ಬೆಂಗಳೂರು, ಸೆಪ್ಟೆಂಬರ್ 24: ದೇಶದೆಲ್ಲೆಡೆ ಈಗ ಸ್ಟಾರ್ಟಪ್‌ಗಳದ್ದೇ ಹವಾ. ಪ್ರತಿಯೊಂದು ವಲಯದಲ್ಲಿ ವಿವಿಧ ರೀತಿಯ ಸ್ಟಾರ್ಟಪ್‌ಗಳು ಅತ್ಯಂತ ಕ್ಷಿಪ್ರಗತಿಯಲ್ಲಿ ಜನರು ಅಥವಾ ಗ್ರಾಹಕರ ಮೆಚ್ಚುಗೆ ಪಾತ್ರವಾಗಿ ಉದ್ಯಮ ಕ್ಷೇತ್ರದಲ್ಲಿಯೂ ಎತ್ತರಕ್ಕೆ ಬೆಳೆಯುತ್ತಿರುವುದು ಗಮನಾರ್ಹವಾದ ಬೆಳವಣಿಗೆಯಾಗಿದೆ. ಅದರಲ್ಲಿಯೂ ಕರ್ನಾಟಕದಲ್ಲಿ ಸ್ಟಾರ್ಟಪ್‌ಗಳಾಗಿ ಹುಟ್ಟಿಕೊಂಡಿರುವ ಹತ್ತಾರು ನವೋದ್ಯಮಗಳು ಪ್ರಸ್ತುತ ವಿಶ್ವದ ದೊಡ್ಡ ಕಂಪೆನಿಗಳಾಗಿ ಗುರುತಿಸಿಕೊಂಡಿವೆ. ಅಂದರೆ, ನಮ್ಮಲ್ಲಿ ಸರ್ಕಾರದ ವಿವಿಧ ರೀತಿಯ ಪ್ರೋತ್ಸಾಹದಾಯಕ ಕ್ರಮಗಳು ಹಾಗೂ ಉದ್ಯಮ ವಲಯದ ಪೂರಕವಾದ ವಾತಾವರಣದಿಂದಾಗಿ ನಮ್ಮಲ್ಲಿ ಸ್ಟಾರ್ಟಪ್‌ಗಳು ಯಶಸ್ವಿನ ಹಾದಿಯಲ್ಲಿ ಮುನ್ನಡೆಯುತ್ತಿವೆ.
ಯುವ ತಂತ್ರಜ್ಞರಿಂದಲೇ ತುಂಬಿರುವ ಸ್ಟಾರ್ಟ್‌ಅಪ್ ನ ಈ ಜಗತ್ತಿನಲ್ಲಿ 48 ವರ್ಷದ ಮಹಿಳೆಯೊಬ್ಬರು ಸುದ್ದಿಯಾಗಿದ್ದರೆ. ಈ ಮೂಲಕ ಸ್ಟಾರ್ಟ್ ಆಪ್ ಜಗತ್ತಿಗೆ ಪ್ರವೇಶಿಸಲು ಯಾವುದೇ ವಯಸ್ಸಿನ ಹಂಗಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಜೊತೆಗೆ ತಾವು ಕೂಡಾ ಒಂದು ಉದ್ಯಮ ಕಟ್ಟಬೇಕು, ಸ್ವಂತವಾಗಿರುವ ಪುಟ್ಟ ವ್ಯವಹಾರವನ್ನು ಹೊಂದಬೇಕು, ಸಂಪಾದಿಸಬೇಕು ಎನ್ನುವ ಅನೇಕ ಮಹಿಳೆಯರಿಗೆ ದಾರಿದೀಪವಾಗಿದ್ದಾರೆ.

ಮೈಸೂರು ಜಿಲ್ಲೆಯ ಕಾಳಿದಾಸ ರಸ್ತೆಯ ನಿವಾಸಿ ಮತ್ತು ಮೂರು ಮಕ್ಕಳ ತಾಯಿ ಅನಿತಾ ಸದಾನಂದ್ ಅವರ ಸ್ಟಾರ್ಟಪ್ "ಮಮ್ಮಾ ಮಿಲ್ಸ್" ನಿಂದ ಹಲವು ತಾಯಂದಿರಿಗೆ ಅನುಕೂಲವಾಗಿದೆ. ಅವರ ಸ್ಟಾರ್ಟಪ್, ಮಮ್ಮಾ ಮಿಲ್ಸ್, ಮೈಸೂರು ಬಿಗ್ ಟೆಕ್ ಶೋ 2024 ರಲ್ಲಿ ಟಾಪ್ ಫಂಡಬಲ್ ಸ್ಟಾರ್ಟ್ಅಪ್ ಆಗಿ ಕಿರೀಟವನ್ನು ಪಡೆದುಕೊಂಡಿತು. ಇದು ಶಿಶುಗಳ ಆಹಾರ ಮಾರುಕಟ್ಟೆಯಲ್ಲಿ ಅವರ ಬೆಳೆಯುತ್ತಿರುವ ಪ್ರಭಾವವನ್ನು ಸೂಚಿಸುತ್ತದೆ. ಮೂರು ಮಕ್ಕಳ ತಾಯಿಯಾಗಿರುವ ಅನಿತಾ ಅವರ ಉದ್ಯಮಶೀಲತೆಯ ಪ್ರಯಾಣವು ಸ್ಥಿತಿಸ್ಥಾಪಕತ್ವ ಮತ್ತು ನಾವೀನ್ಯತೆಗೆ ಸಾಕ್ಷಿಯಾಗಿದೆ.
