ಒಂದು ಕಾಲದಲ್ಲಿ 9478 ಕೋಟಿ ರೂ. ಕಂಪನಿ ಒಡೆಯ, ಅಂಬಾನಿಗಿಂತಲೂ ಸಿರಿವಂತ; ಇಂದು ಬೀದಿಪಾಲಾಗಿದ್ದು ಹೇಗೆ?

ನಮ್ಮ ಜೀವನದಲ್ಲಿ ಆರೋಗ್ಯವಿರಲಿ ಅಥವಾ ಸಂಪತ್ತು ಇರಲಿ ಯಾವುದು ಶಾಶ್ವತವಲ್ಲ, ಅವು ಬದಲಾಗುತ್ತಲೇ ಇರುತ್ತವೆ. ಶ್ರೀಮಂತ ಉದ್ಯಮಿಗಳು ಸೇರಿದಂತೆ ಎಲ್ಲರೂ ಜೀವನದಲ್ಲಿ ಏರಿಳಿತಗಳನ್ನು ಕಾಣುವುದು ಸಾಮಾನ್ಯ. ಇದೇ ರೀತಿ ಒಂದು ಕಾಲದಲ್ಲಿ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರಿಗಿಂತಲೂ ಶ್ರೀಮಂತರಾಗಿದ್ದ ಸಂಪತ್ತಿನಲ್ಲಿ ಉತ್ತುಂಗದಲ್ಲಿದ್ದ ವ್ಯಕ್ತಿಯ ಕುರಿತು ಬಗ್ಗೆ ನಾವು ಹೇಳುತ್ತೇವೆ. ಜೀವನ ಏರಿಳಿತಗಳಿಂದ ಕೂಡಿರುತ್ತದೆ ಎನ್ನುವುದಕ್ಕೆ ಇವರ ಬದುಕು ಸರಿಯಾದ ಉದಾಹರಣೆಯಾಗುತ್ತದೆ.

ವಿಜಯಪತ್ ಸಿಂಘಾನಿಯಾ ಯಾರಿಗೆ ತಿಳಿದಿಲ್ಲ ಹೇಳಿ. ಭಾರತದ ಪ್ರಮುಖ ಜವಳಿ ಮತ್ತು ಉಡುಪು ಕಂಪನಿಗಳಲ್ಲಿ ಒಂದಾಗಿರುವ ರೇಮಂಡ್ ಗ್ರೂಪ್‌ನ ಮಾಜಿ ಅಧ್ಯಕ್ಷರು. ವಿಜಯಪತ್ ಸಿಂಘಾನಿಯಾ ಅವರು ದೀರ್ಘಕಾಲದವರೆಗೆ ಈ ಕಂಪನಿಯ ಅಧ್ಯಕ್ಷರಾಗಿದ್ದು ಅದರ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದವರು.

ಒಂದು ಕಾಲದಲ್ಲಿ ಅಂಬಾನಿಗಿಂತಲೂ ಸಿರಿವಂತ; ಇಂದು ಬೀದಿಪಾಲು.!

ಒಂದು ಕಾಲದ ಸಿರಿವಂತ ವ್ಯಕ್ತಿ ಈಗ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ ಅಂದ್ರೆ ನಂಬಲೇಬೇಕು.

ವಿಜಯಪತ್ ಸಿಂಘಾನಿಯಾ ಅವರು 2015 ರಲ್ಲಿ ರೇಮಂಡ್ ಗ್ರೂಪ್‌ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ತಮ್ಮ ಮಗ ಗೌತಮ್ ಸಿಂಘಾನಿಯಾಗೆ ಅಧಿಕಾರ ವಹಿಸಿಕೊಟ್ಟರು. ಆ ಸಂದರ್ಭದಲ್ಲಿ, ಅವರು ತಮ್ಮ ಬಳಿಯಿದ್ದ ರೇಮಂಡ್ ಗ್ರೂಪ್‌ನ ಶೇಕಡಾ 37ರಷ್ಟು ಸಂಪೂರ್ಣ ಪಾಲನ್ನು ಮಗನಿಗೆ ವರ್ಗಾಯಿಸಿದರು. ಇದರಿಂದ ಅವರ ಜೀವನದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸುತ್ತಾ ಹೋಯಿತು.

ವಿಜಯಪತ್ ಸಿಂಘಾನಿಯಾ ಮತ್ತು ಅವರ ಮಗ ಗೌತಮ್ ಸಿಂಘಾನಿಯಾ ಅವರ ನಡುವಿನ ಸಂಬಂಧವು 2017 ರಲ್ಲಿ ತೀವ್ರವಾಗಿ ಹದಗೆಟ್ಟಿತು. ಇದಕ್ಕೆ ಕಾರಣವೆಂದರೆ ಮುಂಬೈನಲ್ಲಿದ್ದ ರೇಮಂಡ್ ಲಿಮಿಟೆಡ್‌ನ ಜೆ.ಕೆ. ಹೌಸ್‌ನಲ್ಲಿ ವಿಜಯಪತ್ ಸಿಂಘಾನಿಯಾ ಅವರಿಗೆ ನೀಡಬೇಕಾಗಿದ್ದ ಡ್ಯುಪ್ಲೆಕ್ಸ್ ಅಪಾರ್ಟ್‌ಮೆಂಟ್ ಅನ್ನು ಗೌತಮ್ ಸಿಂಘಾನಿಯಾ ನೀಡಲು ನಿರಾಕರಿಸಿದರು. ಈ ಘಟನೆಯು ತಂದೆ-ಮಗನ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿಸಿತು ಮತ್ತು 2018 ರಲ್ಲಿ, ವಿಜಯಪತ್ ಸಿಂಘಾನಿಯಾ ಅವರನ್ನು ರೇಮಂಡ್‌ನ ಅಧ್ಯಕ್ಷ ಎಮೆರಿಟಸ್ ಹುದ್ದೆಯಿಂದ ತೆಗೆದುಹಾಕಲಾಯಿತು.

ರೇಮಂಡ್ ಕಂಪನಿಯು ಈಗ 9478 ಕೋಟಿ ರೂಪಾಯಿಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಪ್ರಸಿದ್ಧ ಸಿಂಘಾನಿಯಾ ಕುಟುಂಬದ ಸದಸ್ಯರಾದ ವಿಜಯಪತ್ ಸಿಂಘಾನಿಯಾ ಅವರು ಬಟ್ಟೆ ಉದ್ಯಮದ ಪ್ರಮುಖರೆಂದು ಹೆಸರುವಾಸಿಯಾಗಿದ್ದಾರೆ. ಭಾರತ ಸರ್ಕಾರವು ಅವರಿಗೆ ಎರಡು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. 2001 ರಲ್ಲಿ ಅವರ ವೈಮಾನಿಕ ಸಾಹಸಗಳಿಗಾಗಿ ಭಾರತ ಸರ್ಕಾರವು ಅವರಿಗೆ ತೇನ್‌ಜಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಯನ್ನು ನೀಡಿದೆ.1988 ರಲ್ಲಿ ಒಂದು ವಿಶಿಷ್ಟವಾದ ವಿಮಾನ ಹಾರಾಟವನ್ನು ನಡೆಸಿ ದಾಖಲೆ ನಿರ್ಮಿಸಿದ್ದರು. ಏರ್‌ಬಸ್ ಪುಶ್‌ಪಾಕ್ ಎಂಬ ವಿಮಾನವನ್ನು ಲಂಡನ್‌ನಿಂದ ಭಾರತಕ್ಕೆ ಏಕಾಂಗಿಯಾಗಿ ಹಾರಿಸಿ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. 2006 ರಲ್ಲಿ ಅವರ ಒಟ್ಟಾರೆ ಸಾಧನೆಗಳಿಗಾಗಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ. ಅವರು ತಮ್ಮ ಮೈಕ್ರೋಲೈಟ್ ವಿಮಾನ ಹಾರಾಟದ ಕಥೆ ಮತ್ತು ಅವರ ಆತ್ಮಚರಿತ್ರೆಯನ್ನು ಒಳಗೊಂಡ ಪುಸ್ತಕವನ್ನು ಸಹ ಬರೆದಿದ್ದಾರೆ.

ವಿಜಯಪತ್ ಸಿಂಘಾನಿಯಾ ಅವರ ತಂದೆ ಎಲ್‌ಕೆ ಸಿಂಘಾನಿಯಾ ಅವರೊಂದಿಗೆ 1944 ರಲ್ಲಿ ರೇಮಂಡ್ ಗ್ರೂಪ್ ಅನ್ನು ಸ್ಥಾಪಿಸಿದರು. ಕಂಪನಿಯು ಕೇವಲ ಸಣ್ಣ ಬಟ್ಟೆ ಗಿರಣಿಯಾಗಿ ಪ್ರಾರಂಭವಾಯಿತು ಮತ್ತು ಈಗ ವಿಶ್ವದ ಅತಿದೊಡ್ಡ ಬ್ರ್ಯಾಂಡ್‌ ಆಗಿದೆ. ಇಂದು ರೇಮಂಡ್ ವೈವಿಧ್ಯಮಯ ವ್ಯಾಪಾರ ಹೊಂದಿರುವ ಗ್ರೂಪ್ ಆಗಿದ್ದು, ಜವಳಿ ಮತ್ತು ಉಡುಪು ವಲಯಗಳಲ್ಲಿ ಹೆಚ್ಚಿನ ವ್ಯಾಪಾರ ಆಸಕ್ತಿಗಳನ್ನು ಹೊಂದಿದೆ. ಇದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಗ್ರಾಹಕ ಆರೈಕೆ, ರಿಯಾಲ್ಟಿ ಮತ್ತು ಎಂಜಿನಿಯರಿಂಗ್‌ನಂತಹ ವಿವಿಧ ವಿಭಾಗಗಳಲ್ಲಿ ತನ್ನ ಛಾಪು ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+