25 ಕೋಟಿಯ ಟೀ ಪಾಟ್ ವಿನ್ಯಾಸಗೊಳಿಸಿದ 65,000 ಕೋಟಿಗಳ ಒಡೆಯ

25 ಕೋಟಿಯ ಟೀ ಪಾಟ್ ವಿನ್ಯಾಸಗೊಳಿಸಿದ 65,000 ಕೋಟಿಗಳ ಒಡೆಯ, ಲಂಡನ್‌ ಮೂಲದ ನಿರ್ಮಲ್‌ ಸೇಥಿಯಾ ಬಗ್ಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

ಬಹಳ ಜನಪ್ರಿಯತೆ ಪಡೆದುಕೊಂಡಿರುವ ಈ ಟೀ ಪಾಟ್‌ ಜಗತ್ತಿನ ಅತ್ಯಂತ ಬೆಳೆಬಾಳುವ ಟೀ ಪಾಟ್‌ ಎಂಬ ಮನ್ನಣೆಗೆ ಪಾತ್ರವಾಗಿದೆ. 2016ರಲ್ಲಿ ಇದು ಗಿನ್ನೆಸ್‌ ದಾಖಲೆಯಲ್ಲಿಯೂ ಗುರುತಿಸಿಕೊಂಡಿದೆ. ಈ ಟೀ ಪಾಟ್‌ನ ಹೆಸರು ದಿ ಇಗೋಯಿಸ್ಟ್‌. ಈ ಟೀ ಪಾಟ್‌ ಅನ್ನು ಭಾರತೀಯ - ಬ್ರಿಟಿಷ್ ಮೂಲದ ಬಿಲಿಯನೇರ್‌ ನಿರ್ಮಲ್‌ ಸೇಥಿಯಾ ಅವರ ಎನ್‌. ಸೇಥಿಯಾ ಫೌಂಡೇಶನ್‌ ಸ್ಥಾಪಿಸಿದೆ.

 25 ಕೋಟಿಯ ಟೀ ಪಾಟ್ ವಿನ್ಯಾಸಗೊಳಿಸಿದ 65,000 ಕೋಟಿಗಳ ಒಡೆಯ

ಈ ಟೀ ಪಾಟ್‌ ಅನ್ನು ನಿರ್ಮಲ್‌ ಸೇಥಿಯಾ ಅವರು ತಮ್ಮ ಸಂಸ್ಥೆಯಾದ ನ್ಯೂಬೈ ಟೀಸ್‌ ಮೂಲಕ ಪ್ರಾಯೋಜಿಸಿದ್ದಾರೆ. ಇದನ್ನು ಫುಲ್ವಿಯೋ ಸ್ಕ್ಯಾವಿಯಾ ಅವರು ತಯಾರಿಸಿದ್ದಾರೆ. ಇದನ್ನು ಹಳದಿ ಚಿನ್ನ ಹಾಗೂ ಬೆಳ್ಳಿಯಿಂದ ತಯಾರಿಸಲಾಗಿದೆ. ಇದರ ರಚನೆಯಲ್ಲಿ 1658 ವಜ್ರಗಳು ಹಾಗೂ 386 ಮಾಣಕ್ಯಗಳನ್ನು ಬಳಸಲಾಗಿದೆ. ವಿಶೇಷವೆಂದರೆ ಇದನ್ನು ತಯಾರಿಸುವಲ್ಲಿ 6.67 ಕ್ಯಾರೆಟ್‌ನ ಥಾಯ್‌ ಮಾಣಿಕ್ಯವನ್ನು ಸಹ ಉಪಯೋಗಿಸಲಾಗಿದೆ.

ಇನ್ನು ಈ ಟೀ ಪಾಟ್‌ನ ಹ್ಯಾಂಡಲ್‌ ಅನ್ನು ಮ್ಯಾಮತ್‌ ದಂತದಿಂದ ತಯಾರಿಸಲಾಗಿದೆ. 2016ರಲ್ಲಿ ಇದರ ಬೆಲೆ 24.8 ಕೋಟಿ ರೂ. ಆಗಿತ್ತು. 1941ರಲ್ಲಿ ಸೇಥಿಯಾ ಅವರು ಕೊಲ್ಕೋತ್ತಾದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಸೋಹನ್‌ ಲಾಲ್ಜಿ ಸೇಥಿಯಾ. ಸೇಥಿಯಾ ಅವರು ಕಳೆದ 50 ವರ್ಷಗಳಿಂದ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರು ತಮ್ಮ ತಾಯ್ನಾಡು ಭಾರತದ ಬಗ್ಗೆಯೂ ಭಾವನಾತ್ಮಕವಾಗಿ ಹೆಚ್ಚು ಪ್ರೀತಿಯನ್ನು ಹೊಂದಿದ್ದಾರೆ.

ಸೇಥಿಯಾ ಅವರು ಭಾರತ, ಯುಕೆ, ಆಫ್ರಿಕಾ, ರಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ಜನಪರ ದತ್ತಿ ಯೋಜನೆಗಳನ್ನು ನಡೆಸುತ್ತಿದ್ದಾರೆ. ಈ ನಡುವೆ ಅವರು ಶಿಕ್ಷಣ, ಧರ್ಮ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿಯೂ ಅಪಾರವಾದ ಜನಪರ ಕೆಲಸ ಮಾಡುತ್ತಿದ್ದಾರೆ. ಸೇಥಿಯಾ ಅವರ ನಿವ್ವಳ ಆಸ್ತಿ ಮೌಲ್ಯವು 6.5 ಬಿಲಿಯನ್ ಪೌಂಡ್‌ಗಳು ( ಸುಮಾರು 6,84,49 ಕೋಟಿ) ಆಗಿವೆ.

ಇದು ವಿಶ್ವದ ಅತ್ಯಂತ ಬೆಲೆ ಬಾಳುವ ಟೀ ಪಾಟ್ ಕೂಡ ಆಗಿದೆ. ಈಗ ಇದು ಇಂಗ್ಲೆಂಡ್‌ನ ಎನ್. ಸೇಥಿಯಾ ಫೌಂಡೇಶನ್ ಒಡೆತನದಲ್ಲಿದೆ. ಈ ಟೀ ಪಾಟ್ ಅನ್ನು 18-ಕ್ಯಾರೆಟ್ ಹಳದಿ ಚಿನ್ನವನ್ನು ಬಳಸಿಕೊಂಡು ಸಿದ್ಧಪಡಿಸಲಾಗಿದೆ. ಇದರ ಬಾಡಿಯು ಕಟ್‌ ಕವರಿಂಗ್‌ ಡೈಮಂಡ್‌ನ್ನು ಹೊಂದಿದ್ದು, ಮಧ್ಯ ಭಾಗದಲ್ಲಿ 6.67 ಕ್ಯಾರೆಟ್‌ನ ಮಾಣಿಕ್ಯವನ್ನು ಕಾಣಬಹುದು. ಟೀ ಪಾಟ್‌ ಹ್ಯಾಂಡಲ್ ಅನ್ನು ಪಳೆಯುಳಿಕೆಗೊಳಿಸಿದ ಬೃಹತ್‌ ಗಜದ ದಂತದಿಂದ ಮಾಡಲಾಗಿದೆ.

ಇದರ ಮೌಲ್ಯ 2016ರಲ್ಲಿ 3,000,000 ಡಾಲರ್‌ (£2,307,900, €2,704,800) ಎಂದು ಗಿನ್ನೆಸ್ ಬುಕ್‌ ಆಫ್‌ ರೆಕಾರ್ಡ್‌ ಸಂಸ್ಥೆಯವರು ಟ್ವೀಟ್ ಮಾಡಿದ್ದಾರೆ. ಈ ನಡುವೆ ಸೇಥಿಯಾ ಅವರು ಬ್ರಿಟನ್‌ನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+