ಅನಿತಾ ಅವರ ಮಮ್ಮಾ ಮಿಲ್ಸ್ ಮೊದಲು ಎರಡು ಸಸ್ಯಾಹಾರಿ ಉತ್ಪನ್ನಗಳಾದ ಹಾಲು ಮತ್ತು ಸಕ್ಕರೆ ಮುಕ್ತ-ಮತ್ತು ಹವಾಮಾನ-ಸ್ಥಿತಿಸ್ಥಾಪಕ ಸಾವಯವ ಬೆಳೆಗಳನ್ನು ಬಳಸಿ ಉತ್ಪನ್ನಗಳನ್ನು ಶಿಶುಗಳಿಗಾಗಿ ತಯಾರಿಸಿ ಮಾರುಕಟ್ಟೆಗೆ ಪರಿಚರಿಸಿದರು. ಇದಾದ ಬಳಿಕ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರನ್ನು ಗುರಿಯಾಗಿಟ್ಟುಕೊಂಡು ಇನ್ನೆರಡು ಉತ್ಪನ್ನಗಳನ್ನು ಪರಿಚಯಿಸಲು ಸಿದ್ಧತೆಯನ್ನು ಅನಿತಾ ಅವರು ಮಾಡಿಕೊಂಡಿದ್ದಾರೆ.
ಅನಿತಾ ಅವರು ತಯಾರಿಸಿದ ಉತ್ಪನ್ನಗಳು ಆರಂಭದಲ್ಲೇ ಗುಣಮಟ್ಟದಲ್ಲಿರುವ ಬದ್ದತೆಯ ಮೂಲಕ ಅಂತರರಾಷ್ಟ್ರೀಯ ಗಮನವನ್ನು ಗಳಿಸಿದೆ. ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA)ದ ಮೂಲಕ ಯುರೋಪ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಕೊರಿಯಾದಲ್ಲಿ ಮಮ್ಮಾ ಮಿಲ್ಸ್ ಉತ್ಪನ್ನಗಳನ್ನು ಪ್ರದರ್ಶನಗೊಂಡಿದ್ದು, ಇದು ಅವರ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ.
ಎಸ್‌ಎಸ್‌ಎಲ್‌ಸಿ ಮುಗಿಸಿರುವ ಅನಿತಾ, 'ಸತ್ತು ಮಾವು' ಎಂಬ ಅಜ್ಜಿಯ ಪಾಕವಿಧಾನದ ಪರಿಕಲ್ಪನೆಯ ಆಧಾರದ ಮೇಲೆ ಶಿಶುಗಳಿಗೆ ದೇಶೀಯ ಪಾಕವಿಧಾನಗಳನ್ನು ನೀಡುವ ಈ ಸ್ಟಾರ್ಟಪ್ ಅನ್ನು ಪ್ರಾರಂಭಿಸಿದರು. ಮಮ್ಮಾ ಮಿಲ್ಸ್‌ಗೆ ಆರಂಭಿಸಲು ಸ್ಫೂರ್ತಿ ಅವರ ವೈಯಕ್ತಿಕ ಅನುಭವದಿಂದಲೇ ಹುಟ್ಟಿಕೊಂಡಿದೆ. "ನನ್ನ ಮೂರನೇ ಮಗು ಅವಧಿಪೂರ್ವವಾಗಿತ್ತು. ್ಮಕ್ಕಳ ತಜ್ಞರು ಮಗುವಿಗೆ ಬಲವರ್ಧನೆಗಾಗಿ ಸ್ಥಳೀಯ ಪಾಕವಿಧಾನದೊಂದಿಗೆ ಹಾಲುಣಿಸುವಿಕೆಯನ್ನು ಸೂಚಿಸಿದರು. ನಾನು ನನ್ನ ಮಗಳಿಗೆ ಎರಡು ಮಿಶ್ರಣಗಳನ್ನು ನೀಡುತ್ತಿದ್ದೇನೆ, ಅಂದರೆ, ರಾಗಿ ಮತ್ತು ಹಸಿರುಬೇಳೆ, ದಾಲಿಯಾ ಮತ್ತು ಕಪ್ಪು ಚೆನ್ನಾ(ಕಡ್ಲೆ). ಈಗ ಅದನ್ನೇ ನಾನು ಸ್ಟಾರ್ಟಪ್ ಆಗಿ ಅಭಿವೃದ್ಧಿಪಡಿಸಿದ್ದೇನೆ." ಎನ್ನುತ್ತಾರೆ ಅನಿತಾ.
ಮಮ್ಮಾ ಮಿಲ್ಸ್ ಸಾವಯವ ಉತ್ಪನ್ನಗಳನ್ನು ತಯಾರಿಸಲು ಮಂಡ್ಯ ಮೂಲದ ಸಂಸ್ಥೆಯಾದ "ಆರ್ಗ್ಯಾನಿಕ್ ಮಂಡ್ಯ"ದಿಂದ ಉತ್ತಮ ಗುಣಮಟ್ಟದ ಧಾನ್ಯಗಳನ್ನು ಪಡೆದುಕೊಳ್ಳುತ್ತಾರೆ. ಸ್ಥಳೀಯವಾಗಿಯೇ ನಾನು ಧಾನ್ಯಗಳನ್ನು ಪಡೆದುಕೊಳ್ಳುವುದರಿಂದ ಗುಣಮಟ್ಟದ, ಶುದ್ದತೆಯ ಬಗ್ಗೆ ನಾವು ರಾಜಿಯಾಗುವುದಿಲ್ಲ. ನನ್ನ ಮಗಳಿಗೆ ನೀಡುತ್ತಿದ್ದ ಪೌಷ್ಟಿಕ, ಸರಳ ಆಹಾರವು , ಮಾರುಕಟ್ಟೆಯಲ್ಲಿ ಸಿಗುವ ಮಕ್ಕಳ ಆಹಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ನಾನು ಅರಿತುಕೊಂಡೆ, ಅದು ಮಮ್ಮಾ ಮಿಲ್ಸ್‌ಗೆ ಕಾರಣವಾಯಿತು" ಎನ್ನುತ್ತಾರೆ ಅನಿತಾ.
"ಸಂಸ್ಕರಿಸಿದ ಆಹಾರಗಳಿಂದ ತುಂಬಿರುವ ಮಾರುಕಟ್ಟೆಯಲ್ಲಿ ಆರೋಗ್ಯಕರ ಪರ್ಯಾಯಗಳನ್ನು ನೀಡುವ ಮೂಲಕ ಪಾರಂಪರಿಕ ಸಾಂಸ್ಕೃತಿಕ ಪಾಕವಿಧಾನಗಳಿಗೆ ಮರಳಲು ಅನಿತಾ ಅವರ ಪ್ರಯತ್ನಗಳು ಶ್ಲಾಘನೀಯ" ಎನ್ನುತ್ತಾರೆ JSS ತಾಂತ್ರಿಕ ಸಂಸ್ಥೆಗಳ ಕ್ಯಾಂಪಸ್‌ನ ಇನ್‌ಕ್ಯುಬೇಟರ್ ಆಗಿರುವ SJCE-STEP ನ ಸಿಇಒ ಶಿವಶಂಕರ್ ಬಿ.
"ಆರೋಗ್ಯಯುತ ಸಮಾಜವನ್ನು ಹುಟ್ಟುಹಾಕಲು, ನಮ್ಮ ಹಳೆಯ ಆಹಾರ ಪರಂಪರೆಯನ್ನು ಕೊಂಡಿಯೊಂದಿಗೆ ಮರು ಸಂಪರ್ಕಿಸಲು ಮಮ್ಮಾ ಮಿಲ್ಸ್ ಉದಾಹಣೆಯಾಗಿ ನಿಲ್ಲುತ್ತದೆ. ಸರಳವಾದ ಆದರೆ ಪೌಷ್ಟಿಕಾಂಶವನ್ನು ಇಟ್ಟುಕೊಳ್ಳುವ ಅನಿತಾ ಅವರ ವಿಧಾನವು ಇಂದಿನ ಫಾಸ್ಟ್-ಫುಡ್ ಸಂಸ್ಕೃತಿಯಲ್ಲಿ ವಿಭಿನ್ನವಾಗಿ ನಿಲ್ಲುತ್ತದೆ" ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಮಮ್ಮಾ ಮಿಲ್ಸ್‌ನೊಂದಿಗಿನ ಅನಿತಾ ಸದಾನಂದರ ಯಶೋಗಾಥೆಯು ಸಾಂಪ್ರದಾಯಿಕ ಬೇರುಗಳಿಂದ ನಾವೀನ್ಯತೆಯನ್ನು ಹುಟ್ಟುಹಾಕುವುದು ಮಾತ್ರವಲ್ಲದೇ, ಉದ್ಯಮಶೀಲತೆಯೊಂದಿಗೆ ಬೆರೆಯುವ ಭವಿಷ್ಯದ ಭರವಸೆಯನ್ನು ನೀಡುತ್ತದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications