ಪಾಪ್ ತಾರೆ ಟೇಲರ್ ಸ್ವಿಫ್ಟ್ ಅವರನ್ನು ಹಿಂದಿಕ್ಕಿರುವ ಟೆಕ್ ಕಂಪನಿ ಸ್ಕೇಲ್ AI ನ ಸಹ-ಸಂಸ್ಥಾಪಕಿ ಲೂಸಿ ಗುವೊ ಅವರು ವಿಶ್ವದ ಅತ್ಯಂತ ಕಿರಿಯ ಸ್ವಯಂ ನಿರ್ಮಿತ ಮಹಿಳಾ ಬಿಲಿಯನೇರ್ ಎಂಬ ಅದ್ಬುತ ಮೈಲಿಗಲ್ಲನ್ನು ತಲುಪಿದ್ದಾರೆ. ವಿಶೇಷ ಅಂದ್ರೆ ಅವರಿಗಿನ್ನ 30 ವರ್ಷವಾಗಿದ್ದು, ಕಿರಿಯ ವಯಸ್ಸಿನಲ್ಲಿಯೇ ಅಭೂತಪೂರ್ವ ಯಶಸ್ಸನ್ನು ಸಾಧಿಸಿದ್ದಾರೆ. ಇದಕ್ಕಿಂತಲೂ ಕುತೂಹಲಕಾರಿ ವಿಚಾರವೆಂದರೆ AI ನ ಸಹ-ಸಂಸ್ಥಾಪಕಿಯಾಗಿದ್ರೂ ಲೂಸಿ ಅವರು ಕಂಪ್ಯೂಟರ್ ಸೈನ್ಸ್ ಕಾಲೇಜು ಡ್ರಾಪ್ಔಟ್ ವಿದ್ಯಾರ್ಥಿನಿ.!
ಈ ಯಶಸ್ಸಿಗೆ ಕಾರಣ ಅಂದ್ರೆ ಲೂಸಿ ಅವರು 2016 ರಲ್ಲಿ ಸಹ-ಸ್ಥಾಪಿಸಿದ ಸ್ಕೇಲ್ AI ಸಂಸ್ಥೆ ಹಾಗೂ ಅದರಲ್ಲಿ ಅವರ ಬೃಹತ್ ಮಾಲೀಕತ್ವದ ಪಾಲು ಅಂದರೆ ತಪ್ಪಗಲಾರದು. ಈ ಸಂಸ್ಥೆಯ ಮೌಲ್ಯವು ಇತ್ತೀಚೆಗೆ $25 ಬಿಲಿಯನ್ ತಲುಪಿದೆ. ಫೋರ್ಬ್ಸ್ ವರದಿಗಳ ಪ್ರಕಾರ, 30 ವರ್ಷದ ಗುವೊ ಈ ಸಾಧನೆ ಮಾಡಿದ ಅತಿ ಕಿರಿಯ ಸ್ವಯಂ-ನಿರ್ಮಿತ ಮಹಿಳೆಯಾಗಿದ್ದಾರೆ ಮತ್ತು ಅವರು 35 ವರ್ಷದ ಟೇಲರ್ ಸ್ವಿಫ್ಟ್ ಅವರನ್ನು ಹಿಂದಿಕ್ಕಿದ್ದಾರೆ.

ಲೂಸಿ ಗುವೋ ಯಾರು?
