ಸದ್ಯದ ಔದ್ಯಮಿಕ ಪ್ರಪಂಚದಲ್ಲಿ ದಿನದಿಂದ ದಿನಕ್ಕೆ ಬದಲಾವಣೆಗಳು ಶರವೇಗದಲ್ಲಿ ನಡೆಯುತ್ತಿರುವಾಗ ಬಹುತೇಕ ಎಲ್ಲರೂ ಒಂದಿಲ್ಲೊಂದು ಕಾಯಕದಲ್ಲಿ ತೊಡಗಿ ಮುಂದೆ ಬರಲು ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ಇನ್ನು ಸದ್ಯ ಫೋರ್ಬ್ಸ್ ಜಾಗತಿಕವಾಗಿ 100 ಅತ್ಯಂತ ಶಕ್ತಿಶಾಲಿ ಮಹಿಳೆಯರ 20 ನೇ ವಾರ್ಷಿಕ ಪಟ್ಟಿಯನ್ನು ಅನಾವರಣಗೊಳಿಸಿದ್ದು, ಅಗ್ರ ಸಾಧಕರಲ್ಲಿ ನಾಲ್ವರು ಭಾರತೀಯ ಮಹಿಳೆಯರನ್ನು ಕೂಡ ಒಳಗೊಂಡಿದೆ. ಕಳೆದ ವರ್ಷದಲ್ಲಿ ರಾಜಕೀಯ, ವ್ಯಾಪಾರ, ಮನರಂಜನೆ, ಲೋಕೋಪಕಾರ ಮತ್ತು ನೀತಿಯಂತಹ ಕ್ಷೇತ್ರಗಳಲ್ಲಿ ಪರಿವರ್ತಕ ಬದಲಾವಣೆಗೆ ಕಾರಣರಾದ ಮಹಿಳಾ ನಾಯಕರು ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಪಟ್ಟಿಯಲ್ಲಿ ಭಾರತೀಯ ಬಿಲಿಯನೇರ್ ಮತ್ತು ಲೋಕೋಪಕಾರಿ, ಭಾರತದ ಪ್ರಖ್ಯತ ಶ್ರೀಮಂತರದಲ್ಲಿ ಒಬ್ಬರಾದ ಶಿವ ನಾಡರ್ ಅವರ ಮಗಳು ರೋಶನಿ ನಾಡರ್ ಮಲ್ಹೋತ್ರಾ 60 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅದೂ ಅಲ್ಲದೆ ಭಾರತದಲ್ಲಿ ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಐಟಿ ಕಂಪನಿಯ ಮುಖ್ಯಸ್ಥರಾಗಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ರೋಶನಿ ನಾಡರ್ ಮಲ್ಹೋತ್ರಾ ಅವರು ಪಾತ್ರರಾಗಿದ್ದಾರೆ.
ತಂದೆಯಿಂದ ಅಧಿಕಾರ ಪಡೆದ ಮಗಳು
ಜಾಗತಿಕ IT ಸೇವೆಗಳು ಮತ್ತು ಸಲಹಾ ಸಂಸ್ಥೆಯಾದ HCL Tech ನ ಅಧ್ಯಕ್ಷರಾಗಿ ರೋಶ್ನಿ ಅವರು 2009 ರಿಂದ ಕಂಪನಿಯಲ್ಲಿದ್ದಾರೆ. ಅವರು ಜುಲೈ 2020 ರಲ್ಲಿ ತಮ್ಮ ತಂದೆ ಶಿವ ನಾಡಾರ್ ಅವರಿಂದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಸದ್ಯ ಅವರು ಸರಿಸುಮಾರು ಬರೊಬ್ಬರಿ 3.18 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿರುವ ಸಂಸ್ಥೆಯ ಕಾರ್ಯತಂತ್ರದ ನಿರ್ಧಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. HCLTech ಅನ್ನು ಮುನ್ನಡೆಸುವುದರ ಜೊತೆಗೆ, ಅವರು ಅದರ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಮಂಡಳಿಯ ಸಮಿತಿಯಲ್ಲಿ ಅಧ್ಯಕ್ಷರಾಗಿದ್ದಾರೆ.

ತಂದೆಯ ಏಕೈಕ ಮಗಳು ರೋಶ್ನಿ
ಆಗಸ್ಟ್ 20 ರ ಹೊತ್ತಿಗೆ USD 27.3 ಶತಕೋಟಿ (ಸುಮಾರು ₹ 2.27 ಲಕ್ಷ ಕೋಟಿ) ನಿವ್ವಳ ಮೌಲ್ಯವನ್ನು ಹೊಂದಿರುವ ಭಾರತದ ಶ್ರೀಮಂತ ತಂತ್ರಜ್ಞಾನ ಉದ್ಯಮಿ ಶಿವ ನಾಡರ್ ಅವರ ಏಕೈಕ ಮಗಳಾಗಿರುವ ರೋಶ್ನಿ ನಾವೀನ್ಯತೆ ಮತ್ತು ನಾಯಕತ್ವದ ಗುಣವ್ನನು ಹುಟ್ಟಿನಿಂದಲೇ ಪಡೆದಿದ್ದಾರೆ. ಅವರು ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಸಂವಹನದಲ್ಲಿ ಪದವಿಪೂರ್ವ ಪದವಿಯನ್ನು ಪೂರ್ಣಗೊಳಿಸಿದ್ದು, ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ MBA ಗಳಿಸಿದರು.
ಶಿವ ನಾಡರ್ ಫೌಂಡೇಶನ್‌ನ ಟ್ರಸ್ಟಿ ರೋಶ್ನಿ
ಇನ್ನು ಕೇವಲ ತನ್ನ ಲಾಭಕ್ಕಾಗಿ ಮಾತ್ರ ನೋಡದೆ ಸಮಾಜದ ಎಲ್ಲಾ ವರ್ಗದ ಜನತೆಯ ಒಳಿತಿಗಾಗಿ ಕೂಡ ಶಿವ ನಾಡರ್ ಅವರು ಶ್ರಮಿಸುತ್ತಿದ್ದಾರೆ. ಇದಕ್ಕಾಗಿ ಶಿವ ಅವರು ಫೌಂಡೇಶನ್ ಅನ್ನು ಕೂಡ ಸ್ಥಾಪಿಸಿಕೊಂಡಿದ್ದು, ಬಡಜನತೆಯ ಪರವಾಗಿ ಕೆಲಸ ಮಾಡುತ್ತಿದ್ದಾರೆ. ರೋಶ್ನಿ ಅವರು ಶಿವ ನಾಡರ್ ಫೌಂಡೇಶನ್‌ನ ಟ್ರಸ್ಟಿಯಾಗಿದ್ದು, ಇದು ಭಾರತದಲ್ಲಿ ಬಡಮಕ್ಕಳಿಗೆ ಶಿಕ್ಷಣವನ್ನು ನೀಡುವತ್ತ ಹೆಚ್ಚು ಗಮನ ಹರಿಸುತ್ತಿದೆ. ಅದೂ ಅಲ್ಲದೆ ಹಲವಾರು ಪ್ರಮುಖ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ತನ್ನ ಕಾರ್ಪೊರೇಟ್ ಜವಾಬ್ದಾರಿಗಳನ್ನು ಮೀರಿ ರೋಶ್ನಿ ಅವರು ವನ್ಯಜೀವಿ ಸಂರಕ್ಷಣೆಗೆ ಆಳವಾಗಿ ಬದ್ಧಳಾಗಿದ್ದಾರೆ. 2019 ರಿಂದ ಅವರು ಭಾರತದ ಸ್ಥಳೀಯ ಪ್ರಭೇದಗಳು ಮತ್ತು ಅಳಿವಿನಂಚಿನ ಪ್ರಣಿಗಳನ್ನು ರಕ್ಷಿಸಲು ದಿ ಹ್ಯಾಬಿಟೇಟ್ಸ್ ಟ್ರಸ್ಟ್ ಅನ್ನು ಸ್ಥಾಪಿಸಿದರು. ಅವರು ಆನ್ ದಿ ಬ್ರಿಂಕ್ ಟಿವಿ ಸರಣಿಯು ಅನಿಮಲ್ ಪ್ಲಾನೆಟ್ ಮತ್ತು ಡಿಸ್ಕವರಿಗಾಗಿ ಟಿವಿ ಸರಣಿಯನ್ನು ಕೂಡ ಅವರು ನಿರ್ಮಿಸಿದ್ದಾರೆ.
ಸಮಸ್ತ ಮಹಿಳೆಯರಿಗೆ ಮಾದರಿ
ಸದ್ಯ ಭಾರತದಲ್ಲಿ ಮಹಿಳಾ ಉದ್ಯಮಿಪತಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಮಹತ್ತರ ರೀತಿಯಲ್ಲಿ ಬೆಳವಣಿಗೆ ಹೊಂದುತಿದ್ದು, ಈ ಪಟ್ಟಿಗೆ ರೋಶ್ನಿ ನಡಾರ್ ಕೂಡ ಸೇರ್ಪಡೆಯಾಗಿದ್ದಾರೆ. ಮಹಿಳೆಗೆ ಅವಕಾಶ ನೀಡಿದರೆ ಯಾವ ರೀತಿ ಸಮಾಜದಲ್ಲಿ ಬದಲಾವಣಿಯ ಗಾಳಿ ತರುತ್ತಾಳೆ ಎಂಬುದಕ್ಕೆ ಕೂಡ ರೋಶ್ನಿ ಉತ್ತಮ ಉದಾಹರಣೆ ಎಂದರೆ ತಪ್ಪಾಗಲಾರದು. ತಂದೆಯ ವ್ಯವಹಾರವನ್ನು ಸಮರ್ಥ ರೀತಿಯಲ್ಲಿ ನಿರ್ವಹಿಸುವುದರ ಜೊತೆಗೆ ಅಳಿವಿನಿಂಚಿನ ಪ್ರಾಣಿಗಳು ಹಾಗೂ ಶಿಕ್ಷಣ ವಂಚಿತ ಮಕ್ಕಳ ಪರ ಫೌಂಡೇಶನ್ ನಡೆಸುತ್ತಿರುವ ರೋಶ್ನಿ ಅವರ ಸಮಾಜಪರ ಕಾರ್ಯ ಹೀಗೆಯೇ ಮುಂದುವರೆಯಲಿ ಎಂಬುದು ಎಲ್ಲರ ಹಾರೈಕೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications