ಇಂಜಿನಿಯರಿಂಗ್ ತೊರೆದು ಹೈನುಗಾರಿಕೆಯತ್ತ ಒಲವು: ಡೈರಿ ಫಾರ್ಮ್‌ ಮೂಲಕ 23 ಕೋಟಿ ರೂ. ವಹಿವಾಟು

ವಿದ್ಯಾಭ್ಯಾಸ, ಉದ್ಯೋಗ, ಅಥವಾ ಹೆತ್ತವರು ನಂಬಿಕೊಂಡ ಕೃಷಿ ವೃತ್ತಿಯಲ್ಲಿ ಲಾಭವಿಲ್ಲವೆಂಬ ಕಾರಣವಿರಬಹುದು ಅನೇಕ ಯುವಕ ಯುವತಿಯರು ತಮ್ಮ ಹಳ್ಳಿಗಳಿಂದ ದೂರವಿತ್ತು ನಗರವಾಸಿಗಳಾಗಿಬಿಡುತ್ತಾರೆ. ಅವಕಾಶಕ್ಕಾಗಿ ಹಾತೊರೆಯುತ್ತಾ ಸಾಗುವ ಸಾಮಾನ್ಯರಿಗಿಂತ ಭಿನ್ನವಾಗಿ ದೀಪಕ್ ರಾಜ್ ತುಶೀರ್ ವಿಭಿನ್ನ ಮಾರ್ಗವನ್ನು ಆರಿಸಿಕೊಂಡು ಎಲ್ಲರಿಗೂ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.

ಹಳ್ಳಿಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಕೋಟಿಗಳಲ್ಲಿ ವಹಿವಾಟು ನಡೆಸಿ ಅಧಿಕ ಲಾಭವನ್ನು ಪಡೆದವರು ದೀಪಕ್ ರಾಜ್. ಹಾಗಿದ್ರೆ ಇವರು ಯಾವ ಊರಿನವರು, ಹೈನುಗಾರಿಕೆ ಸಾಮ್ರಾಜ್ಯ ಕಟ್ಟಿದ್ದು ಹೇಗೆ ಎಂದು ನೋಡೋಣ.

 ಇಂಜಿನಿಯರಿಂಗ್‌ನಿಂದ ಹೈನುಗಾರಿಕೆಯತ್ತ ಒಲವು; 23 ಕೋ.ರೂ ವಹಿವಾಟು.!

ದೀಪಕ್ ರಾಜ್ ಹಿನ್ನಲೆ:

ಹರಿಯಾಣದ ಸೋನಿಪತ್ ಜಿಲ್ಲೆಯ ಜಾಂತಿ ಖುರ್ದ್ ಗ್ರಾಮದಲ್ಲಿ ಬೆಳೆದ ದೀಪಕ್ ತಮ್ಮ ಪ್ರಾಥಮಿಕ ವಿದ್ಯಾಭಾಸದ ಬಳಿಕ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪಡೆದುಕೊಂಡರು. ಬಳಿಕ ಮಾಹಿತಿ ತಂತ್ರಜ್ಞಾನದಲ್ಲಿ ಎಂಬಿಎ ಪದವಿ ಪಡೆದ ಅವರು ಬಹುರಾಷ್ಟ್ರೀಯ ಸಂಸ್ಥೆ ವಿಪ್ರೋದಲ್ಲಿ ವೃತ್ತಿ ಜೀವನ ಆರಂಭಿಸಿದರು. ಇಲ್ಲಿ ಯಶಸ್ವಿ 10 ವರ್ಷಗಳ ವೃತ್ತಿಜೀವನವನ್ನು ಪೂರೈಸಿದ ಇವರಿಗೆ ತಮ್ಮೂರಿನ ಸೆಳೆತ ಕಾಡುತ್ತಿತ್ತು. ಗ್ರಾಮಕ್ಕೆ ಮರಳಲು ಹಾಗೂ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಅಗಾಧ ತುಡಿತದಿಂದ 2012 ರಲ್ಲಿ, ಅವರು ಕಾರ್ಪೊರೇಟ್ ಪ್ರಪಂಚದಿಂದ ಹೈನುಗಾರಿಕೆಯತ್ತ ಜೀವನವನ್ನು ಬದಲಾಯಿಸುವ ನಿರ್ಧಾರವನ್ನು ಮಾಡಿದರು.

ನ್ಯೂಜಿಲೆಂಡ್‌ನ ಇಬ್ಬರು ರೈತರು ಮತ್ತು ಇಬ್ಬರು ಸಹ ಕಂಪ್ಯೂಟರ್ ಎಂಜಿನಿಯರ್‌ಗಳಾದ ಪಂಕಜ್ ನವನಿ ಮತ್ತು ಸುಖವಿಂದರ್ ಸರಾಫ್ ಅವರೊಂದಿಗೆ ಪಾಲುದಾರಿಕೆಯೊಂದಿಗೆ ದೀಪಕ್ ಅವರು "ಬಿನ್ಸಾರ್ ಫಾರ್ಮ್‌" ಸ್ಥಾಪಿಸಿದರು.

ಡೈರಿ ಫಾರ್ಮ್ ಸ್ಥಾಪನೆ ಹಿಂದಿನ ಉದ್ದೇಶ?

ನಾವು ಮೂವರೂ ಹಳ್ಳಿಗಳಿಂದ ಬಂದಿದ್ದೇವೆ. ನಾವು ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ಬಳಸಿಕೊಂಡು ಗ್ರಾಮೀಣ ಭಾರತದಲ್ಲಿ ಸುಸ್ಥಿರ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಮೂಲಕ, ಗ್ರಾಹಕರಿಗೆ ಶುದ್ಧ ಮತ್ತು ಆರೋಗ್ಯಕರ ಹಾಲನ್ನು ಒದಗಿಸುವ ಮೂಲಕ ಹಾಲಿನ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಬಯಸಿದ್ದೆವು. ನಗರದಲ್ಲಿನ ನಮ್ಮ ಅನುಭವಗಳು ಗುಣಮಟ್ಟದ ಹಾಲಿನ ಕೊರತೆಯನ್ನು ತೋರಿಸಿದವು, ಇದು ನಮ್ಮ ಸ್ವಂತ ಡೈರಿ ಫಾರ್ಮ್ ಅನ್ನು ಪ್ರಾರಂಭಿಸಲು ಪ್ರೇರೇಪಿಸಿತು. ನಮಗೆ ಕೇವಲ ಲಾಭಗಳಿಸುವ ದೃಷ್ಟಿಕೋನ ಮಾತ್ರವಿರಲಿಲ್ಲ. ಗ್ರಾಮೀಣ ಮತ್ತು ಸ್ಥಳೀಯ ರೈತರ ಜೀವನದ ಗುಣಮಟ್ಟವನ್ನು ಸುಧಾರಿಸುವ ಅಲೋಚನೆಯು ನಮ್ಮದಾಗಿತ್ತು ಎನ್ನುತ್ತಾರೆ ದೀಪಕ್.

ಆರಂಭಿಕ ಸವಾಲು:

ನಮ್ಮೂರಿನ ರಸ್ತೆಗಳು ಸುಗಮವಾಗಿರಲಿಲ್ಲ.ದನಗಳನ್ನು ಖರೀದಿಸುವುದು ಒಂದು ಸವಾಲಾಗಿತ್ತು. ಕಂಪ್ಯೂಟರ್ ಇಂಜಿನಿಯರ್‌ಗಳಾಗಿದ್ದ ನಮಗೆ ಹೊಸ ಕ್ಷೇತ್ರ ಪ್ರವೇಶ ತ್ರಾಸದಾಯಕವಾಗಿತ್ತು. ನಮಗೆ ಅನುಭವದ ಕೊರತೆಯಿದ್ದ ಕಾರಣ ಲೇವಡಿ ಮಾಡಿದರು. ನಮ್ಮ ತಂಡ ಖರೀದಿಸಿದ್ದ 50 ಜಾನುವಾರುಗಳಲ್ಲಿ 35 ಮಾತ್ರ ರೋಗಗಳಿಂದ ಬದುಕುಳಿದವು. ಹಿನ್ನಡೆಯೇ ಕಾಡುತ್ತಿದ್ದುದರಿಂದ ನಮ್ಮ ಸಾಹಸದ ಬಗ್ಗೆ ನಮಗೆ ಅನುಮಾನಗಳನ್ನು ಕಾಡತೊಡಗಿತು.

ಟರ್ನಿಂಗ್ ಪಾಯಿಂಟ್

"15 ಜಾನುವಾರುಗಳನ್ನು ಕಳೆದುಕೊಂಡ ನಂತರ , ಪರಿಸ್ಥಿತಿಯನ್ನು ವಿಶ್ಲೇಷಿಸಲು ನಮ್ಮ ಐಟಿ ಜ್ಞಾನವನ್ನು ಬಳಸಬೇಕೆಂದು ನಾವು ಅರಿತುಕೊಂಡೆವು. ನಾವು ಹಸುಗಳನ್ನು ತೂಕ ಮಾಡಲು ಮತ್ತು ಲ್ಯಾಬ್ ಪರೀಕ್ಷೆಗಳನ್ನು ನಡೆಸಲು ಪ್ರಾರಂಭಿಸಿದೆವು. ದತ್ತಾಂಶ ನಿರ್ವಹಣೆ ಕಾರಣ ಆರೋಗ್ಯ ಸಮಸ್ಯೆಗಳನ್ನು ಮೊದಲೇ ಗುರುತಿಸಿ ಜಾನುವಾರುಗಳ ಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಯಿತು. ಹಾಲಿಗೆ ನ್ಯಾಯಯುತ ಬೆಲೆಯನ್ನು ಪಡೆಯಲು ಹೆಣಗಾಡಿದಾಗ ನಿರಾಶೆ ಅನುಭವಿಸಬೇಕಾಯಿತು.

ಈ ಸವಾಲಿಗೆ ಪ್ರತಿಕ್ರಿಯೆಯಾಗಿ, ದೀಪಕ್ ಮತ್ತು ಅವರ ತಂಡವು ಹಾಲನ್ನು ಬಾಟಲಿಗಳಲ್ಲಿ ಪ್ಯಾಕ್ ಮಾಡಲು ಪ್ರಾರಂಭಿಸಿದರು, ಈ ಕ್ರಮವು ಗುಣಮಟ್ಟದ ಉತ್ಪನ್ನಗಳನ್ನು ಹುಡುಕುತ್ತಿರುವ ಗ್ರಾಹಕರನ್ನು ಸೆಳೆಯಿತು. ಪ್ರತಿದಿನ 4 ರಿಂದ 10 ಲೀಟರ್‌ಗಳ ಮಾರಾಟವಾಗಿ ಪ್ರಾರಂಭವಾದವು ತ್ವರಿತವಾಗಿ 7,000 ರಿಂದ 8,000 ಲೀಟರ್‌ಗಳಿಗೆ ಬೆಳೆಯಿತು. ಜೊತೆಗೆ ಪನ್ನೀರ್, ತುಪ್ಪ, ಮೊಸರು ಮುಂತಾದ ಉತ್ಪನಗಳನ್ನು ಮಾರಾಟ ಮಾಡತೊಡಗಿದ್ರು. ಸಮಗ್ರ್ ಕೃಷಿ ಪದ್ದತಿ ಅಳವಡಿಸಿಕೊಂಡರು. ಇಂದು ದೀಪಕ್ ಅವರ ತಂಡವು ಪಶುವೈದ್ಯರು ಮತ್ತು ಕೃಷಿ ತಜ್ಞರು ಸೇರಿದಂತೆ 16 ಸಿಬ್ಬಂದಿಯನ್ನು ನೇಮಿಸಿಕೊಂಡಿದೆ.

ದೀಪಕ್ ಅವರು ಅಗ್ರಿ-ಲೀಡರ್‌ಶಿಪ್ ಪ್ರಶಸ್ತಿ ಮತ್ತು ಅತ್ಯುತ್ತಮ ಡೈರಿ ಫಾರ್ಮಿಂಗ್ ಪ್ರಶಸ್ತಿ ಸೇರಿದಂತೆ 6-7 ಪ್ರಶಸ್ತಿಗಳನ್ನು ಸ್ವೀಕರಿಸಿದ್ದು, ಫಾರ್ಮ್ ಪ್ರಭಾವಶಾಲಿ ವಹಿವಾಟು ರೂ. 5-6% ನಿವ್ವಳ ಮಾರ್ಜಿನ್‌ನೊಂದಿಗೆ ಕಳೆದ ವರ್ಷ 23 ಕೋಟಿ ರೂ . ವಹಿವಾಟು ನಡೆಸಿದೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+