ದೇಶದ ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಕೂಡಾ ಒಂದು. ಸದ್ಯ ಮೊಬೈಲ್ ಸಿಮ್ ಕಾರ್ಡ್‌ನಿಂದ ಹಿಡಿದು ಬ್ಯಾಂಕ್ ಅಕೌಂಟ್ (Bank Account) ಕ್ರಿಯೇಟ್ ಮಾಡುವವರೆಗೂ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಇರಲೇಬೇಕು. ಆದರೆ ಇದೀಗ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡದ ತೆರಿಗೆದಾರರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಹೊಂದಿರುವವರಿಗೆ 2025ರ ಡಿಸೆಂಬರ್ 31ರೊಳಗೆ ಪ್ಯಾನ್-ಆಧಾರ್ ಲಿಂಕ್ (Pan-Aadhaar Card) ಮಾಡುವುದನ್ನು ಕಡ್ಡಾಯಗೊಳಿಸಿದೆ. ಈ ಗಡುವು ಮೀರಿದರೆ, 2026ರ ಜನವರಿ 1ರಿಂದ ಪ್ಯಾನ್ ಕಾರ್ಡ್ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿದೆ.

ಒಮ್ಮೆ ಪ್ಯಾನ್ ಬ್ಲಾಕ್ ಆದ್ರೆ ಸಾಕು, ನಂತರ ಸಮಸ್ಯೆ ಶುರುವಾಗೋದು ಪಕ್ಕಾ. ಅದರಲ್ಲೂ ಆದಾಯ ತೆರಿಗೆ ಸಲ್ಲಿಕೆ, ರಿಫಂಡ್, ಬ್ಯಾಂಕಿಂಗ್ ವಹಿವಾಟು ಮತ್ತು ಹೂಡಿಕೆಗಳು ಸೇರಿದಂತೆ ಹಲವು ಹಣಕಾಸು ಹಾಗೂ ತೆರಿಗೆ ಸಂಬಂಧಿತ ವಿಷಯಗಳಿಗೆ ಸಮಸ್ಯೆಯಾಗಲಿದೆ. ಆದ್ದರಿಂದ, ಆದಷ್ಟು ಬೇಗ ಆಧಾರ್-ಪ್ಯಾನ್ ಗಡುವಿನೊಳಗೆ ಲಿಂಕ್ ಮಾಡಿಸಿಕೊಳ್ಳುವುದು ಉತ್ತಮ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139AA(2A) ಅನ್ವಯ, 2017ರ ಜುಲೈ 1ರಂದು ಅಥವಾ ಅದಕ್ಕೂ ಮೊದಲು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಪಡೆದ ಎಲ್ಲ ಜನರಿಗೂ ಆಧಾರ್-PAN ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈ ನಿಯಮವು ತೆರಿಗೆದಾರರು, ಹೂಡಿಕೆದಾರರು, ಹಾಗೂ ಉದ್ಯಮಿಗಳು ಅಥವಾ KYC-ಆಧಾರಿತ ಹಣಕಾಸು ವಹಿವಾಟುಗಳಲ್ಲಿ ತೊಡಗಿರುವವರಿಗೆ ಅನ್ವಯಿಸುತ್ತದೆ.
ಇವರಿಗೆ ಕಡ್ಡಾಯ!
ಇನ್ನು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರು, ಬ್ಯಾಂಕಿಂಗ್ ಅಥವಾ ಹೂಡಿಕೆ ವ್ಯವಹಾರಗಳನ್ನು ನಡೆಸುವವರು, ಷೇರು ಮಾರುಕಟ್ಟೆ, ಮ್ಯೂಚುಯಲ್ ಫಂಡ್‌ಗಳು ಅಥವಾ ಇತರ ಹೆಚ್ಚಾಗಿ ಹಣಕಾಸು ವಹಿವಾಟುಗಳಲ್ಲಿ ತೊಡಗಿರುವ ಎಲ್ಲರೂ ಈ ನಿಯಮದ ವ್ಯಾಪ್ತಿಗೆ ಬರುತ್ತಾರೆ. PAN-ಆಧಾರ್ ಲಿಂಕ್ ಮಾಡದಿದ್ದರೆ, PAN ಕಾರ್ಡ್ ಬ್ಲಾಕ್ ಆಗುತ್ತದೆ ಮತ್ತು ಯಾವುದೇ ಹಣಕಾಸು, ಇತರೆ ವಹಿವಾಟು ನಡೆಸಲಾಗುವುದಿಲ್ಲ..
ದಂಡ ಗ್ಯಾರಂಟಿ
ಒಂದು ವೇಳೆ ಡಿಸೆಂಬರ್ 31, 2025ರ ಒಳಗೆ ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ಬ್ಲಾಕ್ ಆಗುತ್ತದೆ. ಮತ್ತೆ ಆಕ್ಟಿವ್‌ಗೊಳಿಸಲು 1,000 ರೂಪಾಯಿಗಳ ದಂಡ ಪಾವತಿಸಲೇಬೇಕು.
ಪ್ಯಾನ್-ಆಧಾರ್ ಕಾರ್ಡ್ ಲಿಂಕಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಮೂಲಕವೇ ನೀಡಲಾಗಿದೆ. ಬಳಕೆದಾರರು ಲಾಗ್ ಇನ್ ಆಗದೆಯೇ "ಲಿಂಕ್ ಆಧಾರ್" ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಅಲ್ಲಿ ತಮ್ಮ ಪ್ಯಾನ್, ಆಧಾರ್ ನಂಬರ್ ಮತ್ತು ಹೆಸರನ್ನು ನಮೂದಿಸಿ, ಒಟಿಪಿ (OTP) ಬಳಸಿ ಅರ್ಜಿ ಸಲ್ಲಿಸಬಹುದು. ಹಿಂದಿನ ಗಡುವು ಮೀರಿದವರು ಇ-ಪೇ ಟ್ಯಾಕ್ಸ್ (e-Pay Tax) ಆಯ್ಕೆಯ ಮೂಲಕ 1,000 ರೂಪಾಯಿ ದಂಡವನ್ನು ಪೇ ಮಾಡಬೇಕಾಗುತ್ತದೆ. ಇನ್ನು ಲಿಂಕ್ ಆಗಿದ್ಯಾ? ಇಲ್ವಾ? ಎಂದು ಪೋರ್ಟಲ್‌ನಲ್ಲೇ ನಂತರ ದಿನಗಳಲ್ಲಿ ಅಪ್ಡೇಟ್ ಮಾಡುತ್ತಾರೆ.


Click it and Unblock the Notifications