ಪ್ರತಿಯೊಂದು ವಿಭಾಗದಲ್ಲೂ ಆಧಾರ್ ಕಾರ್ಡ್ (Aadhaar Card) ಎಂಬುದು ಬಹುಮುಖ್ಯ ದಾಖಲೆಯಾಗಿಬಿಟ್ಟಿದೆ. ಒಂದು ಮೊಬೈಲ್ ಸಿಮ್ ಖರೀದಿಸುವುದರಿಂದ ಹಿಡಿದು, ಪಾಸ್‌ಪೋರ್ಟ್ ಮಾಡಿಸುವವರೆಗೆ ಆಧಾರ್ ನಂಬರ್ ಬಹಳ ಮುಖ್ಯವಾಗಿಬಿಟ್ಟಿದೆ. ಅಂಥದ್ರಲ್ಲಿ ಕೆಲವರು ಬೇಜಾವಬ್ದಾರಿಯಿಂದಲೋ, ತಪ್ಪಿಯೋ ಆಧಾರ್ ಕಾರ್ಡ್ ಅಥವಾ ಅದರ ನಂಬರ್ ಅನ್ನೇ ಮರೆತುಬಿಡುತ್ತಾರೆ. ಆದ್ರೆ ಇನ್ಮೇಲೆ ಆಧಾರ್ ಕಾರ್ಡ್ ಕಳೆದುಹೋದ್ರೆ ಚಿಂತಿಸುವ ಅಗತ್ಯವಿಲ್ಲ. ಅದಕ್ಕಾಗಿ ನಾವೊಂದು ಸೂಪರ್ ಟ್ರಿಕ್ಸ್ ನೀಡುತ್ತೇವೆ ನೋಡಿ.

ಹೌದು, ಇನ್ಮೇಲೆ ಆಧಾರ್ ಕಾರ್ಡ್ ಕಳೆದುಹೋದ್ರೆ ಅಥವಾ ಆಧಾರ್ ನಂಬರ್ ಮರೆತುಹೋಗಿದ್ರೆ ಚಿಂತಿಸಬೇಡಿ. UIDAI ತಂದಿರುವ ಹೊಸ ಸೇವೆಯ ಮೂಲಕ ಕೇವಲ ಒಂದೇ ಒಂದು ಕಾಲ್ ಅಥವಾ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ನಿಮ್ಮ ಆಧಾರ್ ನಂಬರ್ ಅನ್ನು ಥಟ್ ಅಂತ ಮರಳಿ ಪಡೆಯಬಹುದು.
UIDAI ತಂದಿದೆ ಹೊಸ ಸೇವೆ!
ಕಳೆದು ಹೋದ ಆಧಾರ್ ಕಾರ್ಡ್ ಕೆಲವೊಮ್ಮೆ ಎಷ್ಟು ಹುಡುಕಿದ್ರೂ ಸಿಗೋದೆ ಇಲ್ಲ, ದುರಾದೃಷ್ಟವೆಂಬಂತೆ ಕೆಲವೊಮ್ಮೆ ಜೆರಾಕ್ಸ್ ಕಾಪಿಗಳು ಕೂಡಾ ಇರಲ್ಲ. ಇನ್ನೂ ಕೆಲವರಿಗೆ ಆಧಾರ್ ನಂಬರ್ ಕೂಡಾ ನೆನಪೇ ಇರಲ್ಲ. ಆದ್ರೆ ಅಂಥವರಿಗಾಗಿ UIDAI ಹೊಸ ಸೇವೆ ತಂದಿದೆ. ಈ ಸೇವೆಯ ಮೂಲಕ ಕೆಲವೇ ನಿಮಿಷಗಳಲ್ಲಿ ನೀವು ಕಳೆದು ಹೋದ ಆಧಾರ್ ಕಾರ್ಡ್ ನಂಬರ್ ಅನ್ನು ಮರಳಿ ಪಡೆಯಬಹುದು. ಹಾಗಿದ್ರೆ ಕಳೆದು ಹೋದ ಆಧಾರ್ ಸಂಖ್ಯೆ ಅಥವಾ ಎನ್‌ರೋಲ್‌ಮೆಂಟ್ ಐಡಿಯನ್ನು ಮರಳಿ ಪಡೆಯುವುದು ಹೇಗೆ ಎಂಬುದರ ಹಂತ ಹಂತದ ಟಿಪ್ಸ್ ಇಲ್ಲಿದೆ.
ಆಧಾರ್ ಕಾರ್ಡ್ ಇಂದು ಕೇವಲ ಒಂದು ಐಡಿ ಅಲ್ಲ, ಅದೊಂದು ಪ್ರತಿಯೊಬ್ಬರ ಜೀವನದ ಪ್ರಮುಖ ಪಾತ್ರವಾಗಿಬಿಟ್ಟಿದೆ. ಯಾವುದೇ ಕೆಲಸಗಳಿಗೂ, ಸೌಲಭ್ಯಗಳಿಗೂ ಆಧಾರ್ ಕಾರ್ಡ್ ಬೇಕೇ ಬೇಕು. ಸರ್ಕಾರಿ ಯೋಜನೆಗಳು, ಸಬ್ಸಿಡಿಗಳು, ಬ್ಯಾಂಕಿಂಗ್, ತೆರಿಗೆ ರಿಟರ್ನ್ಸ್ ಮತ್ತು ಸಿಮ್ ಕಾರ್ಡ್, ಬ್ಯಾಂಕ್ ಅಕೌಂಟ್ ಹೀಗೆ ಅನೇಕ ವಿಷಯಗಳಲ್ಲಿ ಆಧಾರ್ ಪ್ರಮುಖ ದಾಖಲೆಯಾಗಿದೆ. ಆದರೆ ಆಧಾರ್ ನಂಬರೇ ಇಲ್ಲದಿದ್ರೆ ಇದೆಲ್ಲಾ ಕೆಲಸಗಳಾಗೋದು ಬಹುತೇಕ ಡೌಟ್.
ಏನದು ಹೊಸ ಸೇವೆ?
UIDAI ಜನರ ಅನುಕೂಲಕ್ಕಾಗಿ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. 1947 ನಂಬರ್‌ಗೆ ಕರೆ ಮಾಡಿದ್ರೆ ಸಾಕು ಕ್ಷಣ ಮಾತ್ರದಲ್ಲಿ ನೀವು ಆಧಾರ್ ಸಂಬಂಧಿತ ಮಾಹಿತಿಯನ್ನು ಪಡೆಯಬಹುದು.
- ಅದಕ್ಕಾಗಿ ನೀವು ನಿಮ್ಮ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ 1947 ಗೆ ಕರೆ ಮಾಡಿ.
- ಅಲ್ಲಿ ನೀವು ಮಾತನಾಡಲು ಬಯಸುವ ಭಾಷೆಯನ್ನು ಆಯ್ಕೆ ಮಾಡಬೇಕು. (ಹಿಂದಿ, ಇಂಗ್ಲಿಷ್ ಅಥವಾ ಇತರ).
- ನಂತರ ನೀವು "ಆಧಾರ್ ಸೇವೆಗಳು" ಅಥವಾ "ಆಧಾರ್ ಸ್ಟೇಟಸ್" ಎಂಬ ಆಯ್ಕೆಗಳನ್ನು ಸೆಲೆಕ್ಟ್ ಮಾಡಬೇಕು.
- ಏಜೆಂಟ್‌ನೊಂದಿಗೆ ಮಾತನಾಡಲು ಆಯ್ಕೆ ಮಾಡಿ.
- ನೀವು ಯಾರೆಂಬುದನ್ನು ಚೆಕ್ ಮಾಡಲು ನಿಮ್ಮ ಹೆಸರು, ಜನ್ಮ ದಿನಾಂಕ ಅಥವಾ ಪಿನ್‌ಕೋಡ್‌ನಂತಹ ಮಾಹಿತಿಯನ್ನು ನೀಡಬೇಕು.
- ಈ ಎಲ್ಲಾ ಹಂತಗಳನ್ನು ಫಾಲೋ ಮಾಡಿದ ನಂತರ, ಏಜೆಂಟ್ ನಿಮ್ಮ ಎನ್‌ರೋಲ್‌ಮೆಂಟ್ ಐಡಿ (EID) ಅಥವಾ ಆಧಾರ್ ಸಂಖ್ಯೆಯನ್ನು (UID) ನಿಮಗೆ ನೀಡುವ ಪ್ರಯತ್ನ ಮಾಡುತ್ತಾರೆ.
- ಈ ಸೌಲಭ್ಯವು 24x7 ಲಭ್ಯವಿದ್ದು, ಇದನ್ನು ಯಾವುದೇ ನೆಟ್‌ವರ್ಕ್‌ನಿಂದ ಪ್ರವೇಶಿಸಬಹುದು.
ವೆಬ್‌ಸೈಟ್ ಮೂಲಕ ಮರಳಿ ಪಡೆಯಿರಿ ಆಧಾರ್!
UIDAI ವೆಬ್‌ಸೈಟ್‌ನಲ್ಲೂ ನೀವು ಕಳೆದುಕೊಂಡಿರುವ ನಿಮ್ಮ ಆಧಾರ್ ಸಂಖ್ಯೆ ಅಥವಾ ಎನ್‌ರೋಲ್‌ಮೆಂಟ್ ಐಡಿಯನ್ನು ಮರಳಿ ಪಡೆಯಬಹುದು.
ಈ ಹಂತಗಳನ್ನು ಫಾಲೋ ಮಾಡಿ
- ಮೊದಲಿಗೆ ಗೂಗಲ್‌ನಲ್ಲಿ https://uidai.gov.in ಗೆ ಹೋಗಿ.
- ವೆಬ್‌ಸೈಟ್ ಓಪನ್ ಮಾಡಿದಾಗ "My Aadhaar" ಟ್ಯಾಬ್‌ಗೆ ಹೋಗಿ "Retrieve Lost or Forgotten UID/EID" ಮೇಲೆ ಕ್ಲಿಕ್ ಮಾಡಬೇಕು.
- ಬಳಿಕ "Aadhaar Number" ಅಥವಾ "Enrollment ID" ಆಯ್ಕೆಮಾಡಿ.
- ಅದಾದ ನಂತರ ನಿಮ್ಮ ಹೆಸರು, ಲಿಂಕ್ ಮಾಡಲಾದ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ನಮೂದಿಸಿ.
- ಕ್ಯಾಪ್ಚಾ ಕೋಡ್ ಭರ್ತಿ ಮಾಡಿ "Send OTP" ಮೇಲೆ ಕ್ಲಿಕ್ ಮಾಡಬೇಕು.
- ತಕ್ಷಣ ನಿಮ್ಮ ಮೊಬೈಲ್‌ಗೆ OTP ಬರುತ್ತದೆ, ಅದನ್ನು ಅಲ್ಲಿ ಸೇರಿಸಬೇಕು ಮತ್ತು "Verify OTP" ಮೇಲೆ ಕ್ಲಿಕ್ ಮಾಡಬೇಕು.
- ಅಷ್ಟೆಲ್ಲಾ ಆದ ನಂತರ ನಿಮ್ಮ ಆಧಾರ್ ಸಂಖ್ಯೆ ಅಥವಾ EID ಅನ್ನು ನಿಮ್ಮ ಮೊಬೈಲ್‌ಗೆ SMS ಮೂಲಕ ಕಳುಹಿಸಲಾಗುತ್ತದೆ.


Click it and Unblock the Notifications