ವಿದೇಶಕ್ಕೆ (Abroad) ಹೋಗಿ ಕೆಲಸ ಮಾಡ್ಬೇಕು, ವಿದ್ಯಾಭ್ಯಾಸ ಮಾಡ್ಬೇಕು ಅಥವಾ ಸುತ್ತಾಡಿಕೊಂಡು ಬರಬೇಕು ಎಂಬ ಕನಸು ಕಾಣೋದು ಸುಲಭದ ಮಾತಲ್ಲ. ಆದ್ರೆ ಹೋಗೋದು, ಅಲ್ಲಿನ ನಿಯಮ, ವಿಮಾನ ನಿಯಮಗಳನ್ನು ಪಾಲಿಸೋದೆ ದೊಡ್ಡ ಸವಾಲು. ಅದರಲ್ಲೂ ಯಾರೇ ಒಬ್ಬ ವ್ಯಕ್ತಿ ವಿದೇಶ ಪ್ರಯಾಣ ಮಾಡುತ್ತಾರೆ ಎಂದರೆ, ಪಾಸ್‌ಪೋರ್ಟ್ (Passport) ಇರಲೇಬೇಕು. ಹಿಂದೆಲ್ಲಾ ಪಾಸ್‌ಪೋರ್ಟ್ ಪಡೆಯಬೇಕೆಂದರೆ, ಆಫೀಸ್‌ಗೆ ಹೋಗಿಯೇ ಎಲ್ಲಾ ಅರ್ಜಿ ಪ್ರಕ್ರಿಯೆ ಮುಗಿಸಿ ಪಡೆಯಬೇಕಿತ್ತು. ಆದ್ರೆ ಈಗ ಹಾಗಲ್ಲ, ಮೊಬೈಲ್ ಒಂದಿದ್ದರೆ ಸಾಕು ಕ್ಷಣ ಮಾತ್ರದಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು.

ಹಾಗಿದ್ರೆ ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ? ನಿಯಮಗಳೇನು? ಈ ಎಲ್ಲದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಯಾರು ಅರ್ಜಿ ಸಲ್ಲಿಸಬಹುದು?
18 ವರ್ಷ ಮೇಲ್ಪಟ್ಟ ವಯಸ್ಕರು, ಅಪ್ರಾಪ್ತರು (18 ವರ್ಷಕ್ಕಿಂತ ಕಡಿಮೆ), ಹಿರಿಯ ನಾಗರಿಕರು, ಹಾಗೂ ಅಗತ್ಯ ಅನುಮತಿಗಳನ್ನು ಹೊಂದಿರುವ ಸರ್ಕಾರಿ ನೌಕರರು ಸೇರಿದಂತೆ ಎಲ್ಲ ಭಾರತೀಯ ನಾಗರಿಕರು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಭಾರತೀಯ ಮೂಲದ ವಿದೇಶಿ ಪ್ರಜೆಗಳು ಭಾರತೀಯ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಆದರೆ, ಅವರಿಗೆ OCI (ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ) ಕಾರ್ಡ್ ಪಡೆಯಲು ಅವಕಾಶವಿದೆ.
ಇ-ಪಾಸ್‌ಪೋರ್ಟ್ ಎಂದರೇನು?
ಭಾರತ ಸರ್ಕಾರ ಇತ್ತೀಚೆಗಷ್ಟೇ ಇ-ಪಾಸ್‌ಪೋರ್ಟ್ ಪರಿಚಯಿಸಿತ್ತು. ಇದು ಚಿಪ್-ಆಧಾರಿತ ವ್ಯವಸ್ಥೆಯಾಗಿದೆ. ಇದನ್ನೇ ಇ-ಪಾಸ್‌ಪೋರ್ಟ್ ಎಂದು ಕರೆಯುತ್ತರೆ. ಇವು ಸಾಮಾನ್ಯ ಪಾಸ್‌ಪೋರ್ಟ್‌ಗಳಂತೆ ಕಂಡರೂ, ಸುರಕ್ಷಿತ RFID ಚಿಪ್‌ನಲ್ಲಿ ಬಯೋಮೆಟ್ರಿಕ್ ಮತ್ತು ವೈಯಕ್ತಿಯ ಮಾಹಿತಿಯನ್ನು ಡಿಜಿಟಲ್ ಆಗಿ ಸಂಗ್ರಹಿಸುತ್ತವೆ. ಪಾಸ್‌ಪೋರ್ಟ್ ಕವರ್ ಮೇಲಿನ ಚಿಕ್ಕ ಗೋಲ್ಡ್ ಚಿಹ್ನೆಯಿಂದಾಗಿ ಇ-ಪಾಸ್‌ಪೋರ್ಟ್ ಕಾರ್ಯನಿರ್ವಹಿಸುತ್ತದೆ. ಇದರಿಂದ ಹಲವು ಪ್ರಯೋಜನಗಳೂ ಇವೆ.
ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
ಅಧಿಕೃತ ಪಾಸ್‌ಪೋರ್ಟ್ ವೆಬ್‌ಸೈಟ್ www.passportindia.gov.in ಓಪನ್ ಮಾಡಿ.
ಅಲ್ಲಿ ಬರೆದಿರುವ Register ಮೇಲೆ ಕ್ಲಿಕ್ ಮಾಡಿ, ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಕ್ರಿಯೇಟ್ ಮಾಡಿ.
ನಂತರ ಲಾಗಿನ್ ಮಾಡಿ. ಅಲ್ಲಿ Apply for Fresh Passport or Re-issue ಸೆಲೆಕ್ಟ್ ಮಾಡಿ.
ಆ ನಂತರ ಅರ್ಜಿ ಫಾರ್ಮ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ. ಅಲ್ಲಿ ನೀವು ಪಾಸ್‌ಪೋರ್ಟ್ ಪ್ರಕಾರ, ವೈಯಕ್ತಿಕ ವಿವರ, ಕುಟುಂಬ ವಿವರ, ವಿಳಾಸ ಎಲ್ಲಾ ದಾಖಲೆಗಳನ್ನು ಆಡ್ ಮಾಡಿದ ನಂತರ ಅರ್ಜಿ ಸಲ್ಲಿಸಿ ARN (Application Reference Number) ಪಡೆಯಬೇಕು.
ಶುಲ್ಕ ಪಾವತಿ ಮತ್ತು ಅಪಾಯಿಂಟ್‌ಮೆಂಟ್ ಪ್ರಕ್ರಿಯೆ:
ಇದಕ್ಕಾಗಿ ನೀವು ಆನ್‌ಲೈನ್ ಪೇಮೆಂಟ್ ಮಾಡಬೇಕು. ಪೇಮೆಂಟ್ ಮಾಡಿದ ನಂತರ ಆಟೋಮೆಟಿಕ್‌ಆಗಿ ಹತ್ತಿರದ ಪಾಸ್‌ಪೋರ್ಟ್ ಸೇವಾ ಕೇಂದ್ರ (PSK) ಅಥವಾ ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ (POPSK) ಅಪಾಯಿಂಟ್‌ಮೆಂಟ್ ಪಡೆಯುತ್ತೀರಿ.
PSK/POPSK ಭೇಟಿ:
ಅಪಾಯಿಂಟ್‌ಮೆಂಟ್ ದಿನದಂದು ನೀವು ಅಗತ್ಯ ದಾಖಲೆಗಳು, ಅರ್ಜಿಯ ಪ್ರಿಂಟ್‌ಔಟ್ ಮತ್ತು ಫೋಟೋ ಜೊತೆಗೆ ಸೇವಾ ಕೇಂದ್ರಕ್ಕೆ ಭೇಟಿ ನೀಡಿ. ಅಲ್ಲಿ ನಿಮ್ಮ ದಾಖಲೆಗಳೊಂದಿಗೆ, ಬಯೋಮೆಟ್ರಿಕ್ಸ್ ಪರಿಶೀಲನೆ ಕೂಡಾ ನಡೆಯುತ್ತದೆ.
ಪಾಸ್‌ಪೋರ್ಟ್‌ಗೆ ಬೇಕಾಗುವ ಪ್ರಮುಖ ದಾಖಲೆಗಳು:
ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಜನ್ಮ ಪ್ರಮಾಣಪತ್ರ, 10/12 ನೇ ಮಾರ್ಕ್ ಶೀಟ್, ಬ್ಯಾಂಕ್ ಪಾಸ್‌ಬುಕ್, ಡ್ರೈವಿಂಗ್ ಲೈಸೆನ್ಸ್.
ಭಾರತೀಯ ಪಾಸ್‌ಪೋರ್ಟ್ ಶುಲ್ಕಗಳು:
ಸಾಮಾನ್ಯ ಪಾಸ್‌ಪೋರ್ಟ್:
36 ಪುಟಗಳು (10 ವರ್ಷ): 1500 ರೂ.
60 ಪುಟಗಳು (10 ವರ್ಷ): 2000 ರೂ.
ಮಕ್ಕಳು, 18 ವರ್ಷಕ್ಕಿಂತ ಕಡಿಮೆ: 1000 ರೂ.
ತತ್ಕಾಲ್ ಶುಲ್ಕ: 2000 ರೂ. ಹೆಚ್ಚುವರಿ ಶುಲ್ಕ


Click it and Unblock the Notifications