ಫೋರ್ಬ್ಸ್‌ನ ಮಾಹಿತಿಯ ಪ್ರಕಾರ, ಏಪ್ರಿಲ್ ಮೂರನೇ ವಾರದ ವೇಳೆಗೆ ಗುವೊ ಅವರ ಅಂದಾಜು ನಿವ್ವಳ ಮೌಲ್ಯ $1.25 ಬಿಲಿಯನ್ ಆಗಿತ್ತು. ಅವರ ಸಂಪತ್ತಿನ ಬಹುಪಾಲು ಭಾಗವು 2016 ರಲ್ಲಿ ಅಲೆಕ್ಸಾಂಡರ್ ವಾಂಗ್ ಅವರೊಂದಿಗೆ ಸೇರಿ ಸ್ಥಾಪಿಸಿದ ಸ್ಕೇಲ್ AI ನಲ್ಲಿನ ಅವರ ಆರಂಭಿಕ ದೊಡ್ಡ ಪಾಲಿನಿಂದ ಬಂದಿದೆ. ಇನ್ನೊಂದು ಗಮನಾರ್ಹ ಸಂಗತಿ ಎಂದರೆ 2018 ರಲ್ಲಿ ಅವರು ಕಂಪನಿಯನ್ನು ತೊರೆದರೂ ಸಹ, ಅವರು ಗಣನೀಯ ಪ್ರಮಾಣದ ಷೇರುಗಳನ್ನು ಉಳಿಸಿಕೊಂಡಿದ್ದಾರೆ. ಇದರ ಮೌಲ್ಯವು ಕಾಲಾನಂತರದಲ್ಲಿ ಗಮನಾರ್ಹವಾಗಿ ಏರಿಕೆಯಾಗಿದೆ.
ಲೂಸಿ ಅವರು 1994 ರಲ್ಲಿ ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿ ಚೀನಾದಿಂದ ವಲಸೆ ಬಂದ ಪೋಷಕರಿಗೆ ಜನಿಸಿದರು. ಬಾಲ್ಯದಿಂದಲೂ ತಂತ್ರಜ್ಞಾನದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು, ಹದಿಹರೆಯದಲ್ಲಿದ್ದಾಗಲೇ ಸ್ವಂತವಾಗಿ ಕೋಡಿಂಗ್ ಕಲಿತುಕೊಂಡರು ಮತ್ತು ನಿಯೋಪೆಟ್ಸ್ ಎಂಬ ಆನ್‌ಲೈನ್ ಆಟಕ್ಕಾಗಿ ಬಾಟ್‌ಗಳನ್ನು ರಚಿಸಿ ಹಣ ಸಂಪಾದಿಸಿದರು. ನಂತರ, ಅವರು ಕಂಪ್ಯೂಟರ್ ವಿಜ್ಞಾನದಲ್ಲಿ ಉನ್ನತ ವ್ಯಾಸಂಗ ಮಾಡಲು ಕಾರ್ನೆಗೀ ಮೆಲನ್ ವಿಶ್ವವಿದ್ಯಾಲಯಕ್ಕೆ ಸೇರಿದರು. ಆದರೆ, ಥಿಯಲ್ ಫೆಲೋಶಿಪ್ ಪಡೆದ ನಂತರ 2014 ರಲ್ಲಿ ತಮ್ಮ ಕಾಲೇಜು ಶಿಕ್ಷಣವನ್ನು ಮೊಟಕುಗೊಳಿಸಿದರು. ಈ ಫೆಲೋಶಿಪ್, ಕಾಲೇಜು ಶಿಕ್ಷಣವನ್ನು ಮುಂದುವರಿಸುವ ಬದಲು ತಮ್ಮದೇ ಆದ ಉದ್ಯಮ ಕಲ್ಪನೆಗಳ ಮೇಲೆ ಕೆಲಸ ಮಾಡಲು $1,00,000 ಧನಸಹಾಯವನ್ನು ನೀಡುತ್ತದೆ.
2016 ರಲ್ಲಿ ಕೇವಲ 21 ನೇ ವಯಸ್ಸಿನಲ್ಲಿ, ಆಗ 19 ವರ್ಷದ ಅಲೆಕ್ಸಾಂಡರ್ ವಾಂಗ್ ಅವರೊಂದಿಗೆ ಸೇರಿ ಸ್ಕೇಲ್ AI ಎಂಬ ಕೃತಕ ಬುದ್ಧಿಮತ್ತೆ ಸಂಸ್ಥೆಯನ್ನು ಸ್ಥಾಪಿಸಿದರು.
ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಈ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ವಾಂಗ್ ನೇಮಕಗೊಂಡರೆ, ಗುವೊ ಅವರು ಕಾರ್ಯಾಚರಣೆ ಮತ್ತು ಉತ್ಪನ್ನ ವಿನ್ಯಾಸ ತಂಡಗಳ ಜವಾಬ್ದಾರಿಯನ್ನು ವಹಿಸಿಕೊಂಡರು. ಕೇವಲ ಎರಡು ವರ್ಷಗಳಲ್ಲಿ, 2018 ರಲ್ಲಿ, ಈ ಇಬ್ಬರೂ ಉದ್ಯಮಿಗಳು ಫೋರ್ಬ್ಸ್‌ನ 30 ವರ್ಷದೊಳಗಿನ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದರು.
ಆದ್ರೆ ಅದೇ ವರ್ಷದಲ್ಲಿ, ಕಂಪನಿಯನ್ನು ನಿರ್ವಹಿಸುವ ವಿಧಾನದ ಬಗ್ಗೆ ವಾಂಗ್ ಅವರೊಂದಿಗೆ ಭಿನ್ನಾಭಿಪ್ರಾಯ ಉಂಟಾಯಿತು. ಇದೇ ಕಾರಣಕ್ಕೆ ಗುವೊ ಅವರು ಸ್ಕೇಲ್ AI ನಿಂದ ನಿರ್ಗಮಿಸುವ ನಿರ್ಧಾರ ತೆಗೆದುಕೊಂಡರು.
ಸ್ಕೇಲ್ AI ತೊರೆದ ನಂತರ, ಲೂಸಿ ಗುವೊ ಅವರಿಗೆ ಟೆಕ್ ಜಗತ್ತಿನಲ್ಲಿ ಕೆಲಸ ಮಾಡುವ ಉತ್ಸಾಹ ಇನ್ನು ಮುಂದುವರಿದಿತ್ತು. ಇದಕ್ಕಾಗಿ ಅವರು "ಬ್ಯಾಕೆಂಡ್ ಕ್ಯಾಪಿಟಲ್ "ಎಂಬ ವೆಂಚರ್ ಕ್ಯಾಪಿಟಲ್ ಸಂಸ್ಥೆಯನ್ನು ಸಹ-ಸ್ಥಾಪಿಸಿದರು. ನಂತರ, ಅವರು ವಿಷಯ ರಚನೆಕಾರರಿಗೆ ಹಣಗಳಿಸುವ ಸಾಧನಗಳನ್ನು ಒದಗಿಸುವ ಪಾಸಸ್ ಎಂಬ ಸಂಸ್ಥೆ ಸ್ಥಾಪಿಸಿದರು ಮತ್ತು ಪ್ರಸ್ತುತ ಅದರ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2022 ಮತ್ತು 2024 ರ ನಡುವೆ, ಪಾಸಸ್ಸ್ ಹೂಡಿಕೆದಾರರಿಂದ $50 ಮಿಲಿಯನ್ ಹಣವನ್ನು ಸಂಗ್ರಹಿಸಿವೆ.
ಒಟ್ಟಾರೆ, ಗುವೊ ಅವರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿಶ್ವದ ಆರು ಸ್ವಯಂ ನಿರ್ಮಿತ ಮಹಿಳಾ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಸೇರಿದ್ದಾರೆ. ಈ ಹಿಂದೆ, 35 ವರ್ಷ ವಯಸ್ಸಿನ ಟೇಲರ್ ಸ್ವಿಫ್ಟ್ ಅವರು $1.6 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಅತ್ಯಂತ ಕಿರಿಯ ಸ್ವಯಂ ನಿರ್ಮಿತ ಮಹಿಳಾ ಬಿಲಿಯನೇರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಈಗ ಅವರು ಎರಡನೇ ಸ್ಥಾನದಲ್ಲಿದ್ದು ಗುವೊ ಮೊದಲ ಸ್ಥಾನ ಅಲಂಕರಿಸಿದ್ದಾರೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications