ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಇತ್ತೀಚೆಗೆ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹೊಸ ಪ್ಲಾಟ್‌ಫಾರ್ಮ್ ಒಂದನ್ನು ಆರಂಭಿಸಿದೆ. ಹೌದು, ಯುಐಡಿಎಐನಿಂದ ಹೊಸ ಆಧಾರ್ ಮೊಬೈಲ್ ಆಪ್ (Aadhaar Mobile App) ಬಿಡುಗಡೆಯಾಗಿದೆ. ಬಳಕೆದಾರರ ಅನುಕೂಲದ ದೃಷ್ಟಿಯಿಂದ ಆರಂಭಿಸಲಾದ ಈ ಆಪ್, ಹಲವಾರು ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ಆಧಾರ್ ಬಳಕೆದಾರರ ಐಡೆಂಟಿಟಿಯನ್ನು ಹೆಚ್ಚು ಸುರಕ್ಷಿತವಾಗಿ, ಸುಲಭವಾಗಿ ಮತ್ತು ಗೌಪ್ಯತೆಯೊಂದಿಗೆ ನಿರ್ವಹಿಸಲು ಇದು ಸಹಾಯ ಮಾಡಲಿದೆ.

ಹೌದು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ತನ್ನ ಆಧಾರ್ ಅಪ್ಲಿಕೇಶನ್‌ನ ನವೀಕೃತ "ಜೆನ್-ನೆಕ್ಸ್ಟ್" ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದು ಆಧಾರ್ ಕಾರ್ಡ್‌ದಾರ ಡಿಜಿಟಲ್ ಬಳಕೆಯನ್ನು ಹೆಚ್ಚಿಸಲಿದ್ದು, ಹೆಚ್ಚು ಸುರಕ್ಷಿತ ಮತ್ತು ಸುಲಭವಾದ ಮಾದರಿಯನ್ನು ಒದಗಿಸುತ್ತದೆ. ಮೊಬೈಲ್ ಮೂಲಕವೇ ತಮ್ಮ ಗುರುತನ್ನು ಖಚಿತಪಡಿಸಲು ಮತ್ತು ಹಂಚಿಕೊಳ್ಳಲು ಬಹಳ ಉತ್ತಮ ದಾರಿಯಾಗಲಿದೆ.
ಹೊಸ ಆಪ್, ಹಲವು ಫೀಚರ್ಸ್!
ಹಿಂದಿನ ಆವೃತ್ತಿಗಳಿಗಿಂತ ಭಿನ್ನವಾಗಿ, 2026ರ ಆಧಾರ್ ಅಪ್ಲಿಕೇಶನ್ ಗೌಪ್ಯತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಅಗತ್ಯವಿರುವ ಮಾಹಿತಿ ಮಾತ್ರ ಬಳಸಿಕೊಂಡು ಕಾರ್ಡ್‌ದಾರರ ಮಾಹಿತಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪರಿಶೀಲನೆಗೆ ಬೇಕಾದ ಮಾಹಿತಿ ಮಾತ್ರ ಇಲ್ಲಿ ನೀಡಲಾಗುವುದರಿಂದ, ಅನಗತ್ಯ ವಿವರಗಳು ಸೋರಿಕೆಯಾಗುವುದನ್ನು ತಡೆದು ಬಳಕೆದಾರರಿಗೆ ಯಾವುದೇ ಅಪಾಯವನ್ನು ತಂದೊಡ್ಡುವುದಿಲ್ಲ.
ಸೈಬರ್ ವಂಚನೆ, ಒಟಿಪಿ-ಆಧಾರಿತ ಮೋಸ ಮತ್ತು ಫಿಶಿಂಗ್‌ನಂತಹ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹೊಸ ಆಧಾರ್ ಅಪ್ಲಿಕೇಶನ್ ಕಾರ್ಡ್‌ದಾರರಿಗೆ ಭಾರೀ ಭದ್ರತೆಯನ್ನು ನೀಡಲಿದೆ. ಬಳಕೆದಾರರ ಅನುಮತಿಯಿದ್ದರೆ ಮಾತ್ರ ಈ ಆಪ್ ಬಳಸಬಹುದು, ಇದರಿಂದ ವಂಚನೆ ಪ್ರಕರಣಕ್ಕೆ ಬ್ರೇಕ್ ಬೀಳಲಿದೆ. ಇನ್ನು ಆಧಾರ್ ಸಂಖ್ಯೆಯ ದುರುಪಯೋಗ ತಡೆಯುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ.
UIDAI ಬಿಡುಗಡೆ ಮಾಡಿದ ಈ ಹೊಸ ಆಧಾರ್ ಅಪ್ಲಿಕೇಶನ್ ಹಲವಾರು ಪ್ರಯೋಜನಗಳನ್ನು ಹೊಂದಿದೆ. ವಿಶೇವಾಗಿ ಆಧಾರ್ ಹೊಂದಿರುವವರು ಅನಗತ್ಯ ದಾಖಲೆಗಳಿಲ್ಲದೆ ತಮ್ಮ ಡಿಜಿಟಲ್ ಗುರುತನ್ನು ಸುಲಭವಾಗಿ ದೃಢೀಕರಿಸಲು ಇದು ಸಹಾಯಕವಾಗಿದೆ. ಉದಾಹರಣೆಗೆ, ಹೋಟೆಲ್ ಚೆಕ್-ಇನ್ ಸಮಯದಲ್ಲಿ QR-ಆಧಾರಿತ ಆಫ್‌ಲೈನ್ ಮೂಲಕ ಇದನ್ನು ಬಳಸಬಹುದು. ಅಲ್ಲದೇ ಫಿಲಂ ಟಿಕೆಟ್ ಕಾಯ್ದಿರಿಸುವಾಗ ವಯಸ್ಸಿನ ಪರಿಶೀಲನೆಗೂ ಬಳಸಬಹುದು. ಇನ್ನು ಈ ಆಪ್‌ನಿಂದಾಗಿ ಫಿಸಿಕಲ್ ಆಧಾರ್ ಕಾರ್ಡ್ ಅಥವಾ ಜೆರಾಕ್ಟ್ ತೆಗೆದುಕೊಳ್ಳುವ ಅಗತ್ಯವನ್ನು ಕಡಿಮೆ ಮಾಡಲಿದೆ.
ಹೊಸ ಆಪ್‌ನ ಲಕ್ಷಣಗಳು:
ಕ್ಯೂಆರ್ ಆಧಾರಿತ ಆಫ್‌ಲೈನ್ ವೆರಿಫಿಕೇಶನ್
ಆಧಾರ್ ಆಪ್‌ನಲ್ಲಿ ಜನರು ಕಸ್ಟಮ್ ಕ್ಯೂಆರ್ ಕೋಡ್ ಜನರೇಟ್ ಮಾಡಬಹುದು. ಇದನ್ನು ಸ್ಕ್ಯಾನ್ ಮಾಡುವ ಮೂಲಕ ಹೋಟೆಲ್ ಚೆಕ್-ಇನ್, ಸಿನಿಮಾ ಟಿಕೆಟ್ ಬುಕಿಂಗ್, ಆಸ್ಪತ್ರೆಯಲ್ಲಿ ವಿಸಿಟರ್ ಪಾಸ್ ಹೀಗೆ ಹಲವು ಕಡೆಗಳಲ್ಲಿ ಐಡೆಂಟಿಟಿ ಪರಿಶೀಲನೆ ಮಾಡಲು ಸಹಾಯವಾಗಲಿದೆ. ಅಲ್ಲದೇ ಈದು ಆಫ್‌ಲೈನ್‌ನಲ್ಲೂ ಕೆಲಸ ಮಾಡುವುದರಿಂದ, ಆಧಾರ್ ನಂಬರ್ ಅನ್ನು ಬಹಿರಂಗಪಡಿಸುವ ಅಗತ್ಯವಿರುವುದಿಲ್ಲ.
ಫೇಸ್ ಅಥೆಂಟಿಕೇಶನ್ ಸೌಲಭ್ಯ:
ಆಪ್‌ನಲ್ಲಿ ಆಪ್ಷನಲ್ ಫೇಸ್ ರೆಕಗ್ನಿಷನ್ ಫೀಚರ್ ಇದೆ. ಇದು ಫೇಸ್ ಐಡಿ ಬಳಸಿ ತ್ವರಿತವಾಗಿ ಐಡೆಂಟಿಟಿಯನ್ನು ಚೆಕ್ ಮಾಡುತ್ತದೆ. ಓಟಿಪಿ ಮೂಲಕವೂ ಕೆಲಸ ಮಾಡುತ್ತದೆ.
ಬಯೋಮೆಟ್ರಿಕ್ ಲಾಕ್/ಅನ್‌ಲಾಕ್ ಸೌಲಭ್ಯ:
ಇನ್ನು ಒಂದೇ ಕ್ಲಿಕ್‌ನಲ್ಲಿ ಫಿಂಗರ್ ಪ್ರಿಂಟ್, ಐರಿಸ್ ಮತ್ತು ಫೇಸ್ ಬಯೋಮೆಟ್ರಿಕ್‌ಗಳನ್ನು ಲಾಕ್ ಮಾಡಬಹುದು ಅಥವಾ ಅನ್‌ಲಾಕ್ ಮಾಡುವ ಸೌಲಭ್ಯವನ್ನೂ ನೀಡಲಾಗಿದೆ. ಲಾಕ್ ಮಾಡಿದರೆ ಬಯೋಮೆಟ್ರಿಕ್ ಆಧಾರಿತ ಅಥೆಂಟಿಕೇಶನ್ ಸಾಧ್ಯವಿರುವುದಿಲ್ಲ. ಇದರಿಂದ ಫ್ರಾಡ್ ಅಥವಾ ಇತರ ವಂಚನೆಗಳಿಂದ ರಕ್ಷಣೆ ನೀಡುತ್ತದೆ.
More From GoodReturns

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

T20 World Cup: ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 96 ರನ್ಗಳ ಗೆಲುವು...ತಂಡಕ್ಕೆ ಸಿಕ್ಕ ಬಹುಮಾನಗಳೇನು?

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications