ನವದೆಹಲಿ, ಜೂನ್ 25: ಸುಲಭಕ್ಕೆ ಸಿಗುತ್ತದೆ ಎಂದು ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೂ ಮುನ್ನ ಹಲವಾರು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಇಲ್ಲಿ ಸಾಲದ ಮೇಲಿನ ಬಡ್ಡಿದರ ಅತಿ ಮುಖ್ಯವಾದ ಸಂಗತಿ. ತ್ವರಿತ ಸಾಲಗಳು ಹಣವನ್ನು ತಕ್ಷಣಕ್ಕೆ ಒದಗಿಸಬಹುದು. ಆದರೆ ಸಾಂಪ್ರದಾಯಿಕ ಅಥವಾ ಸಾಮಾನ್ಯ ಸಾಲಗಳಿಗೆ ಹೋಲಿಸಿದರೆ ಇವುಗಳ ಬಡ್ಡಿ ದರ ಹೆಚ್ಚಿರುತ್ತವೆ. ಇದು ಸಾಲದ ಒಟ್ಟಾರೆ ವೆಚ್ಚ ಅಂದರೆ ಕಾಸ್ಟ್ ಹೆಚ್ಚಿಸುತ್ತದೆ.
ಆನ್‌ಲೈನ್ ಲೋನ್ ಪ್ಲಾಟ್‌ಫಾರ್ಮ್‌ಗಳು ದೊಡ್ಡ ಬ್ಯಾಂಕ್‌ಗಳಿಗೆ ಹೋಲಿಸಿದರೆ ಹೆಚ್ಚಿನ ಬಡ್ಡಿದರಗಳನ್ನು ವಿಧಿಸುತ್ತವೆ. ಉದಾಹರಣೆಗೆ, ಲೋನ್‌ಟ್ಯಾಪ್ ನೀಡುವ ಪರ್ಸನಲ್ ಲೋನ್ ಬಡ್ಡಿ ದರವು ಶೇ. 12 ರಿಂದ ಶೇ. 24 ರಷ್ಟು ಇರುತ್ತದೆ. ಕ್ರೆಡಿಟ್‌ಬೀಯು ಶೇಕಡಾ 17 ರಿಂದ ಶೇ. 29.95 ರ ನಡುವಿನ ಬಡ್ಡಿದರ ವಿಧಿಸುತ್ತದೆ.

ಅದೇ ICICI ಬ್ಯಾಂಕಿನ ಪರ್ಸನಲ್ ಲೋನ್ ಬಡ್ಡಿ ದರವು ಶೇ. 10.65 ರಿಂದ ಶೇ. 16 ರಷ್ಟಿದೆ. ಹೆಚ್ಚಿನ ಬಡ್ಡಿದರದ ಹೊರತಾಗಿ, ಸಂಸ್ಕರಣಾ ಶುಲ್ಕಗಳು ಮತ್ತು ಪೂರ್ವ-ಪಾವತಿ ಶುಲ್ಕಗಳಂತಹ ವಿವಿಧ ಹಿಡನ್ ಚಾರ್ಜಸ್ ಸಹ ಇರುತ್ತದೆ. ಬೇರೆ ಬೇರೆ ಬ್ಯಾಂಕ್ ಗಳು ಮತ್ತು ಆನ್‌ಲೈನ್ ಲೋನ್ ಫ್ಲಾಟ್ ಫಾರ್ಮ್ ಗಳು ಬೇರೆ ಬೇರೆ ಸಂಸ್ಕರಣಾ ಶುಲ್ಕ ಹೊಂದಿವೆ. ಈ ಶುಲ್ಕ ಮತ್ತು ಫೀ ಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಸಾಲದ ವಿಚಾರದಲ್ಲಿ ನೀವೊಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ಸಾಲದ ಮೊತ್ತ ಫೈನಲ್ ಮಾಡುವ ಮೊದಲು, ನಿಮ್ಮ ಹಣಕಾಸಿನ ಅಗತ್ಯತೆಗಳನ್ನು ಮೊದಲು ನಿರ್ಣಯಿಸಿಕೊಳ್ಳಿ. ನಿಮಗೆ ಅತಿ ಅಗತ್ಯವಾಗಿ ಎಷ್ಟು ಮೊತ್ತ ಬೇಕಿದೆಯೋ ಅಷ್ಟೇ ಮೊತ್ತದ ಸಾಲ ಪಡೆದುಕೊಳ್ಳಿ ಅಗತ್ಯಕ್ಕಿಂತ ಹೆಚ್ಚು ತೆಗೆದುಕೊಳ್ಳುವುದು ನಿಮಗೆ ಅನಗತ್ಯ ಹೊರೆಯಾಗಿಸುತ್ತದೆ. ತ್ವರಿತ ಸಾಲಗಳು ಸಾಮಾನ್ಯವಾಗಿ ಕಡಿಮೆ ಮರುಪಾವತಿ ಅವಧಿ ಹೊಂದಿರುತ್ತವೆ. ಇದರ ಪರಿಣಾಮ EMI ಮೊತ್ತ ಜಾಸ್ತಿ ಇರಬಹುದು. ನಿಮ್ಮ ತಿಂಗಳ ಖರ್ಚಿನ ಬಜೆಟ್ ಮೇಲೂ ಇದು ಪರಿಣಾಮ ಉಂಟುಮಾಡಬಲ್ಲದು.
ವ್ಯಕ್ತಿಯ ಆರ್ಥಿಕ ಪರಿಸ್ಥಿತಿ ಸಹ ಬದಲಾಗುತ್ತಲೇ ಇರುತ್ತದೆ. ಈ ಇನ್ ಸ್ಟಂಟ್ ಲೋನ್ ಅಥವಾ ತ್ವರಿತ ಸಾಲವನ್ನು ತೆಗೆದುಕೊಳ್ಳುವ ಮೊದಲು ಪ್ರೀ ಪೇಮೆಂಟ್ ನ ಕಂಡಿಶನ್ ಗಳನ್ನು ವಿಚಾರಿಸಿ ತಿಳಿದುಕೊಳ್ಳಿ. ಕೆಲವು ಬ್ಯಾಂಕುಗಳು ಸಾಲದ ಪುನರ್ ರಚನೆ ಅಥವಾ ಕಷ್ಟದ ಸಮಯದಲ್ಲಿ ಮರುಪಾವತಿ ಅವಧಿಯನ್ನು ವಿಸ್ತರಿಸುವಂತಹ ಆಯ್ಕೆ ನೀಡುತ್ತವೆ.
ಇನ್ನೊಂದು ಕಡೆ EMI ವಿಳಂಬ ಅಥವಾ ಸಾಲ ಮರುಪಾವತಿ ಮಾಡದೆ ಇರುವುದು ಪೆನಾಲ್ಟಿಗಳಿಗೆ ಕಾರಣವಾಗುತ್ತದೆ. ಸಕಾಲಿಕ ಪಾವತಿಗಳನ್ನು ಮಾಡುವ ಮೂಲಕ ಲೋನ್ ಪ್ಲಾಟ್‌ಫಾರ್ಮ್‌ನೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. EMI ಪಾವತಿ ಮಿಸ್ ಮಾಡಿದರೆ ಸಾಲದ ಏಜೆಂಟರೊಂದಿಗಿನ ಘರ್ಷಣೆಗೂ ಅದು ಕಾರಣವಾಗಬಲ್ಲದು.


Click it and Unblock the Notifications