳೊಳಗೆ ರಾಜ್ಯ ಗ್ರಾಹಕ ವಿವಾದಗಳ ಪರಿಹಾರ ಕಾಯ್ದೆ ಅಂದರೆ ಎಸ್‌ಸಿಡಿಆರ್‌ಸಿಗೆ ಮೇಲ್ಮನವಿ ಸಲ್ಲಿಸಬಹುದು. ಅಲ್ಲೂ ಬಂದ ನಿರ್ಧಾರದಿಂದ ಸಂತೃಪ್ತಿಯಾಗದಿದ್ದರೆ, 30 ದಿನಗಳೊಳಗೆ ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗ ಅಂದರೆ ಎನ್‌ಸಿಡಿಆರ್‌ಸಿಗೆ ದೂರು ಸಲ್ಲಿಸಬಹುದು. ಈ ಆಯೋಗದ ನಿರ್ಧಾರವೇ ಅಂತಿಮವಾಗಿರುತ್ತದೆ.

ಗ್ರಾಹಕ ರಕ್ಷಣೆ ಕಾಯ್ದೆಯ ಪ್ರಕಾರ ಒಂದು ಪ್ರಾಡಕ್ಟ್ ಅನ್ನು ರಿಪೇರಿ ಮಾಡುವಂತೆ, ರಿಪ್ಲೇಸ್ ಮಾಡುವಂತೆ ಅಥವಾ ಗ್ರಾಹಕರಿಗೆ ರಿಫಂಡ್ ಮಾಡುವಂತೆ ಆದೇಶ ಹೊರಡಿಸುವ ಅಧಿಕಾರ ಆಯೋಗಕ್ಕಿರುತ್ತದೆ.

ನೀವು ಯಾವಾಗ ದೂರು ನೀಡಬೇಕು?

ಕನ್ಸ್ಯೂಮರ್ ಕೋರ್ಟ್‌ಗೆ ಹೋಗುವುದು ನಿಮ್ಮ ಕೊನೆಯ ಆಯ್ಕೆಯಾಗಿರಬೇಕು. ಅದಕ್ಕೂ ಮೊದಲು, ನಿಮ್ಮ ಅಪ್ಲೈನ್ಸ್‌ನಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡರೆ, ಕಂಪನಿಯ ಕಸ್ಟಮರ್ ಕೇರ್‌ಗೆ ಕಾಲ್ ಮಾಡಬೇಕು. ಕಂಪನಿಯ ಹಿರಿಯ ಅಧಿಕಾರಿಯನ್ನೂ ನೀವು ಸಂಪರ್ಕಿಸಬಹುದು. ಸರ್ವೀಸ್ ಸೆಂಟರ್ ಅಥವಾ ಡೀಲರ್ ತಕ್ಷಣ ಸಮಸ್ಯೆಯನ್ನು ಸರಿಪಡಿಸಿದರೆ ತೊಂದರೆಯಿಲ್ಲ. ಆದರೆ, ಹಾಗೆ ಆಗದಿದ್ದರೆ, ಕನ್ಸ್ಯೂಮರ್ ಕಮಿಷನ್‌ಗೆ ನೀವು ದೂರು ನೀಡಬಹುದು.

ನೀವು ಖರೀದಿ ಮಾಡಿದ ಯಾವುದೇ ಅಪ್ಲೈಯನ್ಸ್ ಕೆಲಸ ಮಾಡುವುದನ್ನು ನಿಲ್ಲಿಸಿದರೆ, ವಾರಂಟಿ ಸಮಯದಲ್ಲಿ ಯಾವುದೇ ದೋಷ ಇದ್ದರೆ, ಸ್ಥಳೀಯ ಮೆಕಾನಿಕ್‌ ಬಳಿ ಅದನ್ನು ತೆಗೆದುಕೊಂಡು ಹೋಗುವುದರ ಬದಲಿಗೆ, ಕಂಪನಿಯ ಆಫ್ಟರ್ ಸೇಲ್ಸ್ ಸರ್ವೀಸ್‌ ಅಡಿಯಲ್ಲಿ ಕ್ಲೇಮ್ ಮಾಡಿ. ಈ ವಿಧಾನದಲ್ಲಿ ಯಾವುದೇ ಸಮಸ್ಯೆ ನಿಮಗೆ ಕಾಣಿಸಿದರೆ, ಕಾನೂನಿನ ಪ್ರಕಾರ ನಿಮ್ಮ ಹಕ್ಕುಗಳನ್ನು ಚಲಾಯಿಸಿ. ಉತ್ಪಾದನೆ ಮಾಡುತ್ತಿರುವ ಕಂಪನಿ ಅಥವಾ ಡೀಲರ್ ಜಾರಿಗೊಳ್ಳುವ ಹಾಗಿಲ್ಲ. ಅವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕೂ ಅವಕಾಶವಿಲ್ಲ. ಅವರ ಜವಾಬ್ದಾರಿಯನ್ನು ಅವರಿಗೆ ತಿಳಿಸಿಕೊಡಲು, ಮೊದಲ ನಿಮಗೆ ಇದರ ತಿಳಿವಳಿಕೆ ಇರಬೇಕು. ಹೀಗಾಗಿ, ಮಾಹಿತಿ ಇಟ್ಟುಕೊಂಡಿರಿ. ಗ್ರಾಹಕರ ಸಮಗ್ರ ಹಕ್ಕುಗಳನ್ನು ತಿಳಿದುಕೊಂಡಿರಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+