ಕೊಲ್ಯಾಟರಲ್‌ ಇಲ್ಲದೆಯೂ ಲೋನ್ ಸಿಗುತ್ತದೆ!

ಬೆಂಗಳೂರು, ಜೂನ್‌ 30: ವಿದೇಶಕ್ಕೆ ತೆರಳಿ ಶಿಕ್ಷಣ ಪಡೆದು ಜೀವನ ಕಟ್ಟಿಕೊಳ್ಳುವುದು ಹಲವರ ಕನಸು. ಇದಕ್ಕಾಗಿ ಶಿಕ್ಷಣ ಸಾಲ ಪಡೆದುಕೊಳ್ಳಲು ಹಲವರು ಮುಂದಾಗುತ್ತಾರೆ. ಆದರೆ ಶಿಕ್ಷಣ ಸಾಲ ಪಡೆಯುವಾಗ ಒಂದು ಸಮಸ್ಯೆ ಉಂಟಾಗುತ್ತದೆ. ಶಿಕ್ಷಣದ ಸಾಲಕ್ಕೆ ಕೊಲ್ಯಾಟರಲ್ ಅಂದರೆ ಮೇಲಾಧಾರ ಕೇಳಲಾಗುತ್ತದೆ.

ಕೊಲ್ಯಾಟರಲ್ ನೀಡಲು ಯಾವುದೇ ದೊಡ್ಡ ಆಸ್ತಿ ಇಲ್ಲದೆ ಇದ್ದಾಗ ಹಣ ಸಂಗ್ರಹಿಸುವುದು ಅಥವಾ ಸಾಲ ತೆಗೆದುಕೊಳ್ಳುವುದು ದೊಡ್ಡ ಚಾಲೆಂಜ್ ಆಗುತ್ತದೆ. ಇಂಥ ಸಮಯದಲ್ಲಿ ನಾನ್ ಕೊಲ್ಯಾಟರಲ್ ಲೋನ್ ಅಥವಾ ಮೇಲಾಧಾರ ನೀಡದೆ ಪಡೆದುಕೊಳ್ಳುವ ಸಾಲ ನಿಮ್ಮ ನೆರವಿಗೆ ಬರಬಹುದು. ಹಾಗಿದ್ದರೆ ವಿದೇಶದಲ್ಲಿ ವ್ಯಾಸಂಗ ಮಾಡಲು ನೀವು ಸಹ ಈ ರೀತಿ ನಾನ್ ಕೋಲ್ಯಾಟರಲ್ ಲೋನ್ ಪಡೆಯಬಹುದಾ? ಮೊದಲು ಈ ನಾನ್ ಕೊಲ್ಯಾಟರಲ್ ಲೋನ್ ಅಂದರೆ ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳೋಣ.

ಕೊಲ್ಯಾಟರಲ್‌ ಇಲ್ಲದೆಯೂ ಲೋನ್ ಸಿಗುತ್ತದೆ!

ಹೆಸರೆ ಹೇಳುವಂತೆ ಇದು ಮೇಲಾಧಾರವಲ್ಲದ ಶಿಕ್ಷಣ ಸಾಲವು ಸಾಲವಾಗಿದ್ದು, ಇದರಲ್ಲಿ ನೀವು ಯಾವುದೇ ಆಸ್ತಿಯನ್ನು ಭದ್ರತೆಯಾಗಿ ಇಡಬೇಕಾಗಿಲ್ಲ. ಈ ಸಾಲವನ್ನು ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆ, ದಾಖಲಾತಿ ಕೋರ್ಸ್ ಮತ್ತು ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಉದ್ಯೋಗ ಪಡೆಯುವ ಸಾಧ್ಯತೆಯಂತಹ ಅಂಶ ಆಧರಿಸಿ ನೀಡಲಾಗುತ್ತದೆ.

ಕೊಲ್ಯಾಟರಲ್ ಲೋನ್ ಮತ್ತು ನಾನ್-ಕೊಲ್ಯಾಟರಲ್ ಲೋನ್ ಇನ್ನು ಕೆಲವು ವ್ಯತ್ಯಾಸ ಹೊಂದಿವೆ. ಕೊಲ್ಯಾಟರಲ್ ಲೋನ್ ಗೆ ಹೋಲಿಕೆ ಮಾಡಿದರೆ ನಾನ್- ಕೊಲ್ಯಾಟರಲ್ ಲೋನ್ ನಲ್ಲಿ ಸಿಗುವ ಮೊತ್ತ ಕಡಿಮೆ ಇರುತ್ತದೆ. ಬಡ್ಡಿ ದರವೂ ಹೆಚ್ಚಿರಬಹುದು ಏಕೆಂದರೆ ಮೇಲಾಧಾರದ ಕೊರತೆಯಿಂದಾಗಿ ಬ್ಯಾಂಕ್ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಈ ರೀತಿಯ ಸಾಲಕ್ಕೆ ಬಡ್ಡಿದರ ಸಾಮಾನ್ಯವಾಗಿ ಶೇ. 10.5 ರಿಂದ ಶೇ. 14 ರ ನಡುವೆ ಇರುತ್ತದೆ. ಆದರೆ ನಾನ್-ಕೊಲ್ಯಾಟರಲ್ ಲೋನ್ ಡಾಕ್ಯುಮೆಂಟೇಶನ್ ಸುಲಭ ಮತ್ತು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಹಾಗಿದ್ದರೆ ಈ ನಾನ್ ಕೊಲ್ಯಾಟರಲ್ ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಅನ್ನೋದನ್ನು ತಿಳಿದುಕೊಂಡು ಬರೋಣ.

ಈ ಸಾಲಕ್ಕೆ ನೀವು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ನೀವು ಬ್ಯಾಂಕ್ ಶಾಖೆಗೆ ಭೇಟಿ ನೀಡಿಯೂ ಈ ಸಾಲದ ಬಗ್ಗೆ ವಿಚಾರ ಮಾಡಬಹುದು. ಶಾಖೆಯಲ್ಲಿಯೂ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ರಿಲೇಶನಲ್ ಶಿಪ್ ಮ್ಯಾನೇಜರ್ ಬಳಿಯೂ ಮಾತನಾಡಬಹುದು. ನಿಮ್ಮ ಅಗತ್ಯಗಳಿಗೆ ತಕ್ಕಂತೆ ರಿಲೇಶನ್ ಶಿಪ್ ಮ್ಯಾನೇಜರ್ ನಿಮಗೆ ಸಹಾಯ ಮಾಡಬಹುದು. ಆದರೆ ಈ ಸಾಲ ಪಡೆದುಕೊಳ್ಳಲು ಒಂದಿಷ್ಟು ಮಾನದಂಡಗಳಿದ್ದು ಅವು ಯಾವುವು ಅನ್ನೋದನ್ನು ನೋಡೋಣ.

ಸಾಲ ಪಡೆದುಕೊಳ್ಳಲು ಬಯಸುತ್ತಿರುವ ಸ್ಟುಡೆಂಟ್ ತನ್ನ ಹೈಯರ್ ಸೆಕೆಂಡರಿ ಮತ್ತು ಡಿಗ್ರಿಯಲ್ಲಿ ಕನಿಷ್ಠ ಶೇ. 60 ಅಂಕ ಗಳಿಸಿರಬೇಕು. ಸಾಲದ ಕೋ-ಅಪ್ಲಿಕಂಟ್ ಅಂದ್ರೆ ಸಹ-ಅರ್ಜಿದಾರರನ ಕ್ರೆಡಿಟ್ ಸ್ಕೋರ್ 600 ಕ್ಕಿಂತ ಹೆಚ್ಚಿರಬೇಕು. ಸಹ-ಅರ್ಜಿದಾರರ ಮಾಸಿಕ ಆದಾಯವು 35,000 ರೂ. ಗಿಂತ ಹೆಚ್ಚಿರಬೇಕು. ಸಹ-ಅರ್ಜಿದಾರ ಯಾವುದೇ ರೀತಿಯ ದೊಡ್ಡ ಇಎಂಐ ಕಟ್ಟುತ್ತಿಲ್ಲ ಎನ್ನುವುದು ದೃಢವಿರಬೇಕು. ಇದಲ್ಲದೆ ಸಹ ಅರ್ಜಿದಾರ ಆತನ 3 ವರ್ಷಗಳ ಆದಾಯ ತೆರಿಗೆ ಸಲ್ಲಿಕೆ ದಾಖಲೆ ಐಟಿಆರ್ ಅಥವಾ 2 ವರ್ಷಗಳ ಫಾರ್ಮ್ 16 (Sixteen) ನೀಡಬೇಕಾಗುತ್ತದೆ. ಇದಲ್ಲದೆ ಸಹ-ಅರ್ಜಿದಾರರು ತಾಯಿ, ತಂದೆ, ಸಹೋದರ, ಸಹೋದರಿ, ಅಥವಾ ಸಂಗಾತಿಯಂತಹ ಕುಟುಂಬದ ಸದಸ್ಯರನ್ನು ಹೊಂದಿರಬೇಕು.

ಈ ನಾನ್ ಕೊಲ್ಯಾಟರಲ್ ಸಾಲ ಕೇವಲ ಮಾಸ್ಟರ್ಸ್ ಗೆ ಅಂದ್ರೆ ಸ್ನಾತಕೋತ್ತರ ಕೋರ್ಸ್‌ಗಳಿಗೆ ಮಾತ್ರ ಲಭ್ಯವಿದೆ. ಸಾಲ ಬೇಕಾದಾಗ ನೀವು ಅನುಮೋದಿತ ಕೋರ್ಸ್‌ ನ ಅಡ್ಮಿಶನ್ ಲೆಟರ್ ಹೊಂದಿರಬೇಕು. ಬ್ಯಾಂಕ್ ನ ಅಪ್ರೂವ್ಡ್ ಲೀಸ್ಟ್ ನಲ್ಲಿ ನಿಮ್ಮ ವಿಶ್ವವಿದ್ಯಾನಿಲಯ ಅಥವಾ ಕಾಲೇಜಿನ ಹೆಸರಿರಬೇಕು. ಇಷ್ಟೆಲ್ಲಾ ಅಂಶಗಳು ಇಲ್ಲಿ ಅಡಕವಾಗಿರುವುದರಿಂದ ನಾನ್ ಕೋಲ್ಯಾಟರಲ್ ಲೋನ್ ಪಡೆಯುವ ಮುನ್ನ ಸಾಕಷ್ಟು ತಿಳಿವಳಿಕೆ ನಿಮಗಿರಬೇಕು. ಕೊಲ್ಯಾಟರಲ್ ನೀಡದೆಯೂ ಸಾಲ ಪಡೆದುಕೊಂಡು ನಿಮ್ಮ ಶಿಕ್ಷಣದ ಕನಸು ನನಸು ಮಾಡಿಕೊಳ್ಳಲು ಸಾಧ್ಯವಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+