ಹಿರಿಯ ನಾಗರಿಕರಿಗಾಗಿ, ಉದ್ಯೋಗದಿಂದ ನಿವೃತ್ತಿ ಹೊಂದಿದವರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಹಲವಾರು ಪಿಂಚಣಿ ಯೋಜನೆಗಳನ್ನು (Pension Schemes) ಜಾರಿಗೆ ತಂದಿದೆ. ಇದರಿಂದ ಎಷ್ಟೋ ಜನರು ಇಂದು ಆರ್ಥಿಕವಾಗಿ ಸಬಲರಾಗಿದ್ದಾರೆ. ಇನ್ನು ಪ್ರತೀ ವರ್ಷ ಈ ಪಿಂಚಣಿದಾರರು ತಮ್ಮ ಇರುವಿಕೆಯನ್ನು ಸಹ ಖಾತರಿಪಡಿಸುತ್ತಾರೆ. ಭಾರತದಾದ್ಯಂತ ಪಿಂಚಣಿದಾರರು ತಮ್ಮ ಪಿಂಚಣಿ ಪಡೆಯಲು ಪ್ರತಿ ವರ್ಷ 'ಜೀವನ್ ಪ್ರಮಾಣ್' (Jeevan Praman) ಎಂದು ಕರೆಯಲಾಗುವ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (DLC) ಅನ್ನು ಕಡ್ಡಾಯವಾಗಿ ಸಲ್ಲಿಸಲೇಬೇಕು. ಇದೀಗ ಈ ಪ್ರಕ್ರಿಯೆ ಮತ್ತೆ ಜಾರಿಗೆ ಬಂದಿದೆ. ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DoPPW) ನಾಲ್ಕನೇ ರಾಷ್ಟ್ರವ್ಯಾಪಿ DLC ಅಭಿಯಾನವನ್ನು ಇದೇ ನವೆಂಬರ್ 1 ರಿಂದ 30, 2025 ರವರೆಗೆ ನಡೆಸಲು ನಿರ್ಧರಿಸಿದೆ.

ಪಿಂಚಣಿದಾರರಿಗೆ ತಮ್ಮ ಪಿಂಚಣಿ ಹಣ ಸರಿಯಾದ ಸಮಯಲ್ಲಿ ಸಿಗಬೇಕೆಂದರೆ, ನವೆಂಬರ್ 1 ರಿಂದ 30 ರೊಳಗೆ ಡಿಜಿಟಲ್ ಜೀವನ್ ಪ್ರಮಾಣಪತ್ರ (DLC) ಸಲ್ಲಿಸಲೇಬೇಕು. ಆದರೆ 80 ವರ್ಷಕ್ಕಿಂತ ಮೇಲ್ಪಟ್ಟವರು ಅಕ್ಟೋಬರ್ 1 ರಿಂದಲೇ ಈ ಪ್ರಕ್ರಿಯೆಯನ್ನು ಮುಗಿಸಬಹುದು.
2 ಸಾವಿರಕ್ಕೂ ಅಧಿಕ ಜಿಲ್ಲೆಗಳಲ್ಲಿ ಅಭಿಯಾನ:
ಈ ಅಭಿಯಾನವು 2,000 ಕ್ಕೂ ಹೆಚ್ಚು ಜಿಲ್ಲೆಗಳು ಮತ್ತು ಉಪ-ವಿಭಾಗೀಯ ಪ್ರಧಾನ ಕಛೇರಿಗಳಲ್ಲಿ ನಡೆಯಲಿದೆ ಎನ್ನಲಾಗಿದೆ. 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಅಕ್ಟೋಬರ್ 1, 2025 ರಿಂದಲೇ ತಮ್ಮ ಜೀವನ್ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಇದು ಕೊನೆಯ ಕ್ಷಣವರೆಗೆ ಕಾಯುವುದದ ಬದಲು ಬೆಸ್ಟ್ ಆಗಿದೆ.
ಜೀವನ್ ಪ್ರಮಾಣ್ ಎಂದರೇನು?
ಜೀವನ್ ಪ್ರಮಾಣ್ ಎಂದರೆ ಆಧಾರ್ ಕಾರ್ಡ್ ಜೊತೆಗೆ, ಬಯೋಮೆಟ್ರಿಕ್ ಬಳಸಿಕೊಂಡು ಸಕ್ರಿಯವಾಗಿರುವ ಡಿಜಿಟಲ್ ಜೀವನ್ ಪ್ರಮಾಣಪತ್ರ. ಇದು ಪಿಂಚಣಿದಾರರ ದಾಖಲೆಯನ್ನು ಹೊಂದಿರುತ್ತದೆ ಮತ್ತು ಅವರ ಬ್ಯಾಂಕ್ ಖಾತೆಗೆ ಪಿಂಚಣಿ ಹಣ ಬರುತ್ತಿದ್ಯಾ? ಇಲ್ವಾ? ಎಂದು ಪರಿಶೀಲಿಸುತ್ತದೆ. ಇನ್ನು ಒಮ್ಮೆ ಮಾತ್ರ ಇದನ್ನು ಸಲ್ಲಿಸಿದ್ರೆ ಸಾಕಾಗಲ್ಲ, ಪ್ರತೀ ವರ್ಷವೂ ನೀವು ಜೀವನ್ ಪ್ರಮಾಣ್ ಸಲ್ಲಿಸಬೇಕು.
DLC ಸಲ್ಲಿಸೋದು ಹೇಗೆ?
DLC ಸಲ್ಲಿಸಲು ಪಿಂಚಣಿದಾರರಿಗೆ ಹಲವು ಮಾರ್ಗಗಳಿವೆ. ಅವರು ಜೀವನ್ ಪ್ರಮಾಣ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ಆಧಾರ್ ಸಂಖ್ಯೆ ಮತ್ತು ಬಯೋಮೆಟ್ರಿಕ್‌ಗಳನ್ನು ಬಳಸಿ ಜೀವನ್ ಪ್ರಮಾಣ್ ಸಲ್ಲಿಸಬಹುದು. ಅಷ್ಟೇ ಅಲ್ಲದೇ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಮತ್ತು ಇತರ ಪಿಂಚಣಿ ನೀಡುವ ಬ್ಯಾಂಕುಗಳು ಮನೆಗೆ ಭೇಟಿ ನೀಡಿ ಸೇವೆಯನ್ನು ಸಲ್ಲಿಸುತ್ತದೆ.
ಮನೆಯಲ್ಲೀ ಜೀವನ್ ಪ್ರಮಾಣ್ ಸೇವೆ:
ವೃದ್ಧರು ಅಥವಾ ಅಶಕ್ತರಿಗಾಗಿ ಕೆಲವು ಬ್ಯಾಂಕ್‌ಗಳು ಮನೆ ಬಾಗಿಲಿಗೆ ಬಂದು ಈ ಸೇವೆಯನ್ನು ನೀಡುತ್ತದೆ. ಇನ್ನು ಜೀವನ್ ಪ್ರಮಾಣ್ ಸಲ್ಲಿಸಲು, ಆಧಾರ್ ಸಂಖ್ಯೆ, PPO ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ಮತ್ತು ಪಿಂಚಣಿ ಮಂಜೂರು ಮಾಡುವ ಪ್ರಾಧಿಕಾರದಂತಹ ದಾಖಲೆಗಳು ಬಹಳ ಮುಖ್ಯ.
ಇನ್ನು ಹಿಂದಿನಿಂದಲೂ DLC ಸಲ್ಲಿಸುತ್ತಿದ್ದ ಪಿಂಚಣಿದಾರರ ಮಾಹಿತಿಗಳು ಆಟೋಮೆಟಿಕ್ ಆಗಿ ಭರ್ತಿಯಾಗುತ್ತದೆ. ಇನ್ನು ಈ ಜೀವನ್ ಪ್ರಮಾಣ್ 2025 ಅಭಿಯಾನವನ್ನು 19 ಪಿಂಚಣಿ ವಿತರಿಸುವ ಬ್ಯಾಂಕುಗಳು, IPPB, ಪಿಂಚಣಿದಾರರ ಕಲ್ಯಾಣ ಸಂಘಗಳು (PWAs), CGDA, DoT, ರೈಲ್ವೇಸ್, UIDAI, ಮತ್ತು MeitY ಸಹಯೋಗದೊಂದಿಗೆ ಆಯೋಜಿಸಲಾಗಿದೆ.
ಯಾವುದೇ ದಾಖಲೆಗಳನ್ನು ನೀಡುವ ಮುನ್ನ ಸರಿಯಾಗಿ ಖಾತರಿಪಡಿಸಿಕೊಳ್ಳಿ. ಅವಸರದಿಂದ ತೆಗೆದುಕೊಂಡ ನಿರ್ಧಾರ ದೊಡ್ಡ ಆಪತ್ತಿಗೆ ಸಿಲುಕಿಸಬಹುದು.


Click it and Unblock the Notifications